ಕೂದಲು ಉದುರುವ ಸಮಸ್ಯೆಗೆ ತ್ವರಿತ ಪರಿಹಾರ-ಪ್ರಯತ್ನಿಸಿ ನೋಡಿ

By: Deepak
Subscribe to Boldsky

ಕೂದಲು ಉದುರುವಿಕೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ನಿಮಗೂ ಸಹ ಈ ಸಮಸ್ಯೆ ಇದೆಯೇ? ಹಾಗಾದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಬಯಸುತ್ತೀರಾ? ಬನ್ನಿ ಅದಕ್ಕಾಗಿಯೇ ನಾವು ಈ ಲೇಖನವನ್ನು ನಿಮಗಾಗಿ ತಂದಿದ್ದೇವೆ. ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ

ಮೊದಲು ಕೂದಲು ಉದುರುವಿಕೆಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ. ತಜ್ಞರ ಪ್ರಕಾರ ಪ್ರತಿ ದಿನ ನಮ್ಮ ತಲೆಯಿಂದ 50-100 ಕೂದಲು ದಿನ ಉದುರುತ್ತವೆ. ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ನಾವು ಮನೆಯಲ್ಲಿಯೇ ಕೆಲವೊಂದು ಮದ್ದುಗಳನ್ನು ಪ್ರಯೋಗಿಸಬಹುದು. ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ......  

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನಎಣ್ಣೆಯು ಮನೆ ಮದ್ದುಗಳಲ್ಲಿ ಅಗ್ರ ಸ್ಥಾನ ಪಡೆದ ಪದಾರ್ಥವಾಗಿದೆ. ಇದು ನಿಮ್ಮ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕರಿಸುವುದರ ಜೊತೆಗೆ ಅದನ್ನು ಕಂಡೀಶನ್ ಅನ್ನು ಸಹ ಮಾಡುತ್ತದೆ. ಇದರಲ್ಲಿ ಅವಶ್ಯಕವಾದ ಕೊಬ್ಬುಗಳು, ಖನಿಜಗಳು ಮತ್ತು ಪ್ರೋಟಿನ್‌ಗಳು ಜೊತೆಗೆ ಇದರಲ್ಲಿರುವ ಪೊಟಾಶಿಯಂ ಮತ್ತು ಕಬ್ಬಿಣಾಂಶವು ಸಹ ಕೂದಲು ಒಡೆಯುವಿಕೆಯನ್ನು ತಡೆಯುತ್ತವೆ. ಕೂದಲು ಉದುರುವಿಕೆಯನ್ನು ತಡೆಯಲು ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲನ್ನು ಬಳಸಿ.

ಬಳಸುವ ವಿಧಾನಗಳು

ಬಳಸುವ ವಿಧಾನಗಳು

*ಸ್ವಲ್ಪ ಹೊತ್ತು ತೆಂಗಿನ ಎಣ್ಣೆಯನ್ನು ಕಾಯಿಸಿ ಮತ್ತು ಅದನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಲೇಪಿಸಿ ಮಸಾಜ್ ಮಾಡಿ.

*ಒಂದು ಗಂಟೆ ಬಿಟ್ಟು ತೊಳೆಯಿರಿ.

*ಅಥವಾ ಒಂದು ತೆಂಗಿನಕಾಯಿಯನ್ನು ತುರಿದುಕೊಳ್ಳಿ ಮತ್ತು ಅದರಿಂದ ಹಾಲನ್ನು ತೆಗೆದು, ಒಂದು ಲೀಟರ್ ನೀರಿನಲ್ಲಿ ಬೆರೆಸಿಕೊಳ್ಳಿ.

*ತೆಂಗಿನ ಎಣ್ಣೆಯನ್ನು ಕೂದಲು ತೆಳ್ಳಗಾದ ಭಾಗದಲ್ಲಿ ಅಥವಾ ಬೊಕ್ಕ ತಲೆ ಕಾಣಿಸಿಕೊಂಡ ಭಾಗದಲ್ಲಿ ಲೇಪಿಸಿ.

