For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದು ತಡೆಗಟ್ಟಲು ನೆಲ್ಲಿಕಾಯಿ ಹೇಗೆ ಬಳಸಬೇಕು?

|

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಕೂದಲು ಉದುರುವಿಕೆ ಎಂಬುದು ದೈನಂದಿನ ಜೀವನದ ಒಂದು ಭಾಗವಾಗಿದೆ. ದಿನಕ್ಕೆ 80-100 ಕೂದಲೆಳೆಗಳನ್ನು ಕಳೆದುಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ನೀವು ಅದಕ್ಕಿಂತ ಹೆಚ್ಚು ಕೂದಲೆಳೆಯನ್ನು ಕಳೆದು ಕೊಳ್ಳಲು ಆರಂಭವಾದಾಗ ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ.

 prevent hair loss by using amla

ನಿರಂತರ ಕೂದಲು ಉದುರುವಿಕೆಯು ಕೂದಲನ್ನು ತೆಳುವಾಗುವಂತೆ ಮಾಡುತ್ತದೆ. ಇದು ಬೋಳು ತಲೆಗೆ ಕಾರಣವಾಗುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಮ್ಮ ಬಾತ್ರೂಮ್ನಲ್ಲಿ ಕೂದಲಿನ ರಾಶಿ ನೋಡಿ ಚಿಂತೆಗೀಡಾಗಿದ್ದೀರಾ? ಇನ್ನು ಆ ಚಿಂತೆ ಬಿಡಿ. ನಿಮ್ಗೆ ಸಹಾಯ ಮಾಡಲು ಸುಲಭವಾದ ಮನೆಮದ್ದನ್ನು ನಿಮಗಾಗಿ ಹೊತ್ತು ಬಂದಿದ್ದೇವೆ.

ನಿಮ್ಮ ಕೂದಲುದುರುವ ಸಮಸ್ಯೆಗೆ ಮನೆಮದ್ದು

ನಿಮ್ಮ ಕೂದಲುದುರುವ ಸಮಸ್ಯೆಗೆ ಮನೆಮದ್ದು

ದಶಕಗಳಿಂದ, ಆಮ್ಲಾ ಅಥವಾ ನೆಲ್ಲಿಕಾಯಿಯ ತೈಲಗಳು, ಭಕ್ಷ್ಯಗಳು, ಟಾನಿಕ್ಸ್ ಅಥವಾ ಯಾವುದೇ ಆಗಲಿ, ನೀವು ಅದನ್ನು ಶಾಟ್ನಂತೆ ತೆಗೆದುಕೊಳ್ಳುತ್ತಿರಲಿ ಅಥವಾ ನಿಮ್ಮ ಕೂದಲಿಗೆ ಪೇಸ್ಟ್‌ನಂತೆ ಅಪ್ಲೈ ಮಾಡಿಕೊಳ್ಳಲಿ ಈ ಅದ್ಭುತ ಮೂಲಿಕೆ ನಿಮ್ಮ ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ನಿಮ್ಮ ಆರೋಗ್ಯಕ್ಕೆ ಹಾಗೂ ಕೂದಲಿಗೆ ಪೂರಕವಾದ ಅಂಶಗಳನ್ನು ಹೊಂದಿದ್ದು, ಉತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ. ಕಾಲಬುಡದಲ್ಲಿ ಸಿಗುವ ಈ ನೆಲ್ಲಿಕಾಯಿ ಎಂಬ ಅಮೃತದಿಂದ ನಿಮ್ಮ ಕೂದಲು ಹೇಗೆ ಸೊಂಪಾಗಿ ಬೆಳೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಕೂದಲು ಉದುರುವಿಕೆಗೆ ಕಾರಣಗಳು :

ಕೂದಲು ಉದುರುವಿಕೆಗೆ ಕಾರಣಗಳು :

ನೀವು ಭಾರೀ ಕೂದಲು ಉದುರುವಿಕೆಯನ್ನು ಅನುಭವಿಸುತ್ತಿರುವುದಕ್ಕೆ ಹಲವಾರು ಕಾರಣಗಳಿವೆ . ಇದು ತಾತ್ಕಾಲಿಕವಾಗಿರಬಹುದು, ಅಥವಾ ಅದು ಶಾಶ್ವತವಾಗಬಹುದು. ಕೂದಲು ಉದುರುವಿಕೆಗೆ ಸಾಮಾನ್ಯ ಕಾರಣಗಳು ಈ ಕೆಳಗಿನಂತಿವೆ.

