Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ
ಹಣ್ಣುಗಳನ್ನು ಸಿಪ್ಪೆಸಹಿತ ತಿನ್ನಿ ಎಂದು ಹೇಳುತ್ತದೆ ಆಯುರ್ವೇದ. ಆದರೆ ಈ ಮಾತು ಕೆಲವು ಹಣ್ಣುಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ ಹಲಸಿನ ಹಣ್ಣು. ಆದರೆ ಕೆಲವು ಹಣ್ಣುಗಳಿಗೆ ಈ ಮಾತು ಪೂರ್ಣವಾಗಿ ಅನ್ವಯಿಸುತ್ತದೆ. ಸೀಬೆ, ಸೇಬು, ಸ್ಟ್ರಾಬೆರಿ, ದ್ರಾಕ್ಷಿ ಮೊದಲಾದ ಹಣ್ಣುಗಳನ್ನು ಸಿಪ್ಪೆಸಹಿತವೇ ತಿನ್ನಬೇಕು. ಅದರಲ್ಲೂ ಸೇಬುಹಣ್ಣನ್ನು ಸಿಪ್ಪೆಸಹಿತ ತಿನ್ನುವುದು ಅತ್ಯಂತ ಉತ್ತಮವಾಗಿದೆ. ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡಬೇಕಾದರೆ ಸಿಪ್ಪೆ ಸಹಿತವೇ ತಿನ್ನಬೇಕು. ಏಕೆಂದರೆ ವೈದ್ಯರನ್ನು ದೂರವಿಡುವ ಅಂಶಗಳಲ್ಲಿ ಬಹುತೇಕ ಈ ಸಿಪ್ಪಿಯಲ್ಲಿಯೇ ಅಡಗಿದೆ! ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ 20 ಪ್ರಯೋಜನಗಳು
ಇನ್ನು ಮುಂದೆ ಸೇಬು ಹಣ್ಣನ್ನು ತಿನ್ನುವಾಗ ಸಿಪ್ಪೆಯನ್ನು ಸುಲಿಯಬೇಡಿ. ಕೆಲವರು ಸಿಪ್ಪೆ ಸುಲಿಯಲು ಬೆಳಗಾರರು ಉಪಯೋಗಿಸಿರುವ ಕಳೆನಾಶಕ ಮತ್ತು ಇತರ ಔಷಧಿಗಳನ್ನು ಸಿಂಪಡಿಸಿರುವ ಕಾರಣಗಳನ್ನು ನೀಡುತ್ತಾರೆ. ಈ ಮಾತು ಸರ್ವಥಾ ಹೌದಾದರೂ ಯಾವುದೇ ಹಣ್ಣಿನಂತೆ ಸ್ವಚ್ಛವಾಗಿ ತೊಳೆದು ಉಪಯೋಗಿಸಿದರೆ ಸಾಕು. ಇನ್ನೂ ಕೆಲವರು ಸೇಬಿನ ಬಣ್ಣವನ್ನು ಉಳಿಸಿಕೊಳ್ಳಲು ಇದರ ಮೇಲೆ ತೆಳುವಾಗಿ ಮೇಣವನ್ನು ಲೇಪಿಸಿರಲಾಗುತ್ತದೆ, ಇದು ತೊಳೆದರೂ ಹೋಗುವುದಿಲ್ಲ ಎಂಬ ಕಾರಣವನ್ನು ನೀಡುತ್ತಾರೆ. ಅಮೇರಿಕಾದ Food and Drugs Administration (FDA) ಸಂಸ್ಥೆ ಈ ಮಾಹಿತಿಯನ್ನು ಸತ್ಯ ಎನ್ನುತ್ತದೆ. ಸೇಬು ಸೂಪ್ ಕುಡಿಯಿರಿ, ಸೇಬಿನಂತಾಗಿರಿ
ಆದರೆ ಈ ಮೇಣ ಹೊಟ್ಟೆಗೆ ಹೋದರೂ ಏನೂ ಅಪಾಯವಿಲ್ಲ ಎನ್ನುತ್ತದೆ. ಆದರೆ ಭಾರತದಲ್ಲಿ ಈ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ. ಅಲ್ಲದೇ ಭಾರತದ ಸೇಬುಗಳಿಗೆ ಮೇಣ ಮೆತ್ತಿ ಮಾರಾಟಕ್ಕೆ ಕಳುಹಿಸುವ ಸಂಭವ ಕಡಿಮೆ. ಅತ್ಯಂತ ಹೊಳೆಯುವ ಮತ್ತು ದಟ್ಟನೆಯ ವರ್ಣದ ಸೇಬಿನಲ್ಲಿ ಮೇಣ ಲೇಪಿಸಿರುವ ಸಂಭವ ಹೆಚ್ಚು. ಮಾರುಕಟ್ಟೆಯಲ್ಲಿ ಸೇಬು ಕೊಳ್ಳುವಾಗ ಈ ಅಂಶವನ್ನು ಗಮನದಲ್ಲಿಟ್ಟು ಸಾಧ್ಯವಿದ್ದಷ್ಟು ಉತ್ತಮವಾದುದನ್ನೇ ಆರಿಸಿ. ಈ ಸಿಪ್ಪೆಗಳಲ್ಲಿರುವ ಉತ್ತಮ ಅಂಶಗಳನ್ನು ಈಗ ನೋಡೋಣ.

