'ಗುಲಾಬಿ ಎಸಳಿನ' ಹೇರ್ ಮಾಸ್ಕ್- ಒಮ್ಮೆ ಪ್ರಯತ್ನಿಸಿ ನೋಡಿ!

By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ಯುವತಿಯರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆ ಸೌಂದರ್ಯ ಸಮಸ್ಯೆಯಾಗಿದೆ. ಬದಲಾಗುತ್ತಿರುವ ಪರಿಸರ, ಕಲುಷಿತ ವಾತಾವರಣ, ಹೆಚ್ಚು ರಾಸಾಯನಿಕಗಳ ಬಳಕೆ, ಅನಾರೋಗ್ಯಕರ ಆಹಾರ ಪದ್ಧತಿ ಹೀಗೆ ಸೌಂದರ್ಯಕ್ಕೆ ತೊಡಕಾಗಿರುವ ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಅದರಲ್ಲೂ ಕೂದಲಿಗೆ ಉಂಟಾಗುತ್ತಿರುವ ಹಾನಿಯಂತೂ ವರ್ಣಿಸಲು ಅಸಾಧ್ಯವಾಗಿರುವಂತಹ ಮಟ್ಟಿಗೆ ವಿಪರೀತವಾಗಿದೆ. ಕೂದಲಿನ ಆರೈಕೆಗೆ-'ತುಳಸಿ ಎಲೆಯ' ಹೇರ್ ಪ್ಯಾಕ್...

ನಮ್ಮ ಕೂದಲು ನಯವಾಗಿ ದಟ್ಟವಾಗಿ ಆಕರ್ಷಕವಾಗಿರಬೇಕೆಂದು ಯಾರೂ ತಾನೇ ಬಯಸುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ನಾವು ಕೂದಲಿಗೆ ಬಳಸುತ್ತಿರುವ ಹೆಚ್ಚಿನ ರಾಸಾಯನಿಕಗಳಿಂದ ಕೂದಲು ತನ್ನ ಹೊಳಪು ಮತ್ತು ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಎಣ್ಣೆಯ ಆರೈಕೆ, ನೈಸರ್ಗಿಕ ಉತ್ಪನ್ನಗಳ ಮಾಲೀಶು, ಕೂದಲನ್ನು ಸರಿಯಾದ ವಿಧಾನದಲ್ಲಿ ತೊಳೆಯುವುದು, ಹೇರ್ ಪ್ಯಾಕ್ ಮೊದಲಾದ ಕ್ರಮಗಳನ್ನು ಕೂದಲಿಗಾಗಿ ಅಳವಡಿಸಿಕೊಳ್ಳುವಲ್ಲಿ ನಮಗೆ ಸಮಯದ ಅಭಾವ ಕಾಡುತ್ತಿದೆ. ನಿಮಗೆ ಅತ್ಯುತ್ತಮ ಕೇಶರಾಶಿ ಬೇಕು ಎಂದಾದಲ್ಲಿ ನೀವು ಕೂದಲಿನ ಕಾಳಜಿಗಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸಲೇಬೇಕು.  ಕೂದಲುದುರುವಿಕೆ ತಡೆಯಲು ನೈಸರ್ಗಿಕ ವಿಧಾನಗಳು

ಇಂದಿನ ಲೇಖನದಲ್ಲಿ ಗುಲಾಬಿ ದಳಗಳ ಹೇರ್ ಮಾಸ್ಕ್ ವಿಧಾನವನ್ನು ಇಂದಿಲ್ಲಿ ನಾವು ನೀಡುತ್ತಿದ್ದೇವೆ. ಈ ದಳಗಳಿಂದ ತಯಾರಿಸಿದ ಹೇರ್ ಪ್ಯಾಕ್‌ನಿಂದ ನಿಮ್ಮ ಕೂದಲು ನಳ ನಳಿಸುವುದು ಖಂಡಿತ. ಹೆಚ್ಚಿನ ವಿಟಮಿನ್ ಮತ್ತು ಮಿನರಲ್‌ಗಳನ್ನು ಗುಲಾಬಿ ಎಸಳುಗಳು ಪಡೆದುಕೊಂಡಿದ್ದು, ಹೊಸ ಕೂದಲಿನ ಕೋಶಗಳನ್ನು ರಚಿಸುವಲ್ಲಿ ಸಹಾಯಕವಾಗಲಿದೆ. ಹಾಗಿದ್ದರೆ ಬನ್ನಿ ಈ ಹೇರ್ ಮಾಸ್ಕ್ ಅನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.... 

