For Quick Alerts
ALLOW NOTIFICATIONS  
For Daily Alerts

ಶುಂಠಿ ಬಳಸಿ ಸೊಂಪಾದ ಕೂದಲು ಪಡೆಯಿರಿ

|

ಕೂದಲು ಮತ್ತು ಚರ್ಮಕ್ಕೆ ಶುಂಠಿಯಿಂದ ಹಲವಾರು ಪ್ರಯೋಜನಗಳಿವೆ. ಕೂದಲಿಗೆ ಶುಂಠಿಯಿಂದ ಆಗುವ ಉಪಯೋಗ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಶುಂಠಿಯ ಈ ಶುದ್ಧ ಘಟಕಾಂಶವು ಕೂದಲಿನ ಬೆಳವಣಿಗೆಗೆ ಅಪಾರ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ನೆತ್ತಿಯ ರಕ್ತ ಪರಿಚಲನೆಗೆ ಶುಂಠಿ ಗಮನಾರ್ಹವಾಗಿ ಸಹಾಯ ಮಾಡುತ್ತದೆ, ಶುಂಠಿಯಲ್ಲಿರುವ ಉತ್ತಮ ಅಂಶಗಳು ಆರೋಗ್ಯಕರ ನೆತ್ತಿಗೆ ಹಾಗೂ ಕೂದಲಿಗೆ ವರದಾನವಾಗಿವೆ.

Ways To Use Ginger For Healthy Hair

ಕೂದಲಿಗೆ ಶುಂಠಿಯ ಇತರ ಪ್ರಯೋಜನಗಳೆಂದರೆ, ಸ್ವಚ್ಛ ನೆತ್ತಿಯನ್ನು ಹೊಂದಿರುವುದು, ತಲೆಹೊಟ್ಟು, ಶುಷ್ಕ ಕೂದಲನ್ನು ಕಡಿಮೆ ಮಾಡುವುದು ಮತ್ತು ನಯವಾದ ಮತ್ತು ರೇಷ್ಮೆಯಂತಹ ಕೂದಲನ್ನು ಪಡೆಯುವುದು. ಕೂದಲಿನ ಬೆಳವಣಿಗೆಗೆ ಶುಂಠಿ ಒಳ್ಳೆಯದು ಎಂದಾದರೆ ಅದನ್ನು ಕೂದಲಿಗೆ ಹೇಗೆ ವಿಭಿನ್ನ ರೀತಿಯಲ್ಲಿ ಅನ್ವಯಿಸಬೇಕು ಎಂಬ ಸಂಶಯ ನಿಮ್ಮಲ್ಲಿದ್ದರೆ, ದಯವಿಟ್ಟು ಈ ಮಾರ್ಗದರ್ಶಿಯನ್ನು ಓದುವ ಮೂಲಕ ತಿಳಿದುಕೊಳ್ಳಿ.

ಶುಂಠಿ ಪೇಸ್ಟ್

ಶುಂಠಿ ಪೇಸ್ಟ್

ಕೂದಲು ಬೆಳವಣಿಗೆ ಮತ್ತು ಕೂದಲು ಉದುರುವಿಕೆ ತಡೆಯಲು ಶುಂಠಿ ಪೇಸ್ಟ್ ಅತ್ಯಂತ ಸಹಕಾರಿಯಾಗಿದೆ. ಶುಂಠಿ ಪೇಸ್ಟ್ ನಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಅದನ್ನು ನಿಯಮಿತವಾಗಿ ಕೂದಲಿಗೆ ಅನ್ವಯಿಸುವುದರಿಂದ, ಕೂದಲನ್ನು ಪೋಷಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಶುಂಠಿ ಪೇಸ್ಟ್ ಆಳವಾದ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಜೊತೆಗೆ ಯಾವುದೇ ಕಲ್ಮಶ ಮತ್ತು ಕೊಳೆಯನ್ನು ತೊಡೆದುಹಾಕಲು ಕೂಡ ಶುಂಠ್ ಪೇಸ್ಟ್ ನೆರವಾಗುತ್ತದೆ. ಕೂದಲಿನ ಪುನಃ ಬೆಳೆವಣಿಗೆಯಲ್ಲೂ ಕೂಡ ಶುಂಠಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಬೇಕಾಗುವ ಸಾಮಗ್ರಿಗಳು:

2 ಚಮಚ ತುರಿದ ಶುಂಠಿ.

