For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ -'ತುಳಸಿ ಎಲೆಯ' ಹೇರ್ ಪ್ಯಾಕ್...

By Jaya Subramanya
|

ನೈಸರ್ಗಿಕ ಗಿಡಮೂಲಿಕೆಗಳು ಅನಾದಿ ಕಾಲದಿಂದಲೂ ನಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದು ಇಂದಿನ ಆಧುನಿಕ ಔಷಧೀಯ ಪದ್ಧತಿಯಲ್ಲೂ ಇವುಗಳು ತಮ್ಮ ಬೇಡಿಕೆಯನ್ನು ಕಳೆದುಕೊಂಡಿಲ್ಲ. ದುಬಾರಿ ಮೊತ್ತದ ಔಷಧಗಳಿಂದಲೂ, ಹೆಚ್ಚು ಪರಿಣಾಮಕಾರಿಯಾಗಿ ನೈಸರ್ಗಿಕ ಉತ್ಪನ್ನಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸಿದ ದೃಷ್ಟಾಂತಗಳಿವೆ.

ನಮ್ಮ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲು ಪ್ರಾಕೃತಿಕ ಗಿಡಮೂಲಿಕೆಗಳು ಉಪಯೋಗಕಾರಿಯಾಗಿವೆ. ಇಂತಹ ಸಸ್ಯವಾಗಿರುವ ತುಳಸಿಯೇ ಕುರಿತು ನಾವು ಹೆಚ್ಚಿನ ಪರಿಣಾಮಕಾರಿ ಅಂಶಗಳನ್ನು ತಿಳಿಸಲಿದ್ದೇವೆ. ಹೆಚ್ಚುವರಿ ಕೂದಲು ಉದುರುವಿಕೆ ಸಮಸ್ಯೆಗಳನ್ನು ತುಳಸಿ ಹೋಗಲಾಡಿಸಲಿದ್ದು, ಇದರಲ್ಲಿ ವಿಟಮಿನ್ ಎ, ಸಿ, ಇ ಮತ್ತು ಕೆ ಇವೆ. ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

ಹೆಚ್ಚು ಪರಿಣಾಮಕಾರಿ ಉತ್ಕರ್ಷಣ ಗುಣಗಳನ್ನು ತುಳಸಿ ಹೊಂದಿದ್ದು, ಹಾನಿಗೊಳಗಾದ ಕೂದಲಿನ ಕಿರುಚೀಲಗಳನ್ನು ಇದು ರಿಪೇರಿ ಮಾಡುತ್ತದೆ. ಹಾಗಿದ್ದರೆ ತುಳಸಿಯಿಂದ ಕೂದಲಿನ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ....

ಹಂತ1

ಹಂತ1

ಮುಷ್ಟಿಯಷ್ಟು ತುಳಸಿ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ತೊಳೆದುಕೊಳ್ಳಿ. ಸೂರ್ಯನ ಬಿಸಿಲಿನಲ್ಲಿ ಇಟ್ಟು ಒಣಗಿಸಿಕೊಳ್ಳಿ. ಒಮ್ಮೆ ಒಣಗಿದ ನಂತರ, ಉತ್ತಮವಾದ ಪೌಡರ್ ತಯಾರಿಸಿಕೊಳ್ಳಲು ಅವುಗಳನ್ನು ಗ್ರೈಂಡ್ ಮಾಡಿಕೊಳ್ಳಿ.

ಹಂತ 2

ಹಂತ 2

1 ಚಮಚದಷ್ಟು ನೆಲ್ಲಿಕಾಯಿ ಹುಡಿಯನ್ನು ತೆಗೆದುಕೊಂಡು, ಇದಕ್ಕೆ 1 ಚಮಚದಷ್ಟು ಶುದ್ಧವಾದ ತುಳಸಿ ಎಲೆ ಹುಡಿಯನ್ನು ಸೇರಿಸಿ. ಅರ್ಧ ಕಪ್‌ನಷ್ಟು ನೀರನ್ನು ಬೆರೆಸಿಕೊಂಡು, ಮೃದುವಾದ ಪೇಸ್ಟ್ ತಯಾರಿಸಿ. ರಾತ್ರಿ ಪೂರ್ತಿ ನೆನೆಯಲು ಬಿಡಿ.

