For Quick Alerts
ALLOW NOTIFICATIONS  
For Daily Alerts

ಕೂದಲು ಕಪ್ಪಗಿದ್ದರೆ ಸಾಲದು!, ಆರೈಕೆಯೂ ಹಾಗೆಯೇ ಇರಬೇಕು...

ನೈಸರ್ಗಿಕವಾದ ಕಪ್ಪಗಿನ ಕೂದಲನ್ನು ಕಾಪಾಡಿಕೊಳ್ಳಲು ಕೆಲವೊಂದು ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿಕೊಂಡು ಅಳವಡಿಸಿಕೊಳ್ಳಿ.

By Hemanth
|

ಮಹಿಳೆಯಾಗಲಿ ಅಥವಾ ಪುರುಷನಾಗಲಿ ತಲೆಯಲ್ಲಿ ಕೂದಲು ಇಲ್ಲದೆ ಅವರನ್ನು ಊಹಿಸುವುದು ತುಂಬಾ ಕಷ್ಟ. ಪುರುಷರು ವಯಸ್ಸಾಗುತ್ತಿರುವಂತೆ ಬೋಳು ತಲೆಯವರಾಗುತ್ತಾರೆ. ಮಹಿಳೆಯರ ಕೂದಲು ಕೂಡ ಉದುರಲು ಆರಂಭವಾಗುತ್ತದೆ. ಆದರೆ ಕರಿ ಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಿರುತ್ತದೆ. ಈ ಕಪ್ಪಗಿನ ಕೂದಲಿನ ಆರೈಕೆ ಮಾತ್ರ ತುಂಬಾ ಕಷ್ಟ. ಕೂದಲಿನ ಸೌಂದರ್ಯಕ್ಕೆ ಸರಳ ಟಿಪ್ಸ್-ತ್ವರಿತ ಫಲಿತಾಂಶ
ಅದರಲ್ಲೂ ಕೂದಲಿಗೆ ನಾವು ಯಾವುದೇ ರಕ್ಷಣೆ ಒದಗಿಸಲು ಸಾಧ್ಯವಾಗದೆ ಇರುವ ಕಾರಣದಿಂದ ಹೊರಗಿನ ವಾತಾವರಣದಲ್ಲಿರುವ ಧೂಳು ಇತ್ಯಾದಿ ಕೂದಲಿನ ಅಂದವನ್ನು ಕೆಡಿಸುತ್ತದೆ. ಕಲುಷಿತ ವಾತಾವರಣವೇ ಕೂದಲಿನ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಕಪ್ಪಗಿನ ಕೂದಲಿನ ಆರೈಕೆ ಮಾಡುವುದು ತುಂಬಾ ಕಠಿಣ. ನೆನಪಿರಲಿ ಇದೇ ಕಾರಣಕ್ಕೆ ಕೂದಲು ಹಾಳಾಗುತ್ತಿರುವುದು!

ಯಾಕೆಂದರೆ ನೈಸರ್ಗಿಕವಾದ ಕಪ್ಪು ಕೂದಲು ಒಣಗಿರುತ್ತದೆ... ಹಾಗಾಗಿ ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಆರೈಕೆ ಮಾಡಿದಾಗ ಮಾತ್ರ ಕೂದಲು ಬೆಳೆದು ಅದು ಹೊಳೆಯುತ್ತಿರುತ್ತದೆ. ಬನ್ನಿ ನೈಸರ್ಗಿಕವಾದ ಕಪ್ಪಗಿನ ಕೂದಲನ್ನು ಕಾಪಾಡಿಕೊಳ್ಳಲು ಕೆಲವೊಂದು ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿಕೊಂಡು ಅಳವಡಿಸಿಕೊಳ್ಳಿ....

