For Quick Alerts
ALLOW NOTIFICATIONS  
For Daily Alerts

  ತುಟಿಯ ಸೌಂದರ್ಯಕ್ಕೆ, ಸಿಹಿ-ಸಿಹಿ ಲಿಪ್ ಬಾಮ್!

  By manu
  |

  ತುಟಿಗಳಿಗೆ ಬಣ್ಣ ಹಚ್ಚಿ ಗಮನ ಸೆಳೆಯುವ ಪರಿ ಈಗ ಹಳೆಯದಾಯಿತು. ಈಗ ಏನಿದ್ದರೂ ರುಚಿಯೂ ಇರುವ ಆರೈಕೆಯನ್ನೂ ನೀಡುವ ತುಟಿಗಳ ಬಾಮ್‌ಗಳಿಗೇ ಹೆಚ್ಚಿನ ಬೇಡಿಕೆ. ವಿವಿಧ ಬಣ್ಣದೊಡನೆ ಹೊಳಪು, ಮಿನುಗು, ಒನಪುಗಳನ್ನು ಹೊಂದಿರುವ ಈ ಬಾಮ್‌ಗಳು ಅತಿ ಅಗ್ಗವೂ ಅಲ್ಲ, ಅತಿ ದುಬಾರಿಯೂ ಅಲ್ಲದ ಕಾರಣ ಎಲ್ಲರ ಮೆಚ್ಚಿನ ಪ್ರಸಾಧನವಾಗಿದೆ.

  ಹಿಂದೆ ದಪ್ಪದ ಲಿಪ್ ಸ್ಟಿಕ್ ರೂಪದಲ್ಲಿ ಮಾತ್ರ ದೊರಕುತ್ತಿದ ಈ ಪ್ರಸಾಧನ ಈಗ ಕಡ್ಡಿಯಲ್ಲಿ ಅಥವಾ ಚಿಕ್ಕ ಡಬ್ಬಿಯಲ್ಲಿಯೇ ಸಿಗುತ್ತಿವೆ. ಅಷ್ಟೇ ಅಲ್ಲ, ಹಿಂದೆ ರುಚಿಯಲ್ಲಿ ಮೀನಿನ ಹುರುಪೆಯನ್ನು ತಿಂದ ಹಾಗಾಗುತ್ತಿದ್ದ (ವಾಸ್ತವವಾಗಿ ಲಿಪ್ ಸ್ಟಿಕ್‌ನ ಪ್ರಮುಖ ಸಾಮಾಗ್ರಿಯೇ ಮೀನಿನ ಹುರುಪೆಯ ಪುಡಿ) ಬದಲಿಗೆ ಈಗ ಸ್ವಾದಿಷ್ಟವಾದ ಸ್ಟ್ರಾಬೆರಿ, ಕಿತ್ತಳೆ ಮೊದಲಾದ ಸ್ವಾದಗಳಲ್ಲಿ ದೊರಕುತ್ತಿದೆ. ಪಟ್ಟಿ ಮಾಡಲು ಹೊರಟರೆ ಇಡಿಯ ದಿನವೂ ಸಾಲದು ಅಷ್ಟು ತರಹದ ಪ್ರಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ.

  Deliciously Simple DIY Lip Balm Recipes
   

  ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಾಮ್‌ಗಿಂತಲೂ ನಾವೇ ನಮ್ಮ ಕೈಯಾರೆ, ನಮ್ಮ ಇಷ್ಟದ ಸ್ವಾದದಲ್ಲಿ ತಯಾರಿಸಿ ಬಳಸಿದರೆ ಎಷ್ಟು ಚೆನ್ನ. ಅದರಲ್ಲೂ ಹದಿಹರೆಯದವರಿಗೆ ಇದೊಂದು ಮುದನೀಡುವ ಚಟುವಟಿಕೆಯೇ ಆಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಕೆಲವು ಸುಲಭ ವಿಧಾನಗಳನ್ನು ವಿವರಿಸಲಾಗಿದ್ದು ಇವು ಮಾರುಕಟ್ಟೆಯಲ್ಲಿ ಸಿಗುವ ಪ್ರಸಾಧನದ ಬೆಲೆಯಷ್ಟೇ ಖರ್ಚಾದರೂ ಇದನ್ನು ಸ್ವತಃ ತಯಾರಿಸಿದ ಸಂತೋಷಕ್ಕೆ ಬೆಲೆಕಟ್ಟಲಾಗದು.    ತುಟಿಯ ಸೌಂದರ್ಯವನ್ನು ಹೆಚ್ಚಿಸುವ ಶುಂಠಿ ಲಿಪ್ ಸ್ಕ್ರಬ್!

