For Quick Alerts
ALLOW NOTIFICATIONS  
For Daily Alerts

ಮುರಿದು ಹೋದ ಕಾಂಪ್ಯಾಕ್ಟ್ ಪೌಡರ್‌ ಪುನಃ ಸರಿಪಡಿಸುವುದು ಹೇಗೆ?

|

ಮೇಕಪ್ ವಸ್ತುಗಳನ್ನು ಜೋಪಾನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಹಲವು ವಸ್ತುಗಳನ್ನು ಒಂದೇ ಬಾಕ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗಲೋ ಅಥವಾ ಇನ್ಯಾವುದೋ ರೀತಿಯ ಅಜಾಗರೂಕತೆಯಿಂದ ಕೆಲವು ಮೇಕಪ್ ಸಾಧನಗಳು ಮುರಿದು ಹೋಗಬಹುದು ಅಥವಾ ಹಾಳಾಗಬಹುದು. ಆದರೆ ಆ ರೀತಿ ಹಾಳಾದ ಕೆಲವು ವಸ್ತುಗಳನ್ನು ಸರಿಪಡಿಸಿ ಪುನಃ ಬಳಸುವುದಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ಕಾಂಪ್ಯಾಕ್ಟ್ ಪೌಡರ್.

Compact Powder

ಹೌದು ಕಾಂಪ್ಯಾಕ್ಟ್ ಪೌಡರ್ ಒಂದು ವೇಳೆ ಮುರಿದು ಹೋದರೆ ಹೇಗಪ್ಪಾ ಬಳಸುವುದು? ತುಂಡುತುಂಡಾಗಿ ವೇಸ್ಟ್ ಆಗುತ್ತಿದೆಯಲ್ಲಾ ಎಂದು ಚಿಂತಿಸಬೇಡಿ. ಬದಲಾಗಿ ಅದನ್ನು ಪುನಃ ನಿಮ್ಮ ಕಾಂಪ್ಯಾಕ್ಟ್ ಪೌಡರ್‌ನ ಡಬ್ಬದಲ್ಲಿ ಮೊದಲಿನಂತೆಯೇ ಜೋಡಿಸಿ ಬಳಸುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು ಸ್ವಲ್ಪ ಬುದ್ಧಿವಂತಿಕೆ ಬಳಸಬೇಕು ಅಷ್ಟೇ!

ಸಾಮಾನ್ಯವಾಗಿ ಮುರಿದು ಹೋದ ಕಾಂಪ್ಯಾಕ್ಟ್ ಪೌಡರ್ ನ್ನು ಪುನಃ ಜೋಡಿಸುವುದಕ್ಕೆ ಬಳಸುವ ವಿಧಾನವೆಂದರೆ ರಬ್ಬಿಂಗ್ ಆಲ್ಕೋಹಾಲ್. ಆಲ್ಕೋಹಾಲ್ ಆವಿಯಾಗುತ್ತದೆ ಮತ್ತು ಒಣಗುತ್ತದೆ. ಅಲ್ಟ್ರಾ ಸೆನ್ಸಿಟೀವ್ ಸ್ಕಿನ್ ಇರುವವರು ಇನ್ನಷ್ಟು ಶುಷ್ಕವಾದಂತ ಅನುಭವವನ್ನು ಪಡೆಯಬಹುದು. ಆದರೆ ಕಾಂಪ್ಯಾಕ್ಟ್ ಪೌಡರ್ ನ್ನು ಸ್ವಲ್ಪ ಒತ್ತಡ ಮತ್ತು ಉಗಿಯನ್ನು ಬಳಸಿ ಪುನಃ ಫಿಕ್ಸ್ ಮಾಡುವುದಕ್ಕೆ ಇದು ಬಹಳ ಒಳ್ಳೆಯ ವಿಧಾನವಾಗಿದೆ.

