For Quick Alerts
ALLOW NOTIFICATIONS  
For Daily Alerts

ಶೇವಿಂಗ್ ನಂತರ ಕಂಡುಬರುವ ಸಮಸ್ಯೆಗೆ ಸಲಹೆಗಳು

By Manohar.V
|

ಹುಡುಗಿಯರಿಗೆ ಮೇಕಪ್ ಎಷ್ಟು ಅಗತ್ಯವೋ ಅಂತೆಯೇ ಹುಡುಗರಿಗೆ ಕೂಡ ಶೇವಿಂಗ್ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಪುರುಷರ ಮುಖ ಆಕರ್ಷಕವಾಗಿ ಕಾಣಲು ನೀಟಾಗಿ ಶೇವ್ ಮಾಡಿರಬೇಕು, ಯಾವುದೇ ಮೀಟಿಂಗ್ ಅಥವಾ ಡೇಟಿಂಗ್ ಆಗಿರಲಿ, ಆಫೀಸ್‌, ಸಮಾರಂಭ ಯಾವುದೇ ಇರಲಿ ಆತ 3- 4 ದಿನಗಳವರೆಗೆ ನೀಟಾಗಿ ಶೇವ್ ಮಾಡಿಕೊಂಡಿಲ್ಲದಿದ್ದರೆ ಆತ ಜಂಟಲ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ!

ಪುರುಷರ ಮುಖ ಆಕರ್ಷಕವಾಗಿ ಕಾಣಲು ನೀಟಾಗಿ ಶೇವ್ ಮಾಡಿರಬೇಕು. ಆದರೆ ಈ ಶೇವಿಂಗ್ ಬಗ್ಗೆ ಎರಡು ಅಭಿಪ್ರಾಯಗಳಿವೆ. ಪ್ರತಿದಿನ ಶೇವ್ ಮಾಡಿದರೆ ಒಳ್ಳೆಯದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪ್ರತಿದಿನ ಶೇವ್ ಮಾಡಿದರೆ ಮುಖ ತುಂಬಾ ಒರಟಾಗುತ್ತದೆ ಹಾಗೂ ತ್ವಚೆಗೆ ಅಷ್ಟು ಒಳ್ಳೆಯದಲ್ಲ ಎನ್ನುವ ಅಭಿಪ್ರಾಯ ಹೇಳುತ್ತಾರೆ. ಆದರೆ ಇಲ್ಲಿ ನಾವು ದಿನನಿತ್ಯ ಶೇವಿಂಗ್ ಮಾಡಿದರೆ ನಿಮ್ಮ ತ್ವಚೆಗೆ ಅನೇಕ ಪ್ರಯೋಜನಗಳಿವೆ ಆ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿ.

Pimple After Shaving: Home Remedies

ಶೇವಿಂಗ್ ಬಳಿಕ ಮುಖದ ಚರ್ಮವನ್ನು ಸ್ವಲ್ಪ ಆರೈಕೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ಶೇವಿಂಗ್ ಮಾಡಿದ ಬಳಿಕೆ, ರೇಜರ್‌ನಿಂದ ಉಂಟಾಗಿರುವ ಗಾಯಗಳು ಮತ್ತು ಕೆಂಪು ಉಬ್ಬುಗಳಿಂದ, ನಿಮಗೆ ಕಿರಿಕಿರಿ ಉಂಟಾಗಬಹುದು. ಹಲವಾರು ಜನರಿಗೆ ಶೇವಿಂಗ್‪ ನಂತರ, ಮೊಡವೆಗಳು ಅಥವಾ ಕೆಂಪು ಗುಳ್ಳೆಗಳು ಕೂಡ ಕಂಡುಬರುತ್ತದೆ.

ಸರಿ, ಶೇವಿಂಗ್ ನಂತರ ಕಂಡುಬರುವ ಇಂತಹ ಕೆಂಪು ಗುಳ್ಳೆಗಳು ಮೊಡವೆ ಅಲ್ಲ! ಇದು ಮಾಂಸಖಂಡದೊಳಗೆ ಕೂದಲು ಅಥವಾ ಶೇವಿಂಗ್ ನಂತರ ಉಂಟಾಗಿರುವ ಗಾಯದಿಂದ ಮುಖದಲ್ಲಿ ಇಂತಹ ಲಕ್ಷಣಗಳು ಕಂಡುಬರುತ್ತದೆ.

