For Quick Alerts
ALLOW NOTIFICATIONS  
For Daily Alerts

ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

|

ಸಾಂಬಾರ ಪದಾರ್ಥದಲ್ಲಿ ಅತ್ಯಂತ ಬೆಲೆಬಾಳುವ ಕೇಸರಿ ಆರೋಗ್ಯಕ್ಕೆ ಹಲವು ರೂಪದಲ್ಲಿ ಉತ್ತಮವಾಗಿದೆ. ಸೌಂದರ್ಯವರ್ಧಕ, ಗರ್ಭಿಣಿಯರಿಗೆ ಉತ್ತಮ ಪೋಷಣೆ ನೀಡುವ ಆಹಾರವಾಗಿ, ಸಿಹಿತಿಂಡಿಗಳ ನೋಟ ಮತ್ತು ರುಚಿಯನ್ನು ಹೆಚ್ಚಿಸಲು ಮೊದಲಾದ ಹಲವು ರೂಪದಲ್ಲಿ ಕೇಸರಿ ಬಳಕೆಯಾಗುತ್ತಿದೆ. ಅಡುಗೆಯಲ್ಲಿ ಅಡುಗೆಗಳ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಬಳಸಲಾಗುವ ಕೇಸರಿ ಎಲ್ಲರ ಮನಮೆಚ್ಚಿನದ್ದಾಗಿದೆ.

ನಿಮ್ಮ ನೆಚ್ಚಿನ ಟೀ, ಬಾದಾಮಿ ಹಾಲು ಮೊದಲಾದ ಬಿಸಿಪೇಯಗಳಲ್ಲಿ ಕೊಂಚಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿದರೆ ಆ ಪೇಯದ ರುಚಿ ಸಾವಿರ ಪಟ್ಟು ಹೆಚ್ಚುತ್ತದೆ. ಇದೇ ಕೇಸರಿ ದೇಹದ ಒಳಗಿನ ಅಂಗಗಳ ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಚರ್ಮದ ಕಾಂತಿಯನ್ನು ಬೆಳಗಿಸಿ ಮುಖದ ತೇಜಸ್ಸನ್ನು ಹೆಚ್ಚಿಸುತ್ತದೆ. ಸಸ್ಯಜನ್ಯ ಔಷಧಿ: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!

ತ್ವಚೆಯ ಗೌರವರ್ಣಕ್ಕಾಗಿ ಮತ್ತು ಹೊಳೆಯುವ ಕಾಂತಿಗಾಗಿ ಕೇಸರಿಯನ್ನು ಬಹಳ ಹಿಂದಿನಿಂದಲೂ ಬಳಸುತ್ತಾ ಬರಲಾಗಿದೆ. ಹುಟ್ಟುವ ಮಗು ಉತ್ತಮ ಆರೋಗ್ಯ ಹೊಂದಿರಲು ಗರ್ಭಿಣಿಯರು ಹಾಲಿನೊಂದಿಗೆ ಕೇಸರಿಯನ್ನು ಸೇರಿಸಿ ಕುಡಿಯುತ್ತಾ ಬಂದಿದ್ದಾರೆ. ಕೇಸರಿಯನ್ನು ಸೌಂದರ್ಯವೃದ್ಧಿಗಾಗಿ ವಿವಿಧ ರೀತಿಯಲ್ಲಿ ಬಳಸಬಹುದು. ಕೇಸರಿಯನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಕೇಸರಿ ಮತ್ತು ಜೇನು

ಕೇಸರಿ ಮತ್ತು ಜೇನು

ಒಂದು ಚಿಕ್ಕಚಮಚ ಜೇನಿಗೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಈಗತಾನೇ ತೊಳೆದು ಒರೆಸಿದ ಮುಖದ ಚರ್ಮಕ್ಕೆ ಹಚ್ಚಿ.ಜೇನು ಮುಖದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ನೀಡುತ್ತದೆ ಹಾಗೂ ಕೇಸರಿಯ ಚೈನತ್ಯ ನೀಡುವ ಗುಣ ಚರ್ಮಕ್ಕೆ ಕಾಂತಿ ನೀಡುತ್ತದೆ. ಮುಂದೆ ಓದಿ

ಕೇಸರಿ ಮತ್ತು ಜೇನು

ಕೇಸರಿ ಮತ್ತು ಜೇನು

ಇದನ್ನು ನಿತ್ಯವೂ ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಒಂದು ತಿಂಗಳ ಮಟ್ಟಿಗೆ ಅನುಸರಿಸಿ.

ಕೇಸರಿ, ಚಂದನ ಮತ್ತು ಹಾಲು

ಕೇಸರಿ, ಚಂದನ ಮತ್ತು ಹಾಲು

ಎರಡು ಚಮಚ ತಣ್ಣನೆಯ ಹಾಲಿನಲ್ಲಿ ಕೆಲವು ಎಸಳು ಕೇಸರಿಯನ್ನು ಹಾಕಿ ಒಂದು ಗಂಟೆ ನೆನೆಸಿ. ಇದಕ್ಕೆ ಬಳಿಕ ಒಂದು ಚಿಕ್ಕಚಮಚ ಚಂದನದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ (ಕೆಳಗಿನಿಂದ ಮೇಲಕ್ಕೆ ಬರುವಂತೆ ಮಸಾಜ್ ಮಾಡುತ್ತಾ) ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೇಸರಿ, ಚಂದನ ಮತ್ತು ಹಾಲು

ಕೇಸರಿ, ಚಂದನ ಮತ್ತು ಹಾಲು

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚೈತನ್ಯ ಕಳೆದುಕೊಂಡ ಚರ್ಮಕ್ಕೆ ಪುನರ್ಚೈತನ್ಯ ನೀಡುತ್ತದೆ. ಕಾಂತಿಯೂ ಹೆಚ್ಚುತ್ತದೆ.