ಸ್ಟೆಪ್ 1

ಸ್ಟೆಪ್ 1

ಕಾಂಪ್ಯಾಕ್ಟ್ ನ್ನು ತೆರೆಯಿರಿ ಮತ್ತು ಅದನ್ನು ಪ್ಲಾಸ್ಟಿಕ್ ನಲ್ಲಿ ಅಥವಾ ಮರುಹೊಂದಿಸಬಹುದಾದ ಚೀಲದಲ್ಲಿ ಇಟ್ಟುಕೊಳ್ಳಿ. ನೀವು ಈ ಕೆಲಸ ಮಾಡುತ್ತಿರುವ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ ಮತ್ತು ಪೌಡರ್ ಚೆಲ್ಲಿ ಹೋಗದಂತೆ ಕಾಪಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.ಒಂದು ವೇಳೆ ನಿಮ್ಮ ಬಳಿ ಯಾವುದೇ ರೀತಿಯ ಪ್ಲಾಸ್ಟಿಕ್,ಮರುಹೊಂದಿಸಬಹುದಾದ ಬ್ಯಾಗ್ ಗಳು ಇಲ್ಲದೇ ಇದ್ದಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಮುರಿದು ಹೋದ ಪೌಡರ್ ಪುಡಿಯನ್ನು ಮುಚ್ಚಿಕೊಳ್ಳಿ. ಬದಿಗಳಲ್ಲಿ ಸರಿಯಾದ ರೀತಿಯಲ್ಲಿ ಮುಚ್ಚಲ್ಪಟ್ಟಿದಿಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಇಲ್ಲದೇ ಇದ್ದಲ್ಲಿ ಪೌಡರ್ ಹಾರಿಹೋಗುವ ಇಲ್ಲವೇ ಉದುರಿ ಹೋಗುವ ಸಾಧ್ಯತೆ ಇರುತ್ತದೆ.

ಈ ವಿಧಾನದಲ್ಲಿ ರಬ್ಬಿಂಗ್ ಆಲ್ಕೋಹಾಲ್ ನ್ನು ಬಳಕೆ ಮಾಡಬೇಕು.ರಬ್ಬಿಂಗ್ ಆಲ್ಕೋಹಾಲ್ ಆವಿಯಾಗುತ್ತದೆ ಮತ್ತು ಗಟ್ಟಿಯಾದ ಪುಡಿಯನ್ನು ಬಿಟ್ಟುಬಿಡುತ್ತದೆ. ಇದನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಆದರೆ ಒಂದು ವೇಳೆ ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದಲ್ಲಿ ನೀವು ಇತರೆ ವಿಧಾನವನ್ನೂ ಕೂಡ ಅನುಸರಿಸಬಹುದು.

ಸ್ಟೆಪ್ 2

ಸ್ಟೆಪ್ 2

ಮುರಿದು ಹೋದ ಮತ್ತು ಮುರಿಯದೇ ಇರುವ ಎಲ್ಲಾ ಕಂಪ್ಯಾಕ್ಟ್ ನ್ನು ಕೂಡ ಸೇರಿಸಿ ಸರಿಯಾಗಿ ಪೌಡರ್ ಮಾಡಿಕೊಳ್ಳಿ. ಇದನ್ನು ಮಾಡಲು ಸ್ಪೂನ್, ಅಥವಾ ಮೇಕಪ್ ಬ್ರಷ್ ಇಲ್ಲವೇ ಇತರೆ ಯಾವುದೇ ಪುಡಿ ಮಾಡಲು ಯೋಗ್ಯವೆನಿಸುವ ಸಾಧನವನ್ನು ನೀವು ಬಳಕೆ ಮಾಡಬಹುದು. ಕಾಂಪ್ಯಾಕ್ಟ್ ಧೂಳಿನಂತಹ ಪೌಡರ್ ಆಗುವವರೆಗೂ ಕೂಡ ನುಣಿಯಾಗಿ ಮಾಡಿಕೊಳ್ಳಿ. ಯಾವುದೇ ರೀತಿಯ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ. ಮೊದಲಿಗೆ ನಿಮಗೆ ಇದೇನಿದು ಸಂಪೂರ್ಣ ಹಾಳಾಗುತ್ತಿದೆ ಎಂದೆನಿಸದರೂ ಕೂಡ ಅಂತಿಮವಾಗಿ ನಿಮ್ಮ ಮುರಿದು ಹೋದ ಕಾಂಪ್ಯಾಕ್ಟ್ ಗೆ ಅತ್ಯುತ್ತಮ ರೂಪ ನೀಡಿ ಮರುಬಳಕೆಗೆ ಯೋಗ್ಯ ಗೊಳಿಸಲು ಇದು ನೆರವಾಗುತ್ತದೆ.

