Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಕೂದಲಿನ ಸೌಂದರ್ಯಕ್ಕೆ ಸರಳ ಟಿಪ್ಸ್-ತ್ವರಿತ ಫಲಿತಾಂಶ
ನಾರಿಗೆ ಉದ್ದನೆಯ ಕೂದಲು ಇದ್ದರೆ ಚಂದ. ರೇಷ್ಮೆಯಂತಹ ಹೊಳೆಯುವ ಕೂದಲು ಇದ್ದರೆ ಆಗ ಸೌಂದರ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ... ಅದಕ್ಕೆಂದೇ ಕೆಲವೊಂದು ಸಿಂಪಲ್ ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ...
ನೀಳವಾದ, ಕಪ್ಪು ಮತ್ತು ಸೊಂಪಾದ ಕೂದಲಿರಬೇಕು ಎಂಬುದು ಪ್ರತಿ ಮಹಿಳೆಯ ಕನಸಾಗಿರುತ್ತದೆ. ಆದರೆ ಪ್ರತಿದಿನ ಗಾಳಿಯಲ್ಲಿರುವ ಧೂಳು, ಪ್ರದೂಷಣೆ, ಪ್ರಖರ ಬಿಸಿಲಿನ ಝಳ, ಪರಾಗ ಮೊದಲಾದವು ಕೂದಲಿನ ಸಹಜ ಸೌಂದರ್ಯವನ್ನು ಕಳೆಯುತ್ತದೆ. ಸುಂದರ ಕೂದಲನ್ನು ತೋರಿಸಿ ಭರ್ಜರಿಯಾಗಿ ಮಾರಾಟವಾಗುವ ಪ್ರಸಾಧನಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ. ಕೂದಲಿನ ಸರ್ವ ಸಮಸ್ಯೆಗೂ ಅಂಗೈಯಲ್ಲಿಯೇ ಇದೆ ಮದ್ದು!
ಇವುಗಳ ಬಳಕೆಯಿಂದ ತಾತ್ಕಾಲಿಕವಾಗಿ ಪರಿಣಾಮ ಉತ್ತಮ ಎಂದು ಅನ್ನಿಸಿದರೂ ದೀರ್ಘಕಾಲದ ಬಳಕೆಯಿಂದ ಕೂದಲಿಗೆ ಹಾನಿಯಾಗುವುದೇ ಹಚ್ಚು. ಹಾಗಾದರೆ ಕೂದಲಿನ ನೈಸರ್ಗಿಕ ಆರೈಕೆ ಹೇಗೆ? ಇದಕ್ಕೆ ಉತ್ತರವನ್ನು ನಿಸರ್ಗವೇ ನೀಡುತ್ತದೆ. ಬನ್ನಿ, ನಿಸರ್ಗದ ಸುಲಭ ಸಾಮಾಗ್ರಿಗಳನ್ನು ಬಳಸಿ ಆರೈಕೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡೋಣ....

ತುರಿಕೆಭರಿತ ತಲೆಗಾಗಿ: ಲಿಂಬೆರಸ ಮತ್ತು ಆಲಿವ್ ಎಣ್ಣೆ
ತಲೆಯಲ್ಲಿ ತುರಿಕೆಗೆ ಹೇನುಗಳು ಮಾತ್ರ ಕಾರಣವಲ್ಲ, ಒಣಗಿದ ಹೊರಚರ್ಮವೂ ಒಂದು ಕಾರಣ. ಇದಕ್ಕೆ ಅನಾರೋಗ್ಯಕರ ಆಹಾರ ಕ್ರಮ, ಒತ್ತಡ, ಪ್ರದೂಷಣೆ ಮೊದಲಾದವು ಕಾರಣವಾಗಿವೆ. ಇದಕ್ಕಾಗಿ ಎರಡು ದೊಡ್ಡ ಚಮಚ ಈಗತಾನೇ ಹಿಂಡಿದ ಲಿಂಬೆರಸ, ಸಮಪ್ರಮಾಣದ ಆಲಿವೆ ಎಣ್ಣೆ ಮತ್ತು ಕೊಂಚ ನೀರು ಬೆರೆಸಿ ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ತಗಲುವಂತೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಇರಲು ಬಿಡಿ. ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ತುರಿಕೆಭರಿತ ತಲೆಗಾಗಿ: ಲಿಂಬೆರಸ ಮತ್ತು ಆಲಿವ್ ಎಣ್ಣೆ
ಬಳಿಕ ನಿತ್ಯದ ಸೌಮ್ಯ ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ. ಲಿಂಬೆರಸ ತಲೆಯ ಒಣಗಿದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ತಲೆಯ ತುರಿಕೆಯನ್ನು ನಿವಾರಿಸುತ್ತದೆ. ಆಲಿವ್ ಎಣ್ಣೆ ಹೆಚ್ಚಿನ ಆರ್ದ್ರತೆ ನೀಡುವ ಮೂಲಕ ಚರ್ಮ ಮತ್ತೆ ಹಿಂದಿನ ಆರೋಗ್ಯವನ್ನು ಪಡೆಯುತ್ತದೆ.

