ಬ್ಯೂಟಿ ಟಿಪ್ಸ್: ಸೌಂದರ್ಯದ ವಿಷಯದಲ್ಲಿ 'ಸಾಸಿವೆ ಎಣ್ಣೆ' ಎತ್ತಿದ ಕೈ!

By Manu
Subscribe to Boldsky

ಮಳೆಗಾಲ ಹೋಗಿ ಚಳಿಗಾಲ ಬಂದೇ ಬಿಟ್ಟಿದೆ. ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಹಾಗೂ ಕೂದಲಿನ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ಚರ್ಮವು ನೆರಿಗೆ ಬಿದ್ದು ವಯಸ್ಸಾದವರಂತೆ ಕಾಣುತ್ತದೆ ಹಾಗೂ ಕೂದಲಿನ ಸಮಸ್ಯೆಯೂ ಕಾಡತೊಡಗುತ್ತದೆ. ಬೇಸಿಗೆಯಲ್ಲಿ ನಮಗೆ ಹೆಚ್ಚು ಬಾಯಾರಿಕೆಯಾಗಿ ನೀರನ್ನು ಕುಡಿಯುತ್ತೇವೆ. ಇದರಿಂದಾಗಿ ದೇಹದಲ್ಲಿ ತೇವಾಂಶವಿರುತ್ತದೆ.  ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಇದರಿಂದ ಯಾವುದೇ ಕಾರ್ಯಕ್ರಮಗಳಿಗೆ ಹೋಗಲು ನಾವು ಹಿಂದೆ ಮುಂದೆ ನೋಡಬೇಕಾಗುತ್ತದೆ. ಆದರೆ ನಾವು ಆಹಾರದಲ್ಲಿ ಬಳಸುವಂತಹ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ದೇಹದ ಸೌಂದರ್ಯವನ್ನು ಯಾವ ರೀತಿ ಕಾಪಾಡಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....     

ಚರ್ಮಕ್ಕೆ ಕಾಂತಿ

ಚರ್ಮಕ್ಕೆ ಕಾಂತಿ

ಹಿಂದಿನ ಕಾಲದಿಂದಲೂ ಭಾರತೀಯರು ಹೆಚ್ಚಾಗಿ ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುತ್ತಾ ಇದ್ದರು. ಕಲೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸದೊಂದಿಗೆ ಸೇರಿಸಿಕೊಂಡು ದೇಹದ ಪ್ಯಾಕ್ ಆಗಿ ಬಳಸಿಕೊಳ್ಳಬಹುದು.

ಒಣ ಚರ್ಮಕ್ಕೆ

ಒಣ ಚರ್ಮಕ್ಕೆ

ಚಳಿಗಾಲದಲ್ಲಿ ಚರ್ಮವು ಒಣಗುವುದು ಹಾಗೂ ಗೆರೆಗಳು ಬಿದ್ದಂತೆ ಆಗುವುದು ಸಾಮಾನ್ಯವಾಗಿದೆ. ಇಂತಹ ಚರ್ಮದೊಂದಿಗೆ ಯಾವುದೇ ಪಾರ್ಟಿಗೆ ಹೋಗುವುದು ತುಂಬಾ ಕಷ್ಟ. ಕೆಲವು ಹನಿ ಸಾಸಿವೆ ಎಣ್ಣೆ ತೆಗೆದುಕೊಂಡು ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ನೀರಿನಿಂದ ಮುಖವನ್ನು ತೊಳೆಯುವ ಮೊದಲು ಕೆಲವು ನಿಮಿಷ ಕಾಲ ಹಾಗೆ ಇರಲಿ. ಚರ್ಮವು ಈಗ ತುಂಬಾ ಮೃಧುವಾಗುತ್ತದೆ ಮತ್ತು ಮೇಕಪ್ ಮಾಡಲು ಸಿದ್ಧವಾಗಿರುತ್ತದೆ.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಯಾವುದೇ ಪಾರ್ಟಿಗೆ ಹೋಗಬೇಕೆಂದರೆ ಒಳ್ಳೆಯ ಉಡುಪಿನೊಂದಿಗೆ ಕೂದಲು ಕೂಡ ರೇಷ್ಮೆಯಂತೆ ಹೊಳೆಯುತ್ತಿರಬೇಕು. ಸಾಸಿವೆ ಎಣ್ಣೆಯನ್ನು ತಲೆಗೆ ಹಚ್ಚುತ್ತಾ ಇದ್ದರೆ ಚಳಿಗಾಲದಲ್ಲಿ ತಲೆ ಬುರುಡೆಯಲ್ಲಿ ಆಗುವಂತಹ ತಲೆಹೊಟ್ಟು, ಕಿರಿಕಿರಿ ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆ ಹಚ್ಚಿಕೊಂಡ ಬಳಿಕ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ.

ಕೂದಲಿಗೆ ಹೊಳಪು ನೀಡುತ್ತದೆ

ಕೂದಲಿಗೆ ಹೊಳಪು ನೀಡುತ್ತದೆ

ಸಾಸಿವೆ ಎಣ್ಣೆಯು ಎಂತಹ ನಿರ್ಜೀವ ಕೂದಲಿಗು ಸಹ ಹೊಳಪನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೇಬಲ್ ಚಮಚ ತೆಂಗಿನಎಣ್ಣೆಗೆ ಮೂರು ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ. ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ಒಡೆದ ತುಟಿಗಳಿಗೆ

ಒಡೆದ ತುಟಿಗಳಿಗೆ

ಚಳಿಗಾಲದಲ್ಲಿ ದೇಹದ ಪ್ರತಿಯೊಂದು ಭಾಗವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ತುಟಿಗಳು ಒಡೆಯುವುದು ಚಳಿಗಾಲದಲ್ಲಿ ಸಾಮಾನ್ಯ. ಇದಕ್ಕಾಗಿ ಕೆಲವು ಹನಿ ಸಾಸಿವೆ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಇದು ಮಲಾಮ್ ಗಿಂತ ಒಳ್ಳೆಯದು. ರಾತ್ರಿ ಮಲಗುವಾಗ ತುಟಿಗೆ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆ ಏಳುವಾಗ ತುಟಿಗಳು ಮಗುವಿನಷ್ಟೇ ಮೃಧುವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    How to Use Mustard Oil for Skin and Hair

    In this article let us explore the various aspects of Mustard oil and justify its credibility for remaining Grandmas Magical solution for health and beauty.....
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more