For Quick Alerts
ALLOW NOTIFICATIONS  
For Daily Alerts

ನೆರಿಗೆ ಹೋಗಲಾಡಿಸುವ ಬೋಟೋಕ್ಸ್ ಇಂಜೆಕ್ಸನ್‌: ಪ್ರಯೋಜ ಹಾಗೂ ಅಡ್ಡಪರಿಣಾಮಗಳು

|

ನಿಮಗೆ ಬೋಟೋಕ್ಸ್(Botox) ಚುಚ್ಚುಮದ್ದಿನ ಬಗ್ಗೆ ಗೊತ್ತಿದೆಯೇ? ನೀವು ಮನರಂಜನೆ ಕ್ಷೇತ್ರದವಾದ ಸಿನಿಮಾ, ಟಿವಿ ಧಾರಾವಾಹಿ ಹೀಗೆ ಗ್ಲಾಮರಸ್‌ ವರ್ಲ್ಡ್‌ಗೆ ಹತ್ತಿರದವರಾಗಿದ್ದರೆ ಇದರ ಬಗ್ಗೆ ಕೇಳಿರುತ್ತೀರಿ.

Botox: Uses, Surprising Benefits, Side Effects And Long-term Effects

ಇದನ್ನುಕಂಕುಳ ಬೆವರುವುದನ್ನು ತಡೆಗಟ್ಟಲು ಹಾಗೂ ನೆರಿಗೆ ಮರೆ ಮಾಚಲು ಬಳಸುತ್ತಾರೆ. ಇಲ್ಲಿ ನಾವು ಬೋಟೋಕ್ಸ್ ತೆಗೆದುಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳು ಹಾಗೂ ಅದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿದ್ದೇವೆ ನೋಡಿ:
ಬೋಟೋಕ್ಸ್ ಎಂದರೇನು ?ಬೋಟೋಕ್ಸ್ ಚುಚ್ಚುಮದ್ದು ಎಂದರೇನು?

ಬೋಟೋಕ್ಸ್ ಎಂದರೇನು ?ಬೋಟೋಕ್ಸ್ ಚುಚ್ಚುಮದ್ದು ಎಂದರೇನು?

ಬೋಟೋಕ್ಸ್ ಎಂದರೆ ಇದೊಂದು ಪ್ರಸಿದ್ಧವಾದ ನಾನ್‌ ಸರ್ಜಿಕಲ್ ಕಾಸ್ಮೆಟಿಕ್ ಟ್ರೀಟ್ಮೆಂಟ್. ಇದರಲ್ಲಿ ಬೋಟೊಲಿನಿಯಮ್ ಟಾಕ್ಸಿನ್ ಟೈಪ್ ಎ, ಹ್ಯೂಮನ್ ಅಲ್ಬೂಮಿನ್, ಸೋಡಿಯಂ ಕ್ಲೋರೈಡ್ ಅಂಶವಿರುತ್ತದೆ. ಇದನ್ನು ಸ್ನಾಯುಗಳು ಆಕರ್ಷಕವಾಗಿ ಎದ್ದು ಕಾಣಲು, ಕಂಕುಳ ತುಂಬಾ ಬೆವರುವುದನ್ನು ತಡೆಗಟ್ಟಲು ಹಾಗೂ ಸೌಂದರ್ಯ ವೃದ್ಧಿಗಾಗಿ ಬಳಸಲಾಗುವುದು.

ಬೋಟೋಕ್ಸ್ ಚಿಕಿತ್ಸೆಗೆ FDA (Food and Drug Administration) ಅನುಮತಿಯಿದೆ. ಇದನ್ನು ಹುಬ್ಬುಗಳ ನಡುವೆ ಸೂಜಿಯ ಮೂಲಕ ಚುಚ್ಚಿ ದೇಹಕ್ಕೆ ನೀಡಲಾಗುವುದು.