ಯಾವುದೇ ಮೀಟಿಂಗ್ ಅಥವಾ ಡೇಟಿಂಗ್ ಆಗಿರಲಿ, ಶೇವಿಂಗ್ ಮಾಡಿಸಿಕೊಂಡರೆ ಆಗ ನೀವು ಸ್ಮಾರ್ಟ್ ಆಗಿ ಮತ್ತು ಜಂಟಲ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದು ತುಂಬಾ ಮುಖ್ಯ, ಇದರ ಜೊತೆಗೆ ಶೇವಿಂಗ್ ಬಳಿಕ ಮುಖದ ಚರ್ಮವನ್ನು ಆರೈಕೆ ಮಾಡಬೇಕಾಗಿರುವುದನ್ನು ಗಮನದಲ್ಲಿ ಇರಿಸಕೊಳ್ಳುವುದು ಅತ್ಯವಶ್ಯಕ. ಶೇವಿಂಗ್ ಮಾಡುವ ವೇಳೆ ಚರ್ಮದ ಒಂದು ಅಥವಾ ಎರಡು ಪದರಗಳು ಜರ್ಜರಿತವಾಗಿರುತ್ತದೆ. ಇದನ್ನು ಉಗುರಿನಿಂದ ಹಿಸುಕುವುದು ಅಥವಾ ಚುಚ್ಚುವುದನ್ನು ಮಾಡಬೇಡಿ.

ಮುಖದಲ್ಲಿ ಕಂಡುಬರುವ ಇಂತಹ ಮೊಡವೆಗಳನ್ನು ನೀವು ಹಿಸುಕಿದರೆ, ಅದು ಶಾಶ್ವತವಾಗಿ ನಿಮ್ಮ ಮುಖದಲ್ಲಿ ಕಲೆ ಆಗಿ ಬಿಡುತ್ತವೆ. ಶೇವಿಂಗ್ ನಂತರ ಕಂಡುಬರುವ ಇಂತಹ ಸಮಸ್ಯೆಯಿಂದ ಯಾವಾಗಲೂ ಜಾಗರೂಕತೆಯಾಗಿರಿ. ಹಾಗಾಗಿ ಶೇವಿಂಗ್ ನಂತರ ಕಂಡುಬರುವ ಮೊಡವೆಗಳನ್ನು ಶಮನಗೊಳಿಸಲು ಕೆಲವೊಂದು ಉಪಯುಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ.

1. ಉತ್ತಮ ಗುಣಮಟ್ಟದ ಶೇವಿಂಗ್ ರೇಜರ್ ಅನ್ನು ಬಳಸುವುದನ್ನು ಮರೆಯಬೇಡಿ. ಸಮಾನ್ಯವಾಗಿ ರೇಜರ್ ಅನ್ನು 4-5 ದಿನಗಳ ಶೇವಿಂಗ್‌‌ಗೆ ಮಾತ್ರ ಬಳಸಿ. ಒಮ್ಮೆ ಶೇವಿಂಗ್ ಮಾಡಿದ ನಂತರ ರೇಜರ್ ಅನ್ನು ಚೆನ್ನಾಗಿ ಸ್ಚಚ್ಚಗೊಳಿಸುವುದನ್ನು ಮರೆಯಬೇಡಿ.

2. ಹಲವಾರು ಜನರು ಎಲೆಕ್ಟ್ರಿಕ್ ರೇಜರ್ ಅನ್ನು ಬಳಸುವುದು ಸಾಮಾನ್ಯ, ಇದು ಸಮಯವನ್ನು ಉಳಿಸಿಸುವುದರೊಂದಿಗೆ, ಸುಲಭದಾಯಕವಾಗಿದೆ. ಒಂದು ವೇಳೆ ನೀವು ಎಲೆಕ್ಟ್ರಿಕ್ ರೇಜರ್ ಅನ್ನು ಬಳಸುತ್ತಿದ್ದರೆ, 2-3 ದಿನಗಳ ಶೇವಿಂಗ್‌ ನಂತರ ಬ್ಲೇಡ್ ಅನ್ನು ಬದಲಾಯಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದಾಗಿಯೂ, ನಿಮ್ಮ ತ್ವಚೆಯ ಚರ್ಮದ ದೃಷ್ಟಿಯಿಂದ ಪ್ರತಿಯೊಂದು ಶೇವಿಂಗ್‌ಗೆ ಕೂಡ ಬ್ಲೇಡ್ ಅನ್ನು ಬದಲಾಯಿಸುವುದು ಸೂಕ್ತದಾಯಕ.