  Deliciously Simple DIY Lip Balm Recipes
   

  ಅಗತ್ಯವಿರುವ ಸಾಮಾಗ್ರಿಗಳು:

  *ಜೇನುಮೇಣ: ಅಗತ್ಯಕ್ಕೆ ತಕ್ಕಂತೆ

  *ಕೆಲವು ಹನಿ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ

  *ಪುದೀನಾ ಎಣ್ಣೆ (ಐಚ್ಛಿಕ)

  *ಹಳೆಯ ಲಿಪ್ ಸ್ಟಿಕ್ ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿ.

  *ಒಂದು ಚಿಕ್ಕ ಬೋಗುಣಿ

  Deliciously Simple DIY Lip Balm Recipes
   

  ವಿಧಾನ:

  * ಮೊದಲು ಜೇನುಮೇಣ ಮತ್ತು ಬಾದಾಮಿ ಅಥವಾ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಬೋಗುಣಿಯಲ್ಲಿ ಹಾಕಿ ಮೈಕ್ರೋವೇವ್‌ನೊಳಗೆ ಕೆಲವು ಸೆಕೆಂಡುಗಳ ಕಾಲ ಇಡಿ. ಎಷ್ಟು ಎಂದರೆ ಇವೆರಡೂ ಈಗತಾನೇ ಕರಗಿದಂತಿರಬೇಕು. ಹೆಚ್ಚು ಬಿಸಿಯಾಗಲು ಬಿಡಬಾರದು. ಬಳಿಕ ಹೊರತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಬಾದಾಮಿ ಎಣ್ಣೆ ತುಟಿಗಳಿಗೆ ಆದ್ರತೆ ನೀಡುವ ಜೊತೆಗೇ ಜೇನುಮೇಣದ ಪಸೆ ಹೆಚ್ಚು ನಿಲ್ಲದಂತೆ ನೋಡಿಕೊಳ್ಳುತ್ತದೆ.

  * ಬಳಿಕ ಇದಕ್ಕೆ ಎರಡು ಹನಿ ಪುದೀನಾ ಎಣ್ಣೆ ಸೇರಿಸಿ. ಹೆಚ್ಚು ಸೇರಿಸಬಾರದು, ಏಕೆಂದರೆ ಹೆಚ್ಚು ಪ್ರಮಾಣ ತುಟಿಗಳಲ್ಲಿ ಉರಿ ತರಿಸಬಹುದು. ಇದು ಅವಶ್ಯವಲ್ಲ, ಆದರೆ ಇದು ತುಸುವೇ ಕಚಗುಳಿ ಇಡುವಂತೆ ತುಟಿಗಳ ಚರ್ಮಕ್ಕೆ ಸಂವೇದನೆ ನೀಡುವ ಮೂಲಕ ರಕ್ತಸಂಚಾರವನ್ನು ಹೆಚ್ಚಿಸುತ್ತದೆ.          ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

  Deliciously Simple DIY Lip Balm Recipes

  * ಬಳಿಕ ಹಳೆಯ ಲಿಪ್‌ಸ್ಟಿಕ್‌ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿಯನ್ನು ಸೇರಿಸಿ. ಇದರ ಪ್ರಮಾಣ ನಿಮಗೆ ಬಿಟ್ಟ ಆಯ್ಕೆ. ತಿಳಿಯಾಗಿರಬೇಕೆಂದರೆ ಕಡಿಮೆ ಗಾಢವಾಗಿರಬೇಕೆಂದರೆ ಹೆಚ್ಚು ಸೇರಿಸಿ ಚೆನ್ನಾಗಿ ಬೆರೆಸಿ.

  * ಎಲ್ಲವೂ ಚೆನ್ನಾಗಿ ಮಿಶ್ರಣಗೊಂಡ ಬಳಿಕ ಒಂದು ಚಿಕ್ಕ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟು ತಣಿಯಲು ಬಿಡಿ. ಕನಿಷ್ಠ ಎರಡು ಗಂಟೆಯಾದರೂ ತಣಿಯಬೇಕು. ಬಳಿಕ ನಿಮ್ಮ ತುಟಿಗಳ ಅಂದವನ್ನು ನೋಡಿ ಮನೆಯವರು ಮತ್ತು ನಿಮ್ಮ ಸ್ನೇಹಿತರು ಸಂತೋಷಪಡುವುದನ್ನು ಕಂಡು ಸಂಭ್ರಮಿಸಿ.

  English summary

  Deliciously Simple DIY Lip Balm Recipes

  While lip balms are fun and stylish, they are also essential at the same time. We can never get enough of them. For many of us, even though we have a lot of them lying around, we have to buy the latest ones flooding the market. They come in different forms, from pots to tubes to sticks. They also come in many different yummy flavours like cherry, strawberry, orange, etc. The list is endless.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more