'ತಲೆಹೊಟ್ಟು' ನಿವಾರಿಸುವ ಪವರ್ ಇಂತಹ ಹಳ್ಳಿಗಾಡಿನ ಎಣ್ಣೆಯಲ್ಲಿದೆ!

By: manu
Subscribe to Boldsky

ತಲೆಹೊಟ್ಟು ಭಾರೀ ಕಿರಿಕಿರಿಯನ್ನು ಉಂಟು ಮಾಡುವಂತಹ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಿ ತಲೆಹೊಟ್ಟು ಮಹಿಳೆಯರು ಹಾಗೂ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಲೆಹೊಟ್ಟಿನ ನಿವಾರಣೆಗೆ ಹಲವಾರು ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸಿಕೊಂಡು ತಲೆಹೊಟ್ಟು ನಿವಾರಣೆ ಮಾಡಬಹುದು.  ಥತ್! ಈ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಹೇಗೆ?

ಆದರೆ ಇದರ ಪರಿಣಾಮ ಮಾತ್ರ ಸ್ವಲ್ಪ ಸಮಯ ಮಾತ್ರ. ಮತ್ತೆ ತಲೆಹೊಟ್ಟು ಕಾಣಿಸಿಕೊಂಡು ಸಮಸ್ಯೆಯನ್ನು ತಂದೊಡ್ಡಬಹುದು. ತಲೆಹೊಟ್ಟಿನಿಂದಾಗಿ ಮೊಡವೆಗಳು, ಒಣಚರ್ಮ ಮತ್ತು ಬೊಕ್ಕೆಗಳು ಕಾಣಿಸಿಕೊಳ್ಳಬಹುದು. ಇಂತಹ ತಲೆಹೊಟ್ಟಿನ ನಿವಾರಣೆ ಮಾಡಲು ಮನೆಯಲ್ಲೇ ತಯಾರಿಸಿರುವ ಕೆಲವೊಂದು ತೈಲಗಳನ್ನು ಬಳಸಿಕೊಳ್ಳಬೇಕು. ಇದು ತುಂಬಾ ಪರಿಣಾಮಕಾರಿ. ಇದನ್ನು ಹೇಗೆ ಬಳಸಿಕೊಳ್ಳಬೇಕೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ... 

ನಿಂಬೆರಸದೊಂದಿಗೆ ತೆಂಗಿನ ಎಣ್ಣೆ

ನಿಂಬೆರಸದೊಂದಿಗೆ ತೆಂಗಿನ ಎಣ್ಣೆ

ಇದನ್ನು ಹೆಚ್ಚಿನ ಮನೆಗಳಲ್ಲಿ ಬಳಸಿಕೊಳ್ಳುತ್ತಾರೆ. ತೆಂಗಿನ ಎಣ್ಣೆಯು ತಲೆಬುರುಡೆಗೆ ಮೊಶ್ವಿರೈಸರ್ ನೀಡುವುದು ಮತ್ತು ನಿಂಬೆರಸವು ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಣೆ ಮಾಡುವುದು. ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಕೆಲವು ಹನಿ ನಿಂಬೆರಸವನ್ನು ಹಾಕಿ ಮತ್ತು ಬೆರಳುಗಳನ್ನು ಬಳಸಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

ತಲೆಗೆ ಸ್ನಾನ ಮಾಡುವ ಎರಡು ಗಂಟೆಗೆ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ

ತಲೆಗೆ ಸ್ನಾನ ಮಾಡುವ ಎರಡು ಗಂಟೆಗೆ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ

ಈ ತೈಲವು ರಕ್ತಸಂಚಾರವನ್ನು ಉತ್ತಮಪಡಿಸಿ ಕೂದಲು ಬೆಳೆಯಲು ನೆರವಾಗುವುದು. ತಲೆಗೆ ಸ್ನಾನ ಮಾಡುವ ಎರಡು ಗಂಟೆಗೆ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ.