ಇದರ ಸ್ವಲ್ಪ ಡೋಸೇಜ್ ಈ ರೀತಿ ಹುಬ್ಬಗಳ ನಡುವೆ ಕೊಡುವುದರಿಂದ ಮುಖದ ಸ್ನಾಯುಗಳನ್ನು ಬಿಗಿಯಾಗುವಂತೆ ಮಾಡಿ, ನೆರಿಗೆಯನ್ನು ಮರೆ ಮಾಚುವುದು. ಈ ಚುಚ್ಚುಮದ್ದು ನೀಡಿದ ಕೆಲವೇ ದಿನಗಳಲ್ಲಿ ಮುಖದಲ್ಲಿ ಬಿದ್ದ ನೆರಿಗೆಗಳು ಮರೆಮಾಚಿ, ವಯಸ್ಸು ಸ್ವಲ್ಪ ಕಡಿಮೆ ಕಾಣುವುದು. ಇದನ್ನು ಒಮ್ಮೆ ತೆಗೆದುಕೊಂಡರೆ ಇದರ ಪ್ರಭಾವ 3-6 ತಿಂಗಳವರೆಗೆ ಇರುತ್ತದೆ.

ಬೋಟೋಕ್ಸ್ ಪ್ರಯೋಜನಗಳು

ಬೋಟೋಕ್ಸ್ ಪ್ರಯೋಜನಗಳು

ಬೋಟೋಕ್ಸ್ ಇಂಜೆಕ್ಸ್ ಅನ್ನು ನೆರಿಗೆ ಮರೆಮಾಚಲು ಬಳಸುತ್ತಾರೆ, ಅಲ್ಲದೆ ಸ್ನಾಯು ಸಂಬಂಧಿ ಸೌಂದರ್ಯ ಸಮಸ್ಯೆ ಹೋಗಲಾಡಿಸಲು ಕೂಡ ಬಳಸುತ್ತಾರೆ.

  • ಇದು ಕಣ್ಣಿನ ಹತ್ತಿರ ಬಿದ್ದ ನೆರಿಗೆ ಹೋಗಲಾಡಿಸುತ್ತದೆ
  • ಹಣೆಯ ಮೇಲೆ ಬಿದ್ದ ನೆರಿಗೆ ಕೂಡ ಕಾಣದಂತೆ ಮಾಡುತ್ತದೆ
  • ಹಣೆ ಎಣ್ಣೆ-ಎಣ್ಣೆಯಾಗುವುದನ್ನು ತಡೆಗಟ್ಟುತ್ತದೆ
  • ಲೇಸಿ ಐ ಸಮಸ್ಯೆ
  • ಅತ್ಯಧಿಕ ಬೆವರಿನ ಸಮಸ್ಯೆ
  • ವಿಪರೀತ ತಲೆನೋವು
  • ಕೆಲವೊಂದು ನರಸಂಬಂಧಿ ಸಮಸ್ಯೆ ಹೋಗಲಾಡಿಸಲು ಈ ಚುಚ್ಚುಮದ್ದು ನೀಡಲಾಗುವುದು.
  • ಇತರ ಪ್ರಯೋಜನಗಳು

