For Quick Alerts
ALLOW NOTIFICATIONS  
For Daily Alerts

ಬರೀ 15 ದಿನಗಳಲ್ಲಿಯೇ ಬಿಳಿಕೂದಲನ್ನು ಕಪ್ಪಾಗಿಸುವ ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಎಣ್ಣೆಗಳು

|

ಸೊಂಪಾದ ಕೂದಲ ನಡುವೆ ಮೊದಲ ನೆರೆಗೂದಲನ್ನು ಕಂಡಾಗ ಹೃದಯವೇ ಒಂದು ಬಾರಿ ನಿಂತಂತಾಗುತ್ತದೆ. ಏಕೆಂದರೆ ನೆರೆಗೂದಲು ಮುಪ್ಪುತನದ ಸಂಕೇತವೆಂದೇ ನಾವೆಲ್ಲರೂ ಭಾವಿಸಿದ್ದು ಈ ಕೂದಲು ನಿಮ್ಮ ಸುತ್ತಮುತ್ತಲಿರುವವರಿಗೆ ನೀವು ವೃದ್ದರ ಗುಂಪಿಗೆ ಸೇರಿಸಲು ಕಾರಣವಾಗುತ್ತದೆ. ಇದುವರೆಗೆ ಜನತದಿಂದ ಕಾಪಾಡಿಕೊಂಡು ಬಂದಿದ್ದ ಕಪ್ಪುಗೂದಲ ನಡುವೆ ಈ ಬಿಳಿಕೂದಲು ನಿಮ್ಮನ್ನು ಅಪಹಾಸ್ಯ ಮಾಡುವಂತಿರುತ್ತದೆ ಹಾಗೂ ನಿಮ್ಮ ತಾರುಣ್ಯದ ಅವಧಿ ಮುಗಿಯಿತು ಎಂಬ ಸಂಕೇತ ನೀಡುತ್ತಾ ನಿಮ್ಮ ಹುಮ್ಮಸ್ಸನ್ನೇ ಉಡುಗಿಸಿಬಿಡುತ್ತದೆ. ಜೀವನದ ಉಲ್ಟಾ ಕ್ಷಣಗಳು ಈಗ ಪ್ರಾರಂಭವಾಯಿತು ಎಂದೂ ನಿಮಗೆ ಅನ್ನಿಸಿರಲು ಸಾಕು. ಭವಿಷ್ಯದ ದಿನಗಳನ್ನು ನೆನೆದು ದುಗುಡವೂ ಆಗಬಹುದು.

ಈ ನೆರೆಗೂದಲನ್ನು ಕಪ್ಪಗಾಗಿಸಲು ಸೌಂದರ್ಯ ಮಳಿಗೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ, ಅವರು ಇಷ್ಟರವರೆಗೆ ಕಾಪಾಡಿಕೊಂಡು ಬಂದಿದ್ದ ಕೂದಲನ್ನು ಹೇಗೆ ನಿರ್ವಹಿಸುತ್ತಾರೋ ಎಂಬ ಆತಂಕ ಮೊದಲಾದವು ಈಗಲೇ ತಲೆ ತಿನ್ನತೊಡಗುತ್ತವೆ. ಈ ಕೂದಲ ಆರೈಕೆಯನ್ನು ತಾನೇ ಮಾಡಿಕೊಂಡು ಯಾರಿಗೂ ಗೊತ್ತಾಗದೇ ಇರುವಂತಿದ್ದರೆ? ಹೌದು ಇದು ಸಾಧ್ಯ ನಿಸರ್ಗ ನೀಡುರುವ ಕೆಲವು ಪ್ರಸಾಧನಗಳು ಕೂದಲು ನೆರೆಯುವುದನ್ನು ತಡವಾಗಿಸುತ್ತದೆಯಲ್ಲದೇ ನೆರೆತಿರುವ ಕೂದಲನ್ನು ಕಪ್ಪಗಾಗಿಸಲೂ ನೆರವಾಗುತ್ತದೆ. ಇಂದಿನ ಲೇಖನದಲ್ಲಿ ಈ ಗುಣವನ್ನು ಹೊಂದಿರುವ ಏಳು ಬಗೆಯ ಕೇಶತೈಲಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ವಿವರಿಸಲಾಗಿದ್ದು ಇದರಲ್ಲಿ ನಿಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಬಹುದು.

