For Quick Alerts
ALLOW NOTIFICATIONS  
For Daily Alerts

ರುಚಿ ನೀಡುವ ಇಂಗು ಸೌಂದರ್ಯಕ್ಕೂ ಬೇಕಂತೆ

|
Asafoetida Skin Benefits
ಭಾರತೀಯ ಅಡುಗೆಯಲ್ಲಿ ರುಚಿಗೆಂದು ಬಳಸುವ ಇಂಗಿನಲ್ಲಿ ತ್ವಚೆಗೆ ಅಗತ್ಯವಾದ ಅನೇಕ ಅಂಶಗಳಿವೆ. ಹಲವು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಈ ಇಂಗಿನಿಂದ ನಿಮ್ಮ ತ್ವಚೆಯನ್ನು ಸುಧಾರಿಸಿಕೊಳ್ಳಬಹುದು. ಅದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ತ್ವಚೆ ಆರೈಕೆಗೆ ಇಂಗಿನ ಬಳಕೆ ಹೇಗೆ?

1 ನೈಸರ್ಗಿಕವಾಗಿ ತ್ವಚೆಗೆ ಬಣ್ಣ ನೀಡುವ ಗುಣ ಇಂಗಿನಲ್ಲಿದೆ. ಮುಖದ ಮೇಲೆ ವಯಸ್ಸಿನ ಛಾಯೆ ಹೋಗಿಸುವ ವಿಶೇಷ ಗುಣವೂ ಇದೆ. ತುಂಬಾ ಪರಿಣಾಮಕಾರಿಯಾದ ಮತ್ತು ಖರ್ಚಿಲ್ಲದೆ ತ್ವಚೆಯನ್ನು ಸರಿಪಡಿಸಿಕೊಳ್ಳುವ ಮಾರ್ಗವಿದು. ನೀರು ಅಥವಾ ಹಾಲಿನ ಕೆನೆಯೊಂದಿಗೆ ಇಂಗನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.

2 ಇಂಗಿನಲ್ಲಿ ಮೊಡವೆಯನ್ನು ಗುಣಪಡಿಸಿ, ಕಡಿಮೆ ಮಾಡುವ ಶಕ್ತಿಯಿದೆ. ನೀರಿನೊಂದಿಗೆ ಸ್ವಲ್ಪ ಇಂಗು ಬೆರೆಸಿ ಮೊಡವೆ ಮೇಲೆ ಹಚ್ಚಿಕೊಂಡರೆ ಅದು ಬೇಗನೆ ವಾಸಿಯಾಗುತ್ತದೆ.

3 ಇಂಗಿನಲ್ಲಿರುವ ಫೆರುಲಿಕ್ ಆಸಿಡ್, ಕಾರ್ಬೊಹೈಡ್ರೇಡ್ , ಸಲಫರ್ ಮತ್ತು ಟರ್ಪೀನ್ ತ್ವಚೆ ಸಂಬಂಧಿ ಸಮಸ್ಯೆಗಳನ್ನು ನೀಗಿಸಲು ಹೆಚ್ಚು ಸಹಕಾರಿ.

4 ಇಂಗಿನಿಂದ ತೆಗೆದ ಎಣ್ಣೆ ಕೂಡ ಶುಷ್ಕ ಮತ್ತು ಒಣ ತ್ವಚೆಗೆ ಒಳ್ಳೆಯದು. ಮಲಗುವ ಮುನ್ನ ಈ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ತ್ವಚೆ ಬಿರಿಯುವುದು ತಪ್ಪುತ್ತದೆ.

5 ಅಲರ್ಜಿಯಾದರೆ ಇಂಗಿನ ಲೇಪನ ಉತ್ತಮ ಪರಿಹಾರ. ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕನ್ನು ನಿವಾರಿಸುತ್ತದೆ. ಲಭ್ಯವಿರುವ ಇಂಗು ಮಿಶ್ರಿತ ಸೌಂದರ್ಯ ವರ್ಧಕಗಳನ್ನೂ ಬಳಸಬಹುದು.

English summary

Asafoetida Skin Benefits | Asafoetida for Skin Care | ಇಂಗಿನಲ್ಲಿರುವ ಸೌಂದರ್ಯದ ಉಪಯೋಗ | ತ್ವಚೆ ಪೋಷಣೆಗೆ ಇಂಗಿನ ಬಳಕೆ

Asafoetida is a popular spice that is widely used in Indian cooking but the tasting powder can also do wonders for skin. Many skin care products and cosmetics make use of this natural medicine for fragrance and effective skin treatment. Take a look at how this strong smelling acrid can be useful for a great looking skin.
Story first published: Monday, November 7, 2011, 16:03 [IST]
X
Desktop Bottom Promotion