For Quick Alerts
ALLOW NOTIFICATIONS  
For Daily Alerts

ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು

By Super
|

ಸೂರ್ಯನ ವಿಕಿರಣ, ಶಾಖ ಮತ್ತು ಬೆಂಕಿಯಿಂದ ಸುಟ್ಟ ಗಾಯಗಳಾಗಬಹುದು. ಇದು ಸಣ್ಣ ಅಥವಾ ದೊಡ್ಡ ಮಟ್ಟದ್ದಾಗಿರಬಹುದು. ಈ ರೀತಿ ಚರ್ಮ ಸುಟ್ಟು ಊದಿಕೊಂಡು ಚರ್ಮ ಕೆಂಪಾಗುವಂತೆ ಮಾಡಿ ಚರ್ಮದ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡಬಹುದು. ಇದರಿಂದಾಗಿ ಚರ್ಮದ ಬೊಕ್ಕೆಗಳ ಬಗ್ಗೆ ಸರಿಯಾದ ಕಾಳಜಿ ವಹಿಸದಿದ್ದರೆ ಅದು ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಮೂರು ರೀತಿಯ ಚರ್ಮ ಬೊಕ್ಕೆಗಳಿರುತ್ತದೆ. ಮೊದಲನೇಯದು ಮೊದಲನೇ ದರ್ಜೆ ಸುಡುವಿಕೆ. ಸಣ್ಣ ಮಟ್ಟದ ಸುಟ್ಟಗಾಯಗಳು ಚರ್ಮದ ಹೊರಚರ್ಮದ ಪದರದ ಮೇಲೆ ಊತ ಉಂಟುಮಾಡುತ್ತದೆ. ಇಂತಹ ಸುಟ್ಟಗಾಯಗಳನ್ನು ಮನೆಮದ್ದಿನಿಂದ ವಾಸಿಮಾಡಬಹುದು ಮತ್ತು ಇದು ಗಂಭೀರವಾಗಿರುವುದಿಲ್ಲ. ಇತರ ಎರಡೆಂದರೆ ಎರಡನೇ ದರ್ಜೆ ಸುಟ್ಟಗಾಯ ಮತ್ತು ಮೂರನೇ ದರ್ಜೆ ಸುಟ್ಟಗಾಯ. ಇವುಗಳು ಚರ್ಮದ ಅಂಗಾಂಶಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದಕ್ಕೆ ಪರಿಣಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಬೇಕು.
ಈ ಲೇಖನದಲ್ಲಿ ನಾವು ಮೊದಲನೇ ದರ್ಜೆ ಸುಟ್ಟಗಾಯಗಳನ್ನು ವಾಸಿಮಾಡಬಲ್ಲ ಔಷಧಿ ಬಗ್ಗೆ ಚರ್ಚಿಸುವ. ಇದನ್ನು ಕೆಲವೊಂದು ಮನೆಮದ್ದು ಉಪಯೋಗಿಸಿ ನಿವಾರಿಸಬಹುದು. ಒಳ್ಳೆಯ ಮದ್ದುಗಳು ಇಲ್ಲಿವೆ.

Remedies To Treat Skin Burn

1. ಜೇನುತುಪ್ಪ
ಸುಟ್ಟಗಾಯಗಳಿಗೆ ಸಾಮಾನ್ಯ ಮನೆಮದ್ದು ಇದು ಮತ್ತು ಸುಟ್ಟಗಾಯಗಳಿಗೆ ಜೇನುತುಪ್ಪವನ್ನು ಹಚ್ಚುವುದರಿಂದ ಗಾಯದ ಕಲೆ ಕಾಣಿಸುವುದು ಕಡಿಮೆಯಾಗುತ್ತದೆ. ಕಚ್ಚಾ ಜೇನು ಅದ್ಭುತ ನಂಜುನಿರೋಧಕ ಮತ್ತು ಚಿಕಿತ್ಸಾ ಗುಣಲಕ್ಷಣಗಳನ್ನು ಹೊಂದಿದೆ.

