ನೆನಪಿರಲಿ ಇದೇ ಕಾರಣಕ್ಕೆ ಕೂದಲು ಹಾಳಾಗುತ್ತಿರುವುದು!

By: Hemanth
Subscribe to Boldsky

ಸುಂದರ ಹಾಗೂ ರೇಷ್ಮೆಯಂತೆ ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಗೂ ಇಷ್ಟ. ಕೂದಲಿನ ಆರೈಕೆ ಚೆನ್ನಾಗಿ ಮಾಡಿದರೆ ಇಂತಹ ಕೂದಲು ಪಡೆಯುವುದು ಕಷ್ಟವೇನಲ್ಲ. ಆದರೆ ಮಹಿಳೆಯರು ಮಾಡುವಂತಹ ಕೆಲವೊಂದು ತಪ್ಪುಗಳಿಂದಾಗಿ ಕೂದಲಿನ ಆರೋಗ್ಯ ಕೆಡುವುದು ಮಾತ್ರವಲ್ಲದೆ ಕೂದಲು ಕೂಡ ತುಂಬಾ ಕೆಟ್ಟದಾಗಿ ಕಾಣಿಸುತ್ತದೆ.  ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

ಕೇವಲ ನೀವು ಮಾತ್ರ ಇಂತಹ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಭಾವಿಸಬೇಡಿ. ಯಾಕೆಂದರೆ ಪ್ರತಿಯೊಬ್ಬರೂ ಇಂತಹ ತಪ್ಪುಗಳನ್ನು ಮಾಡುತ್ತಾರೆ. ನೀವು ಮಾಡುವಂತಹ ಕೆಲವೊಂದು ತಪ್ಪುಗಳು ಕೂದಲಿಗೆ ತುಂಬಾ ಹಾನಿಯನ್ನು ಉಂಟು ಮಾಡುತ್ತದೆ. ಕೂದಲುದುರುವ ಸಮಸ್ಯೆ ಹಿಂದಿರುವ ಸತ್ಯಾಸತ್ಯತೆ

ಮಹಿಳೆಯರು ಕೂದಲಿನ ಬಗ್ಗೆ ಮಾಡುವಂತಹ ತಪ್ಪುಗಳು ಯಾವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿದುಕೊಂಡು ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಿ....   

ಪ್ರತೀದಿನ ಕೂದಲು ತೊಳೆಯುವುದು

ಪ್ರತೀದಿನ ಕೂದಲು ತೊಳೆಯುವುದು

ಕೆಲವು ಮಹಿಳೆಯರ ಕೂದಲು ಎಣ್ಣೆಯಂಶದಿಂದ ಕೂಡಿರುತ್ತದೆ. ಪ್ರತೀದಿನ ಕೂದಲು ತೊಳೆದರೆ ಮಾತ್ರ ಈ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಇದು ತಪ್ಪು. ಯಾಕೆಂದರೆ ಪ್ರತೀ ದಿನ ಕೂದಲು ತೊಳೆಯುವುದರಿಂದ ಅದರ ನೈಸರ್ಗಿಕ ತೈಲವು ನಾಶವಾಗಬಹುದು.

ತಲೆಬುರುಡೆಗೆ ಕಂಡೀಷನರ್ ಹಾಕುವುದು

ತಲೆಬುರುಡೆಗೆ ಕಂಡೀಷನರ್ ಹಾಕುವುದು

ಕೂದಲಿನ ಕೊನೆಗೆ ಮಾತ್ರ ಕಂಡೀಷನರ್ ಹಾಕಬೇಕು. ತಲೆಬುರುಡೆಗೆ ಕಂಡೀಷನರ್ ಹಾಕುವುದರಿಂದ ಕೂದಲು ಮತ್ತಷ್ಟು ಜಿಡ್ಡನ್ನು ಉಂಟು ಮಾಡಬಹುದು.

ಒದ್ದೆ ಕೂದಲು ಬಾಚುವುದು

ಒದ್ದೆ ಕೂದಲು ಬಾಚುವುದು

ಕೂದಲು ಒದ್ದೆಯಾಗಿದ್ದಾಗ ಅದು ತುಂಬಾ ಸೂಕ್ಷ್ಮವಾಗಿರುತ್ತದೆ. ಒದ್ದೆ ಕೂದಲನ್ನು ಬಾಚುವುದರಿಂದ ಮತ್ತಷ್ಟು ಕೂದಲು ಉದುರಬಹುದು ಮತ್ತು ಕೂದಲಿನ ಬುಡಕ್ಕೆ ಹಾನಿಯಾಗಬಹುದು.

ಕೂದಲು ಬಿಸಿಯ ರಕ್ಷಣೆ ಬಳಸದಿರುವುದು

ಕೂದಲು ಬಿಸಿಯ ರಕ್ಷಣೆ ಬಳಸದಿರುವುದು

ಬಿಸಿಯಾಗಿಸುವ ಯಂತ್ರ ಮತ್ತು ಕೂದಲಿನ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಬೇಕು. ಕೂದಲು ಸುಡುವುದನ್ನು ತಪ್ಪಿಸಲು ಸೆರಮ್ ಅಥವಾ ಜೆಲ್ ಬಳಸಿ. ಯಾಕೆಂದರೆ ಕೂದಲು ಸುಟ್ಟು ಹೋಗುವುದು ಯಾರಿಗೂ ಇಷ್ಟವಿಲ್ಲ.

ಒದ್ದೆ ಕೂದಲು ಕಟ್ಟಿಕೊಳ್ಳುವುದು

ಒದ್ದೆ ಕೂದಲು ಕಟ್ಟಿಕೊಳ್ಳುವುದು

ತಲೆಹೊಟ್ಟು ಮತ್ತು ಇತರ ಕೆಲವೊಂದು ಸಮಸ್ಯೆಗಳಿಗೆ ಒದ್ದೆ ಕೂದಲನ್ನು ಕಟ್ಟಿಕೊಳ್ಳುವುದು ಮುಖ್ಯ ಕಾರಣವಾಗಿದೆ. ಕೂದಲನ್ನು ಸರಿಯಾಗಿ ಒಣಗಿಸದೆ ಕಟ್ಟಿಕೊಂಡರೆ ಅದರಿಂದ ಸೋಂಕು ಆಗುವುದು ಖಚಿತ.

ಒದ್ದೆ ಕೂದಲಿಗೆ ಬಿಸಿಯಂತ್ರ ಬಳಸುವುದು

ಒದ್ದೆ ಕೂದಲಿಗೆ ಬಿಸಿಯಂತ್ರ ಬಳಸುವುದು

ಕೂದಲು ಒದ್ದೆಯಾಗಿರುವಾಗ ಯಾವತ್ತೂ ಅದನ್ನು ನೇರವಾಗಿಸುವ ಯಂತ್ರ ಬಳಸಬೇಡಿ. ಮೊದಲು ಕೂದಲನ್ನು ಒಣಗಿಸಿಕೊಂಡು ಬಳಿಕ ನೇರವಾಗಿಸಿ.

 
English summary

Common Habits That Ruin Your Hair

We all unknowingly or knowingly do some things that actually make our hair go really bad. These are all so common that we don't even realize when we are making these mistakes. But these common habits could actually be ruining your hair. But ladies, it is time you stop making these mistakes. We have compiled a list of all the things that you could be doing wrong when it comes to your hair.
Story first published: Wednesday, February 1, 2017, 23:47 [IST]
Please Wait while comments are loading...
Subscribe Newsletter