ಕೂದಲಿಗೆ ಅತ್ಯುತ್ತಮ ಕಂಡೀಶನಿಂಗ್‌ಗಾಗಿ ಮೊಟ್ಟೆಯ ಬಳಕೆ
ಮೊಟ್ಟೆ ಹೊಟ್ಟೆಗೆ ಮಾತ್ರವಲ್ಲ, ಕೂದಲಿಗೂ ಒಳ್ಳೆಯದು. ಇದರ ಬಿಳಿಭಾಗದಲ್ಲಿ ಉತ್ತಮ ಪ್ರಮಾಣದ ಪ್ರೋಟೀನು ಮತ್ತು ಕೊಬ್ಬುಗಳಿದ್ದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೇ ಅನಗತ್ಯ ಎಣ್ಣೆಜಿಡ್ಡು ಮತ್ತು ಚರ್ಮದ ರಂಧ್ರಗಳಲ್ಲಿ ಸಿಲುಕಿದ್ದ ಕೊಳೆಯನ್ನು ನಿವಾರಿಸಲು ನೆರವಾಗುತ್ತದೆ. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ಕೂದಲಿಗೆ ಅತ್ಯುತ್ತಮ ಕಂಡೀಶನಿಂಗ್‌ಗಾಗಿ ಮೊಟ್ಟೆಯ ಬಳಕೆ
ಎಣ್ಣೆಯ ಚರ್ಮದವರು ಮೊಟ್ಟೆಯ ಬಿಳಿಭಾಗವನ್ನು ಕಂಡೀಶನರ್ ರೂಪದಲ್ಲಿ ಬಳಸಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು. ಒಣ ಚರ್ಮದವರು ಮೊಟ್ಟೆಯ ಹಳದಿ ಭಾಗವನ್ನು ಬಳಸಬೇಕು. ಆದರೆ ತೊಳೆದುಕೊಳ್ಳಲು ಉಗುರುಬೆಚ್ಚನೆಯ ನೀರನ್ನು ಮಾತ್ರ ಬಳಸಬೇಕು.

ಕೂದಲು ಉದುರುವುದನ್ನು ನಿಲ್ಲಿಸಲು ಲೋಳೆಸರದ ಬಳಕೆ
ಒಂದು ಮಧ್ಯಮ ಗಾತ್ರದ ಲೋಳೆಸರದ ಕೋಡನ್ನು ಅರೆದು ಇದಕ್ಕೆ ಅರ್ಧ ಚಿಕ್ಕ ಚಮಚ ಲಿಂಬೆರಸ ಮತ್ತು ಎರಡು ದೊಡ್ಡಚಮಚ ಕೊಬ್ಬರಿ ಎಣ್ಣೆ ಬೆರೆಸಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ನಯವಾದ ಮಸಾಜ್ ಮೂಲಕ ಎಲ್ಲೆಡೆ ಆವರಿಸುವಂತೆ ಮಾಡಿ.

ಕೂದಲು ಉದುರುವುದನ್ನು ನಿಲ್ಲಿಸಲು ಲೋಳೆಸರದ ಬಳಕೆ
ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ಸ್ನಾನ ಮಾಡಿ.ಪಪ್ಪಾಯಿ-ಲೋಳೆ ಸರ ಫೇಸ್ ಪ್ಯಾಕ್: ಕಡಿಮೆ ವೆಚ್ಚ, ಅಧಿಕ ಲಾಭ!

ತಲೆಹೊಟ್ಟು ನಿವಾರಿಸಲು ಸಕ್ಕರೆಯೇ ಸಾಕು
ಯುವತಿಯರ ಸಾಮಾನ್ಯ ತೊಂದರೆಯೆಂದರೆ ತಲೆಹೊಟ್ಟು. ಇದನ್ನು ಸಮರ್ಥವಾಗಿ ನಿವಾರಿಸಲು ಎರಡು ಭಾಗ ಕಂದು ಸಕ್ಕರೆ ಮತ್ತು ಒಂದು ಭಾಗ ನಿಮ್ಮ ನೆಚ್ಚಿನ ಕಂಡೀಶನರ್ ಬೆರೆಸಿ ಈ ಲೇಪನವನ್ನು ತಲೆಗೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ.

ತಲೆಹೊಟ್ಟು ನಿವಾರಿಸಲು ಸಕ್ಕರೆಯೇ ಸಾಕು
ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.ಬರೀ ಒಂದೇ ವಾರದಲ್ಲಿ 'ತಲೆಹೊಟ್ಟು ಸಮಸ್ಯೆ' ಮಂಗಮಾಯ!



Click it and Unblock the Notifications