2. ವಿನೇಗರ್
ನೀರಿನಂತಹ ಈ ವಸ್ತುವು ಸುಟ್ಟಗಾಯಗಳನ್ನು ಶಮನಗೊಳಿಸಲು ಮತ್ತು ತಣ್ಣನೆಯ ಸಂವೇದನೆ ನೀಡಲು ತುಂಬಾ ಸಹಕಾರಿ. ವಿನೇಗರ್ ನ್ನು ನೀರಿನೊಂದಿಗೆ ಬೆರಸಿ ಹಚ್ಚಬೇಕು. ವಿನೇಗರ್ ನಲ್ಲಿ ಬಟ್ಟೆಯನ್ನು ಅದ್ದಿ ಅದನ್ನು ಸುಟ್ಟಗಾಯಗಳಿಗೆ ಹಚ್ಚಿ. ನಿಯಮಿತವಾಗಿ ವಿನೇಗರ್ ನ್ನು ಬಳಸುವುದರಿಂದ ಶೀಘ್ರವಾಗಿ ನೋವು ಶಮನವಾಗಿ ಸುಟ್ಟುಹೋದ ಚರ್ಮದ ಊದುವಿಕೆ ಕಡಿಮೆಯಾಗುತ್ತದೆ.

3. ಅಲೋವೆರಾ
ಚರ್ಮದ ಸುಟ್ಟ ಗಾಯಗಳ ಚಿಕಿತ್ಸೆ ಮತ್ತು ಕಾಂತಿ ವರ್ಧಿಸುವಂತಹ ಹಲವಾರು ಔಷಧಿಯ ಗುಣಗಳು ಅಲೋವೆರಾದಲ್ಲಿದೆ. ಸುಟ್ಟ ಚರ್ಮದ ಭಾಗಕ್ಕೆ ಅಲೋವೆರಾದ ಲೋಳೆರಸವನ್ನು ನೇರವಾಗಿ ಹಚ್ಚಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಮತ್ತು ಗಾಯವನ್ನು ಬೇಗನೆ ಶಮನಗೊಳಿಸಲು ಅದು ನೆರವಾಗುತ್ತದೆ. ದೊಡ್ಡ ಮಟ್ಟದ ಸುಟ್ಟಗಾಯಗಳ ಚಿಕಿತ್ಸೆಗೆ ಕೂಡ ಅಲೋವೆರಾವನ್ನು ಬಳಸಬಹುದು.

4. ತೆಳು ದ್ರಾವಣದಲ್ಲಿರುವ ಲ್ಯಾವೆಂಡರ್ ಆಯಿಲ್
ಸುಟ್ಟಗಾಯಗಳಿಂದ ಆಗುವ ನೋವನ್ನು ನಿವಾರಿಸಲು ತೆಳು ದ್ರಾವಣದಲ್ಲಿರುವ ಲ್ಯಾವೆಂಡರ್ ಆಯಿಲ್ ನ್ನು ಬಳಸಬಹುದು. ಅಲೋವೆರಾದ ಲೋಳೆರಸ, ವಿಟಮಿನ್ ಸಿ, ಲೆವಂಡರ್ ಆಯಿಲ್ ಮತ್ತು ವಿಟಮಿಸ್ ಇಯ ಮಿಶ್ರಣವನ್ನು ದಿನದಲ್ಲಿ ಹಚ್ಚಿಕೊಂಡರೆ ಅದು ಒಳ್ಳೆಯ ಉಪಶಮನಕಾರಿಯಾಗಿ ಕೆಲಸ ಮಾಡುತ್ತದೆ. ಇದು ಸುಟ್ಟಚರ್ಮದ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇದು ಸುಟ್ಟ ಚರ್ಮದ ಭಾಗವನ್ನು ಕಡಿಮೆ ಮಾಡಲು ನೆರವಾಗುತ್ತದೆ.

5. ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟಚರ್ಮದ ಭಾಗಕ್ಕೆ ಹಚ್ಚಿದರೆ ಊತ ಮತ್ತು ನೋವು ಕಡಿಮೆ ಮಾಡಲು ಅದು ನೆರವಾಗುತ್ತದೆ. ಇದು ಚರ್ಮವನ್ನು
ಪುನರ್ಯೌವನಗೊಳಿಸುತ್ತದೆ ಮತ್ತು ಸುಟ್ಟಗಾಯದಿಂದ ಆಗುವ ನೋವನ್ನು ಕಡಿಮೆ ಮಾಡುತ್ತದೆ. ಬಾಳೆ ಹಣ್ಣಿನ ಸಿಪ್ಪೆಯನ್ನು ಸುಟ್ಟಚರ್ಮದ ಗಾಯದ ಮೇಲಿಡಬೇಕು ಮತ್ತು ಸಿಪ್ಪೆ ಕಪ್ಪಾಗುವ ತನಕ ಅದನ್ನು ತೆಗೆಯಬಾರದು. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಮೊಸರನ್ನು ಹಚ್ಚಿಕೊಂಡರೆ ಸುಟ್ಟಚರ್ಮದ ಗಾಯ ಮತ್ತಷ್ಟು ಬೇಗ ಗುಣವಾಗುತ್ತದೆ.

6. ತಂಪಾದ ನೀರು
ಸುಟ್ಟಗಾಯದ ಮೇಲೆ ತಂಪಾದ ನೀರು ಅಥವಾ ಐಸ್ ನ್ನು ಇಡುವುದರಿಂದ ನೋವಿನ ಪ್ರಮಾಣವನ್ನು ಬೇಗನೆ ಕಡಿಮೆ ಮಾಡಲು ತುಂಬಾ ಸಹಕಾರಿ. ಇದು ಕೇವಲ ತಾತ್ಕಾಲಿಕ ಪರಿಹಾರ ಮತ್ತು ಶಾಖ, ಬೆಂಕಿ ಅಥವಾ ಸೂರ್ಯನ ವಿಕಿರಣದಿಂದ ಚರ್ಮ ಸುಟ್ಟ ಕೂಡಲೇ ಈ ರೀತಿ ಮಾಡಬೇಕು.

7. ಆಯ್ನಿನ್ಮೆಂಟ್ ಮತ್ತು ಮಾಯಿಶ್ಚರೈಸರ್
ಸುಟ್ಟಗಾಯಗಳು ಹಾಗೆ ಇದ್ದರೆ ಆಗ ಮೊಶ್ಚಿರೈಸರ್ ಅಥವಾ ಚರ್ಮದ ಆಯ್ನಿನ್ಮೆಂಟ್ ನ್ನು ಬಳಸಬಹುದು. ಇದು ನೋವನ್ನು ಕಡಿಮೆ ಮಾಡಿ ಚರ್ಮಕ್ಕೆ ತಂಪನ್ನು ಉಂಟುಮಾಡುತ್ತದೆ. ಇವುಗಳು ಸುಲಭವಾಗಿ ಮೆಡಿಕಲ್ ಗಳಲ್ಲಿ ಲಭ್ಯವಿರುತ್ತದೆ.

ಮೇಲಿನ ಯಾವುದೇ ಮದ್ದು ಕೆಲಸ ಮಾಡದೆ, ನೋವು ಹಾಗೆ ಇದ್ದರೆ ನೀವು ವೈದ್ಯರ ಬಳಿ ಹೋಗಿ. ನಿರ್ಲಕ್ಷ್ಯದಿಂದ ಚರ್ಮದ ಸುಟ್ಟಗಾಯ ಗಂಭೀರ ಸಮಸ್ಯೆಗೆ ಕಾರಣವಾಗಬಹುದು ಮತ್ತು ಚರ್ಮದ ರಚನೆಗೆ ಹಾನಿಯನ್ನುಂಟು ಮಾಡಬಹುದು. ಕಾಳಜಿ ವಹಿಸಿ ಮತ್ತು ಚರ್ಮ ಸುಟ್ಟಾಗ ಸರಿಯಾದ ಕ್ರಮ ತೆಗೆದುಕೊಳ್ಳುವುದು ತುಂಬಾ ಮುಖ್ಯ.

English summary

Remedies To Treat Skin Burn

In this article we will discuss some remedies for the first degree burns. These can be treated using a few household methods.
Story first published: Friday, November 15, 2013, 10:11 [IST]
X
Desktop Bottom Promotion