ಎಣ್ಣೆಯ ಮಸಾಜ್ ತಪ್ಪಿಸದಿರಿ

ಎಣ್ಣೆಯ ಮಸಾಜ್ ತಪ್ಪಿಸದಿರಿ

ಪ್ರತಿನಿತ್ಯವೂ ಕೂದಲು ಮತ್ತು ತಲೆಬುರುಡೆಗೆ ಎಣ್ಣೆ ಹಚ್ಚಿಕೊಳ್ಳಿ. ಹರಳೆಣ್ಣೆ ಮತ್ತು ತೈಲ ನವಿರಾದ ದ್ರವೌಷಧಿಗಳು ಕೂದಲನ್ನು ಕಾಂತಿಯುತ ಹಾಗೂ ಹೊಳೆಯುವಂತೆ ಮಾಡುವುದು. ನೈಸರ್ಗಿಕ ಕಪ್ಪು ಕೂದಲಿಗಾಗಿ ಬಿಸಿ ಎಣ್ಣೆಯನ್ನು ಹಾಕಿಕೊಂಡು ಮಸಾಜ್ ಮಾಡಿದರೆ ತೈಲ ಉತ್ಪತ್ತಿಯು ಉತ್ತೇಜನಗೊಳ್ಳುವುದು.ಕೂದಲಿನ ಸಮಸ್ಯೆ ಅರಿತುಕೊಂಡು ಎಣ್ಣೆ ಮಸಾಜ್ ಮಾಡಿ!

ಪದೇ ಪದೇ ಕೂದಲನ್ನು ತೊಳೆಯ ಬೇಡಿ

ಪದೇ ಪದೇ ಕೂದಲನ್ನು ತೊಳೆಯ ಬೇಡಿ

ಕಪ್ಪು ಕೂದಲನ್ನು ವಾರದಲ್ಲಿ ಒಂದು ಸಲ ಅಥವಾ ಎರಡು ವಾರಕ್ಕೊಮ್ಮೆ ತೊಳೆಯಿರಿ. ಆಗಾಗ ಕೂದಲನ್ನು ತೊಳೆದರೆ ಕೂದಲು ಮತ್ತು ತಲೆಬುರುಡೆ ಒಣಗುವುದು. ಪದೇ ಪದೇ ಕೂದಲನ್ನು ತೊಳೆಯದೆ ಇದ್ದರೆ ಕೂದಲು ತುಂಡಾಗುವುದು ತಪ್ಪುವುದು. ಕೂದಲು ಸೊಂಪಾಗಿ ಬೆಳೆಯಬೇಕೇ?-ಪದೇ ಪದೇ ತೊಳೆಯದಿರಿ

ಕಂಡೀಷನರ್ ಬಳಸಿ

ಕಂಡೀಷನರ್ ಬಳಸಿ

ಕೂದಲಿಗೆ ಶಾಂಪೂ ಹಾಕಿಕೊಂಡ ಬಳಿಕ ಕಂಡೀಷನರ್ ಹಾಕಿದರೆ ಕೂದಲಿನಲ್ಲಿ ಮಾಯಿಶ್ಚರೈಸರ್ ಉಳಿಯುತ್ತದೆ. ಕೂದಲು ನವಿರಾಗಿರುತ್ತದೆ.

ಇಂತಹ ತಪ್ಪುಗಳನ್ನು ಮಾಡದಿರಿ

ಇಂತಹ ತಪ್ಪುಗಳನ್ನು ಮಾಡದಿರಿ

ಕೂದಲನ್ನು ಒಣಗಿಸುವ ಯಂತ್ರದ ಬಿಸಿ ತುಂಬಾ ಕಡಿಮೆ ಇರಲಿ. ಬಿಸಿ ಬಾಚಣಿಗೆ ಮತ್ತು ರೋಲರ್ ನಂತಹ ಸಾಧನಗಳನ್ನು ಬಳಸಬೇಡಿ.

