For Quick Alerts
ALLOW NOTIFICATIONS  
For Daily Alerts

ವ್ಯಾಕ್ಸ್ ಕಲೆಗಳಿಗೆ ಹೇಳಿ ಗುಡ್ ಬೈ!

|
Waxing
ಕಾಲುಗಳು ಸುಂದರವಾಗಿ ಕಾಣಲು ವ್ಯಾಕ್ಸ್ ಮಾಡುತ್ತಾರೆ ಆದರೆ ಆ ವ್ಯಾಕ್ಸ್ ನಿಂದ ಕಾಲುಗಳಲ್ಲಿ ಚಿಕ್ಕ ಗುಳ್ಳೆಗಳು ಬಂದು ಕಲೆಗಳು ಉಂಟಾಗಿತ್ತವೆ . ಆ ಕಲೆಗಳನ್ನು ಹೋಗಲಾಡಿಸಿ ಕಾಲು ಮತ್ತು ಕೈಗಳು ಸುಂದರವಾಗಿ ಕಾಣುವಂತೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ವ್ಯಾಕ್ಸ್ ಮಾಡಿದ ನಂತರ ಕಾಲುಗಳನ್ನು ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಇದರಿಂದ ಕಲೆಗಳು ಉಂಟಾಗುವುದನ್ನು ತಡೆಯಬಹುದು.

2. ಐಸ್ ಕ್ಯೂಬ್ ಉಜ್ಜಿದ ಬಳಿಕ ಕಾಲುಗಳಿಗೆ ಬಾಡಿಲೋಷನ್ ಅಥೈವಾ ಮಾಯಿಶ್ಚರ್ ಹಚ್ಚಿ. ಇದರಿಂದ ಚರ್ಮ ಮೃದುವಾಗುವುದು. ಬಾಡಿ ಲೋಷನ್ ದಿನಾಲೂ ಹಚ್ಚಿ.

3. ವ್ಯಾಕ್ಸ್ ನಿಂದ ಕಾಲುಗಳಿಗೆ ಕಲೆಗಳು ಉಂಟಾಗಿದ್ದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚುತ್ತಾ ಬಂದರೆ ನಿಧಾನವಾಗಿ ಕಲೆಗಳು ಮಾಯವಾಗುತ್ತದೆ.

4. ಲೋಳಿ ಸರವನ್ನು ಕಾಲಿಗೆ ಹಚ್ಚುವುದರಿಂದ ಕಾಲು ಮತ್ತು ಕೈ ಮೃದುವಾಗಿ ಸುಂದರವಾಗಿ ಕಾಣುವುದು.

5. ಬಿಸಿನೀರು, ನಿಂಬೆರಸ ಮತ್ತು ಗ್ಲಿಸರಿನ್ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ಬೆರೆಸಿ ದಿನಾಲೂ ಕಾಲು ಮತ್ತು ಕೈಗಳಿಗೆ ಹಚ್ಚಿದರೆ ಕಲೆಗಳು ಬರುವುದಿಲ್ಲ

6. ಮುಳ್ಳುಸೌತೆಯನ್ನು ಪೇಸ್ಟ್ ಮಾಡಿ ಅದಕ್ಕೆ ನಿಂಬೆ ರಸ ಹಾಕಿ ಹಚ್ಚಿ 5 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು ಹೀಗೆ ಮಾಡಿದರೆ ಕಲೆಗಳು ಉಂಟಾಗುವುದಿಲ್ಲ.

7. ಲ್ಯಾವೆಂಡರ್ ಎಣ್ಣೆಯನ್ನು ಹಚ್ಚುವುದರಿಂದ ಸಹ ಕೈ ಮತತ್ತು ಕಾಲುಗನ್ನು ಸುಂದರವಾಗಿ ಇಡಬಹುದು.

English summary

Tips To Remove Waxing Scar | Home Remedies To Remove Scar | ವ್ಯಾಕ್ಸ್ ಕಲೆಗಳನ್ನು ಹೋಗಲಾಡಿಸಲು ಸಲಹೆಗಳು | ಕಲೆಗಳನ್ನು ಹೋಗಲಾಡಿಸುವ ಮನೆ ಮದ್ದು

Waxing can leave scars on the skin. Proper waxing techniques can help avoid getting scars on the skin especially on the noticeable areas. Lets check out the remedies to remove waxing scars at home.Take a look.
Story first published: Friday, October 7, 2011, 14:57 [IST]
X
Desktop Bottom Promotion