ನೆಲ್ಲಿಕಾಯಿ ಪುಡಿ ಮತ್ತು ಕೊಬ್ಬರಿ ಎಣ್ಣೆ

ನೆಲ್ಲಿಕಾಯಿ ಪುಡಿ ಮತ್ತು ಕೊಬ್ಬರಿ ಎಣ್ಣೆ

ಸಿದ್ಧತಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

ಎರಡು ದೊಡ್ಡಚಮಚ ನೆಲ್ಲಿಕಾಯಿ ಪುಡಿ

ಮೂರು ದೊಡ್ಡಚಮಚ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆ

ವಿಧಾನ

ವಿಧಾನ

ಒಂದು ಚಿಕ್ಕ ಪಾತ್ರೆಯಲ್ಲಿ ಇವೆರಡೂ ಸಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚಿಕ್ಕ ಉರಿಯಲ್ಲಿ ಬಿಸಿಮಾಡಲು ತೊಡಗಿ. ನೆಲ್ಲಿಕಾಯಿ ಪುಡಿ ಕಪ್ಪಗಾಗತೊಡಗಿದ ಕೂಡಲೇ ಉರಿ ಆರಿಸಿ ತಣಿಯಲು ಬಿಡಿ.

ಈ ಎಣ್ಣೆ ಮುಟ್ಟುವಷ್ಟು ತಣ್ಣಗಾದ ಬಳಿಕ ಬೆರಳುಗಳಿಗೆ ಹಚ್ಚಿಕೊಂಡು ನೆತ್ತಿಯ ಭಾಗದಲ್ಲಿ ಮಸಾಜ್ ಮಾಡಿ ಪ್ರತಿ ಕೂದಲ ಬುಡಕ್ಕೂ ಎಣ್ಣೆ ತಲುವುಪಂತೆ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ

ಬಳಿಕ ಸುಮಾರು ಒಂದು ಘಂಟೆಯವರೆಗಾದರೂ ಹಾಗೇ ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಟ್ಟರೆ ಇನ್ನೂ ಒಳ್ಳೆಯದು

ಬಳಿಕ ನಿಮ್ಮ ನಿತ್ಯದ ಶಾಂಪೂವಿನಿಂದ ಕೂದಲನ್ನು ತೊಳೆದುಕೊಂಡು ಬಳಿಕ ಕಂಡೀಶನರ್ ಉಪಯೋಗಿಸಿ.

ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

Most Read: ಕೂದಲಿನ ಎಲ್ಲಾ ಸಮಸ್ಯೆಗೂ- ಸೀಗೆಕಾಯಿ ಪರ್ಫೆಕ್ಟ್ ಮನೆಮದ್ದು!

ಬೇವಿನ ಎಲೆಗಳು ಮತ್ತು ಕೊಬ್ಬರಿ ಎಣ್ಣೆ

ಬೇವಿನ ಎಲೆಗಳು ಮತ್ತು ಕೊಬ್ಬರಿ ಎಣ್ಣೆ

ಸಿದ್ಧತಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

ಸುಮಾರು ಒಂದು ಮುಷ್ಟಿಯಷ್ಟು ಕರಿಬೇವಿನ ಎಲೆಗಳು

3 ದೊಡ್ಡಚಮಚ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆ.