ವಯಸ್ಸಾದಂತೆ ಸಂಭವಿಸುವ ಆನುವಂಶಿಕ ಸ್ಥಿತಿ

ಹಾರ್ಮೋನುಗಳ ಬದಲಾವಣೆಗಳು

ಕೆಲವು ಔಷಧಿಗಳು ಅಥವಾ ಪೂರಕಗಳು

ಅತಿಯಾದ ಕೇಶವಿನ್ಯಾಸ

ಒತ್ತಡ

ಕಳಪೆ ಪೋಷಣೆ

ಹಠಾತ್ ತೂಕ ನಷ್ಟ

ತಿನ್ನುವ ಅಸ್ವಸ್ಥತೆಗಳು

ವಿಟಮಿನ್ ಬಿ ಕೊರತೆ

ಲೂಪಸ್ನಂತಹ ಸ್ವಯಂ ನಿರೋಧಕ ಅಸ್ವಸ್ಥತೆಗಳು

ರಕ್ತಹೀನತೆ

ಕೂದಲು ಉದುರುವಿಕೆ ತಡೆಗಟ್ಟಲು ನೆಲ್ಲಿಕಾಯಿ:

ಕೂದಲು ಉದುರುವಿಕೆ ತಡೆಗಟ್ಟಲು ನೆಲ್ಲಿಕಾಯಿ:

ಆಮ್ಲ ಅಥವಾ ಭಾರತೀಯ ನೆಲ್ಲಿಕಾಯಿಯನ್ನು ನೈಸರ್ಗಿಕವಾದ ರೋಗನಿರೋಧಕ ವರ್ಧಕ ಮತ್ತು ಪ್ಪ್ರಮುಖ ಹೇರ್ಕೇರ್ ಘಟಕಾಂಶವೆಂದು ದೀರ್ಘಕಾಲದಿಂದ ಕರೆಯಲಾಗುತ್ತದೆ. ಇದು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ ಅದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಜೀವಸತ್ವಗಳು, ಖನಿಜಗಳು, ಫೈಟೊನ್ಯೂಟ್ರಿಯಂಟ್ಗಳ ಜೊತೆಗೆ, ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಜೊತೆಗೆ, ಇದು ಕೂದಲಿಗೆ ಹೊಳಪನ್ನು ನೀಡಿ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆಮ್ಲಾದ ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ತಲೆಹೊಟ್ಟು, ಶಿಲೀಂಧ್ರಗಳ ಸೋಂಕನ್ನು ಕಡಿಮೆ ಮಾಡಲು ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನೆಲ್ಲಿಕಾಯಿಯಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಬನ್ನಿ, ನೆಲ್ಲಿಕಾಯಿಯಿಂದ ಯಾವೆಲ್ಲಾ ತರಹದ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.

ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

ನೆಲ್ಲಿಕಾಯಿ ಎಣ್ಣೆ:

