For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆ ಅರಿತುಕೊಂಡು ಎಣ್ಣೆ ಮಸಾಜ್ ಮಾಡಿ!

ಕೂದಲು ಎಣ್ಣೆಯಿಲ್ಲದೆ ಸೊರಗಿದೆ ಎಂದಾದಲ್ಲಿ ನೀವು ಕೂದಲುದುರುವಿಕೆ. ಹೊಳಪು ಕಳೆದುಕೊಳ್ಳುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳನ್ನು ಅನುಭವಿಸಬಹುದು. ಹಾಗಿದ್ದರೆ ಕೂದಲಿಗೆ ಹೊಂದುವ ಎಣ್ಣೆಯನ್ನು ಆಯ್ಕೆಮಾಡಿಕೊಂಡು ಕೇಶ ಉಪಚಾರವನ್ನು ಮಾಡಿ...

By Deepu
|

ಹೆಣ್ಣುಮಕ್ಕಳು ಎಷ್ಟೇ ಸುಂದರವಾಗಿದ್ದರೂ ತಮ್ಮ ಕೂದಲು ಮತ್ತು ತ್ವಚೆಯ ಅಂದಚೆಂದಕ್ಕೆ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಾರೆ. ಮುಖದಲ್ಲಿ ಮೊಡವೆ ಉಂಟಾದಾಗ, ತ್ವಚೆಯ ಕಾಂತಿ ಕುಂದಿದಾಗ, ಕೂದಲು ತನ್ನ ಹೊಳಪನ್ನು ಕಂಡುಕೊಂಡಾಗ, ದಟ್ಟತೆ ಇಳಿಮುಖವಾದಲ್ಲಿ ಹೀಗೆ ಚಿಂತೆ ಎಂಬ ರೋಗವನ್ನು ಅಂಟಿಸಿಕೊಳ್ಳುತ್ತಾರೆ.

ಆದರೆ ಈ ರೀತಿ ಚಿಂತೆ ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುವುದಿಲ್ಲ ಬದಲಿಗೆ ಇದು ಇನ್ನಷ್ಟು ವಿಕೋಪಕ್ಕೆ ಹೋಗಬಹುದು. ಸೌಂದರ್ಯ ಸಮಸ್ಯೆಗಳು ಯಾವುದೇ ಇದ್ದರೂ ಅದಕ್ಕೆ ರಾಸಾಯನಿಕಗಳನ್ನು ಬಳಕೆ ಮಾಡದೇ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಜಾಣತನವಾಗಿದೆ. ನೆನಪಿರಲಿ ಇದೇ ಕಾರಣಕ್ಕೆ ಕೂದಲು ಹಾಳಾಗುತ್ತಿರುವುದು!

ನಮ್ಮ ಹಿರಿಯರೂ ಕೂಡ ಹೆಚ್ಚು ನೈಸರ್ಗಿಕ ವಿಧಾನಗಳಿಂದಲೇ ತಮ್ಮ ಸೌಂದರ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇಂದಿನ ಲೇಖನದಲ್ಲಿ ನಾವು ನಿಮ್ಮ ತಲೆಗೂದಲಿನ ಸಮಸ್ಯೆಗೆ ಅದ್ಭುತವಾದ ಪರಿಹಾರಗವನ್ನು ತಿಳಿಸುತ್ತಿದ್ದೇವೆ. ಕೂದಲಿನ ಆರೋಗ್ಯಕ್ಕೆ ಎಣ್ಣೆಯ ಮಸಾಜ್ ಅತಿಮುಖ್ಯವಾದುದು. ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಕೂದಲು ಎಣ್ಣೆಯಿಲ್ಲದೆ ಸೊರಗಿದೆ ಎಂದಾದಲ್ಲಿ ನೀವು ಕೂದಲುದುರುವಿಕೆ. ಹೊಳಪು ಕಳೆದುಕೊಳ್ಳುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳನ್ನು ಅನುಭವಿಸಬಹುದು. ಹಾಗಿದ್ದರೆ ನಿಮ್ಮ ಕೂದಲಿಗೆ ಹೊಂದುವ ಎಣ್ಣೆಯನ್ನು ಆಯ್ಕೆಮಾಡಿಕೊಂಡು ಕೇಶ ಉಪಚಾರವನ್ನು ಮಾಡಿ ಎಂದೇ ನಾವು ಇಲ್ಲಿ ತಿಳಿಸುತ್ತಿದ್ದೇವೆ. ಬನ್ನಿ ಯಾವ ಕೂದಲಿಗೆ ಯಾವ ಎಣ್ಣೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ...

