ಕೂದಲಿನ ಎಲ್ಲಾ ಸಮಸ್ಯೆಗೆ ಸ್ಟೆಪ್ ಬೈ ಸ್ಟೆಪ್ ಸಿಂಪಲ್ ಟಿಪ್ಸ್

By: suma
Subscribe to Boldsky

ಕೂದಲುದುರುವ ಸಮಸ್ಯೆ, ತಲೆಹೊಟ್ಟು ಯಾವ ಮಹಿಳೆಯರಿಗೆ ಇರಲ್ಲ ಹೇಳಿ. ಹುಡುಕಿದ್ರೆ ಮನೆಗೊಬ್ಬರಿಗಂತೆ ಪ್ರತಿಮನೆಯಲ್ಲೂ ಕೂದಲಿನ ಸಮಸ್ಯೆಯಿಂದ ಬಳಲುವ ಮಹಿಳೆ ಸಿಕ್ಕೇ ಸಿಗ್ತಾರೆ. ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ತಲೆಕೂದಲಿನ ಸಮಸ್ಯೆಗೆ ಪರಿಹಾರ ಹುಡುಕುವ ಗೋಜಿನಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಆಗಿರುವ ಮಹಿಳೆಯರು ಹಾಗೂ ಪುರುಷರು ಅನೇಕರು.  ಕೂದಲು ಉದುರುವ ಸಮಸ್ಯೆಗೆ ತ್ವರಿತ ಪರಿಹಾರ-ಪ್ರಯತ್ನಿಸಿ ನೋಡಿ

ಯಾಕಂದ್ರೆ ಬೊಕ್ಕತಲೆಯಾದ್ರೆ ಏನು ಮಾಡೋದು ಅನ್ನೋದು ಪುರುಷರ ಚಿಂತೆಯಾದ್ರೆ, ಛೇ ಕೆಟ್ಟ ಕೂದಲಿನಿಂದ ಹೇಗೆ ಅಲಂಕಾರ ಮಾಡೋಕೆ ಸಾಧ್ಯ! ಕೂದಲು ದಟ್ಟವಾಗಿ ಉದ್ದವಾಗಿ ಇದ್ದಿದ್ರೆ ಏನೆಲ್ಲ ಹೇರ್ ಸ್ಟೈಲ್ ಮಾಡಬಹುದಲ್ಲ ಅನ್ನೋದು ಮಹಿಳೆಯರ ಆಸೆ. ಆದ್ರೆ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರಂತೆ ಅನ್ನುವ ಹಾಗೆ ವರ್ತಿಸುವವರೇ ಅಧಿಕ ಮಂದಿ! 'ತಲೆಹೊಟ್ಟು' ನಿವಾರಿಸುವ ಪವರ್ ಇಂತಹ ಹಳ್ಳಿಗಾಡಿನ ಎಣ್ಣೆಯಲ್ಲಿದೆ!

ಮನೆಯ ಅಡುಗೆ ಮನೆಯಲ್ಲಿ ಪರಿಹಾರವಿದ್ರೂ ಕೂಡ ಊರೆಲ್ಲ ಅಲೆದಾಡಿ, ಡಾಕ್ಟರ್ ಬಳಿ ಸುತ್ತಾಡಿ, ಇಲ್ಲಸಲ್ಲದ ಔಷಧಿ ಮಾಡಿ, ಏನೇ ಮಾಡಿದ್ರೂ ಪರಿಹಾರ ಸಿಗ್ತಿಲ್ಲ ಅಂತ ಗೊಣಗಿಕೊಳ್ಳುವವರಿಗೇನು ಕಡಿಮೆ ಇಲ್ಲ ಬಿಡಿ. ಆದ್ರೆ ಸಿಂಪಲ್ ಆಗಿರುವ ಮತ್ತು ಕೂಡಲೇ ಪರಿಹಾರ ನೀಡುವ ಮನೆಮದ್ದು ನಿಮ್ಮ ಅಂಗೈಯಲ್ಲೇ ಇರುತ್ತೆ... ಬನ್ನಿ ತಲೆಕೂದಲಿನ ಸಂರಕ್ಷಣೆ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ ನೋಡಿ...

ಸಾಂಬರ್‌ಗೆಂದು ತಂದಿಟ್ಟ ಒಂದೆರಡು ಆಲೂಗಡ್ಡೆ!

ಸಾಂಬರ್‌ಗೆಂದು ತಂದಿಟ್ಟ ಒಂದೆರಡು ಆಲೂಗಡ್ಡೆ!

ಆಲೂಗಡ್ಡೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇತರ ತರಕಾರಿಗಳೊಂದಿಗೆ ಸೇರಿಸಿದಾಗ ಇದರಿಂದ ರುಚಿಕರವಾದ ಪದಾರ್ಥ ತಯಾರಿಯಾಗುವುದು ಮಾತ್ರವಲ್ಲದೆ ನಿಮ್ಮ ಕೂದಲಿಗೂ ಕಾಂತಿಯನ್ನು ಉಂಟು ಮಾಡುವ ಶಕ್ತಿಯನ್ನು ಹೊಂದಿದೆ

ಆಲೂಗಡ್ಡೆ ಹೇರ್ ಪ್ಯಾಕ್ ತಯಾರಿಸುವ ವಿಧಾನ

ಆಲೂಗಡ್ಡೆ ಹೇರ್ ಪ್ಯಾಕ್ ತಯಾರಿಸುವ ವಿಧಾನ

*ಮೊದಲು ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

*ಇನ್ನು ರುಬ್ಬಿದ ಆಲೂಗಡ್ಡೆಯನ್ನು ತೆಗೆದು ಒಂದು ತೆಳುವಾದ ಬಟ್ಟೆಯಲ್ಲಿ ಹಾಕಿಕೊಂಡು ಅದರ ನೀರು ಬರುವಂತೆ ಒತ್ತಿ.

