For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಕೇಶರಾಶಿಗೆ ಈ ನೈಸರ್ಗಿಕ ಅಭ್ಯಾಸಗಳು ಭದ್ರಬುನಾದಿ!

|

ಕೂದಲಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಸಾಮಾನ್ಯ, ಇದಕ್ಕೆ ಕಾರಣ ನಮ್ಮ ಇತ್ತೀಚಿನ ಅನಾರೋಗ್ಯಕರ ಜೀನವಶೈಲಿ ಹೊರತು ಬೇರೇನಲ್ಲ. ಏಕೆಂದರೆ, ನಮ್ಮ ಪೂರ್ವಜರ ಆರೋಗ್ಯಕರ ಜೀವನಶೈಲಿಯಿಂದ ಅವರಿಗೆ ಅಂರಹ ಕೂದಲಿಗೆ ಸಮಸ್ಯೆಗಳೇನೋ ಸಂಭವಿಸುತ್ತಿರಲಿಲ್ಲ ಎಂಬುದನ್ನು ಒಮ್ಮೆ ಗಮನಿಸಬೇಕಾಗುತ್ತದೆ.

ಆದ್ದರಿಂದ, ನಮ್ಮ ಕೂದಲಿಗೆ ಆರೋಗ್ಯ ಕಾಪಾಡಿಕೊಳ್ಳಲು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವೊಂದು ನೈಸರ್ಗಿಕ ಅಭ್ಯಾಸಗಳನ್ನು ಈ ಕಾಲಕ್ಕೂ ಮುಂದುವರಿಸುವ ಅವಶ್ಯಕತೆಯಿದೆ. ಇವುಗಳು ನಮ್ಮ ಕೂದಲಿಗೆ ಯಾವುದೇ ಹಾನಿಮಾಡದೇ, ಉದ್ದ ಹಾಗೂ ದಟ್ಟ ಕೇಶರಾಶಿಯನ್ನ ನಮಗೆ ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ ನೈಸರ್ಗಿಕ ಅಭ್ಯಾಸಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಆರೋಗ್ಯಕರ ಕೂದಲಿಗೆ ಪಾಲಿಸಬೇಕಾದ ನೈಸರ್ಗಿಕ ಅಭ್ಯಾಸಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನೆತ್ತಿಯನ್ನು ಎಣ್ಣೆಯಿಂದ ಮಸಾಜ್ ಮಾಡಿ:

ನೆತ್ತಿಯನ್ನು ಎಣ್ಣೆಯಿಂದ ಮಸಾಜ್ ಮಾಡಿ:

ನಾವೆಲ್ಲರೂ ನಮ್ಮ ತಾಯಿ ಮತ್ತು ಅಜ್ಜಿಯರಿಂದ ಈ ಅಭ್ಯಾಸವನ್ನು ಬೆಳೆಸಿಕೊಂಡು ಬಂದಿರುತ್ತೇವೆ. ಇದರ ಹಿಂದೆ ಒಂದು ಉತ್ತಮವಾದ ಉದ್ದೇಶವಿದೆ ಎಂಬುದನ್ನು ಮರೆಯುವಂತಿಲ್ಲ. ಮೃದುವಾದ ಮಸಾಜ್‌ನೊಂದಿಗೆ ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯನ್ನು ಹೈಡ್ರೀಕರಿಸುವುದು ಮಾತ್ರವಲ್ಲ, ಇದು ನಿಮ್ಮ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ನೆತ್ತಿಯಲ್ಲಿ ಹೆಚ್ಚಿದ ರಕ್ತ ಪರಿಚಲನೆ ಹೆಚ್ಚಾದರೆ, ಕೂದಲು ದಪ್ಪವಾಗಿ ಮತ್ತು ಬಲವಾಗಿ ಬೆಳೆಯುತ್ತದೆ. ಪ್ರತಿಸಲ ಕೂದಲು ತೊಳೆಯುವ ಮೊದಲು, ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿ, ಕನಿಷ್ಠ 10 ನಿಮಿಷಗಳ ಕಾಲ ಬಿಡಿ.

