Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೂದಲು ಬೆಳವಣಿಗೆಗೆ ಬೇವಿನ ಬಾಚಣಿಗೆ ಯಾಕೆ ಬಳಸಬೇಕು?
ನಾವೆಲ್ಲಾ ಸಾಮಾನ್ಯವಾಗಿ ಕೂದಲ ಆರೈಕೆಯಲ್ಲಿ ಪ್ರಾಮುಖ್ಯತೆ ನೀಡೋದು ಕೂದಲಿಗೆ ಬಳಸುವ ಎಣ್ಣೆ, ಆ ಎಣ್ಣೆ ತೆಗೆಯಲು ಬಳಸುವ ಶಾಂಪೂ, ಕಂಡೀಷನರ್, ಹೇರ್ ಮಾಸ್ಕ್ ಬಗ್ಗೆ ಅಷ್ಟೇ. ಆದರೆ ಕೂದಲ ರಕ್ಷಣೆಗೆ ನೀವು ಬಳಸುವ ಬಾಚಣಿಗೆಯೂ ಅಷ್ಟೇ ಮುಖ್ಯ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ನಮ್ಮ ಕೂದಲ ಆರೋಗ್ಯಕ್ಕೆ ನಾವು ಬಳಸುವ ಬಾಚಣಿಗೆಯೂ ಸಹ ಪ್ರಮುಖವಾಗಿರುತ್ತದೆ. ಅದು ಹೇಗೆ? ಯಾವ ಬಾಚಣಗೆ ಬಳಸಿದರೆ ಉತ್ತಮ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೂದಲ ಆರೋಗ್ಯಕ್ಕೆ ಬಳಸಿ ಬೇವಿನ ಬಾಚಣಿಗೆ:
ನಮ್ಮ ಬಾಚಣಿಗೆಗಳು ಕೂದಲನ್ನು ಬೇರ್ಪಡಿಸಲು ನಮಗೆ ಸಹಾಯ ಮಾಡುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಮಗೆಲ್ಲ ತಿಳಿದಿದೆ. ಆದರೆ ಅದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಈ ಬಾಚಣಿಗೆಗಳಿಂದ ಇವೆ. ಆದ್ದರಿಂದ ಹೆಚ್ಚಿನ ಲಾಭಕ್ಕಾಗಿ ನಿಮ್ಮ ಬಾಚಣಿಗೆಗಳನ್ನು ಬೇವಿನ ಬಾಚಣಿಗಗೆ ಬದಲಾಯಿಸುವ ಸಮಯ. ಇದು ಕೂದಲನ್ನು ನೈಸರ್ಗಿಕವಾಗಿ ರಿಪೇರಿ ಮಾಡಲು ಸಹಾಯ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ.

ಬೇವಿನ ಬಾಚಣಿಗೆ ಏಕೆ ಉತ್ತಮ?:
ಕೂದಲಿಗೆ ಹಾನಿ ಮಾಡುವುದಿಲ್ಲ:
ಪ್ಲಾಸ್ಟಿಕ್ ಬಾಚಣಿಗೆ ಪಾಸಿಟಿವ್ ಎಲೆಕ್ಟ್ರಿಕ್ ಚಾರ್ಜ್ ಹೊಂದಿದ್ದರೆ, ಕೂದಲು ನೆಗೆಟಿವ್ ಎಲೆಕ್ಟ್ರಿಕ್ ಚಾರ್ಜ್ ಅನ್ನು ಹೊಂದಿರುತ್ತದೆ. ಇದರಿಂದ ಬಾಚಣಿಗೆ ಕೂದಲನ್ನು ಆಕರ್ಷಿಸುತ್ತದೆ. ಇದು ಫ್ರಿಜೀ ಕೂದಲನ್ನು ಸೃಷ್ಠಿಸುತ್ತದೆ. ಈ ಫ್ರೀಜಿ ಅಥವಾ ಒರಟಾದ ಕೂದಲು ಶುಷ್ಕ ಮತ್ತು ಕೂದಲ ತೆಳುವಾಗುವಿಕೆಗೆ ಕಾರಣವಾಗುವುದು. ಇದರಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ಬೇವಿನ ಮರದಿಂದ ಮಾಡಿದ ಬಾಚಣಿಕೆಯಲ್ಲಿ ಯಾವುದೇ ವಿದ್ಯುತ್ ಸಂಚಾರವಾಗುವುದಿಲ್ಲ. ಇದು ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ದರಿಂದ ಇದು ನಿಮ್ಮ ಕೂದಲಿನ ಆರೋಗ್ಯಕ್ಕೆ ಉತ್ತಮ.