ಸ್ಟೆಪ್ 3

ಸ್ಟೆಪ್ 3

ಬ್ಯಾಗ್ ನಿಂದ ಮುರಿದು ಹೋದ ಕಾಂಪ್ಯಾಕ್ಟ್ ಪೌಡರ್ ನ್ನು ಹೊರತೆಗೆಯಿರಿ ಅಥವಾ ಪ್ಲಾಸ್ಟಿಕ್ ಹೊದಿಕೆಯನ್ನು ಎಳೆಯಿರಿ. ಯಾವುದೇ ಪುಡಿ ಹೊರಗೆ ಬಂದಿದ್ದರೆ ಪುನಃ ಅದನ್ನು ತುದಿ ಮಾಡಲು ಪ್ರಯತ್ನಿಸಿ. ಅಗತ್ಯವಿದ್ದರೆ ಅದನ್ನು ಅತ್ಯುತ್ತಮ ಧೂಳಿನ ಕಣಗಳಂತೆ ಒಡೆಯಿರಿ.

ಸ್ಟೆಪ್ 4

ಸ್ಟೆಪ್ 4

ಅದಕ್ಕೆ ಸ್ವಲ್ಪ ರಬ್ಬಿಂಗ್ ಆಲ್ಕೋಹಾಲ್ ನ್ನು ಸೇರಿಸಿ.ನಿಮ್ಮದು ಎಷ್ಟು ದೊಡ್ಡ ಕಾಂಪ್ಯಾಕ್ಟ್ ಅನ್ನುವುದರ ಆಧಾರದ ಮೇಲೆ ಎಷ್ಟು ಹನಿಗಳಷ್ಟು ಸೇರಿಸಬೇಕು ಎಂಬುದು ನಿರ್ಧರಿತವಾಗಿರುತ್ತದೆ. ಪುಡಿ ಒದ್ದೆಯಾಗುವಷ್ಟು ರಬ್ಬಿಂಗ್ ಆಲ್ಕೋಹಾಲ್ ನ್ನು ಬಳಕೆ ಮಾಡಿ, ಆದರೆ ಪುಡಿ ತೇಲುವಷ್ಟು ಹಾಕಿ ಗಂಜಿ ಮಾಡಿಕೊಳ್ಳಬೇಡಿ. 70% ರಬ್ಬಿಂಗ್ ಆಲ್ಕೋಹಾಲ್ ಬಳಕೆ ಮಾಡಿದರೆ ಸಾಕಾಗುತ್ತದೆ. ಶೇಕಡಾವಾರು ಅಧಿಕವಾದಂತೆ ಅದು ಆವಿಯಾಗುತ್ತದೆ ಮತ್ತು ಒಣಗುತ್ತದೆ.

ಅತಿಯಾಗಿ ರಬ್ಬಿಂಗ್ ಆಲ್ಕೋಹಾಲ್ ಸೇರಿಸಿದರೆ ಟಿಶ್ಯೂ ಬಳಸಿ ಅದರ ಬದಿಯನ್ನು ಅದಕ್ಕೆ ಅದ್ದಿ. ಹೆಚ್ಚುವರಿ ಆಲ್ಕೋಹಾಲ್ ನ್ನು ಟಿಶ್ಯೂ ಮೂಲಕ ಹೊರತೆಗೆಯುವುದಕ್ಕೆ ಸಾಧ್ಯವಾಗುತ್ತದೆ.

ಸ್ಟೆಪ್ 5

ಸ್ಟೆಪ್ 5

ಕೆಲವು ಸೆಕೆಂಡ್ ಗಳ ವರೆಗೆ ರಬ್ಬಿಂಗ್ ಆಲ್ಕೋಹಾಲ್ ನಲ್ಲಿ ನೆನೆಯಲು ಬಿಡಿ ಮತ್ತು ನಂತರ ಅದನ್ನು ಸುಗಮಗೊಳಿಸಿ.ಇದನ್ನು ಮಾಡಲು ನೀವು ಮೇಕಪ್ ಬ್ರಷ್ ಅಥವಾ ಮಿನಿ ಸ್ಪಾಟುಲಾವನ್ನು ಬಳಕೆ ಮಾಡಬಹುದು.ಕೆನೆಯಂತಹ ಸ್ಥಿರತೆಯನ್ನು ಪಡೆಯುವವರೆಗೆ ಪುಡಿಯನ್ನು ಸುಗಮಗೊಳಿಸಬೇಕು.ಯಾವುದೇ ಗಂಟುಗಳು ಅಥವಾ ಪೌಡರ್ ನ ಉಂಡೆಗಳು ಉಳಿಯದಂತೆ ನೋಡಿಕೊಳ್ಳಿ.