3. ಆದಷ್ಟು ಡಬಲ್ ಮತ್ತು ಟ್ರಿಪಲ್ ಅಂಚಿನ ಬ್ಲೇಡ್‌ಗಳನ್ನು ಬಳಸುವುದನ್ನು ಕಡಿಮೆಗೊಳಿಸಿ. ಇದು ನಿಮ್ಮ ಮುಖದ ಚರ್ಮವನ್ನು ಘಾಸಿಗೊಳಿಸುವುದರ ಜೊತೆಗೆ, ಗುಳ್ಳೆಗಳ ಮತ್ತು ಉರಿಯುವಿಕೆಗೆ ಕಾರಣವಾಗುತ್ತದೆ

4. ಶೇವ್ ಮಾಡುವಾಗ ಗುಣಮಟ್ಟದ ಶೇವಿಂಗ್ ಜೆಲ್ ಹಾಕಿ ಮುಖಕ್ಕೆ ತಿಕ್ಕಿ ಶೇವ್ ಮಾಡಿ, ನಂತರ ಜೆಲ್ ಅಥವಾ ಮಾಯಿಶ್ಚರೈಸರ್ ಕ್ರೀಮ್ ಹಚ್ಚುವುದರಿಂದ ಮುಖದಲ್ಲಿರು ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ಜೊತೆಗೆ ಮುಖದಲ್ಲಿ ಕಂಡುಬರುವ ಗುಳ್ಳೆ ಅಥವಾ ಮೊಡವೆಗಳಿಂದ ರಕ್ಷಣೆ ಪಡೆದುಕೊಳ್ಳಬಹುದು.

5. ಶೇವಿಂಗ್ ಮಾಡಿದ ನಂತರ ಮುಖಕ್ಕೆ ಐಸ್ ಕ್ಯೂಬ್‌ನಿಂದ ಉಜ್ಜುವುದನ್ನು ಮರೆಯದಿರಿ. ಇದು ಸರಳ ಮೆನೆಮದ್ದು ಆಗಿದ್ದು, ಶೇವಿಂಗ್ ನಂತರ ಕಂಡುಬರುವ ಮೊಡವೆಗಳಿಂದ ಸೂಕ್ತ ಪರಿಹಾರ ದೊರೆಯಲಿದೆ, ಜೊತೆಗೆ ಶೇವಿಂಗ್ ಮಾಡಿದ ನಂತರ ಮುಖಕ್ಕೆ ಐಸ್ ಕ್ಯೂಬ್‌ನಿಂದ ಉಜ್ಜುವುದರಿಂದ ಶೇವಿಂಗ್ ನಂತರ ಕಂಡುಬರುವ ಗಾಯ, ಕೆಂಪು ಉಬ್ಬುಗಳು ಕೂಡ ಶಮನಗೊಳ್ಳುತ್ತವೆ.

6. ಶೇವಿಂಗ್ ಮಾಡುವಾಗ ಮುಖಕ್ಕೆ ಹಚ್ಚುವ ಕ್ರೀಮ್‌ ಗುಣಮಟ್ಟದ್ದಾಗಿರಲಿ, ಕೆಲವೊಮ್ಮೆ ಕ್ರೀಮ್‌‌ನಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಮುಖದ ಚರ್ಮದ ಮೇಲೆ ಖಣಾತ್ಮಕ ಪರಿಣಾಮ ಬೀರಬಹುದು. ಅಲ್ಲದೆ ಪ್ರತಿನಿತ್ಯ ಶೇವ್ ಮಾಡಿದರೆ ಮುಖ ನೋಡಲು ಆಕರ್ಷಕವಾಗಿ ಕಾಣುವುದು.

7. ಶೇವಿಂಗ್ ಮಾಡಿದ ನಂತರ ಮೊಡವೆಗಳು ಅಥವಾ ರೇಜರ್‌ನಿಂದ ಕಂಡುಬರುವ ಗಾಯ ಅಥವಾ ಗುಳ್ಳೆಗಳನ್ನು ತಡೆಯಲು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸಲು ಮತ್ತು ಶೇವಿಂಗ್ ಮಾಡಿದ ಭಾಗಕ್ಕೆ ರಕ್ತ ಸಂಚಾರಗೊಳ್ಳಲು ಸಹಕಾರಿಯಾಗಿದೆ.

English summary

Pimple After Shaving: Home Remedies

Shaving is one of the basic grooming essentials a man has to follow. A man would look unclean and go unrecognised if he goes out without shaving for more than 3-5 days.
X
Desktop Bottom Promotion