ಹಂತ: 1

ಹಂತ: 1

ಅರ್ಧ ಕಪ್‌ನಷ್ಟು ತೆಂಗಿನೆಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಂಡರೆ ಸಾಕು. ಎಣ್ಣೆಯನ್ನು ತಣ್ಣಗಾಗಿಸಿಕೊಳ್ಳಿ. ತೆಂಗಿನೆಣ್ಣೆಯಲ್ಲಿ ಕೊಬ್ಬಿನ ಆಸಿಡ್‌ಗಳಿದ್ದು ಇದು ಕೂದಲಿನ ಬೆಳವಣಿಗೆಗೆ ಸಹಾಯಕವಾಗಲಿದೆ.

ಹಂತ:2

ಹಂತ:2

ತೆಂಗಿನೆಣ್ಣೆಗೆ 5 ಹನಿಗಳಷ್ಟು ರೋಸ್‌ಮೇರಿ ಎಣ್ಣೆಯನ್ನು ಹಾಕಿ. ಕೂದಲು ತುಂಡಾಗುವಿಕೆಯನ್ನು ರೋಸ್‌ಮೇರಿ ಎಣ್ಣೆ ತಡೆಯಲಿದ್ದು ತಲೆಬುರುಡೆಯಲ್ಲಿ ಸೇಬಮ್ ರಚನೆಯನ್ನು ತಗ್ಗಿಸಲಿದೆ. ನಿಮ್ಮ ತಲೆಬುರುಡೆಯನ್ನು ಆರೋಗ್ಯಕರವಾಗಿ ರೋಸ್‌ಮೇರಿ ಎಣ್ಣೆ ಇರಿಸಲಿದೆ.

ಹಂತ:3

ಹಂತ:3

24 ಗಂಟೆಗಳ ಕಾಲ ಬಿಸಿಲಿನಲ್ಲಿ ಮುಷ್ಟಿಯಷ್ಟು ಗುಲಾಬಿ ಎಸಳುಗಳನ್ನು ಒಣಗಿಸಿಕೊಳ್ಳಿ. ಇದು ಗಾಢ ಕಂದು ವರ್ಣಕ್ಕೆ ತಿರುಗುತ್ತಿದ್ದಂತೆ, ಎಸಳುಗಳನ್ನು ಹುಡಿಯನ್ನಾಗಿಸಿಕೊಳ್ಳಿ. ಎಣ್ಣೆಯ ಮಿಶ್ರಣಕ್ಕೆ ಒಂದು ಚಮಚದಷ್ಟು ಪೌಡರ್ ಅನ್ನು ಬೆರೆಸಿಕೊಳ್ಳಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

ಹಂತ:4

ಹಂತ:4

ನಿಮ್ಮ ಕೂದಲು ಒಣಗಿದೆ ಮತ್ತು ಫ್ರಿಜಿಯಾಗಿದೆ ಎಂದಾದಲ್ಲಿ, ಈ ಹೇರ್ ಮಾಸ್ಕ್‌ನಲ್ಲಿ ಜೇನನ್ನು ಸೇರಿಸಿಕೊಳ್ಳಬಹುದಾಗಿದೆ ಮತ್ತು ಇದು ಮೃದುವಾದ ಕೂದಲನ್ನು ನಿಮಗೆ ನೀಡಲಿದೆ. ಜೇನು ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡಿ ಕೂದಲಿಗೆ ಮೃದುತ್ವವವನ್ನು ನೀಡಲಿದೆ.

ಹಂತ:5

ಹಂತ:5

ಅಗಲ ಹಲ್ಲುಳ್ಳ ಬಾಚಣಿಗೆಯನ್ನು ಬಳಸಿಕೊಂಡು ಕೂದಲಿನ ಸಿಕ್ಕುಗಳನ್ನು ಬಿಡಿಸಿಕೊಳ್ಳಿ. ಕೂದಲನ್ನು ಬಾಚಣಿಗೆಯಿಂದ ಹೆಚ್ಚು ಎಳೆಯುವುದನ್ನು ತಪ್ಪಿಸಿ. ಅಂತೆಯೇ ತುಂಡಾಗುವಿಕೆಯನ್ನು ಕಡಿಮೆ ಮಾಡಲು ಆದಷ್ಟು ಕಡಿಮೆ ಒತ್ತಡವನ್ನು ಹಾಕಿ.

ಹಂತ:6

ಹಂತ:6

ತಣ್ಣಗಿನ ಎಣ್ಣೆ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ ತಲೆಬುರುಡೆ ಮತ್ತು ಕೂದಲಿನ ತುದಿಗೆ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಳ್ಳಿ. ಚೆನ್ನಾಗಿ ಎಣ್ಣೆಯನ್ನು ಹಚ್ಚಿಕೊಳ್ಳಲು, ಕೂದಲನ್ನು ಸಣ್ಣ ವಿಭಾಗಗಳನ್ನಾಗಿ ಬೇರ್ಪಡಿಸಿ ನಂತರ ಹಚ್ಚಿಕೊಳ್ಳಿ. ನಿಮ್ಮ ತಲೆಬುರುಡೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿ ನಂತರ ಮಾಲೀಷು ಮಾಡಿ.