ಈ ಎಣ್ಣೆಯನ್ನು ತಯಾರಿಸಲು ನೆಲ್ಲಿಕಾಯಿಯ ಕೆಲವು ತುಂಡುಗಳನ್ನು ಕುದಿಸಿ ಮತ್ತು ಒಣಗಿಸಿ. ಅದನ್ನು ಸ್ವಲ್ಪ ತೆಂಗಿನ ಎಣ್ಣೆಗೆ ಸೇರಿಸಿ 20 ನಿಮಿಷ ಕುದಿಸಿ. ನೀವು ಬಯಸಿದರೆ ತೆಂಗಿನ ಎಣ್ಣೆಯ ಬದಲಿಗೆ ಬಾದಾಮಿ ಎಣ್ಣೆಯನ್ನು ಬಳಸಬಹುದು. ಬಾದಾಮಿ ಮತ್ತು ತೆಂಗಿನ ಎಣ್ಣೆ ಎರಡೂ ನಿಮ್ಮ ಕೂದಲನ್ನು ಆರೋಗ್ಯಕರ , ಹೊಳೆಯುವ ಮತ್ತು ಹೊಳಪು ನೀಡುವಂತಹ ಪೋಷಿಸುವ ಗುಣಗಳನ್ನು ಒಳಗೊಂಡಿರುತ್ತವೆ . ಅದು ತಣ್ಣಗಾದ ನಂತರ ಮಿಶ್ರಣವನ್ನು ಜಾರ್ನಲ್ಲಿ ಸಂಗ್ರಹಿಸಿ. ಈ ಬೆಚ್ಚಗಿನ ಎಣ್ಣೆಯನ್ನು

ಆಮ್ಲ ಜ್ಯೂಸ್:

ಆಮ್ಲ ಜ್ಯೂಸ್:

3 ಆಮ್ಲ ಹಣ್ಣುಗಳ ರಸವನ್ನು ತೆಗೆದು ಅದನ್ನು ನೇರವಾಗಿ ನಿಮ್ಮ ನೆತ್ತಿಗೆ ಹಚ್ಚಿ. ಇದು 30 ನಿಮಿಷಗಳ ಕಾಲ ಕುಳಿತು ತೊಳೆಯಲು ಬಿಡಿ. ಇದು ನೆತ್ತಿಯನ್ನು ಪೋಷಿಸುತ್ತದೆ. ಮಾತ್ರವಲ್ಲ ಮಾಲಿನ್ಯ , ಹೊಗೆ ಮತ್ತು ಹೇರ್ ಸ್ಟೈಲಿಂಗ್ ಉತ್ಪನ್ನಗಳಂತಹ ಪರಿಸರ ಆಕ್ರಮಣಕಾರರಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ . ನಿಮ್ಮ ಕೂದಲನ್ನು ಆಮ್ಲ ಜ್ಯೂಸಿನಿಂದ ತೊಳೆದ ನಂತರ ಕಂಡಿಷನರ್ ಬಳಸಲು ಮರೆಯಬೇಡಿ.

ಆಮ್ಲ ಹೇರ್ ಮಾಸ್ಕ್

ಆಮ್ಲ ಹೇರ್ ಮಾಸ್ಕ್

ಒಂದು ಪಾತ್ರೆಯಲ್ಲಿ, ಎರಡು ಟೀ ಚಮಚ ಆಮ್ಲ ಪುಡಿ ಮತ್ತು ಬೆಚ್ಚಗಿನ ನೀರನ್ನು ಮಿಶ್ರಣ ಮಾಡಿ. ಮಿಶ್ರಣಕ್ಕೆ ಎರಡು ಟೀ ಚಮಚ ಮೊಸರು ಮತ್ತು ಒಂದು ಟೀ ಚಮಚ ಜೇನುತುಪ್ಪ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 30 ನಿಮಿಷಗಳ ಅನ್ವಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ಕೂದಲಿಗೆ ಸುಂದರವಾದ ವಿನ್ಯಾಸವನ್ನು ನೀಡುತ್ತದೆ.

ಗಮನಿಸಿ:

ಗಮನಿಸಿ:

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ನೆಲ್ಲಿಕಾಯಿಯನ್ನು ಬಳಸಲು ವಿವಿಧ ಮಾರ್ಗಗಳಿವೆ, ಮತ್ತು ಅನೇಕ ಅಡ್ಡಪರಿಣಾಮಗಳೂ ಇಲ್ಲ. ಆದರೂ, ನಿಮ್ಮ ಹೇರ್ಕೇರ್ ಕಟ್ಟುಪಾಡುಗಳಲ್ಲಿ ನೀವು ಅದನ್ನು ಸೇರಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.

English summary

How To Use Amla To Prevent Hair Loss?

Most of the people suffering from hair fall, here are tips to prevent hair loss by using amla, have a look.
X
Desktop Bottom Promotion