ಉಸಿರಾಟ ಮತ್ತು ಶ್ವಾಸಕೋಶಗಳ ತೊಂದರೆಯಿಂದ ರಕ್ಷಣೆ ನೀಡುತ್ತದೆ
ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಉಸಿರಾಟದ ತೊಂದರೆಯಿಂದ ಮುಕ್ತಿ ನೀಡುತ್ತದೆ. ಇದಕ್ಕೆ ಸಿಪ್ಪೆಯಲ್ಲಿರುವ ಕ್ವೆರ್ಸೆಟಿನ್ (quercetin) ಎಂಬ ಪೋಷಕಾಂಶ ಕಾರಣವಾಗಿದೆ. ಜೊತೆಗೇ ಶ್ವಾಸಕೋಶಗಳ ಸಮರ್ಪಕ ಕಾರ್ಯನಿರ್ವಹಣೆಗೂ ನೆರವಾಗುತ್ತದೆ.

ಮರೆಗುಳಿತನವನ್ನು ಕಡಿಮೆಗೊಳಿಸುತ್ತದೆ
ಮರೆವಿಗೆ ನಮ್ಮ ಮೆದುಳಿನ ಜೀವಕೋಶಗಳು ಅಧಿಕ ಪ್ರಮಾಣದಲ್ಲಿ ಸತ್ತು ಹೋಗುವುದು ಕಾರಣವಾಗಿದೆ. ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ರಕ್ತದ ಮೂಲಕ ಮೆದುಳಿಗೆ ತಲುಪಿದ ಬಳಿಕ ಈ ಜೀವಕೋಶಗಳು ಸಾಯುವ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೇ ಜೀವಂತಕೋಶಗಳ ಪೋಷಣೆಗೆ ನೆರವಾಗಿ ಪ್ರತಿ ಜೀವಕೋಶಕ್ಕೆ ಹೊಸ ಕಳೆ ನೀಡುತ್ತದೆ. ಪರಿಣಾಮವಾಗಿ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಮತ್ತು ಮರೆವು ಕಡಿಮೆಯಾಗುತ್ತದೆ.

ಮಧುಮೇಹಿಗಳಿಗೂ ಒಳ್ಳೆಯದು
ಮಧುಮೇಹಿಗಳಿಗೆ ಸಕ್ಕರೆ ತರವಲ್ಲವಾದ್ದರಿಂದ ಸಕ್ಕರೆ ಇರುವ ಹಣ್ಣುಗಳನ್ನೂ ಅವರು ಸೇವಿಸುವಂತಿಲ್ಲ. ಆದರೆ ಸೇಬಿನ ಸಿಪ್ಪೆಯನ್ನು ಮಾತ್ರ ಸುಲಿದು ತಿನ್ನಬಹುದು. ಏಕೆಂದರೆ ಸಿಪ್ಪೆಯಲ್ಲಿ ಸಕ್ಕರೆ ಅಂಶ ಅತ್ಯಂತ ಕಡಿಮೆಯಾಗಿದೆ. ಜೊತೆಗೇ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಪಿಷ್ಟವನ್ನು ಸಕ್ಕರೆಯನ್ನಾಗಿಸುವ ಕ್ರಿಯೆಗೆ ತಡೆಯೊಡ್ಡಿ ಸಕ್ಕರೆಯ ಅಂಶ ರಕ್ತದಲ್ಲಿ ಹೆಚ್ಚದಂತೆ ನೋಡಿಕೊಳ್ಳುತ್ತದೆ.

ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತದೆ
ಕ್ಯಾಟರಾಕ್ಟ್ ಎನ್ನುವ ರೋಗ ನಿಧಾನವಾಗಿ ಕಣ್ಣನ್ನು ಅಂಧತ್ವದತ್ತ ದೂಡುತ್ತಿರುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಈ ತೊಂದರೆಗೆ ವಿರುದ್ದವಾದ ಪ್ರಕ್ರಿಯೆ ನೀಡುವುದರಿಂದ ಕ್ಯಾಟರಾಕ್ಟ್ ನಿಂದ ರಕ್ಷಣೆ ಪಡೆಯಬಹುದು. ಸೇಬು ಹಣ್ಣನ್ನು ಸಿಪ್ಪೆ ಸಹಿತ ತಿನ್ನುವ ಪರಿಣಾಮವಾಗಿ ಉತ್ತಮ ದೃಷ್ಟಿ ಬಹುಕಾಲದವರೆಗೂ ಕಾಯ್ದುಕೊಳ್ಳಬಹುದು.

ಪಿತ್ತಕೋಶದ ಕಲ್ಲುಗಳನ್ನು ಕರಗಿಸುತ್ತದೆ
ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಪಿತ್ತಕೋಶದಲ್ಲಿ ಕಲ್ಲುಗಳಾಗಲು ಕಾರಣವಾಗುತ್ತದೆ. ನಿಧಾನವಾಗಿ ದೊಡ್ಡದಾಗುತ್ತಾ ಹೋಗುವ ಈ ಕಲ್ಲುಗಳು ವಿಪರೀತ ನೋವು ಉಂಟುಮಾಡುತ್ತವೆ. ಸಿಪ್ಪೆಸಹಿತ ಸೇಬುಹಣ್ಣನ್ನು ತಿನ್ನುವುದರಿಂದ ಉತ್ತಮ ಪ್ರಮಾಣದ ಕರಗದ ನಾರು ಲಭ್ಯವಾಗಿ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತದೆ. ಪರೋಕ್ಷವಾಗಿ ಪಿತ್ತಕೋಶದಲ್ಲಿ ಕಲ್ಲುಗಳಾಗರಿದಿರುವಂತೆ ನೋಡಿಕೊಳ್ಳುತ್ತದೆ.

ಹಲ್ಲುಗಳ ರಕ್ಷಣೆಗೂ ಉತ್ತಮ
ಸೇಬು ಹಣ್ಣನ್ನು ಸಿಪ್ಪೆ ಸಹಿತ ಜಗಿಯುವಾಗ ಬಾಯಿಯಲ್ಲಿ ಲಾಲಾರಸ ಹೆಚ್ಚಾಗಿ ಸ್ರವಿಸುವ ಕಾರಣ ಬಾಯಿಯಲ್ಲಿ ಹಲ್ಲು ಮತ್ತು ದವಡೆ ನಡುವೆ ಸಂಗ್ರಹವಾಗಿದ್ದ ಆಹಾರವನ್ನೂ ಕರಗಿಸಿ ಜಠರಕ್ಕೆ ಸೇರಿಸಲು ನೆರವಾಗುತ್ತದೆ. ತನ್ಮೂಲಕ ಈ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಸೋಂಕು ಉಂಟುಮಾಡುವ ಸಂಭವ ಕಡಿಮೆಯಾಗುತ್ತದೆ. ಪರಿಣಾಮವಾಗಿ ಹಲ್ಲುಗಳು ಉತ್ತಮ ರಕ್ಷಣೆಯನ್ನು ಪಡೆಯುತ್ತವೆ.

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಗರ್ಭಿಣಿಯರಿಗೂ ಹೆಚ್ಚಿನ ರಕ್ತದ ಅವಶ್ಯಕತೆ ಇದೆ. ಸೇಬುಹಣ್ಣನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಸಿಪ್ಪೆಯಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಲಭ್ಯವಾಗುತ್ತದೆ. ಜೊತೆಗೇ ಕ್ಯಾಲ್ಸಿಯಂ, ಫಾಸ್ಪರಸ್, ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಸತು ಮೊದಲಾದ ಖನಿಜಗಳೂ ಲಭ್ಯವಾಗುತ್ತವೆ. ಈ ಎಲ್ಲವೂ ಹೊಸ ರಕ್ತಕಣಗಳ ಬೆಳವಣಿಗೆಗೆ ಪೂರಕವಾಗಿದ್ದು ರಕ್ತಹೀನತೆಯನ್ನು ಕಡಿಮೆಗೊಳಿಸುತ್ತವೆ.

