For Quick Alerts
ALLOW NOTIFICATIONS  
For Daily Alerts

ಒಣ ಕೂದಲಿನ ಸಮಸ್ಯೆಗೆ-ಸಾಸಿವೆ ಎಣ್ಣೆಯ ಮಸಾಜ್

By Arshad
|

ತಲೆಗೂದಲು ದೇಹದ ಮುಖ್ಯ ಅಂಗವಾಗಿದ್ದು ಸೌಂದರ್ಯವನ್ನು ಅಳೆಯುವ ಮಾಪಕವೂ ಆಗಿದೆ. ಈಗ ಮಳೆಗಾಲವಾಗಿದ್ದು ಗಾಳಿಯಲ್ಲಿ ಹೆಚ್ಚಾಗಿರುವ ತೇವಾಂಶದ ಕಾರಣ ನಮ್ಮಲ್ಲಿ ಹೆಚ್ಚಿನವರಿಗೆ ತಲೆಗೂದಲು ಒಣಗುತ್ತದೆ. ಅಂದರೆ ಮಳೆಗಾಲ ಕಳೆಯುವವರೆಗೂ ಕೂದಲು ಒಣಗಿ ಕಳಾಹೀನವಾಗುವುದನ್ನು ಸಹಿಸಿಕೊಳ್ಳಬೇಕು.

ಅದರಲ್ಲೂ ಕೆಲವರಿಗೆ ಒಣಗಿದ ಕೂದಲು ತೀರಾ ಸಿಕ್ಕುಸಿಕ್ಕಾಗಿ ಇದನ್ನು ಬಿಡಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಇತರ ಸಮದಂತೆಯೇ ಮಳೆಗಾಲದಲ್ಲಿಯೂ ನಯವಾದ, ಸಿಕ್ಕುಗಳಿಲ್ಲದ, ಆರೋಗ್ಯಕರ ಹಾಗೂ ಕಾಂತಿಯುಕ್ತ ಕೂದಲು ಬೇಕೆನ್ನುವವರಿಗೆ ಇಂದು ಕೆಲವು ಸಲಹೆಗಳನ್ನು ನೀಡಲಾಗಿದೆ.

ಒಣ ಕೂದಲಿನ ಸಮಸ್ಯೆಯೇ? ಈ 'ಹೇರ್ ಪ್ಯಾಕ್' ಪ್ರಯತ್ನಿಸಿ...

ಅಷ್ಟಕ್ಕೂ ತಲೆಗೂದಲು ಸಿಕ್ಕಾಗುವುದಾದರೂ ಹೇಗೆ? ಮಳೆಗಾಲದಲ್ಲಿ ಅಷ್ಟು ಮಳೆ ಸುರಿಯುತ್ತಿದ್ದರೂ ಗಾಳಿಯಲ್ಲಿ ಆರ್ದ್ರತೆ ಇರುವುದಿಲ್ಲ. ಅಂದರೆ ಬಿದ್ದ ನೀರು ಒಣಗಲು ಸಮಯವೇ ಇಲ್ಲದೇ ಹರಿದು ಹೋಗುವ ಕಾರಣ ಗಾಳಿ ಶುಷ್ಕವಾಗುತ್ತದೆ. ಆದರೆ ನಮ್ಮ ಕೂದಲು, ಚರ್ಮ ಉಗುರುಗಳಿಗೆ ಈ ಆರ್ದ್ರತೆ ತೀರಾ ಅಗತ್ಯವಾಗಿ ಬೇಕು. ವಿಶೇಷವಾಗಿ ಕೂದಲ ಹೊರಪದರ ಆರ್ದ್ರತೆ ಇಲ್ಲದೇ ಇದ್ದರೆ ಒಣಗಿ ಪರೆಯಂತೆ ಏಳುತ್ತದೆ. ಪರಿಣಾಮವಾಗಿ ಪರೆ ಎದ್ದ ಭಾಗದಲ್ಲಿ ಬಾಗುತ್ತದೆ.

ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!