ಹಂತ:7

ಹಂತ:7

5 ರಿಂದ 10 ನಿಮಿಷಗಳ ಕಾಲ ನಿಮ್ಮ ಬೆರಳುಗಳಿಂದ ತಲೆಬುರುಡೆಗೆ ಎಣ್ಣೆಯ ಮಸಾಜ್ ಮಾಡಿಕೊಳ್ಳಿ. ನಿಮ್ಮ ಕೂದಲಿನ ತುದಿ ಒರಟಾಗಿದೆ ಎಂದಾದಲ್ಲಿ, ಮಾಸ್ಕ್‌ ಅನ್ನು ಚೆನ್ನಾಗಿ ಈ ಭಾಗಕ್ಕೆ ಹಚ್ಚಿಕೊಳ್ಳಿ.

ಹಂತ: 8

ಹಂತ: 8

ಈ ಮಾಸ್ಕ್ ಕೂದಲಿನಲ್ಲಿ 45 ನಿಮಿಷಗಳ ಕಾಲ ಇರುವಂತೆ ನೋಡಿಕೊಳ್ಳಿ ನಂತರ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ನಂತರ ತಿಳಿಯಾದ ಕಂಡೀಷನರ್ ಬಳಸಿಕೊಂಡು ಕೂದಲನ್ನು ಒಣಗಿಸಿಕೊಳ್ಳಿ.

ಹಂತ: 9

ಹಂತ: 9

ಹಳೆಯ ಟಿ ಶರ್ಟ್ ಅನ್ನು ಬಳಸಿಕೊಂಡು ಕೂದಲಿನ ಹೆಚ್ಚುವರಿ ನೀರನ್ನು ಹೊರತೆಗೆಯಿರಿ. ಅಂತೆಯೇ ಕೂದಲನ್ನು ಹಾಗೆಯೇ ಗಾಳಿಗೆ ಒಣಗಲು ಬಿಡಿ.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ನಿಮ್ಮ ಕೂದಲಿನಲ್ಲಿ ಮಾಸ್ಕ್ ಚೆನ್ನಾಗಿ ಕೂರಬೇಕು ಎಂದಾದಲ್ಲಿ, ಹತ್ತಿಯ ಟವೆಲ್ ಅನ್ನು ಬಿಸಿನೀರಿನಲ್ಲಿ ಅದ್ದಿಕೊಳ್ಳಿ ಮತ್ತು ಹೆಚ್ಚುವರಿ ನೀರನ್ನು ಹಿಂಡಿ ಈ ಟವೆಲ್ ಅನ್ನು ಕೂದಲಿನ ಸುತ್ತ ಸುತ್ತಿಕೊಳ್ಳಿ. ಈ ಸ್ಟೀಮ್ ರಂಧ್ರಗಳನ್ನು ಹೊರತೆರೆಯಲಿದೆ ಮತ್ತು ಮಾಸ್ಕ್ ಕೂದಲಿನಲ್ಲಿ ಚೆನ್ನಾಗಿ ಹಿಡಿಯುವಂತೆ ಮಾಡಲಿದೆ. ನಿಮ್ಮ ಕೂದಲಿನ ದಟ್ಟತೆ ಮತ್ತು ಉದ್ದಕ್ಕೆ ಅನುಗುಣವಾಗಿ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ.

ಫಲಿತಾಂಶ

ಫಲಿತಾಂಶ

ಈ ಹೇರ್ ಮಾಸ್ಕ್ ಅನ್ನು ಮೊದಲ ಬಾರಿಗೆ ಹಚ್ಚಿಕೊಳ್ಳುತ್ತಿದ್ದಂತೆ, ನಿಮ್ಮ ಕೂದಲು ಮೃದುವಾಗುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಫಲಿತಾಂಶವನ್ನು ಪಡೆದುಕೊಳ್ಳಿ.

 
English summary

Rose Petal Hair Mask For Super Soft & Silky Hair!

From churning out the world's most irresistible perfume, removing tan to giving your pout that enviable fullness, we have been using rose in our beauty regimen, since time immemorial, but did you know the rose hair mask can also make your hair baby soft and smooth?
Story first published: Saturday, January 21, 2017, 23:31 [IST]
Please Wait while comments are loading...
Subscribe Newsletter