ವಿಧಾನ

ವಿಧಾನ

*ಒಂದು ಚಿಕ್ಕ ಪಾತ್ರೆಯಲ್ಲಿ ಇವರೆಡೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಕೊಂಚಹೊತ್ತಿನ ಬಳಿಕ ಎಣ್ಣೆಯ ತಳದಲ್ಲಿ ಕಪ್ಪಗಿನ ಪುಡಿ ಸಂಗ್ರಹವಾಗತೊಡಗಿದೊಡನೆ ಉರಿಯನ್ನು ಆರಿಸಿ ತಣಿಯಲು ಬಿಡಿ.

*ಉಗುರುಬೆಚ್ಚಗಾಗುವಷ್ಟು ತಣ್ಣಗಾದ ಬಳಿಕ ಈ ಎಣ್ಣೆಯನ್ನು ನೆತ್ತಿಗೆ ಹೆಚ್ಚಿಕೊಂಡು ಮಸಾಜ್ ಮಾಡಿ ಕನಿಷ್ಟ ಒಂದು ಘಂಟೆ ಹಾಗೇ ಬಿಡಿ. ಬಳಿಕ ನಿಮ್ಮ ನಿತ್ಯದ ಶಾಂಪೂವಿನಿಂದ ತೊಳೆದುಕೊಂಡು ಅಳಿಕ ಕಂಡೀಶನರ್ ಉಪಯೋಗಿಸಿ.

*ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಲಿಂಬೆ ಮತ್ತು ಕೊಬ್ಬರಿ ಎಣ್ಣೆ

ಲಿಂಬೆ ಮತ್ತು ಕೊಬ್ಬರಿ ಎಣ್ಣೆ

ಸಿದ್ಧತಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

ಎರಡು ಚಿಕ್ಕ ಚಮಚ ಲಿಂಬೆರಸ

2 ದೊಡ್ಡಚಮಚ ತಣ್ಣೆನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆ

ವಿಧಾನ

ವಿಧಾನ

ಕೊಬ್ಬರಿ ಎಣ್ಣೆಯನ್ನು ಸುಮಾರು ಒಂದು ನಿಮಿಷದವರೆಗೆ ಬಿಸಿಮಾಡಿ. ಅಂದರೆ ಇದು ಕೈಗೆ ಹಚ್ಚಿಕೊಳ್ಳುವಷ್ಟು ಮಾತ್ರವೇ ಬಿಸಿಯಾಗಬೇಕು.

ಇದಕ್ಕೆ ಲಿಂಬೆರಸವನ್ನು ಬೆರೆಸಿ ತಕ್ಷಣವೇ ಕೂದಲ ಬುಡದಿಂದ ತುದಿಯವರೆಗೆ ಲೇಪನವಾಗುವಂತೆ ಹಚ್ಚಿಕೊಳ್ಳಿ

ಸುಮಾರು ಮೂವತ್ತು ನಿಮಿಷದ ಕಾಲ ಹಾಗೇ ಬಿಡಿ.

ಬಳಿಕ ಶಾಂಪೂ ಮತ್ತು ಕಂಡೀಶನರ್ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ಈ ವಿಧಾನವನ್ನು ವಾರಕ್ಕೆರಡು ಬಾರಿ ಮಾತ್ರವೇ ಅನುಸರಿಸಿ.

ಮುನ್ನೆಚ್ಚರಿಕೆ:

ಕೊಬ್ಬರಿ ಎಣ್ಣೆ ಕೈಗೆ ಹಚ್ಚಿಕೊಳ್ಳುವುದಕ್ಕಿಂತ ಹೆಚ್ಚು ಬಿಸಿಯಾಗಬಾರದು.

Most Read: ತಲೆ ಕೂದಲಿನ ಹೇನಿನ ಸಮಸ್ಯೆಗೆ ಪರಿಹಾರ ಹೇಗೆ?

