For Quick Alerts
ALLOW NOTIFICATIONS  
For Daily Alerts

ಮಹಿಳೆಗೆ ಮೇಕಪ್ ಸಾಧನಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ?

By Super
|

ಮಹಿಳೆಯರು ಮತ್ತು ಶೃಂಗಾರ ಸಾಮಗ್ರಿಗಳು ಒಂದಕ್ಕೊಂದು ಎಂದೆಂದೂ ಜೋಡಿ. ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮಹಿಳೆಯೂ ತಾನು ಚೆನ್ನಾಗಿ ಕಾಣಬೇಕೆಂಬ ಕಾಳಜಿಯಿದೆ. ಅವಳು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸದಾ ದಾರಿಗಳನ್ನು ಹುಡುಕುತ್ತಲೇ ಇರುತ್ತಾಳೆ.ಹಾಗಾಗಿ ನೀವು ಇತರರನ್ನು ಚಕಿತಗೊಳಿಸಲು ಬೇಕಾಗಿರುವ ಮೇಕಪ್ ಸಲಹೆಗಳನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಮಹಿಳೆಯ ಮೊದಲನೆಯ ಹೆಜ್ಜೆ ತಾನು ಹೇಗೆ ಮತ್ತು ಯಾವಾಗ ಮೇಕಪ್ ಮಾಡಿಕೊಳ್ಳಬೇಕು ಎನ್ನುವುದು. ನಿಮ್ಮ ಮೇಕಪ್ ಮಾಡಿಕೊಂಡಿರುವುದು ಇತರರಿಗೆ ಗೊತ್ತಾಗದಂತೆ ಕಾಣುವುದು ಅತ್ಯುತ್ತಮ ರಹಸ್ಯ. ಮುಖ್ಯವಾಗಿ ಮೇಕಪ್-ರಹಿತ ನೋಟ ಬೇಕಾಗಿದ್ದಲ್ಲಿ ನೀವು ಬಳಸುವ ಮೇಕಪ್ ಸಾಧನಗಳ ಪ್ರಮಾಣದ ಮೇಲೆ ಒಳಗೊಂಡಿರುತ್ತದೆ. ಪ್ರಕೃತಿ ಸಹಜವಾಗಿ ಮೂಲತಃ ಮಹಿಳೆಯರು ನೈಸರ್ಗಿಕವಾಗಿ ಮತ್ತು ವಾಸ್ತವವಾಗಿ ಕೆಲವು ಉತ್ತಮ ಲಕ್ಷಣಗಳನ್ನು ಹೊಂದಿರುತ್ತಾರೆ.

ಆದ್ದರಿಂದ ನಿಮ್ಮಲ್ಲಿರುವ ಸೌಂದರ್ಯವನ್ನು ಹೆಚ್ಚಿಸುವ ಕಡೆಗೆ ಗಮನಕೊಡುವುದು ಅಗತ್ಯ, ಹಾಗೂ ಪ್ರತಿಯೊಂದು ಸಂದರ್ಭಕ್ಕೆ ತಕ್ಕಂತೆ ಯಾವ ಯಾವ ಮೇಕಪ್ ಮಾಡಿಕೊಳ್ಳಬೇಕೆಂದು ತಿಳಿದಿರಬೇಕು. ನೀವು ಮೇಕಪ್ ಧರಿಸಲು ಮತ್ತು ಎಲ್ಲಾ ಸಮಯದಲ್ಲಿ ಅತ್ಯುತ್ತಮ ಸೌಂದರ್ಯದಿಂದ ಕಾಣಲು ಈ ಕೆಳಗೆ ಕೆಲವು ಟಿಪ್ಪಣಿಗಳನ್ನು ಕೊಟ್ಟಿದ್ದೇವೆ. ಸೂಕ್ಷ್ಮ ಸ್ವಭಾವದ ಕಣ್ಣುಗಳ ಮೇಕಪ್‌ಗಾಗಿ 10 ಸಲಹೆಗಳು
ಚರ್ಮದ ರಕ್ಷಣೆ
|


ಮಾಯಿಸ್ಚುರೈಸರ್ (Moisturiser) ಬಳಸಿಕೊಂಡರೆ ನಿಮ್ಮ ಚರ್ಮ ಸೂರ್ಯನ ಹಾನಿಯಿಂದ ರಕ್ಷಣೆಯಾಗುತ್ತದೆ. ಮೇಕಪ್ ಮಾಡಿಕೊಳ್ಳುವ ಸಲಹೆಗಳಲ್ಲಿ ಒಂದಾದ ಸಲಹೆ ಎಸ್.ಪಿ.ಎಫ಼್.(SPF ಸೂಯನಿಂದ ರಕ್ಷಣೆಕೊಡುವ ಅಂಶ) ರಕ್ಷಕವನ್ನು ಬಳಸಿದಾಗ ಸೂರ್ಯನಿಂದ ಬೀಳುವ ಕಿರಣಗಳಿಂದ ಆಗಬಹುದಾದ ಹಾನಿಯನ್ನು ತಪ್ಪಿಸುತ್ತದೆ. ಇದು ಚರ್ಮದ ರಕ್ಷಣೆಗೆ ವಾಸ್ತವವಾಗಿ ಮುಖ್ಯ.