ಹೀಗೇ ಪ್ರತಿ ಕೂದಲೂ ಭಿನ್ನ ಭಿನ್ನವಾಗಿ ಬಾಗುವುದರಿಂದ ಸಿಕ್ಕು ಸಿಕ್ಕಾಗುತ್ತವೆ. ಆದರೆ ಆರ್ದ್ರತೆಯ ಈ ಕೊರತೆಯನ್ನು ಸಾಸಿವೆ ಎಣ್ಣೆ ಸಮರ್ಥವಾಗಿ ಪೂರೈಸುತ್ತದೆ. ಬನ್ನಿ, ಈ ಎಣ್ಣೆಯನ್ನು ಬಳಸಿ ಒಣಗೂದಲಿಗೆ ಯಾವ ರೀತಿಯ ಆರೈಕೆ ನೋಡಬಹುದೆಂದು ನೋಡೋಣ. ತನ್ಮೂಲಕ ಮಳೆಗಾಲದಲ್ಲಿ ಎದುರಾಗುವ ಒಣಗೂದಲಿಗೆ ಬೈ ಬೈ ಹೇಳೋಣ....

ಮೆಂತೆ ಮೊಸರು ಹಾಗೂ ಸಾಸಿವೆ ಎಣ್ಣೆಯ ಲೇಪನ

ಮೆಂತೆ ಮೊಸರು ಹಾಗೂ ಸಾಸಿವೆ ಎಣ್ಣೆಯ ಲೇಪನ

ಅಗತ್ಯವಿರುವ ಸಾಮಾಗ್ರಿಗಳು:

*ಮೊದಲು ಒಂದು ಮುಷ್ಟಿಯಷ್ಟು ಮೆಂತೆಯನ್ನು ಕೊಂಚ ತಣ್ಣೀರಿನಲ್ಲಿ ಇಡಿಯ ರಾತ್ರಿ ಮುಳುಗಿಸಿಡಿ.

*ಒಂದು ಕಪ್ ಮೊಸರು

*ಎರಡು ದೊಡ್ಡಚಮಚ ಸಾಸಿವೆ ಎಣ್ಣೆ

*ಕೊಂಚ ಆಲಿವ್ ಎಣ್ಣೆ.

ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ವಿಧಾನ

ವಿಧಾನ

* ನೆನೆಸಿಟ್ಟ ಮೆಂತೆಯನ್ನು ನುಣ್ಣಗೆ ಅರೆಯಿರಿ

* ಒಂದು ಚಿಕ್ಕ ಪಾತ್ರೆಯಲ್ಲಿ ಮೊಸರು, ಆಲಿವ್ ಎಣ್ಣೆ, ಸಾಸಿವೆ ಎಣ್ಣೆಯನ್ನು ಸೇರಿಸಿ ಅರೆದ ಮೆಂತೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನೆನಪಿರಲಿ, ಈ ಪ್ರಮಾಣಗಳು ನಿಮ್ಮ ಕೂದಲ ಉದ್ದವನ್ನು ಅನುಸರಿಸಿರುವ ಕಾರಣ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಿಕೊಳ್ಳಿ.

* ಈ ಲೇಪವನ್ನು ತಲೆಗೂದಲ ಬುಡದಿಂದ ತುದಿಯವರೆಗೂ ಬರುವಂತೆ ಹಚ್ಚಿ

* ಸುಮಾರು ಒಂದು ಗಂಟೆಯಷ್ಟು ಕಾಲ ಒಣಗಿಸಿದ ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಮೂರು ಎಣ್ಣೆಗಳ ವಿಧಾನ...

ಮೂರು ಎಣ್ಣೆಗಳ ವಿಧಾನ...

ಅಗತ್ಯವಿರುವ ಸಾಮಾಗ್ರಿಗಳು:

ಸಮಪ್ರಮಾಣದಲ್ಲಿ ಹರಳೆಣ್ಣೆ, ಸಾಸಿವೆ ಎಣ್ಣೆ ಮತ್ತು ಆಲಿವ್ ಎಣ್ಣೆಗಳನ್ನು ಬೆರೆಸಿ. ಈ ಪ್ರಮಾಣ ನಿಮ್ಮ ಕೂದಲ ಉದ್ದಕ್ಕನುಗುಣವಾಗಿರಲಿ.