ಸ್ಟೆಪ್ 6

ಸ್ಟೆಪ್ 6

ಒದ್ದೆಯಾದ ಪೌಡರ್ ನ ಮೇಲ್ಗಡೆ ಪ್ಲಾಸ್ಟಿಕ್ ನ್ನು ಮುಚ್ಚಿಡಿಯ ನಂತರ ಅದನ್ನು ನಿಮ್ಮ ಬೆರಳುಗಳನ್ನು ಬಳಸಿ ಮೃದುಗೊಳಿಸಿ ಆಕಾರ ನೀಡಿ. ಪ್ಲಾಸ್ಟಿಕ್ ಮುಚ್ಚುವುದರಿಂದಾಗಿ ನಿಮ್ಮ ಕೆಲಸ ಸ್ವಚ್ಛವಾಗಿರುತ್ತದೆ ಮತ್ತು ಬೆರಳೂ ಕೂಡ ಕ್ಲೀನ್ ಆಗಿರುತ್ತದೆ. ಸ್ಪೂನ್ ಬಳಸಿ ಕೂಡ ನೀವು ಪೌಡರ್ ನ್ನು ಮೃದುಗೊಳಿಸಬಹುದು.ಮೇಕಪ್ ಬ್ರಷ್ ಅಥವಾ ಯಾವುದೇ ನಯವಾದ ವಸ್ತುವನ್ನು ಬಳಸಿ ಕೂಡ ಮಾಡಬಹುದು.

ಪ್ಲಾಸ್ಟಿಕ್ ಮುಚ್ಚಳವನ್ನು ತೆರೆಯಿರಿ ಮತ್ತು ಟಿಶ್ಯೂ ಬಳಸಿ ಪೌಡರ್ ನ್ನು ಚೆನ್ನಾಗಿ ಪ್ರೆಸ್ ಮಾಡಿ, ಒದ್ದೆಯಿರುವಾಗ ನೀವು ಬಳಸುತ್ತಿರುವ ಟಿಶ್ಯೂ ಸುಲಭವಾಗಿ ಮುರಿಯದಿರುವಂತದ್ದೇ ಎಂಬ ಬಗ್ಗೆ ನಿಮಗೆ ಖಚಿತತೆ ಇರಲಿ. ಒಂದು ಮುರಿದರೆ ಟಿಶ್ಯೂವಿನ ಭಾಗವು ನಿಮ್ಮ ಪೌಡರ್ ನಲ್ಲಿ ಸೇರಿ ಸಮಸ್ಯೆಯಾಗಬಹುದು. ಅತಿಯಾಗಿ ಒತ್ತುವುದನ್ನು ಅವಾಯ್ಡ್ ಮಾಡಿ ಯಾಕೆಂದರೆ ಪೌಡರ್ ಪುನಃ ಒಡೆದಂತಾಗುವ ಸಾಧ್ಯತೆ ಇರುತ್ತದೆ. ಹೀಗೆ ಟಿಶ್ಯೂ ಬಳಕೆಯಿಂದ ಹೆಚ್ಚುವರಿ ಆಲ್ಕೋಹಾಲ್ ನ್ನು ಹೊರತೆಗೆಯುವುದಕ್ಕೆ ಸಾಧ್ಯವಾಗುತ್ತದೆ.

ಹೊಸದಾಗ ಕಾಂಪ್ಯಾಕ್ಟ್ ನಂತೆ ಕಾಣಿಸುವ ನಿಟ್ಟಿನಲ್ಲಿ ಕಾಟನ್ ಬಟ್ಟೆಯ ಬಳಕೆ ಮಾಡುವುದು ಒಳ್ಳೆಯದು. ಇದು ಬಟ್ಟೆಯಂತಹ ಟೆಕ್ಚರ್ ನ್ನು ನೀಡುವುದರಿಂದಾಗಿ ಬ್ರ್ಯಾಂಡ್ ಖರೀದಿಸುವ ಸಂದರ್ಬದಲ್ಲಿ ಯಾವ ಲುಕ್ ನಲ್ಲಿ ನಿಮ್ಮ ಕಾಂಪ್ಯಾಕ್ಟ್ ಪೌಡರ್ ಇತ್ತೋ ಅದೇ ರೀತಿಯ ಲುಕ್ ನ್ನು ಪುನಃ ನೀಡುವುದಕ್ಕೆ ಸಾಧ್ಯವಾಗುತ್ತದೆ.