ನೀರು

ಮಾಡುವ ವಿಧಾನ:

  • ತುರಿದ ಶುಂಠಿಯನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಪುನಃ ಮಿಶ್ರಣಮಾಡಿ.
  • ಈಗ ಈ ಶುಂಠಿ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಅನ್ವಯಿಸಿ.
  • ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ.
  • ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
  • ಶುಂಠಿ ಮತ್ತು ನಿಂಬೆ

    ಶುಂಠಿ ಮತ್ತು ನಿಂಬೆ

    ಶುಂಠಿ ಮತ್ತು ನಿಂಬೆ ಈ ಎರಡು ಪಿ ಹೆಚ್ ಮಟ್ಟವನ್ನು ಅನ್ನು ಸಮತೋಲನಗೊಳಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಈ ಪೇಸ್ಟ್, ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಹಾಗೇಯೇ ಇರುವಂತೆ ಅಂದರೆ ಕೂದಲು ಶುಷ್ಕವಾಗದಂತೆ ನೋಡಿಕೊಳ್ಳುತ್ತದೆ. ಕೂದಲನ್ನು ಪುನಃ ಬೆಳೆಯಲು ಈ ಶುಂಠಿ ಒಂದು ಅತ್ಯದ್ಭುತ ಚಿಕಿತ್ಸೆಯಾಗಿದ್ದು, ತಪ್ಪದೇ ಇದನ್ನು ಅನುಸರಿಸಿ. ಶುಂಠಿ ಸಿಟ್ರಿಕ್ ಆಮ್ಲ ಮತ್ತು ಆಂಟಿ-ಮೈಕ್ರೋಬಿಯಲ್ (ಸೂಕ್ಷ್ಮಜೀವಿ ವಿರೋಧಿ) ಉತ್ತಮ ಗುಣಗಳನ್ನು ಹೊಂದಿದೆ.

    ಬೇಕಾಗುವ ಸಾಮಗ್ರಿಗಳು:

    ತುರಿದ ಶುಂಠಿ- 2 ಚಮಚ

    ಎಳ್ಳೆಣ್ಣೆ - 3 ಚಮಚ

    ನಿಂಬೆ ರಸ - ½ ಟೀಚಮಚ

    ಮಾಡುವ ವಿಧಾನ:

    • ಈ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
    • ಅದರಿಂದ ಉತ್ತಮವಾದ ಪೇಸ್ಟ್ ತಯಾರಿಸಿ.
    • ಕೂದಲು ಮತ್ತು ನೆತ್ತಿಗೆ ಈ ಪೇಸ್ಟ್ ನ್ನು ಹಚ್ಚಿ.
    • ನಂತರ ಸ್ವಲ್ಪ ಸಮಯದ ನಂತರ ಕೂದಲನ್ನು ತೊಳೆಯಿರಿ.
    • ಶುಂಠಿ ಮತ್ತು ಈರುಳ್ಳಿ ರಸ

      ಶುಂಠಿ ಮತ್ತು ಈರುಳ್ಳಿ ರಸ

      ನಮ್ಮಲ್ಲಿ ಹೆಚ್ಚಿನವರಿಗೆ ಶುಂಠಿ ಕೂದಲು ಬೆಳೆಯಲು ಸಹಾಯಕವಾಗಬಲ್ಲದೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ! ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಮತ್ತು ಕೂದಲು ಪುನಃ ಬೆಳೆಯಲು ಸಾಧ್ಯವಾಗದವರಿಗೆ ಮತ್ತೊಂದು ಫಲಪ್ರದ ಮತ್ತು ಪ್ರಯೋಜನಕಾರಿ ಉಪಾಯ ಇಲ್ಲಿದೆ. ಗಂಧಕ ಸಮೃದ್ಧವಾಗಿರುವ ಈರುಳ್ಳಿ, ಕೋಶಕಗಳನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಕೂದಲನ್ನು ದಪ್ಪವಾಗಿ ಕಾಣುವಂತೆ ಮಾಡಲು ಇದು ಅತ್ಯಂತ ಉತ್ತಮ ಮಾರ್ಗ.

