ಈ ಮೇಕಪ್ ಟಿಪ್ಸ್-ಕನ್ನಡಕ ಹಾಕುವ ಹುಡುಗಿಯರಿಗೆ ಮಾತ್ರ!

By: Arshad
Subscribe to Boldsky

ಹಲವು ಯುವತಿಯರಿಗೆ ಕನ್ನಡಕ ಬಂದಿದ್ದು ಮೇಕಪ್ ಮಾಡಿಕೊಳ್ಳುವುದಕ್ಕೆ ಈ ಕನ್ನಡಕವೇ ಅಡ್ಡಿ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಈ ಆತಂಕ ನಿರಾಧಾರವಾಗಿದ್ದು ಕನ್ನಡಕ ಧರಿಸಿಯೂ ಉತ್ತಮ ಮೇಕಪ್ ಹೊಂದಬಹುದಾದಂತಹ ಕೆಲವು ಸುಲಭ ವಿಧಾನಗಳಿವೆ. ಮಹಿಳೆಗೆ ಮೇಕಪ್ ಸಾಧನಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ?

ಈ ವಿಧಾನಗಳನ್ನು ಸರಿಯಾಗಿ ಅನುಸರಿಸುವ ಮೂಲಕ ಇವರು ಲಕ್ಷಣವಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲ, ಯಾವುದೇ ತೊಡಕಿಲ್ಲದೇ ಇತರರ ಎದುರು ಸಮಾನಸ್ಕಂದರಾಗಿ ನಿಲ್ಲಬಹುದು.  ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು

ಸಾಮಾನ್ಯವಾಗಿ ಕನ್ನಡಕ ಧರಿಸುವ ಮೂಲಕ ತಾವು ಕಡೆಗಣಿಸಲ್ಪಡುತ್ತಿದ್ದೇವೆ ಎಂದು ಕೆಲವು ಯುವತಿಯರು ಅಂದುಕೊಂಡಿರುತ್ತಾರೆ. ವಾಸ್ತವವಾಗಿ ಸರಿಯಾದ ಕ್ರಮದಲ್ಲಿ ಮೇಕಪ್ ಮತ್ತು ಮುಖಕ್ಕೆ ಒಪ್ಪುವ ಕನ್ನಡಕ ಧರಿಸುವ ಮೂಲಕ ಕನ್ನಡಕವಿಲ್ಲದಿದ್ದಾಗ ಇರುವ ಅಂದಕ್ಕಿಂತಲೂ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ.... 

ಕಂಸೀಲರ್

ಕಂಸೀಲರ್

ವರ್ತುಲವಿಲ್ಲದಿದ್ದರೂ ಇದೆ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಆದ್ದರಿಂದ ನಿಮ್ಮ ಕಣ್ಣುಗಳ ಕೆಳಭಾಗವನ್ನು ಕಂಸೀಲ್ ಅಥವಾ ಮರೆಮಾಚುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಕಂಸಿಲರ್ ಅನ್ನು ಅಪಾರದರ್ಶಕ ಪೌಡರ್ ಬೆರೆಸಿ ಹಚ್ಚಿಕೊಳ್ಳುವ ಮೂಲಕ ಒಣಗಿದ ಬಳಿಕ ಇದು ಬಿರುಕುಬಿಡದಂತೆ ಕಾಪಾಡಬಹುದು.

ಮಸ್ಕಾರ

ಮಸ್ಕಾರ

ಕಣ್ಣು ರೆಪ್ಪೆಗಳಲ್ಲಿ ತೆಳುವಾಗಿ ಕೂದಲುಗಳಿದ್ದರೆ ಕನ್ನಡಕ ಧರಿಸಿದ ಯುವತಿಗೆ ಇದು ಒಪ್ಪುವುದಿಲ್ಲ. ಆದ್ದರಿಂದ ನಿಮ್ಮ ಕಣ್ಣುರೆಪ್ಪೆಗಳ ಕೂದಲುಗಳನ್ನು ಮಸ್ಕಾರ ಮಲಸಿ ಸಾಧ್ಯವಾದಷ್ಟು ಗಾಢ ಹಾಗೂ ದಪ್ಪನಾಗಿಸಿದರೆ ಕನ್ನಡಕದ ಮೂಲಕ ಇವು ಕಣ್ಣು ಮಿಟುಕಿಸಿದಾಗ ಹೊಳೆದು ನಿಮ್ಮ ಚೆಲುವನ್ನು ಹೆಚ್ಚಿಸುತ್ತವೆ.