ಕೇಸರಿ ಮತ್ತು ಹಾಲಿನ ಕೆನೆ

ಕೇಸರಿ ಮತ್ತು ಹಾಲಿನ ಕೆನೆ

ಒಂದು ಚಮಚ ಹಾಲಿನ ಕೆನೆಯಲ್ಲಿ ಕೆಲವು ಎಸಳು ಕೇಸರಿ ಹಾಕಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ನಯವಾದ ಮಿಶ್ರಣವಾಗಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಬಿಸಿಲಿಗೆ ಒಣಗಿ ತೇಜಸ್ಸು ಕಳೆದುಕೊಂಡಿದ್ದ ಚರ್ಮಕ್ಕೆ ಅತ್ಯುತ್ತಮವಾದ ಪೋಷಣೆಯಾಗಿದೆ.

ಕೇಸರಿ ಮತ್ತು ಗುಲಾಬಿ ನೀರು

ಕೇಸರಿ ಮತ್ತು ಗುಲಾಬಿ ನೀರು

ನೈಸರ್ಗಿಕ ರೂಪದಲ್ಲಿ ಚರ್ಮದ ಕಾಂತಿ ಹೆಚ್ಚಿಸಲು ಈ ವಿಧಾನ ಉತ್ತಮವಾಗಿದೆ. ಇದಕ್ಕಾಗಿ ಒಂದು ಚಮಚ ಗುಲಾಬಿ ನೀರಿನಲ್ಲಿ ಕೆಲವು ಎಸಳು ಕೇಸರಿಯನ್ನು ಹಾಕಿ ಕಲಕಿ. ಒಂದು ಹತ್ತಿಯ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಮುಖವನ್ನು ಕೆಳಗಿನಿಂದ ಮೇಲಕ್ಕೆ ಬರುವಂತೆ ಒರೆಸಿಕೊಳ್ಳಿ.

ಕೇಸರಿ ಮತ್ತು ಗುಲಾಬಿ ನೀರು

ಕೇಸರಿ ಮತ್ತು ಗುಲಾಬಿ ನೀರು

ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವ ಜೊತೆಗೇ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಸಿಕ್ಕಿಕೊಂಡಿದ್ದ ಕೊಳೆಯನ್ನು ನಿವಾರಿಸಿ ಯೌವನವನ್ನು ಮರುಕಳಿಸುತ್ತದೆ.

ಕೇಸರಿ ಮತ್ತು ತುಳಸಿ ಎಲೆಗಳು

ಕೇಸರಿ ಮತ್ತು ತುಳಸಿ ಎಲೆಗಳು

ಕೆಲವು ಎಳೆಯ ತುಳಸಿ ಎಲೆಗಳು ಮತ್ತು ಕೆಲವು ಕೇಸರಿ ಎಸಳುಗಳನ್ನು ಸೇರಿಸಿ ನುಣ್ಣನೆಯ ಲೇಪ ತಯಾರಿಸಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಗೆ ಹೆಚ್ಚಿ ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ಮೊಡವೆಗಳಿರುವ ಚರ್ಮಕ್ಕೆ ಅತ್ಯುತ್ತಮವಾದ ಆರೈಕೆ ನೀಡುತ್ತದೆ.

ಕೇಸರಿ ಮತ್ತು ತುಳಸಿ ಎಲೆಗಳು

ಕೇಸರಿ ಮತ್ತು ತುಳಸಿ ಎಲೆಗಳು

ತುಳಸಿಯ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದಲ್ಲಿರುವ ಕೀಟಾಣುಗಳನ್ನು ನಿವಾರಿಸಿ ಚರ್ಮ ಸಹಜ ಕಾಂತಿ ಮತ್ತು ಪೋಷಣೆಯನ್ನು ಪಡೆಯಲು ನೆರವಾಗುತ್ತದೆ.

ಕೇಸರಿ ಮತ್ತು ಹಾಲು

ಕೇಸರಿ ಮತ್ತು ಹಾಲು

ಒಂದು ಲೋಟ ಹಸಿಹಾಲಿನಲ್ಲಿ ಕೆಲವು ಕೇಸರಿ ಎಳೆಗಳನ್ನು ಹಾಕಿ ಎರಡು ಗಂಟೆ ನೆನೆಸಿಡಿ. ಬಳಿಕ ಮಿಕ್ಸಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಮಿಶ್ರಣ ಮಾಡಿ. ಹತ್ತಿನ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಮುಖದ ಮೇಲೆ ಒತ್ತಿ ಸುರಿಯುವಂತೆ ಮಾಡಿ. ನಿಧಾನವಾಗಿ ಸುರಿಯುತ್ತಾ ಇಡೀ ಲೋಟ ಖಾಲಿ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ ಹಾಗೂ ಕಲೆಗಳು ಮಾಯವಾಗುತ್ತದೆ.

English summary

Ways To Use Saffron For A Radiant Skin

Saffron, widely known as kesar in India, is the most expensive and precious spice in the world. It has a plethora of health and beauty benefits. Saffron is also used as a kitchen ingredient for its alluring aroma. Saffron is packed with nutrients and compounds which are beneficial for health and beauty as well.
Story first published: Friday, September 4, 2015, 10:25 [IST]
X
Desktop Bottom Promotion