ಕೂದಲಿನ ಆರೈಕೆ ಹೀಗಿರಲಿ

ಕೂದಲಿನ ಆರೈಕೆ ಹೀಗಿರಲಿ

ಮಲಗುವ ನುಣುಪಾಗಿರುವ ತಲೆದಿಂಬನ್ನು ಬಳಸಿಕೊಳ್ಳಿ. ಅಥವಾ ನುಣುಪಾಗಿರುವ ಬಟ್ಟೆಯನ್ನು ತಲೆಗೆ ಸುತ್ತಿಕೊಂಡು ಮಲಗಿ. ಇದು ಕಪ್ಪು ಕೂದಲಿನ ಆರೈಕೆಗೆ ಅತೀ ಸುಲಭ ವಿಧಾನವಾಗಿದೆ. ಮೆತ್ತಗಿನ ಬಟ್ಟೆಗಳು ಮಾಯಿಶ್ಚರೈಸರ್ ಅನ್ನು ಕಾಪಾಡುತ್ತದೆ.

 ಪ್ರತೀ ದಿನ ಶಾಂಪೂ ಬಳಸಬೇಡಿ

ಪ್ರತೀ ದಿನ ಶಾಂಪೂ ಬಳಸಬೇಡಿ

ನೀವು ತುಂಬಾ ಶ್ರಮದ ಕೆಲಸ ಮಾಡುತ್ತಿದ್ದು, ಬೆವರು ಬರುತ್ತಾ ಇದ್ದರೆ ಪ್ರತೀ ದಿನ ಶಾಂಪೂ ಬಳಸಬೇಡಿ. ನೀರಿನಿಂದ ಕೂದಲು ತೊಳೆಯಿರಿ ಮತ್ತು ವಾರಕ್ಕೊಮ್ಮೆ ಶಾಂಪೂ ಬಳಸಿ. ಕಪ್ಪು ಕೂದಲಿಗೆ ಆರೈಕೆಗೆ ಪಿಚ್ ಮಟ್ಟವು ಕಡಿಮೆ ಇರುವಂತಹ ಶಾಂಪೂ ಬಳಸಿ.

ಆರೋಗ್ಯಕರ ಆಹಾರವನ್ನು ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸಿದರೆ ಕೂದಲಿನ ಆರೋಗ್ಯವು ಉತ್ತಮವಾಗಿರುತ್ತದೆ. ಕಪ್ಪು ಕೂದಲಿನ ಸರಿಯಾದ ಆರೈಕೆಗೆ ಪೋಷಕಾಂಶಗಳು ಇರುವ ಆಹಾರ ಸೇವನೆ ಮಾಡಿ. ಎಣ್ಣೆ ಹಾಗೂ ಜಂಕ್ ಫುಡ್ ತ್ಯಜಿಸಿ. ಬಟಾಟೆ, ಹಣ್ಣುಗಳು ಮತ್ತು ತರಕಾರಿಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ಕೂದಲನ್ನು ಬಲಗೊಳಿಸುವುದು.

ಕೂದಲಿಗೆ ಬಣ್ಣ ಹಾಕಬೇಡಿ

ಕೂದಲಿಗೆ ಬಣ್ಣ ಹಾಕಬೇಡಿ

ಯಾವುದೇ ಕಾರಣಕ್ಕೂ ಕೂದಲಿಗೆ ಬಣ್ಣ ಹಾಕಬೇಡಿ. ಇದು ಕೂದಲನ್ನು ಮತ್ತಷ್ಟು ಒಣಗಿಸುವುದು. ಸಾಧ್ಯವಾದಷ್ಟು ನೀರು ಕುಡಿಯಿರಿ. ಕಪ್ಪು ಕೂದಲಿನ ಆರೈಕೆಗೆ ಈ ವಿಧಾನಗಳನ್ನು ಸರಿಯಾಗಿ ಪಾಲಿಸಿ.

English summary

Natural Black Hair Care Easy Tips

Black hair is difficult to maintain so it is very important to have the right hair care. Natural black hair is typically dry and therefore the need to keep the hair and scalp moist is a must. This promotes hair growth and keep it healthy and shiny. Here are few easy tips for natural black hair care:
X
Desktop Bottom Promotion