ಪ್ರತಿದಿನ ಬೆಳಿಗ್ಗೆ ನಿಂಬೆ ಸೇರಿಸಿದ ದಾಲ್ಚಿನ್ನಿ ನೀರನ್ನು ಕುಡಿಯಿರಿ:

ಪ್ರತಿದಿನ ಬೆಳಿಗ್ಗೆ ನಿಂಬೆ ಸೇರಿಸಿದ ದಾಲ್ಚಿನ್ನಿ ನೀರನ್ನು ಕುಡಿಯಿರಿ:

ದಾಲ್ಚಿನ್ನಿ ನಿಮ್ಮ ಕರುಳಿನ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಒಂದು ಘಟಕಾಂಶವಾಗಿದೆ. ಆಧುನಿಕ ಸಂಶೋಧನೆಯು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಂದಾಗ ಕರುಳು ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸುತ್ತಿದೆ, ಅದನ್ನು 'ಎರಡನೇ ಮೆದುಳು' ಎಂದು ಕರೆಯುತ್ತಾರೆ. ಬೆಳಿಗ್ಗೆ ದಾಲ್ಚಿನ್ನಿ ಮತ್ತು ನಿಂಬೆರಸದೊಂದಿಗೆ ಬಿಸಿನೀರನ್ನು ಕುಡಿಯುವುದು ಕರುಳಿನಲ್ಲಿ ಹೆಚ್ಚು ಆರೋಗ್ಯಕರ ಮತ್ತು ಸಹಾಯಕ ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಇದರ ಪರಿಣಾಮಗಳು ಹೊಳೆಯುವ ಚರ್ಮ ಮತ್ತು ಹೊಳೆಯುವ ಕೂದಲಿನಲ್ಲಿ ಗೋಚರಿಸುತ್ತವೆ. ಕನಿಷ್ಠ 21 ದಿನಗಳವರೆಗೆ ಇದನ್ನು ಸತತವಾಗಿ ಮಾಡಿ, ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ.

ವಾರಕ್ಕೊಮ್ಮೆ ನಿಮ್ಮ ನೆತ್ತಿಯನ್ನು ತೊಳೆಯಿರಿ:

ವಾರಕ್ಕೊಮ್ಮೆ ನಿಮ್ಮ ನೆತ್ತಿಯನ್ನು ತೊಳೆಯಿರಿ:

ನಾವೆಲ್ಲರೂ ನಮ್ಮ ಕೂದಲನ್ನು ತೊಳೆಯುತ್ತೇವೆ, ಆದರೆ ಸಾಮಾನ್ಯವಾಗಿ ನಮ್ಮ ನೆತ್ತಿಯನ್ನು ನಿರ್ಲಕ್ಷಿಸುತ್ತೇವೆ. ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸದಿರುವುದೇ ತುರಿಕೆ, ಸೋಂಕುಗಳು ಅಥವಾ ತಲೆಹೊಟ್ಟು ಬೆಳೆಯಲು ಮುಖ್ಯ ಕಾರಣ. ಅದಕ್ಕಾಗಿ ವಾರಕ್ಕೊಮ್ಮೆ ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ, ಇದರಿಂದ ನಿಮ್ಮ ತಲೆಯು ತಂಪಾಗಿರುತ್ತದೆ, ಕೊಳೆಯು ಕಡಿಮೆಯಿರುತ್ತದೆ. ಕೊಳಕು ಮತ್ತು ಮಾಲಿನ್ಯ ಮುಕ್ತ ನೆತ್ತಿಯು ಉತ್ತಮ ಗುಣಮಟ್ಟದ ಕೂದಲಿಗೆ ದಾರಿ ಮಾಡಿಕೊಡುತ್ತದೆ.

ಕೂದಲಿನ ಆರೋಗ್ಯಕ್ಕಾಗಿ ಯೋಗ ಆಸನಗಳನ್ನು ಅಭ್ಯಾಸ ಮಾಡಿ:

ಕೂದಲಿನ ಆರೋಗ್ಯಕ್ಕಾಗಿ ಯೋಗ ಆಸನಗಳನ್ನು ಅಭ್ಯಾಸ ಮಾಡಿ:

ಕೂದಲಿಗೆ ಆರೋಗ್ಯಕ್ಕೆ ಯೋಗಾಸನಗಳು ತಮ್ಮ ವಿಧಾನದಲ್ಲಿ ಬಹಳ ಉಪಯುಕ್ತವಾಗಿವೆ. ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಯೋಗ ನಮ್ಮ ದೇಹದಲ್ಲಿನ ಕೆಲವು ವ್ಯವಸ್ಥೆಗಳನ್ನು ಉತ್ತೇಜಿಸುತ್ತದೆ. ಇದು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಮೂಲಕ ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ಕೆಲವು ಯೋಗ ಆಸನಗಳು ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಆಸನಗಳೆಂದರೆ:

ಬಾಲಾಸನ (ಮಗುವಿನ ಭಂಗಿ)- ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕವಾಗಿದೆ.