ಸಾಸಿವೆ ಎಣ್ಣೆ ಮತ್ತು ಹರಳೆಣ್ಣೆ

ಸಾಸಿವೆ ಎಣ್ಣೆ ಮತ್ತು ಹರಳೆಣ್ಣೆ

ಸಿದ್ಧತಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

1 ದೊಡ್ಡಚಮಚ ಹರಳೆಣ್ಣೆ

2 ದೊಡ್ಡಚಮಚ ಸಾಸಿವೆ ಎಣ್ಣೆ

ವಿಧಾನ

ವಿಧಾನ

ಒಂದು ಚಿಕ್ಕ ಪಾತ್ರೆಯಲ್ಲಿ ಇವೆರಡೂ ಎಣ್ಣೆಗಳನ್ನು ಮಿಶ್ರಣ ಮಾಡಿ ಉಗುರುಬೆಚ್ಚಗಾಗುವಷ್ಟು ಮಾತ್ರವೇ ಬಿಸಿಮಾಡಿ.

ಬಳಿಕ ಈ ಎಣ್ಣೆಯನ್ನು ನೇರವಾಗಿ ನೆತ್ತಿಗೆ ಹಾಗೂ ಕೂದಲ ಬುಡದಿಂದ ತುದಿಯವರೆಗೂ ಆವರಿಸುವಂತೆ ಹಚ್ಚಿಕೊಳ್ಳಿ.

ಸುಮಾರು ಹಚ್ಚು ನಿಮಿಷಗಳ ವರೆಗೆ ಕೂದಲ ಬುಡವನ್ನು ನಯವಾಗಿ ಮಸಾಜ್ ಮಾಡಿ ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಡಿ.

ಬಳಿಕ ನಿಮ್ಮ ನಿತ್ಯದ ಶಾಂಪೂ ಮತ್ತು ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಮುನ್ನೆಚ್ಚರಿಕೆ:

ಈ ಎಣ್ಣೆಯನ್ನು ಹೆಚ್ಚು ಬಿಸಿಮಾಡಕೂಡದು, ಕೋಣೆಯ ವಾತಾವರಣಕ್ಕಿಂತ ಕೊಂಚವೇ ಬಿಸಿಯಾದರೂ ಸಾಕು.

ಎಳ್ಳೆಣ್ಣೆಯ ಮಿಶ್ರಣ

ಎಳ್ಳೆಣ್ಣೆಯ ಮಿಶ್ರಣ

ಸಿದ್ಧತಾ ಸಮಯ: 21 ದಿನಗಳು

ಅಗತ್ಯವಿರುವ ಸಾಮಾಗ್ರಿಗಳು:

100mL ಎಳ್ಳೆಣ್ಣೆ

100mL ಕ್ಯಾರೆಟ್ ರಸ

50g ಮೆಂತೆ ಬೀಜದ ಪುಡಿ

ವಿಧಾನ

ವಿಧಾನ

*ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಗಾಜಿನ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಮುಂದಿನ ಇಪ್ಪತ್ತೊಂದು ದಿನಗಳ ಕಾಲ ಹಾಗೇ ಬಿಡಿ.

*ಬಳಿಕ ಉಪಯೋಗಿಸುವ ಸಮಯದಲ್ಲಿ ಸುಮಾರು ಎರಡು ಅಥವಾ ಮೂರು ದೊಡ್ಡ ಚಮಚದಷ್ಟು ಎಣ್ಣೆಯನ್ನು ಸಂಗ್ರಹಿಸಿ.

*ಈ ಎಣ್ಣೆಯನ್ನು ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೂ ಬರುವಂತೆ ಹಚ್ಚಿ ಕೂದಲ ಬುಡಕ್ಕೆ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿ.

*ಬಳಿಕ ನಿಮ್ಮ ನಿತ್ಯದ ಶಾಂಪೂ ಮತ್ತು ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

*ಪ್ರತಿ ಬಾರಿಯ ಸ್ನಾನಕ್ಕೂ ಮುನ್ನ ಈ ಎಣ್ಣೆಯನ್ನು ಬಳಸಿ, ಸುಮಾರು ಮೂರು ತಿಂಗಳವರೆಗೂ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ.