ಟಿಶ್ಯೂವನ್ನು ರಿಮೂವ್ ಮಾಡಿ ಮತ್ತು ಅಗತ್ಯವಿದ್ದರೆ ತೆಳುವಾದ ಬ್ರಷ್ ಬಳಸಿ ಬದಿಗಳನ್ನು ಸ್ವಚ್ಛಗೊಳಿಸಿ.ನಿಮ್ಮ ಕೆಲಸ ಇನ್ನಷ್ಟು ಸ್ವಚ್ಛವಾಗಿರಬೇಕು ಎಂದು ನೀವು ಬಯಸಿದ್ದೇ ಆದಲ್ಲಿ ಐಲೈನರ್ ಬ್ರಷ್ ಬಳಸಿ ಮತ್ತು ಪೌಡರ್ ಬಾಕ್ಸ್ ನ ಬದಿಗಳನ್ನು ಅದರ ಪಾಯಿಂಟ್ ಬಳಸಿ ಸ್ವಚ್ಛಗೊಳಿಸಿ. ಇದು ಕ್ರಿಸ್ಪ್ ಆಗಿರುವ ಬದಿಗಳನ್ನು ಕಾಂಪ್ಯಾಕ್ಟ್ ಪೌಡರ್ ಗೆ ನೀಡಲು ಸಹಕರಿಸುತ್ತದೆ. ಕಾಂಪ್ಯಾಕ್ಟ್ ಕೇಸ್ ನ್ನು ಈಗಲೇ ಸ್ವಚ್ಛಗೊಳಿಸುವುದಕ್ಕೆ ಈಗಲೇ ಮುಂದಾಗುವುದು ಬೇಡ.

ಕಾಂಪ್ಯಾಕ್ಟ್ ನ್ನು ತೆರೆದೇ ಇಡಿ. ಒಂದು ರಾತ್ರಿ ಹಾಗೆಯೇ ಇಟ್ಟು ಪೌಡರ್ ಸಂಪೂರ್ಣ ಒಣಗುವುದಕ್ಕೆ ಅವಕಾಶ ನೀಡಿ. ಈ ಸಮಯದಲ್ಲಿ ರಬ್ಬಿಂಗ್ ಆಲ್ಕೋಹಾಲ್ ಸಂಪೂರ್ಣ ಆವಿಯಾಗುತ್ತದೆ ಮತ್ತು ಕೇಕ್ ನಂತರ ಪೌಡರ್ ಮರುಸ್ಥಾಪಿಸಲ್ಪಡುತ್ತದೆ.

ಅಗತ್ಯವಿದ್ದರೆ ಕಾಂಪ್ಯಾಕ್ಟ್ ನ್ನು ಕ್ಯೂ-ಟಿಪ್ ಬಳಸಿ ರಬ್ಬಿಂಗ್ ಆಲ್ಕೋಹಾಲ್ ನಲ್ಲಿ ಡಿಪ್ ಮಾಡಿ ಸ್ವಚ್ಛಗೊಳಿಸಿ. ಕಾಂಪ್ಯಾಕ್ಟ್ ಕೇಸ್ ನಲ್ಲಿ ನೀವು ಮುರಿದು ಹೋದ ಪೌಡರ್ ನ್ನು ಪುನಃ ಸೆಟ್ ಮಾಡುವ ಸಂದರ್ಭದಲ್ಲಿ ಧೂಳಿನಂತೆ ಪೌಡರ್ ಕಣಗಳು ಸೇರಿರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನಿಮಗೆ ಇದು ಚಿಂತಿಸುವ ವಿಚಾರ ಎನ್ನಿಸಿದ್ದೇ ಆದಲ್ಲಿ ಕ್ಯೂ-ಟಿಪ್ ನ್ನು ರಬ್ಬಿಂಗ್ ಆಲ್ಕೋಹಾಲ್ ನಲ್ಲಿ ಅದ್ದಿ ಧೂಳಿನ ಕಣಗಳನ್ನು ಒರೆಸಬಹುದು.

English summary

How To Restore Broken Compact Powder

Always branded item bit expensive, so our branded compact powder broken we feel sad and think we can't use it, But here are tips to restore your broken compact powder, Take a look.
X
Desktop Bottom Promotion