ವಜ್ರಾಸನ (ಥಂಡರ್ಬೋಲ್ಟ್ ಭಂಗಿ)- ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸಲು ಸಹಾಯಕವಾಗಿದೆ.

ಮತ್ಸ್ಯಾಸನ (ಮೀನಿನ ಭಂಗಿ)- ಬಲವಾದ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡಲು ಜನಪ್ರಿಯವಾಗಿದೆ.

ಅಧೋಮುಖ ಶ್ವಾನಾಸನ (ಕೆಳಕ್ಕೆ ಮುಖಮಾಡಿರುವ ಭಂಗಿ)- ನೆತ್ತಿಗೆ ತಾಜಾ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ಕಳುಹಿಸುತ್ತದೆ.

ಈ ಆಸನಗಳನ್ನು ವಾರಕ್ಕೆ ಕನಿಷ್ಠ 4 ಬಾರಿ ಅಭ್ಯಾಸ ಮಾಡಿ.

ಕೂದಲಿಗೆ ಉತ್ತಮವಾದ ನೈಸರ್ಗಿಕ ಪದಾರ್ಥ ಬಳಸಿ:

ಕೂದಲಿಗೆ ಉತ್ತಮವಾದ ನೈಸರ್ಗಿಕ ಪದಾರ್ಥ ಬಳಸಿ:

ನಮ್ಮ ಕೂದಲು ಮತ್ತು ಚರ್ಮವನ್ನು ಹೆಚ್ಚು ಕಠಿಣವಾದ ಪದಾರ್ಥಗಳಿಗೆ ಒಡ್ಡಿಕೊಳ್ಳುತ್ತೇವೆ. ಇದರಿಂದ ನೈಸರ್ಗಿಕ ಪದರಗಳು ಮತ್ತು ಉತ್ತಮ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತೇವೆ. ನೈಸರ್ಗಿಕ ಪದಾರ್ಥಗಳು ಸೌಮ್ಯವಾಗಿರುವುದರ ಜೊತೆಗೆ ಸರಿಯಾದ ರೀತಿಯಲ್ಲಿ ಬಳಸಿದಾಗ ಹೆಚ್ಚು ಪರಿಣಾಮಕಾರಿ. ನಮ್ಮ ಪೂರ್ವಜರು ತಮ್ಮ ಕೂದಲನ್ನು ಎಷ್ಟು ಚೆನ್ನಾಗಿ ಕಾಪಾಡಿಕೊಂಡಿದ್ದರು ಎನ್ನುವುದೇ ಇದಕ್ಕೆ ಸಾಕ್ಷಿ. ಸಾವಯವ ಉತ್ಪನ್ನಗಳು ಪೋಷಣೆಯನ್ನು ನೀಡುತ್ತವೆ, ಜೊತೆಗೆ ಸಮಗ್ರ ಆರೋಗ್ಯಕ್ಕೆ ಅನುವು ಮಾಡಿಕೊಡುವ ಶಾಂತವಾದ ಮನಸ್ಸಿನ ಸ್ಥಿತಿಯಲ್ಲಿ ನಮ್ಮನ್ನು ಇರಿಸುತ್ತವೆ. ಸಾವಯವ ಆಹಾರವು ನಮ್ಮ ದೇಹದ ಕಾರ್ಯನಿರ್ವಹಣೆಯನ್ನು ಬದಲಾಯಿಸುತ್ತದೆ, ಅದೇ ಸಮಯದಲ್ಲಿ ನಮಗೆ ಹಗುರವಾದ ಮತ್ತು ಹೆಚ್ಚು ಶಕ್ತಿಯುತವಾದ ಭಾವನೆಯನ್ನು ನೀಡುತ್ತದೆ. ಕೂದಲಿನ ಆರೋಗ್ಯಕ್ಕೆ ಉತ್ತಮವಾದ ಕೆಲವು ಪದಾರ್ಥಗಳೆಂದರೆ: ಅಗಸೆಬೀಜ, ಬೀನ್ಸ್, ದಾಲ್ಚಿನ್ನಿ, ಮೆಂತ್ಯೆ, ತುಪ್ಪ ಮತ್ತು ಬೀಜಗಳು.

English summary

Hair care: Natural Practices for Better Hair Health in Kannada

Here we talking about Hair care: Natural practices for better hair health in kannada
Story first published: Monday, December 20, 2021, 12:34 [IST]
X
Desktop Bottom Promotion