    ಇತರ ಪ್ರಯೋಜನಗಳು

    ಇದನ್ನು ತೆಗೆದುಕೊಳ್ಳುವುದರಿಂದ ಈ ರೀತಿಯ ಪ್ರಯೋಜನಗಳನ್ನೂ ಪಡೆಯಬಹುದು

    • ಖಿನ್ನತೆ: ಬೋಟೋಕ್ಸ್ ಚುಚ್ಚುಮದ್ದು ಖಿನ್ನತೆ ಇರುವವರಿಗೆ ಒಳ್ಳೆಯದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಇದು ಖಿನ್ನತೆ ಸಮಸ್ಯೆ ಮುಖದಲ್ಲಿ ಎದ್ದು ಕಾಣುವುದನ್ನು ತಡೆಯುತ್ತದೆ. ಒಂದು ಅಧ್ಯಯನದಲ್ಲಿ ಖಿನ್ನತೆಯಿಂದ ಬಳಲುತ್ತಿರುವ 74 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಅವರಲ್ಲಿ ಸೇ. 52ರಷ್ಟು ರೋಗಿಗಳಲ್ಲಿ ಬೋಟೋಕ್ಸ್ ಚುಚ್ಚುಮದ್ದು ತೆಗೆದುಕೊಂಡ ಬಳಿಕ ಖಿನ್ನತೆ ಲಕ್ಷಣಗಳು ಕಡಿಮೆಯಾದವು ಎಂದು ಆ ಅಧ್ಯಯನ ಹೇಳಿದೆ.
    • ಕುತ್ತಿಗೆ ನೋವು ನಿವಾರಣೆ: ಬೋಟೋಕ್ಸ್ ಚುಚ್ಚುಮದ್ದನ್ನು ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿರುವವರು ತೆಗೆದುಕೊಂಡರೆ ನೋವು ಕಡಿಮೆಯಾಗುವುದು.

      ಮೈಗ್ರೇನ್: ವಿಪರೀತ ಮೈಗ್ರೇನ್ ಸಮಸ್ಯೆಯಿದ್ದರೆ ಬೋಟೋಕ್ಸ್ ತೆಗೆದುಕೊಳ್ಳುವುದರಿಂದ ಕಡಿಮೆಯಾಗುವುದು. ಮೈಗ್ರೇನ್‌ಗೆ ಈ ಚಿಕಿತ್ಸೆ ನೀಡಲು FDA 2010ರಲ್ಲಿ ಅನುಮತಿ ನೀಡಿದೆ. ಇದು ಒಮ್ಮೆ ತೆಗೆದುಕೊಂಡರೆ ಇದರ ಪ್ರಭಾವ 3 ತಿಂಗಳವರೆಗೆ ಇರುತ್ತದೆ, ಮತ್ತೆ ತಲೆನೋವು ಕಾಡಿದರೆ ಮತ್ತೆ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ.

       ಲೈಂಗಿಕ ಸಮಸ್ಯೆ ನಿವಾರಣೆಗೆ

      ಲೈಂಗಿಕ ಸಮಸ್ಯೆ ನಿವಾರಣೆಗೆ

      ಕೆಲವು ಮಹಿಳೆಯರಿಗೆ ಜನನೇಂದ್ರೀಯ ಸಂಕುಚಿತಗೊಳ್ಳುವುದರಿಂದ ಲೈಂಗಿಕ ಕ್ರಿಯೆ ವೇಳೆ ತುಂಬಾ ನೋವಾಗುವುದು ಹಾಗೂ ಶೀಘ್ರ ಸ್ಖಲನ ಉಂಟಾಗುವುದು ತಡೆಗಟ್ಟಲು ಸಹಕಾರಿಯಾಗಿದೆ.

      ಮೂತ್ರಕೋಶದ ಸಮಸ್ಯೆ: 18 ವರ್ಷದ ಮೇಲ್ಪಟ್ಟವರಲ್ಲಿ ಮೂತ್ರ ಕೋಶದ ಸಮಸ್ಯೆಯಿಂದ ಆಗಾಗ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಇದನ್ನು ತಡೆಗಟ್ಟಲು ಕೂಡ ಬೋಟೋಕ್ಸ್ ಚುಚ್ಚುಮದ್ದು ಸಹಕಾರಿ.

      ಅತ್ಯಧಿಕ ಬೆವರಿನ ಸಮಸ್ಯೆ: ಕೆಲವರಿಗೆ ಅತ್ಯಧಿಕ ಬೆವರಿನ ಸಮಸ್ಯೆಯಿಂದಾಗಿ ತುಂಬಾ ಕಿರಿಕಿರಿ ಅನುಭವಿಸುತ್ತಾರೆ. ಅಂಥವರು ಈ ಚುಚ್ಚುಮದ್ದು ತೆಗೆದುಕೊಂಡರೆ ಬೆವರುವುದು ಕಡಿಮೆಯಾಗುವುದು.