*ಇನ್ನು ಮೊಟ್ಟೆಯ ಲೋಳೆಯನ್ನು ಬೆರೆಸಿಕೊಂಡು, ಪೇಸ್ಟ್ ರೀತಿ ಮಾಡಿಕೊಳ್ಳಿ, ಹಾಗೂ ನಿಮ್ಮ ತಲೆಬುರುಡೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

*ಇನ್ನು 30 ನಿಮಿಷ ಇದು ತಲೆ ಮೇಲೆ ಹಾಗೆ ಇರಲಿ. ಬಳಿಕ ನೀವು ಬಳಸುವ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ

ನೆನಸಿಟ್ಟ ಹೆಸರುಕಾಳು

ನೆನಸಿಟ್ಟ ಹೆಸರುಕಾಳು

ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ಒಂದು ರಾತ್ರಿ ನೆನಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್ ಬಳಸಿ ಬೇಯಿಸಿ. ಬೆಂದ ಮಿಶ್ರಣವನ್ನು ತಣ್ಣಗಾದ ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲು ಉದ್ದು ಇರುವವರು ಇನ್ನೂ ಹೆಚ್ಚು ಹೆಸರುಕಾಳನ್ನು ತೆಗೆದುಕೊಳ್ಳಬಹುದು. ತಯಾರಿಸಿಕೊಂಡ ಪೇಸ್ಟಿಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮತ್ತು ಒಂದು ಟೇಬಲ್ ಸ್ಪೂನ್ ಆಗುವಷ್ಟು ಲಿಂಬೆಯ ರಸವನ್ನು ಮಿಶ್ರಣ ಮಾಡಿ.. ನಂತ್ರ ಅರ್ಧ ಬಟ್ಟಲಿನಷ್ಟು ಮೊಸರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.

ನೆನಸಿಟ್ಟ ಹೆಸರುಕಾಳು

ನೆನಸಿಟ್ಟ ಹೆಸರುಕಾಳು

ಎರಡು ಗಂಟೆ ಕೂದಲಿನಲ್ಲಿ ಈ ಮಿಶ್ರಣವಿರಲಿ. ಆ ಕಡೆ ಈ ಕಡೆ ಓಡಾಡುವಾಗ ಮಿಶ್ರಣ ತೊಂದರೆ ನೀಡಬಾರದು ಅಂದ್ರೆ ಹೇರ್ ಕ್ಯಾಪ್ ತೊಟ್ಟುಕೊಳ್ಳಿ. ಎರಡುಗಂಟೆಯ ನಂತ್ರ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಒಂದು ವಾರಕ್ಕೆ ಒಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಳ್ಳಬಹುದು. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವುದನ್ನು ನೀವೇ ಗಮಿಸಿಕೊಳ್ಳಬಹುದು.

ತಲೆಹೊಟ್ಟು ಸಮಸ್ಯೆಗಳಿದ್ದರೆ

ತಲೆಹೊಟ್ಟು ಸಮಸ್ಯೆಗಳಿದ್ದರೆ

ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಸ್ವಲ್ಪ ಸಣ್ಣಗೆ ಪುಡಿಮಾಡಿ ಇಟ್ಟಿರುವ ಕರ್ಪೂರವನ್ನೂ ಮಿಕ್ಸ್ ಮಾಡಿ. ಇನ್ನು ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಿದರೆ ತಲೆಹೊಟ್ಟು ನಿವಾರಣೆಯಾಗುವುದು.

ಹಿತ್ತಲ ಗಿಡದ ದಾಸವಾಳ

ಹಿತ್ತಲ ಗಿಡದ ದಾಸವಾಳ

ಹೆಚ್ಚಿನವರು ಎಳೆಯ ವಯಸ್ಸಿನಲ್ಲಿಯೇ ನೆರೆಗೂದಲು ಸಮಸ್ಯೆಗಳಿಗೆ ಒಳಗಾಗುವುದು ಹಾರ್ಮೋನುಗಳಿಂದ ಆಗಿದೆ. ದಾಸವಾಳದೆಣ್ಣೆಯು ನಿಮ್ಮ ತಲೆಗೂದಲಿನ ಸಕಲ ಸಮಸ್ಯೆಗಳನ್ನು ನಿವಾರಿಸಲಿದ್ದು ಕೂದಲಿನ ಬೆಳವಣಿಗೆಯನ್ನು ಸರಳವಾಗಿ ಮಾಡುತ್ತದೆ. ದಾಸವಾಳದ ಎಲೆಗಳನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಅರೆದುಕೊಳ್ಳಿ ಮತ್ತು ಇದನ್ನು ಮೊಸರಿನೊಂದಿಗೆ ಬೆರೆಸಿ. ಸ್ವಲ್ಪ ದಾಸವಾಳದ ಎಣ್ಣೆಯೊಂದಿಗೆ ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಕಾದು ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ. ನಿಯಮಿತವಾಗಿ ಈ ವಿಧಾನವನ್ನುಪಾಲಿಸುವುದರಿಂದ ಕೂದಲಿನ ಯಾವುದೇ ಬಗೆಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

 

English summary

A List of Natural incredients That Are Good for Your Hair

While everyone wants long, beautiful, shiny tresses, it's not necessary to rely on dangerous chemicals to attain them. A quick trip to a farmer's market or natural foods store can help you establish a chemical-free hair-care regimen.
Subscribe Newsletter