ಬ್ಯೂಟಿ ಟಿಪ್ಸ್: ಸೌಂದರ್ಯದ ವಿಷಯದಲ್ಲಿ 'ಸಾಸಿವೆ ಎಣ್ಣೆ' ಎತ್ತಿದ ಕೈ!

ವಿಧಾನ

ವಿಧಾನ

*ಈ ಮೂರೂ ಎಣ್ಣೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆಗೂದಲ ಬುಡದಿಂದ ತುದಿಯವರೆಗೆ ಹಚ್ಚಿ. ಬಳಿಕ ಟವೆಲ್ಲೊಂದನ್ನು ಉಗುರುಬೆಚ್ಚಗಾಗಿಸಿ ತಲೆಗೂದಲಿಗೆ ಸುತ್ತಿಕೊಳ್ಳಿ. ಇದು ಸಾಧ್ಯವಾಗದಿದ್ದರೆ ಷವರ್ ಕ್ಯಾಪ್ ಒಂದನ್ನು ಧರಿಸಿದರೂ ಸರಿ.

*ಸುಮಾರು ಒಂದು ಗಂಟೆ ಕಾಲ ಹಾಗೇ ಬಿಡಿ

*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಬಾಳೆಯಣ್ಣು ಮತ್ತು ಸಾಸಿವೆ ಎಣ್ಣೆಯ ಮಿಶ್ರಣ

ಬಾಳೆಯಣ್ಣು ಮತ್ತು ಸಾಸಿವೆ ಎಣ್ಣೆಯ ಮಿಶ್ರಣ

ಅಗತ್ಯವಿರುವ ಸಾಮಾಗ್ರಿಗಳು:

*ಒಂದು ಚೆನ್ನಾಗಿ ಕಳಿತ ಬಾಳೆಹಣ್ಣು

*ಕಾಲು ಕಪ್ ಮೊಸರು

*ಎರಡು ದೊಡ್ಡಚಮಚ ಸಾಸಿವೆ ಎಣ್ಣೆ

ವಿಧಾನ

ವಿಧಾನ

* ಮೊದಲು ಮುಳ್ಳುಚಮಚ ಬಳಸಿ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ

* ಇದನ್ನು ಮೊಸರಿನೊಂದಿಗೆ ಬೆರೆಸಿ ಬಳಿಕ ಸಾಸಿವೆ ಎಣ್ಣೆ ಹಾಕಿ ಗಂಟುಗಳಿಲ್ಲದಂತೆ ಕಲಸಿ

* ಈ ಲೇಪವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಾಗೂ ತಲೆಯ ಚರ್ಮ ಆವರಿಸುವಂತೆ ದಪ್ಪನಾಗಿ ಹಚ್ಚಿ.

* ತಲೆಗೆ ಷವರ್ ಕ್ಯಾಪ್ ಒಂದನ್ನು ಧರಿಸಿ ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ಒಣಗಲು ಬಿಡಿ.

* ಬಳಿಕ ಸೌಮ್ಯ ಶಾಂಪೂ ಹಾಗೂ ಕಂಡೀಶನರ್ ಬಳಸಿ ತೊಳೆದುಕೊಳ್ಳಿ

ಈ ವಿಧಾನಗಳನ್ನು ವಾರಕ್ಕೊಮ್ಮೆ ಬಳಸಿದರೂ ಸಾಕು.

ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

English summary

Mustard Oil Treatments For Dry Hair

Frizzy hair can be very difficult to style. The main cause of it is lack of moisture. The cuticle layers on the hair strand need moisture to make it smooth. Here, you will find a few natural DIY mustard oil treatments and masks for dry, lifeless hair. So, say good-bye to your bad hair days for good.
X
Desktop Bottom Promotion