ಒಣಕೂದಲು

ಒಣಕೂದಲು

ಒಣಕೂದಲು ಹೆಚ್ಚಾಗಿ ತುಂಡಾಗುವಿಕೆಯ ಸಮಸ್ಯೆಯಿಂದ ಬಳಲಬಹುದು. ಇದಕ್ಕಾಗಿ ನೀವು ಬಾದಾಮಿ, ಆಲೀವ್ ಮೊದಲಾದ ಎಣ್ಣೆಗಳ ಬಳಕೆಯನ್ನು ಮಾಡಬಹುದಾಗಿದೆ. ಈ ಎಣ್ಣೆಗಳು ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತವೆ. ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!

ಸಾಮಾನ್ಯ ಕೂದಲು

ಸಾಮಾನ್ಯ ಕೂದಲು

ಈ ರೀತಿಯ ಕೂದಲಿಗೆ ತೆಂಗಿನೆಣ್ಣೆ ಉತ್ತಮವಾದುದಾಗಿದೆ. ಇದು ಬಾದಾಮಿ ಇಲ್ಲವೇ ಆಯಿಲ್ ಎಣ್ಣೆಯಂತೆ ಹೆಚ್ಚು ದಪ್ಪನಾಗಿರುವುದಿಲ್ಲ. ತೆಳುವಾಗಿರುತ್ತದೆ. ಇದು ಕೂದಲಿಗೆ ಬೇಕಾದ ಪೋಷಣೆಯನ್ನು ಒದಗಿಸುತ್ತದೆ.ಹಳ್ಳಿಗಾಡಿನ 'ಕೊಬ್ಬರಿ ಎಣ್ಣೆ' ಸೌಂದರ್ಯದ ಕೀಲಿಕೈ

ಸೀಳುಗೂದಲು

ಸೀಳುಗೂದಲು

ಕೂದಲು ಹೆಚ್ಚು ಹಾನಿಗೊಳಗಾದಲ್ಲಿ ಸೀಳುಕೂದಲು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಹರಳೆಣ್ಣೆಯನ್ನು ಬಳಸಿ. ಇದು ಕೊಬ್ಬಿನ ಆಸಿಡ್‌ಗಳೊಂದಿಗೆ ಒಮೆಗಾ ಫ್ಯಾಟಿ ಆಸಿಡ್‌ಗಳನ್ನು ಒಳಗೊಂಡಿರುವುದರಿಂದ ಕೂದಲಿಗೆ ಉತ್ತಮ ಪೋಷಣೆಯನ್ನು ಮಾಡುತ್ತದೆ.

ತಲೆಹೊಟ್ಟು

ತಲೆಹೊಟ್ಟು

ನಿಮ್ಮ ತಲೆಬುರುಡೆಯಲ್ಲಿ ಸಮಸ್ಯೆಗಳನ್ನುಂಟು ಮಾಡುವ ತಲೆಹೊಟ್ಟು ನಿವಾರಣೆಗೆ ಸೂಕ್ತವಾಗಿರುವ ಎಣ್ಣೆಯನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ಬೇವಿನ ಎಣ್ಣೆ ಮತ್ತು ಟಿ ಟ್ರಿ ಆಯಿಲ್ ಇದಕ್ಕೆ ಸೂಕ್ತವಾದುದು. ಇವೆರಡನ್ನೂ ಬಳಸಿ ತಲೆಹೊಟ್ಟಿನ ಸಮಸ್ಯೆಗಳನ್ನು ನಿಮಗೆ ನಿವಾರಿಸಿಕೊಳ್ಳಬಹುದಾಗಿದೆ. ಹಳ್ಳಿ ಮದ್ದು ಇರಬೇಕಾದರೆ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?

ಜಿಡ್ಡಿನ ಕೂದಲು

ಜಿಡ್ಡಿನ ಕೂದಲು

ಇದಕ್ಕೆ ತೆಳುವಾಗಿರುವ ಎಣ್ಣೆ ಅಂದರೆ Argan ತೈಲ ಉತ್ತಮವಾದುದಾಗಿದೆ. ನಿಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡದೆಯೇ ಇದು ಹೊಳಪನ್ನು ಕೂದಲಿಗೆ ನೀಡುತ್ತದೆ.

English summary

How To Choose A Hair Oil According To Your Hair Type

Here's a guide to figuring out what kind of oils to use according to your hair type. A weekly warm oil treatment for your hair can have amazing benefits for your hair.
Story first published: Thursday, February 9, 2017, 20:20 [IST]
X
Desktop Bottom Promotion