For Quick Alerts
ALLOW NOTIFICATIONS  
For Daily Alerts

ಕೂದಲುದುರುವಿಕೆ ತಡೆಯಲು ನೈಸರ್ಗಿಕ ವಿಧಾನಗಳು

By ರೀನಾ ಮಂಜು
|

ಪ್ರತಿಯೊಬ್ಬರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ಕೂದಲು ಉದುರುವುದು. ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನ ಮತ್ತು ಹವ್ಯಾಸಗಳಿಂದ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವುದು, ಕೂದಲ ತುಂಡಾಗುವುದು, ಒರಟು ಅಥವಾ ಒಣ ಕೂದಲು ಇತ್ಯಾದಿ ಬರಬಹುದು. ನಿಮ್ಮ ಕೂದಲು ಬಲ ಮತ್ತು ಹೊಳಪು ನೀಡಲು ಅದರ ಆರೈಕೆ ಮಾಡುವುದು ತುಂಬಾ ಮುಖ್ಯ.

ಕೂದಲು ನಷ್ಟವಾಗುವುದು ಕೂದಲಿನ ಪ್ರಮುಖ ಸಮಸ್ಯೆ. ಕೂದಲು ನಷ್ಟವಾಗಲು ಪ್ರಮುಖ ಕಾರಣವೆಂದರೆ ತಲೆಹೊಟ್ಟು, ಒಣ ಕೂದಲು, ಕೂದಲನ್ನು ಗಡಸು ನೀರಿನಿಂದ ತೊಳೆಯುವುದು ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು. ಕೂದಲು ಉದುರುವಿಕೆಯನ್ನು ತಡೆಯಲು ಹಲವಾರು ರಾಸಾಯನಿಕ ಶಾಂಪೂ ಮತ್ತು ಸೀರಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ರಾಸಾಯನಿಕ ಚಿಕಿತ್ಸೆ ಅತ್ಯಂತ ತ್ವರಿತ ಮತ್ತು ಸ್ವಲ್ಪ ಸಮಯದವರೆಗೆ ಮಾತ್ರ. ಈ ರಾಸಾಯನಿಕಗಳಿಂದ ಅಡ್ಡ ಪರಿಣಾಮಗಳಾಗಬಹುದು ಮತ್ತು ಕೂದಲಿಗೆ ಇದು ಹಾನಿಕಾರಕವಾಗಬಹುದು.

Ways To Prevent Hair Loss Naturally

ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುವುದು ಹೇಗೆಂದು ತಿಳಿದುಕೊಳ್ಳಬೇಕು. ಕೂದಲು ಉದುರುವಿಕೆ ತಡೆಯಲು ಹಲವಾರು ನೈಸರ್ಗಿಕ ಪರಿಹಾರಗಳಿವೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ನೈಸರ್ಗಿಕ ಚಿಕಿತ್ಸೆಗೆಳು ಪರಿಣಾಮ ತೋರಿಸಲು ದೀರ್ಘ ಸಮಯ ಬೇಕಾಗಬಹುದು. ಆದರೆ ಪರಿಣಾಮ ದೀರ್ಫ ಕಾಲದ್ದು ಮತ್ತು ಶಾಶ್ವತ. ಪ್ರಾಕೃತಿಕವಾಗಿ ಕೂದಲು ಉದುರುವುದನ್ನು ತಡೆಯುವುದು ಹೇಗೆಂದು ಕೆಲವೊಂದು ವಿಧಾನಗಳಲ್ಲಿ ಇಲ್ಲಿ ನೀಡಲಾಗಿದೆ.

ನೈಸರ್ಗಿಕ ಹೇರ್ ಮಾಸ್ಕ್
ಕೂದಲು ಉದುರುವಿಕೆ ತಡೆಯಲು ಒಳ್ಳೆಯ ಫಲಿತಾಂಶಗಾಗಿ ಹೇರ್ ಮಾಸ್ಕ್ ಗಳನ್ನು ಉಪಯೋಗಿಸಬಹುದು. ವಾರದಲ್ಲಿ ಒಂದು ಸಲ ಈ ಹೇರ್ ಮಾಸ್ಕ್ ನ್ನು ಬಳಸಿದರೆ ಒಳ್ಳೆಯ ಫಲಿತಾಂಶ ಕಾಣಬಹುದು. ಹೆನ್ನಾ, ಅಲೋವೆರಾ, ಮೊಸರು, ಕಹಿಬೇವು ಮತ್ತು ಇತರ ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಹೇರ್ ಮಾಸ್ಕ್ ತಯಾರಿಸಬಹುದು. ಈ ಹೇರ್ ಮಾಸ್ಕ್ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಕೂದಲಿನ ಬುಡಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಕೂದಲು ಉದುರುವ ಸಮಸ್ಯೆಗೆ ಅತ್ಯಂತ ಉಪಯುಕ್ತ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

ಆಮ್ಲಾ
ಅಮ್ಲಾದ ಪ್ರಮುಖ ಗುಣಗಳೆಂದರೆ ಅದು ನಿಮ್ಮ ಕೂದಲಿಗೆ ಪೋಷಕಾಂಶಗಳನ್ನು ನೀಡಿ ಕೂದಲನ್ನು ರಕ್ಷಿಸುತ್ತದೆ ಮತ್ತು ಅದನ್ನು ನಯವಾಗಿಸುತ್ತದೆ. ಅವ್ಲಾ ಜೂಸ್ ನ್ನು ಕೂದಲಿಗೆ ಹಚ್ಚಿ 10-15 ನಿಮಿಷ ಹಾಗೆ ಬಿಡಬೇಕು. ಇದರ ಬಳಿಕ ನೀರಿನಿಂದ ತೊಳೆಯಬೇಕು. ವಾರದಲ್ಲಿ ಒಂದು ಸಲ ಹೀಗೆ ಮಾಡಿ ಮತ್ತು ಕೂದಲು ಉದುರುವಿಕೆಯಲ್ಲಿ ನೀವು ತುಂಬಾ ಭಿನ್ನ ಪರಿಣಾಮ ಕಾಣಬಹುದು. ಅವ್ಲಾವನ್ನು ಎಣ್ಣೆ, ಹೇರ್ ಪ್ಯಾಕ್ ಇತ್ಯಾದಿಗಳ ರೂಪದಲ್ಲಿ ಉಪಯೋಗಿಸಬಹುದು. ಆಹಾರ ಕ್ರಮದಲ್ಲಿ ಅಮ್ಲಾವನ್ನು ಪ್ರತೀದಿನ ಬಳಸುವುದರಿಂದ ನಿಮ್ಮ ಕೂದಲಿನ ಗುಣಮಟ್ಟ ಒಳ್ಳೆಯದಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಇದು ಕೆಲವೊಂದು ನೈಸರ್ಗಿಕ ಚಿಕಿತ್ಸೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಿ.

English summary

Ways To Prevent Hair Loss Naturally

Hair loss is a terrible thing that could happen to anybody. Pollution, unhygienic living and unhealthy habits have resulted in hair problems like hair fall, hair loss, rough and dry hair, etc. You must take care of your hair to make them strong and shiny.
X
Desktop Bottom Promotion