ಮೂಳೆಗಳಿಗೂ ಉತ್ತಮವಾಗಿದೆ
ಸೇಬಿನ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಗೆ ಉತ್ತಮ ಸಹಕಾರ ನೀಡುತ್ತದೆ. ಅದರಲ್ಲೂ ಹಸಿರು ಸೇಬುಗಳ ಸಿಪ್ಪೆಯಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಟೊಳ್ಳಾಗಿದ್ದು ಗಾಳಿಗುಳ್ಳೆಗಳು ಮೂಡಿ ಮೂಳೆಗಳ ದೃಢತೆ ಕಡಿಮೆಯಾಗುವ ಓಸ್ಟಿಯೋಪೋರೋಸಿಸ್ (osteoporosis) ಎಂಬ ಕಾಯಿಲೆಯಿಂದ ಕಾಪಾಡುತ್ತದೆ.

ತೂಕ ಕಳೆದುಕೊಳ್ಳಲೂ ಸಹಕಾರಿಯಾಗಿದೆ
ಸೇಬಿನ ಸಿಪ್ಪೆಯಲ್ಲಿರುವ ಅರ್ಸೋಲಿಕ್ ಆಮ್ಲ (ursolic acid) ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬೇಡುವುದರಿಂದ ಸಂಗ್ರಹವಾಗಿದ್ದ ಕೊಬ್ಬು ಶೀಘ್ರವಾಗಿ ಕರಗುತ್ತದೆ. ಪರಿಣಾಮವಾಗಿ ತೂಕ ಇಳಿಯಲು ನೆರವಾಗುತ್ತದೆ. ದಿನಕ್ಕೊಂದು ಸೇಬನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಆರೋಗ್ಯಕರವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಸೇಬಿನ ಸಿಪ್ಪೆಯಲ್ಲಿರುವ ಫ್ಲೇವನಾಯ್ಡ್, ಫೈಟೋಕೆಮಿಕಲ್ಸ್ ಮತ್ತು ಆಂಡಿ ಆಕ್ಸಿಡೆಂಟುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದರಿಂದ ದೇಹ ಸೋಂಕು, ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಂದ ರಕ್ಷಣೆ ಪಡೆಯಲು ಹೆಚ್ಚು ಸಕ್ಷಮವಾಗುತ್ತದೆ.

ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ
ಸೇಬಿನ ಸಿಪ್ಪೆಯಲ್ಲಿ ಟ್ರೈಟರ್ಪೆನೋಯ್ಡ್ (triterpenoid) ಎಂಬ ಪೋಷಕಾಂಶವಿದೆ. ಇವು ಕ್ಯಾನ್ಸರ್‌ಗಳಿಗೆ ಕಾರಣವಾಗುವ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ತನ್ಮೂಲಕ ಯಕೃತ್, ಸ್ತನ ಮತ್ತು ಕರುಳಿನ ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ.

ಹೃದಯ ಮತ್ತು ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುತ್ತದೆ
ಸೇಬಿನ ಸಿಪ್ಪೆಯಲ್ಲಿ ಕರಗದ ನಾರು ಮತ್ತು ಕರಗುವ ನಾರು ಎರಡೂ ಇವೆ. ವಾಸ್ತವವಾಗಿ ಇಡಿಯ ಸೇಬಿನ ಬಹುತೇಕ ನಾಕು ಅದರ ಸಿಪ್ಪೆಯಲ್ಲಿಯೇ ಇದೆ. ಈ ನಾರುಗಳು ಕರುಳುಗಳಲ್ಲಿ ಸುಲಭವಾಗಿ ಕರಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ ಮತ್ತು ಮಲಬದ್ದತೆಯನ್ನು ತಡೆಗಟ್ಟುತ್ತದೆ. ಜೊತೆಗೇ ರಕ್ತಸಂಚಾರ ಸುಗಮಗೊಳಿಸಲು ನೆರವಾಗಿ ಹೃದಯ ಆರೋಗ್ಯಕರ ಒತ್ತಡದಲ್ಲಿ ರಕ್ತವನ್ನು ದೂಡಲು ಕಾರಣವಾಗುತ್ತದೆ. ಈ ಕಾರಣದಿಂದ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ.



Click it and Unblock the Notifications