ಹಂತ 3

ಹಂತ 3

ಬೆಳಗ್ಗೆ, ಪೇಸ್ಟ್ ತೆಗೆದುಕೊಂಡು ಫೋರ್ಕ್ ಸಹಾಯದಿಂದ ಮೃದುವಾಗುವವರೆಗೂ ಕಲಸಿಕೊಳ್ಳಿ. ಚಮಚದಷ್ಟು ಆಲೀವ್ ಎಣ್ಣೆ, 5 ಹನಿಗಳಷ್ಟು ರೋಸ್‌ಮೇರಿ ಎಣ್ಣೆ ಮತ್ತು 5 ಹನಿ ಬಾದಾಮಿ ಎಣ್ಣೆಯನ್ನು ಮಾಸ್ಕ್‌ಗೆ ಸೇರಿಸಿ. ಸಾಮಾಗ್ರಿಗಳು ಚೆನ್ನಾಗಿ ಮೃದುವಾಗಗುವರೆಗೂ ಕಲಸಿಕೊಳ್ಳಿ.

ಹಂತ 4

ಹಂತ 4

ಅಗಲ ಹಲ್ಲಿನ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳಿ ಮತ್ತು ಸಿಕ್ಕುಗಳನ್ನು ನಿವಾರಿಸಿ. ಕೂದಲು ತುಂಡಾಗುವುದನ್ನು ತಡೆಯಲು ಕೂದಲಿನ ಸ್ವಲ್ಪ ಭಾಗವನ್ನು ತೆಗೆದುಕೊಂಡು, ಅದನ್ನು ಮಧ್ಯದಲ್ಲಿ ಹಿಡಿದು ತುದಿಯಿಂದ ಕೂದಲನ್ನು ಬಾಚಿ ಸಿಕ್ಕು ಬಿಡಿಸಿಕೊಳ್ಳಿ.

ಹಂತ 5

ಹಂತ 5

ಕೂದಲನ್ನು ಸ್ವಲ್ಪ ಒದ್ದೆ ಮಾಡಿಕೊಳ್ಳಿ ಇದರಿಂದ ಮಾಸ್ಕ್ ಹಚ್ಚಿಕೊಳ್ಳಲು ಸುಲಭ. ಕೂದಲನ್ನು ಸಣ್ಣ ಭಾಗಗಳನ್ನಾಗಿ ಮಾಡಿ, ಮತ್ತು ಕೂದಲಿನ ಉದ್ದಕ್ಕೆ ಸಮನಾಗಿ ಮಾಸ್ಕ್ ಹಚ್ಚಿಕೊಳ್ಳಿ.

ಹಂತ 6

ಹಂತ 6

ನಿಮ್ಮ ಕೂದಲನ್ನು 5 ನಿಮಿಷಗಳ ಕಾಲ ಮಸಾಜ್ ಮಾಡಿ ಇದರಿಂದ ರಕ್ತ ಸಂಚಾರವುಂಟಾಗುತ್ತದೆ. ಕೂದಲನ್ನು ತುರುಬು ಕಟ್ಟಿ ಮತ್ತು ಶವರ್ ಕ್ಯಾಪ್‌ನಿಂದ ಕವರ್ ಮಾಡಿ.

ಹಂತ 7

ಹಂತ 7

ಮಾಸ್ಕ್‌ನ ನ್ಯೂಟ್ರಿಶಿಯನ್ ಅಂಶಗಳನ್ನು ಕೂದಲು ಹೀರಿಕೊಳ್ಳಲು ಬಿಡಿ ಮತ್ತು ಒಂದು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ. ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ ನಂತರ ಸೂಕ್ತವಾದ ಕಂಡೀಷನರ್ ಹಚ್ಚಿಕೊಳ್ಳಿ. ತಿಂಗಳಿಗೆ ಎರಡು ಬಾರಿ ತುಳಸಿ ಹೇರ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.ಕೂದಲಿನ ಸೌಂದರ್ಯವನ್ನು ವೃದ್ಧಿಸುವ ಇನ್ನಷ್ಟು ನೈಸರ್ಗಿಕ ಸಲಹೆಗಳು ನಿಮ್ಮ ಬಳಿ ಇವೆ ಎಂದಾದಲ್ಲಿ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

Can Tulsi Save Your Rapidly Falling Hair?

Tulsi does not just stop hair fall, but repairs it, one layer at a time. Here is how. It packs a powerful punch of vitamins A, C, E and K, which together form a powerful antioxidant, repairing damaged hair follicles, strengthening hair strands from roots and reducing hair fall. read more....
X
Desktop Bottom Promotion