      ಬೇಕಾಗುವ ಸಾಮಗ್ರಿಗಳು:

      ತುರಿದ ಶುಂಠಿ - 2 ಚಮಚ

      ತುರಿದ ಈರುಳ್ಳಿ - ಒಂದು

      ಮಾಡುವ ವಿಧಾನ:

      • ತುರಿದ ಶುಂಠಿ ಮತ್ತು ಈರುಳ್ಳಿ ಎರಡರಿಂದಲೂ ರಸವನ್ನು ಹಿಂಡಿ ತೆಗೆದಿಡಿ.
      • ಇದನ್ನು ಮಾಡಲು ತೆಳ್ಳಗಿನ ಕಾಟನ್ ಬಟ್ಟೆಯನ್ನು ಬಳಸಿ.
      • ಹತ್ತಿಯಿಂದ ಚೆಂಡನ್ನು ಮಾಡಿ ಇದನ್ನು ಈ ರಸದಲ್ಲಿ ಅದ್ದಿ.
      • ನೆತ್ತಿಯ ಮೇಲೆ ಹಚ್ಚಿ, ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ.
      • ಆನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
      • ಶುಂಠಿ ಮತ್ತು ಬೆಳ್ಳುಳ್ಳಿ

        ಶುಂಠಿ ಮತ್ತು ಬೆಳ್ಳುಳ್ಳಿ

        ಶುಂಠಿ ಮತ್ತು ಬೆಳ್ಳುಳ್ಳಿ ರಸವು ಕೂದಲು ಪುನಃ ಬೆಳೆಯಲು ಮತ್ತು ನೆತ್ತಿಯ ಕೋಶಕಗಳನ್ನು ಬಲಪಡಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಈ ಶುಂಠಿ ರಸವು ಕೂದಲನ್ನು ಉತ್ತಮಗೊಳಿಸಿ, ಅದನ್ನು ಚೆನ್ನಾಗಿ ಪೋಷಿಸುತ್ತದೆ. ಇತರ ಸಾರಭೂತ ತೈಲ (ಎಸೆನ್ಶಿಯಲ್ ಆಯಿಲ್) ಗಳೊಂದಿಗೆ ಬೆರೆಸಿದಾಗ, ಈ ಮಿಶ್ರಣವು ಕೂದಲನ್ನು ಇನ್ನಷ್ಟು ಮೃದುಗೊಳಿಸುತ್ತದೆ. ಜೊತೆಗೆ ಕೂದಲಿನ ಮಂದತೆಯನ್ನು ತೆಗೆದುಹಾಕುವುದರ ಜೊತೆಗೆ ಇದು ಕೂದಲಿಗೆ ಹೊಳಪನ್ನು ನೀಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ.

        ಬೇಕಾಗುವ ಸಾಮಗ್ರಿಗಳು:

        1 ಚಮಚ - ತುರಿದ ಶುಂಠಿ

        2 ಟೀ ಚಮಚ - ಜೇನುತುಪ್ಪ

        2 ಚಮಚ - ತೆಂಗಿನ ಹಾಲು

        2 ಚಮಚ - ತೆಂಗಿನ ಎಣ್ಣೆ

        3 ಲವಂಗ ಬೆಳ್ಳುಳ್ಳಿ

        ಮಾಡುವ ವಿಧಾನ:

        • ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
        • ಈ ಪದಾರ್ಥಗಳಿಂದ ನಯವಾದ ಪೇಸ್ಟ್ ಮಾಡಿ.
        • ಕೂದಲನ್ನು ಭಾಗಗಳಾಗಿ ವಿಂಗಡಿಸಿ ಮತ್ತು ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಚೆನ್ನಾಗಿ ಅನ್ವಯಿಸಿ.
        • 45 ನಿಮಿಷಗಳ ಕಾಲ ಹಾಗೆಯೇ ಬಿಡಿ.
        • ಆನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.
        • ಶುಂಠಿಯ ಜೊತೆಗೆ ಸೌತೆಕಾಯಿ ಮತ್ತು ಎಣ್ಣೆ

          ಶುಂಠಿಯ ಜೊತೆಗೆ ಸೌತೆಕಾಯಿ ಮತ್ತು ಎಣ್ಣೆ

          ಕೂದಲಿನ ಇತರ ಸಮಸ್ಯೆಗಳಿಗೆ ಶುಂಠಿ ಉತ್ತಮ ಪರಿಹಾರವಾಗಬಲ್ಲದು ಎಂದು ಈ ಮೇಲೆ ಓದಿದ್ದೇವೆ. ಸೌತೆಕಾಯಿ ಮತ್ತು ಬೇಕಾದ ಎಣ್ಣೆಗಳೊಂದಿಗೆ ಈ ಶುಂಠಿ ರಸವನ್ನು ಮಿಶ್ರಣಮಾಡಿ ಬಳಸಿದರೆ ಕೂದಲಿನ ಬೆಳವಣಿಗೆಯ ಜೊತೆಗೆ ತಲೆಹೊಟ್ಟು ಮತ್ತು ಶುಷ್ಕ ನೆತ್ತಿ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಂದ ಮತ್ತು ದುರ್ಬಲ ಕೂದಲಿನಿಂದ ಬಳಲುತ್ತಿರುವವರು ಯಾವುದೇ ಸಮಯದಲ್ಲಿ, ಬಲವಾದ ಕೂದಲಿನ ಕೋಶಕಗಳನ್ನು ಪಡೆಯಲು ಈ ಮಿಶ್ರಣವನ್ನು ಪ್ರಯತ್ನಿಸಬಹುದು. ಕೂದಲು ಉದುರುವಿಕೆಗೆ ಇದು ಉತ್ತಮ ಪರಿಹಾರ ಮತ್ತು ಚಿಕಿತ್ಸೆಯಾಗಿದೆ.

          ಬೇಕಾಗುವ ಸಾಮಗ್ರಿಗಳು:

          1 ಚಮಚ ತುರಿದ ಶುಂಠಿ

          ½ ಕಪ್ ಕತ್ತರಿಸಿದ ಸೌತೆಕಾಯಿ

          1 ಚಮಚ ತೆಂಗಿನ ಎಣ್ಣೆ

          1 ಚಮಚ ತುಳಸಿ / ಆಲಿವ್ ಎಣ್ಣೆ

          ಮಾಡುವ ವಿಧಾನ:

          • ಶುಂಠಿ ಮತ್ತು ಸೌತೆಕಾಯಿಯನ್ನು ಚೆನ್ನಾಗಿ ಮಿಶ್ರಣ ಮಾಡಿ.
          • ಸರಿಯಾಗಿ ನಣುಪಾದ ಪೇಸ್ಟ್ ತಯಾರಾಗಿದೆಯೇ ಎಂದು ಪರೀಕ್ಷಿಸಿ.
          • ನಂತರ ಅದರಲ್ಲಿ ಅಗತ್ಯವಾದ ಎಣ್ಣೆಯನ್ನು ಸೇರಿಸಿ.
          • ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಒಂದು ಗಂಟೆ ಹಾಗೆಯೇ ಬಿಡಿ.
          • ಆನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
English summary

How to Use Ginger to Stimulate Hair Growth

Here we are discussing about Ways To Use Ginger For Healthy Hair. Ginger has several benefits for hair and skin. Most of us do not know the goodness of ginger for hair can do for us. Read more.
X
Desktop Bottom Promotion