      ಕಣ್ಣಿನ ಸಮಸ್ಯೆ ನಿವಾರಣೆಗೆ: ಕೆಲವರಿಗೆ ಆಗಾಗ ಕಣ್ಣು ಮುಚ್ಚಿ ಹೋಗುವುದು, ಲೇಸಿ ಐ ಈ ರೀತಿಯ ಸಮಸ್ಯೆ ಇರುತ್ತದೆ, ಇದನ್ನು ತಡೆಗಟ್ಟಲು ಕೂಡ ಬೋಟೋಕ್ಸ್ ಚಿಕಿತ್ಸೆ ಒಳ್ಳೆಯದು.

      ಕೈಗಳು ತುಂಬಾ ತಣ್ಣಗಾಗುವುದು

      ಕೆಲವರ ಕೈಗಳು ತುಂಬಾತಣ್ಣಗಾಗಿರುತ್ತವೆ, ಅಂಥವರಿಗೆ ಕೈಗಳಿಗೆ ಬೋಟೋಕ್ಸ್ ನೀಡಿ, ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಲಾಗುವುದು.

       ಅಡ್ಡ ಪರಿಣಾಮಗಳು:

      ಅಡ್ಡ ಪರಿಣಾಮಗಳು:

      ಇದು ಸೇಫ್ ಆದರೂ ಈ ಕೆಳಗಿನ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ

      • ಚಳಿ-ಜ್ವರ
      • ಚುಚ್ಚಿದ್ದಲ್ಲಿ ನೀವು
      • ತಲೆನೋವು
      • ಕೆಮ್ಮು
      • ಸೋಂಕು
      • ಗಂಟಲು ನೋವು
      • ತಲೆಸುತ್ತು
      • ಕಣ್ಣುಗಳು ಡ್ರೈಯಾಗುವುದು
      • ಕಣ್ಣಲ್ಲಿ ನೀರು ಬರುವುದು
      • ಉರಿ ಮೂತ್ರ
      • ಮೂತ್ರ ವಿಸರ್ಜನೆಗೆ ತೊಂದರೆ
      • ಕಣ್ಣುಗಳ ಸುತ್ತ ಕಪ್ಪು ಗೆರೆ ಬೀಳುವುದು
      • ಈ ಲಕ್ಷಣಗಳು ಡೋಸೇಜ್‌ ಹೆಚ್ಚಾದರೆ ಕಂಡು ಬರುವುದು. ಹೀಗೆ ಉಂಟಾದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ

        ಹೆಚ್ಚು ಕಾಲ ಬಳಸಿದರೆ ಉಂಟಾಗುವ ತೊಂದರೆಗಳು

        ಇದನ್ನು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರೆ ಈ ಸಮಸ್ಯೆಗಳೂ ಕಂಡು ಬರಬಹುದು

        • ವಾಂತಿ
        • ಕಣ್ಣು ಮಂಜಾಗುವುದು
        • ಕುತ್ತಿಗೆ ದುರ್ಬಲವಾಗುವುದು
        • ಮಾತನಾಡಲು ತೊಂದರೆ
        • ಆಹಾರ ನುಂಗಲು ತೊಂದರೆ
        • ಸೂಚನೆ: ಗರ್ಭಿಣಿಯರು, ಎದೆಹಾಲುಣಿಸುವ ತಾಯಂದಿರು ಇವುಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.

English summary

Botox Injection: Uses, Surprising Benefits, Side Effects And Long-term Effects

In this article, we will explore what is botox and botox injections. Let's take a look. Botox is a famous non-surgical cosmetic treatment, which contains botulinum toxin type A, human albumin and sodium chloride
X
Desktop Bottom Promotion