ಕಣ್ಣುಗಳಿಗೆ ಗಾಢ ಮೇಕಪ್ ಸಲ್ಲದು

ಕಣ್ಣುಗಳಿಗೆ ಗಾಢ ಮೇಕಪ್ ಸಲ್ಲದು

ಕಣ್ಣುಗಳಿಗೆ ಮೇಕಪ್ ಸಾಮಾನ್ಯ ಅಥವಾ ಇದಕ್ಕೂ ಕಡಿಮೆಯೇ ಇರಲಿ. ಏಕೆಂದರೆ ಗಾಢವಾದ ಮೇಕಪ್ ಕಣ್ಣುಗಳ ಭಾಗವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಆದ್ದರಿಂದ ಸಹಜವರ್ಣ ಅಥವಾ ವರ್ಣರಹಿತ ಮೇಕಪ್ ಮಾತ್ರವೇ ಅನುಸರಿಸಿ.

ತುಟಿಗಳ ಬಣ್ಣ ಗಾಢವಾಗಿರಲಿ

ತುಟಿಗಳ ಬಣ್ಣ ಗಾಢವಾಗಿರಲಿ

ತುಟಿಗಳಿಗೆ ಉಪಯೋಗಿಸುವ ಲಿಪ್ ಸ್ಟಿಕ್ ಬಣ್ಣ ಗಾಢವಾಗಿದ್ದು ನಿಮ್ಮ ಕನ್ನಡಕದ ಚೌಕಟ್ಟಿನ ಬಣ್ಣಕ್ಕೆ ಹೊಂದುವಂತಿರಲಿ. ಕಣ್ಣುಗಳ ಮೇಕಪ್ ತೆಳುವಾಗಿದ್ದು ತುಟಿಗಳಿಗೆ ಪ್ರಖರ ಕೆಂಪು ಅಥವಾ ಗಾಢ ಗುಲಾಬಿ ಬಣ್ಣವನ್ನು ಬಳಸುವ ಮೂಲಕ ಚೆಲುವು ಹೆಚ್ಚುತ್ತದೆ.

ಸೆಟ್ಟಿಂಗ್ ಪೌಡರ್

ಸೆಟ್ಟಿಂಗ್ ಪೌಡರ್

ನಿಮ್ಮ ಮುಖದ ಎಲ್ಲಾ ಭಾಗಗಳ ಮೇಕಪ್ ಅನ್ನು ಕಡೆಯದಾಗಿ ಒಂದೇ ಬಣ್ಣದ ಸೆಟ್ಟಿಂಗ್ ಪೌಡರ್ ನಿಂದ ಪೂರ್ಣಗೊಳಿಸುವುದನ್ನು ಮರೆಯದಿರಿ. ಇದರಿಂದ ನೀವು ಕನ್ನಡಕ ತೆಗೆದಿಡುವ ಸಮಯದಲ್ಲಿ ಮೇಕಪ್ ನ ಯಾವುದೇ ತುಣುಕು ಕನ್ನಡಕದ ಮೇಲೆ ಧೂಳಿನಂತೆ ಅಂಟಿಕೊಳ್ಳುವುದನ್ನು ತಡೆಯುತ್ತದೆ.

ಕಣ್ಣಂಚಿನಲ್ಲಿ ಕಮಾನು ಮೂಡಿಸಿ

ಕಣ್ಣಂಚಿನಲ್ಲಿ ಕಮಾನು ಮೂಡಿಸಿ

ಕಣ್ಣುಗಳ ಅಂಚುಗಳಲ್ಲಿ ನಿಮ್ಮ ಕಾಜಲ್ ಕಡ್ಡಿಯನ್ನು ಬಳಸಿ ಸುಂದರವಾದ, ಆದರೆ ಚಿಕ್ಕ ಚೊಕ್ಕದಾದ ಕಮಾನನ್ನು ಮೂಡಿಸಿ. ಇದು ಕನ್ನಡಕ ಧರಿಸಿದ ಯುವತಿಯ ಚೆಲುವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರೊಂದಿಗೆ ಪ್ರಖರ ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಸಾಕು. ನಿಮ್ಮ ಸೌಂದರ್ಯ ಯಾವುದೇ ವೃತ್ತಿಪರ ಸೌಂದರ್ಯಸೇವೆಗಿಂತಲೂ ಮಿಗಿಲಾಗಿರುತ್ತದೆ.

 
English summary

Best Makeup Tips For Girls Who Wear Glasses

A lot of girls shy away from using makeup just because they wear glasses. But we have got some amazing makeup tips for girls who wear glasses. Girls who wear glasses can look really good with makeup, and no it would not be inconvenient to use makeup at all. Just because you wear glasses does not mean that you have to maintain a geeky look. After all, nerdy is the new sexy.
Please Wait while comments are loading...
Subscribe Newsletter