ಮುನ್ನೆಚ್ಚರಿಕೆ

*ಈ ಎಣ್ಣೆಯ ಬಳಕೆಯ ಪ್ರಮಾಣವನ್ನು ಅನುಸರಿಸಿ ಮೊದಲೇ ಸಾಕಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ಬಾಟಲಿಗಳಲ್ಲಿ ತುಂಬಿಸಿ ದಿನಾಂಕವನ್ನು ಬರೆದಿಡಿ. ಇದರಿಂದ ಅಗತ್ಯ ಸಮಯಕ್ಕೆ ಎಣ್ಣೆಯ ಕೊರತೆಯಾಗುವುದು ತಪ್ಪುತ್ತದೆ.

ಈ ಎಣ್ಣೆಯನ್ನು ಒಣಗಿರುವ ಮತ್ತು ತಣ್ಣನೆಯ ಸ್ಥಳದಲ್ಲಿ ಸಂಗ್ರಹಿಸಿ.

ಕಪ್ಪು ಬೀಜಗಳ ಎಣ್ಣೆ ಮತ್ತು ಆಲಿವ್ ಎಣ್ಣೆ:

ಕಪ್ಪು ಬೀಜಗಳ ಎಣ್ಣೆ ಮತ್ತು ಆಲಿವ್ ಎಣ್ಣೆ:

ಸಿದ್ಧತಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

1 ದೊಡ್ಡಚಮಚ ಆಲಿವ್ ಎಣ್ಣೆ

1 ದೊಡ್ಡಚಮಚ ಕಪ್ಪು ಬೀಜಗಳ ತೈಲ Black Seed Oil (ಇದು ಕರಿಜೀರಿಗೆಯ ಎಣ್ಣೆಯಾಗಿದ್ದು ಸಿದ್ದರೂಪದಲ್ಲಿ ಸಿಗುತ್ತದೆ)

ವಿಧಾನ

ವಿಧಾನ

ಇವೆರಡೂ ಎಣ್ಣೆಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಮಿಶ್ರಣ ಮಾಡಿ.

ಈ ಎಣ್ಣೆಯನ್ನು ಹಾಗೇ (ಅಂದರೆ ಬಿಸಿಮಾಡದೇ) ಬೆರಳುಗಳ ತುದಿಯಿಂದ ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ ಹಾಗೂ ಕೂದಲ ಬುಡವನ್ನು ಕೊಂಚ ಹೊತ್ತಿನವರೆಗೆ ಮಸಾಜ್ ಮಾಡಿ

ಬಳಿಕ ಒಂದು ಘಂಟೆಯವರೆಗೆ ಹಾಗೇ ಬಿಟ್ಟು ಕೇವಲ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಈ ವಿಧಾನವನ್ನು ನಿತ್ಯವೂ ಒಂದು ವಾರದವರೆಗೆ ಒಂದೇ ಸಮಯದಲ್ಲಿ ಅನುಸರಿಸಿ

ಒಂದು ವಾರದ ಬಳಿಕ ದಿನ ಬಿಟ್ಟು ದಿನ ಅಥವಾ ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ.

ಮದರಂಗಿ ಮತ್ತು ಕೊಬ್ಬರಿ ಎಣ್ಣೆ

ಮದರಂಗಿ ಮತ್ತು ಕೊಬ್ಬರಿ ಎಣ್ಣೆ

ಸಿದ್ಧತಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

ಸುಮಾರು ಒಂದು ಹಿಡಿಯಷ್ಟು ತಾಜಾ ಮದರಂಗಿ ಎಲೆಗಳು

3-4 ದೊಡ್ಡಚಮಚ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆ

Most Read: ನೈಸರ್ಗಿಕ ಹೇರ್ ಮಾಸ್ಕ್‌ಗಳು- ಬರೀ ಎರಡೇ ವಾರದಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ನಿವಾರಣೆ!