ಪರಿಸರ ಸ್ನೇಹಿ:
ಪರಿಸರದ ವಿಚಾರಕ್ಕೆ ಬಂದರೆ ಪ್ಲಾಸ್ಟಿಕ್ ಬಾಚಣಿಗೆ ಪರಿಸರಕ್ಕೆ ಕೆಟ್ಟದ್ದು. ಇದು ಸುಲಭವಾಗಿ ಪರಿಸರದಲ್ಲಿ ವಿಲೀನವಾಗುವುದಿಲ್ಲ. ಆದರೆ ಬೇವಿನ ಬಾಚಣಿಗೆ ಪರಿಸರ ಸ್ನೇಹಿಯಾಗಿದ್ದು, ಸುಲಭವಾಗಿ ವಿಘಟಣೆ ಮಾಡಬಹುದು. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಸಂಭವಿಸುವುದಿಲ್ಲ. ಆರಾಮವಾಗಿ ನಿಮ್ಮ ಕೂದಲಿನ ಆರೋಗ್ಯ ಕಾಪಾಡಲು ಈ ಬೇವಿನ ಬಾಚಣಿಗೆ ಬಳಸಬಹುದು.

ಕೂದಲು ಸ್ನೇಹಿ:
ಎಲ್ಲಕ್ಕಿಂತ ಹೆಚ್ಚಾಗಿ ಬೇವಿನ ಮರದ ಬಾಚಣಿಗೆಯ ಮೃದುವಾದ, ದುಂಡಾದ ಹಲ್ಲುಗಳು ನೆತ್ತಿಯನ್ನು ಚುಚ್ಚುವುದಿಲ್ಲ. ನಿಮ್ಮ ಪ್ಲಾಸ್ಟಿಕ್ ಬಾಚಣಿಗೆಯಾದರೆ ಕೂದಲು ಬಾಚುವಾಗ ನೆತ್ತಿಯನ್ನು ಚುಚ್ಚಿದಂತಾಗುವುದು ಸಾಮಾನ್ಯ. ಇದರಿಂದ ಮಕ್ಕಳು ಕೆಲವೊಮ್ಮೆ ಕಿರಿಕಿರಿಯಾಗಿರುವುದಿದೆ. ಆದರೆ ಈ ಬೇವಿನ ಬಾಚಣಿಗೆ ಅಂತಹ ಯಾವುದೇ ಕಿರಿಕಿರಿ ಉಂಟುಮಾಡುವುದಿಲ್ಲ. ಇದು ನೆತ್ತಿ ಮತ್ತು ಕೂದಲಿನ ಮೇಲೆ ಎಣ್ಣೆಯನ್ನು ಒಟ್ಟಾರೆಯಾಗಿ ವಿತರಿಸುವುದಿಲ್ಲ. ನೀವು ಹಾಕಿದ ಎಣ್ಣೆ ಸಮಾನವಾಗಿ ಹಂಚಿಕೆಯಾಗುತ್ತವೆ. ಇದರಿಂದಾಗಿ ತಲೆಹೊಟ್ಟು ಬರುವ ಸಾಧ್ಯತೆಗಳು ಕಡಿಮೆ.

ಅಲರ್ಜಿಯಿಂದ ದೂರವಿರಿಸುತ್ತದೆ:
ನಿಮ್ಮ ಕೂದಲು, ಚರ್ಮ ಮತ್ತು ನೆತ್ತಿಯಂತೆಯೇ ಬೇವಿನ ಮರದ ಬಾಚಣಿಗೆ ಇಂಗಾಲ ಆಧಾರಿತವಾಗಿದೆ. ಅಲ್ಲದೆ, ಬೇವಿನ ಮರ ಸಾವಯವವಾಗಿರುವುದರಿಂದ ಪ್ಲಾಸ್ಟಿಕ್ ಮತ್ತು ಲೋಹದ ಬಾಚಣಿಗೆಗಳನ್ನು ಬಳಸುವುದರಿಂದ ಉಂಟಾಗುವ ಅಲರ್ಜಿ ಅಥವಾ ಇತರೆ ಚರ್ಮದ ಸಮಸ್ಯೆಗಳನ್ನು ಉತ್ತೇಜಿಸುವುದಿಲ್ಲ. ನಿಮ್ಮ ಕೂದಲನ್ನು ಮತ್ತು ನೆತ್ತಿಯನ್ನು ಉತ್ತಮವಾಗಿ ರಕ್ಷಿಸುತ್ತದೆ.

ರಕ್ತ ಪರಿಚಲನೆಯನ್ನು ಹೆಚ್ಚಿಸುವುದು:
ಬೇವಿನ ಬಾಚಣಿಗೆಯ ಮಸಾಜ್ ಕ್ರಿಯೆಯು ಕಿರುಚೀಲಗಳನ್ನು ಮತ್ತು ಹೆಚ್ಚು ಕೂದಲಿನ ಎಳೆಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಪ್ಲಾಸ್ಟಿಕ್ ಬಾಚಣಿಗೆಗಳು ಕೂದಲಿನ ಕೊನೆಯಲ್ಲಿ ಗೋಜಲುಗಳನ್ನು ಸೃಷ್ಟಿಸುತ್ತವೆ. ಆದರೆ ಮರದ ಬಾಚಣಿಗೆ ಅದನ್ನು ಮಾಡುವುದಿಲ್ಲ .



Click it and Unblock the Notifications