ದಾಸವಾಳದ ಎಣ್ಣೆ

ದಾಸವಾಳದ ಎಣ್ಣೆ

ತಲೆಹೊಟ್ಟು ಹೆಚ್ಚಾಗಿದ್ದು ಸತತವಾಗಿ ತಲೆ ತುರಿಕೆಯಾಗುತ್ತಿದೆಯೇ? ಇದಕ್ಕೆ ದಾಸವಾಳದ ಎಣ್ಣೆ ಉತ್ತಮ ಪರಿಹಾರವಾಗಿದೆ. ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ತಲೆಗೆ ಹಚ್ಚುತ್ತ ಬರುವ ಮೂಲಕ ಶೀಘ್ರವೇ ತಲೆಹೊಟ್ಟು ಇಲ್ಲವಾಗಿ ತುರಿಕೆಯೂ ಇಲ್ಲವಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಣ್ಣೆ ಸಿಗದೇ ಇದ್ದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ದಾಸವಾಳದ ಎಣ್ಣೆ

ದಾಸವಾಳದ ಎಣ್ಣೆ

ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ಎಳ್ಳೆಣ್ಣೆ

ಎಳ್ಳೆಣ್ಣೆ

ತಲೆಹೊಟ್ಟು, ಕೂದಲು ಉದುರುವುದ, ತಲೆಬುರುಡೆ ಒಣಗುವ ಸಮಸ್ಯೆಗಳಿಗೆ ಇದು ಒಳ್ಳೆಯ ಪರಿಹಾರವಾಗಿದೆ. ಎಳ್ಳೆಣ್ಣೆಯನ್ನು ಬಿಸಿ ಮಾಡಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಅಗತ್ಯವಿದ್ದರೆ ಇದಕ್ಕೆ ನಿಂಬೆರಸ ಹಾಕಿಕೊಳ್ಳಿ. ಕೂದಲನ್ನು ತೊಳೆಯುವ ಕೆಲವು ಗಂಟೆಗಳ ಮೊದಲು ಈ ಎಣ್ಣೆ ಹಚ್ಚಿಕೊಳ್ಳಿ.

ಮೊಸರು, ಬಾದಾಮಿ ಎಣ್ಣೆ ಮತ್ತು ನಿಂಬೆರಸ

ಮೊಸರು, ಬಾದಾಮಿ ಎಣ್ಣೆ ಮತ್ತು ನಿಂಬೆರಸ

ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಮೊಸರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಕೂದಲನ್ನು ಕಾಂತಿಯುತ ಹಾಗೂ ರೇಷ್ಮೆಯಂತೆ ಹೊಳೆಯುವಂತೆ ಮಾಡುವುದು. ಬಾದಾಮಿ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ತಲೆಬುರುಡೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ಮೊಸರು, ಬಾದಾಮಿ ಎಣ್ಣೆ ಮತ್ತು ನಿಂಬೆರಸ

ಮೊಸರು, ಬಾದಾಮಿ ಎಣ್ಣೆ ಮತ್ತು ನಿಂಬೆರಸ

ನಿಂಬೆರಸವು ತಲೆಹೊಟ್ಟಿಗೆ ಕಾರಣವಾಗುವ ಸತ್ತ ಚರ್ಮದ ಕೋಶ ಮತ್ತು ಒಣ ಚರ್ಮವನ್ನು ನಿವಾರಣೆ ಮಾಡುವುದು. ಮೂರನ್ನು ಮಿಶ್ರಣ ಮಾಡಿಕೊಂಡು ಸ್ನಾನಕ್ಕೆ ಹೋಗುವ ಒಂದು ಗಂಟೆ ಮೊದಲು ಇದನ್ನು ಬಳಸಿಕೊಳ್ಳಿ.

English summary

Homemade Hair Oils To Treat Dandruff

Dandruff is one of the common hair problems of winter. In this season, both men and women complain of dandruff. There are many ways to treat dandruff however, nothing lasts for a long time. Dandruff can also lead to many skin problems like acne, dry skin and pimple breakouts. Once you treat dandruff, it can come back again.
Subscribe Newsletter