ವಿಧಾನ

ವಿಧಾನ

ಕೊಬ್ಬರಿ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿಮಾಡಿ. ಕುದಿಯಲು ಆರಂಭವಾಗತೊಡಗಿದೊಡನೆ, ಅಂದರೆ ತಳದಿಂದ ಗುಳ್ಳೆಗಳು ಏಳಲು ಪ್ರಾರಂಭವಾದೊಡನೆಯೇ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ಬಿಸಿಮಾಡಿ.

ಎಲೆಗಳು ಕೊಂಚ ಕಂದುಬಣ್ಣಕ್ಕೆ ತಿರುಗತೊಡಗಿದೊಡನೇ ಉರಿ ಆರಿಸಿ ಹಾಗೇ ತಣಿಯಲು ಬಿಡಿ.

ಬಳಿಕ ಈ ಎಲೆಗಳನ್ನು ಚೆನ್ನಾಗಿ ಹಿಂಡಿ ಎಣ್ಣೆಯನ್ನು ಸಂಗ್ರಹಿಸಿ.

ಈ ಎಣ್ಣೆಯನ್ನು ತಲೆಗೂದಲ ಬುಡಕ್ಕೆ ಮತ್ತು ತುದಿಯವರೆಗೂ ಹಚ್ಚಿಕೊಂಡು ಮಸಾಜ್ ಮಾಡಿ.

ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಿ.

ಈ ವಿಧಾನದಿಂದ ನಿಮ್ಮ ನೆರೆತ ಕೂದಲು ಪೂರ್ಣವಾಗಿ ಕಪ್ಪಗಾಗದೇ ಹೋದರೂ ಗಾಢಕಂದು ಬಣ್ಣವನ್ನು ಪಡೆಯುತ್ತದೆ. ಆದರೆ ಈ ಬಣ್ಣವೂ ಶಾಶ್ವತವಾಗಿರದೇ ಕೂದಲ ಬುಡದಿಂದ ಹೊಸಕೂದಲು ಬೆಳೆಯುತ್ತಿದ್ದಂತೆಯೇ ಈ ಭಾಗ ನೆರೆತ ಬಣ್ಣ ಹೊಂದಿರುವ ಕಾರಣ ಮತ್ತೊಮ್ಮೆ ಈ ಎಣ್ಣೆಯನ್ನು ಹಚ್ಚತೊಡಗಬೇಕು.

ಮುನ್ನೆಚ್ಚರಿಕೆ:

ಈ ಎಣ್ಣೆಯನ್ನು ಬಿಸಿಮಾಡುವ ಸಮಯದಲ್ಲಿ ಎಲೆಗಳು ಸಿಡಿಯುವ ಸಂಭವವಿದೆ ಹಾಗಾಗಿ, ಮುಚ್ಚಳವನ್ನು ಅಡ್ಡಹಿಡಿದು ಮತ್ತು ಸಾಕಷ್ಟು ದೂರವಿದ್ದು ಬಿಸಿ ಎಣ್ಣೆ ನಿಮ್ಮ ಚರ್ಮಕ್ಕೆ ತಗಲದಂತೆ ಎಚ್ಚರಿಕೆ ವಹಿಸಿ.

English summary

Home made Oil to Turn White Hair Black with in 15 days

Discovering your first gray hair can be almost as intense as dealing with heartbreak. Your life seems to slow down around you as you stare at that first white strand of hair that sprouted out where a beautiful colored one used to sit. All the good hair memories you’ve had start to flash before your eyes and you feel a gut wrenching pain because you believe they’re all over. “This might be the start of the end,” you think. The future seems daunting, all of the salon appointments and touch ups that await you, you don’t know if you can do it alone.
X
Desktop Bottom Promotion