ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

By: Arshad
Subscribe to Boldsky

ಕೂದಲಿನ ಆರೈಕೆಗೆ ಕೊಬ್ಬರಿ ಎಣ್ಣೆಯ ಸಹಿತ ಹಲವು ಎಣ್ಣೆಗಳು ಉತ್ತಮವಾದ ಆಯ್ಕೆಯಾಗಿವೆ. ಕೊಂಚ ದುಬಾರಿ ಎಂಬ ಒಂದು ಕಾರಣವನ್ನು ಬಿಟ್ಟರೆ ಬಾದಾಮಿ ಎಣ್ಣೆ ಕೂದಲ ಪೋಷಣೆಗೆ ಆಯ್ದುಕೊಳ್ಳಲು ಪ್ರಥಮ ಆಯ್ಕೆಯಾಗಬಹುದು. ಕೂದಲಿನ ಆರೈಕೆಗೆ, ಬಾದಾಮಿ ಎಣ್ಣೆ-ಹಾಲಿನ ಹೇರ್ ಮಾಸ್ಕ್

ಬಾದಾಮಿಯಲ್ಲಿ ಎರಡು ಪ್ರಬೇಧಗಳಿವೆ. ಸಿಹಿಬಾದಾಮಿ (ನಾಮಾನ್ಯವಾಗಿ ನಾವು ಸೇವಿಸುವ ಫಲ) ಮತ್ತು ತಿನ್ನಲಾಗದ ಕಹಿಬಾದಾಮಿ. ಸಿಹಿಫಲವನ್ನು ಹಾಗೇ ಅಥವಾ ಎಣ್ಣೆಯರೂಪದಲ್ಲಿ ಸೇವಿಸಬಹುದು. ಇದರ ಸೇವನೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿದೆ. ಕಹಿ ಫಲವನ್ನು ತಿನ್ನಲು ಸಾಧ್ಯವಾಗದೇ ಇದ್ದರೂ ಇದರ ಎಣ್ಣೆ (bitter almond oil) ಕೂದಲಿಗೆ ಉತ್ತಮವಾಗಿದೆ. ಎಣ್ಣೆ ಮಸಾಜ್‌ನಲ್ಲಿದೆ ಮಿರಿಮಿರಿ ಮಿನುಗುವ ಕೂದಲಿನ ಗುಟ್ಟು! 

ಬನ್ನಿ ಕೂದಲಿಗೆ ಸಿಹಿಬಾದಾಮಿ ಅಥವಾ ಕಹಿಬಾದಾಮಿಯ ಎಣ್ಣೆಗಳನ್ನು ಕೂದಲಿಗೆ ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ತಲೆಹೊಟ್ಟಿನ ನಿವಾರಣೆಗಾಗಿ

ತಲೆಹೊಟ್ಟಿನ ನಿವಾರಣೆಗಾಗಿ

ಬಾದಾಮಿ ಎಣ್ಣೆ ತಲೆಹೊಟ್ಟಿಗೆ ಕಾರಣವಾದ ಸಡಿಲವಾದ ಚರ್ಮದ ಸತ್ತ ಜೀವಕೋಶಗಳನ್ನು ಬಿಡಿಯಾಗಿಸಲು ನೆರವಾಗುತ್ತದೆ. ಹಾಗೂ ತಲೆಯ ಚರ್ಮಕ್ಕೆ ಸೂಕ್ತ ಪೋಷಣೆ ನೀಡಿ ಒಣಗಿದ ಪಕಳೆಗಳನ್ನು ನಿವಾರಿಸಿ ತಲೆಹೊಟ್ಟನ್ನು ನಿವಾರಿಸಲು ಸಾಧ್ಯವಾಗುತ್ತದೆ.

ತಲೆಗೂದಲ ಶೀಘ್ರ ಬೆಳವಣಿಗೆಗಾಗಿ

ತಲೆಗೂದಲ ಶೀಘ್ರ ಬೆಳವಣಿಗೆಗಾಗಿ

ಬಾದಾಮಿ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದ್ದು ಇದು ಕೂದಲ ಬುಡವನ್ನು ದೃಢಗೊಳಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಕೂದಲಿಗೆ ಬಳಸುವ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆಯನ್ನು ಬಳಸಲಾಗುತ್ತದೆ.

ಕೂದಲ ಹೊಳಪು ಹೆಚ್ಚಿಸಲು

ಕೂದಲ ಹೊಳಪು ಹೆಚ್ಚಿಸಲು

ಕೂದಲ ಹೊಳಪು ಹೆಚ್ಚಿಸಲು ಇದುವರೆಗೆ ಹಲವು ಚಿಕಿತ್ಸೆ ಅಥವಾ ಸೀರಂಗಳನ್ನು ನೀವು ಉಪಯೋಗಿಸಿದ್ದಿರಬಹುದು. ಆದರೆ ಇದಕ್ಕೂ ಉತ್ತಮ ಪೋಷಣೆಯನ್ನು ಬಾದಾಮಿ ಎಣ್ಣೆ ನೀಡುತ್ತದೆ. ಇದಕ್ಕಾಗಿ ಸ್ನಾನದ ಬಳಿಕ ಕೂದಲು ಒದ್ದೆ ಇದ್ದಂತೆಯೇ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಕೂದಲ ಬುಡದಿಂದ ತುದಿಯವರೆಗೂ ನಯವಾಗಿ ಹಚ್ಚಿ. ಇದರಿಂದ ಕೂದಲು ರೇಶ್ಮೆಯಂತೆ ಹೊಳೆಯುತ್ತದೆ ಹಾಗೂ ದೃಢವಾಗುತ್ತದೆ.

ಘಾಸಿಗೊಂಡ ಕೂದಲನ್ನು ಸರಿಪಡಿಸಲು

ಘಾಸಿಗೊಂಡ ಕೂದಲನ್ನು ಸರಿಪಡಿಸಲು

ವಾರಕ್ಕೆರಡು ಬಾರಿ ನಿಮ್ಮ ತಲೆಗೆ ಕೊಂಚ ಬಾದಾಮಿ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಕೂದಲ ತುದಿಯವರೆಗೂ ಆವರಿಸಿ. ಇದರಿಂದ ಘಾಸಿಗೊಂಡ ಕೂದಲು ಶೀಘ್ರವೇ ರಿಪೇರಿಗೊಳ್ಳುತ್ತದೆ. ವಿಶೇಷವಾಗಿ ಬಿಸಿಲಿಗೆ ಒಣಗಿದ್ದ ಕೂದಲಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಒರಟು ಕೂದಲನ್ನು ಸರಿಪಡಿಸಲು

ಒರಟು ಕೂದಲನ್ನು ಸರಿಪಡಿಸಲು

ಒಂದು ವೇಳೆ ನಿಮ್ಮ ಕೂದಲು ಒರಟಾಗಿದ್ದರೆ ನಿಮಗೆ ಬಾದಾಮಿ ಎಣ್ಣೆ ಉತ್ತಮ ಆರೈಕೆ ನೀಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ ಇದ್ದು ನಿಯಮಿತವಾಗಿ ಕೂದಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಒರಟುಕೂದಲು ಸೌಮ್ಯವಾಗುತ್ತದೆ.

 
English summary

You'd Want To Use Almond Oil For Hair

Almond oil is one of the most nourishing oils you would ever find to use on your hair. However, in this post, we've focused more on the benefits of almond oil for hair. So, keep reading to find out about all the benefits that almond oil has on your hair and how to use it.
Subscribe Newsletter