ತ್ವರಿತವಾಗಿ ಮತ್ತು ಸುಲಭವಾಗಿ ಬಳಸುವುದು

ಮೇಕಪ್ ಮಾಡಿಕೊಳ್ಳುವುದು ತ್ರಾಸದಾಯಕ ಪ್ರಕ್ರಿಯೆ ಆಗಬೇಕಗಿಲ್ಲ. ಮುಖಕ್ಕೆ ತಳಹದಿ, ಕೆನ್ನೆ ಮೂಳೆಗಳಿಗೆ ಬ್ರಶ್, ಒಂದು ಐಲೈನರ್, ಕಣ್ಣುಗಳಿಗೆ ಮಸ್ಕರಾ ಮತ್ತು ತುಟಿಗಳಿಗೆ ಹೊಳಪುಬರಲು ಹಚ್ಚುವ ಕ್ರೀಮ್ ಇವೆಲ್ಲವೂ ಮೇಕಪ್ ಸಾಧನಗಳನ್ನು ಒಳಗೊಂಡಿರುತ್ತವೆ. ಮೇಕಪ್ ಧರಿಸಲು ಇದು ಒಂದು ತ್ವರಿತ ಮತ್ತು ಸುಲಭವೆಂದು ವಾಸ್ತವವಾಂಶದ ಕಾರಣಗಳಲ್ಲೊಂದಾಗಿದೆ.

ಮನರಂಜನೆ


ನಿಮ್ಮ ಮೇಕಪ್ ಒಂದು ಮೋಜಿನಂತೆ ಕಾಣಬಹುದು. ಒಂದು ವೃತ್ತಿಪರ ಆಧಾರದ ಮೇಲೆ, ನಿಮಗೆ ಒಂದು ಸೂಕ್ಷ್ಮ ಪ್ರಮಾಣದ ಮೇಕಪ್ ಸಾಕಾಗಬಹುದು. ನೀವು ವಿವಿಧ ಶೈಲಿಗಳ ಪ್ರಯತ್ನ ಮಾಡುವುದು ಅಥವಾ ಒಂದು ನಿರ್ದಿಷ್ಟ ಥೀಮ್ ಪಾರ್ಟಿಗೆ ಹೋಗಲು ಮೇಕಪ್ ಮಾಡಿಕೊಳ್ಳುವುದು ಒಂದು ಮನರಂಜನೆಯಂತಿರಬಹುದು. ಮೊಡವೆ ರಹಿತ ತ್ವಚೆ ಪಡೆಯಲು ಸರಳ ಮಾರ್ಗೋಪಾಯಗಳು!

ವಿವಿಧ ಪ್ರಯೋಗಗಳು


ಯಾವುದು ಅತ್ಯುತ್ತಮ ಸಾಧನ ಮತ್ತು ಯಾವುದನ್ನು ಕೊಳ್ಳಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ. ನೀವು ತಪ್ಪುಗಳನ್ನು ಮಾಡಿದಾಗ ಮಾತ್ರವೇ ಕಲಿತುಕೊಳ್ಳುತ್ತೀರಿ, ಆದ್ದರಿಂದ ನೀವು ಮೇಕಪ್ ಸಾಮಗ್ರಿಗಳ ಪ್ರಯೋಗಗಳನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ವಿವಿಧ ಬಣ್ಣಗಳ ಪ್ಯಾಕಿಂಗ್ ಮೇಲಿರುವ ಸೂಚನೆಗಳು ಮತ್ತು ವಿಧಾನಗಳನ್ನು ಅರ್ಥಮಾಡಿಕೊಂಡು ನಿಮ್ಮ ಮೇಲೆ ಪ್ರಯೋಗ ಮಾಡುವುದನ್ನು ನೀವೇ ಪ್ರಯತ್ನಿಸಬಹುದು.

ವೈವಿಧ್ಯತೆ


ಮೇಕಪ್ ನಿಮಗೆ ಎಂದೂ ಬೇಸರ ಕೊಡುವುದಿಲ್ಲ. ಪ್ರತಿವರ್ಷ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳ ಮತ್ತು ಬಣ್ಣಗಳ ಪರಿಚಯ ಮಾಡುವುದಕ್ಕೆ ಕೊನೆಯೇ ಇಲ್ಲ ಮತ್ತು ಅವುಗಳನ್ನು ಬಳಸಿ ನಿಮ್ಮ ಪಟ್ಟಿಗೆ ಸೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಉತ್ಪನ್ನಗಳನ್ನು ಪ್ರಯೋಗಮಾಡುವುದು ಮುಖ್ಯ ಸಲಹೆಗಳಲ್ಲಿ ಒಂದಾಗಿದೆ.

ನಿಮ್ಮ ಮುಖದ ವೈಶಿಷ್ಟ್ಯಳನ್ನು ಹೆಚ್ಚಿಸುವುದು


ಇದು ಮೇಕಪ್ ಮಾಡಿಕೊಳ್ಳಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ನೀವು ಇಷ್ಟಪಡುವ ಲಕ್ಷಣಗಳನ್ನು ವರ್ಧಿಸಲು ಮತ್ತು ಕೆಲವನ್ನು ಅಡಗಿಸಲು ಬಳಸಬಹುದು. ನಿಮಗೆ ಯಾವುದು ಎಲ್ಲದಕ್ಕಿಂತಾ ಅತ್ಯುತ್ತಮ ಎಂದು ತಿಳಿದುಕೊಂಡರೆ ಸಾಕು.
English summary

Reasons Why You Should Wear Makeup

Women and cosmetics go hand in hand. Every woman in this world cares about her looks. She searches for ways to enhance her beauty. Boldsky shares with you makeup tips that will make you look stunning.The following are few reasons to wear makeup and look your best all the time.
X
Desktop Bottom Promotion