*ರಾತ್ರಿಯಿಡೀ ಇದನ್ನು ನೆನೆಯಲು ಬಿಡಿ ಮತ್ತು ಬೆಳಗ್ಗೆ ಎದ್ದು ಸ್ನಾನ ಮಾಡಿ.

ಈರುಳ್ಳಿ ರಸ

ಈರುಳ್ಳಿ ರಸ

ಬಳಸುವ ವಿಧಾನಗಳು:

*ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ ಮತ್ತು ಅದರಿಂದ ರಸವನ್ನು ಪಡೆದುಕೊಳ್ಳಿ.

*ಈ ರಸವನ್ನು ನೆತ್ತಿಗೆ ಲೇಪಿಸಿ, 15 ನಿಮಿಷ ಬಿಡಿ.

*ಆನಂತರ ಇದನ್ನು ಮೈಲ್ಡ್ ಶಾಂಪೂವಿನಿಂದ ತೊಳೆದು, ಒಣಗಲು ಬಿಡಿ.

*ಈ ಪರಿಹಾರವನ್ನು ವಾರಕ್ಕೆ ಎರಡು ದಿನ ಮಾಡಿ, ಉತ್ತಮ ಫಲಿತಾಂಶವನ್ನು ಕಾಣಿ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ಮೆಹಂದಿ

ಮೆಹಂದಿ

ಇದನ್ನು ಕೂದಲಿಗೆ ಬಣ್ಣ ನೀಡಲು ಅಥವಾ ಕಂಡೀಶನರ್ ಆಗಿ ಬಳಸಲಾಗುತ್ತದೆ. ಆದರೆ ಮೆಹಂದಿಯಲ್ಲಿ ಇವೆರಡರ ಜೊತೆಗೆ ಕೂದಲನ್ನು ಬಲಗೊಳಿಸುವ ಅಂಶ ಸಹ ಇರುತ್ತದೆ.

ಬಳಸುವ ವಿಧಾನಗಳು

ಬಳಸುವ ವಿಧಾನಗಳು

*250 ಮಿ.ಲೀ ಸಾಸಿವೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ 60 ಗ್ರಾಂ ತೊಳೆದು ಒಣಗಿಸಿದ ಮೆಹಂದಿ ಎಲೆಗಳನ್ನು ಹಾಕಿಕೊಳ್ಳಿ.

*ಈಗ ಈ ಪಾತ್ರೆಯನ್ನು ಬೇಯಿಸಿ, ಎಲೆಗಳು ಬೆಂದು ಎಣ್ಣೆಯನ್ನು ಬಿಡುತ್ತವೆ.

*ಈ ಎಣ್ಣೆಯಿಂದ ನಿಮ್ಮ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಹಾಗು ಉಳಿದ ಎಣ್ಣೆಯನ್ನು ಬಾಟಲಿಯಲ್ಲಿ ಹಾಕಿ ಇಡಿ.

*ಮೆಹಂದಿ ಪೌಡರ್ ಅನ್ನು ಮೊಸರಿನ ಜೊತೆಗೆ ಸೇರಿಸಿ ಒಂದು ಹೇರ್ ಪ್ಯಾಕ್ ಸಹ ತಯಾರಿಸಿಕೊಳ್ಳಬಹುದು.ಇದನ್ನು ನೆತ್ತಿಗೆ ಹಾಗು ಕೂದಲಿಗೆ ಲೇಪಿಸಿ ಒಂದು ಗಂಟೆ ಕಾಲ ಬಿಡಿ.

*ಒಂದು ವೇಳೆ ನಿಮಗೆ ಸುಂದರ ಕೂದಲು ಬೇಕಾದಲ್ಲಿ ಈ ಮೆಹಂದಿ ಪ್ಯಾಕ್ ಅನ್ನು ತಪ್ಪದೆ ಪ್ರಯೋಗಿಸಿ.

ದಾಸವಾಳ

ದಾಸವಾಳ

ದಾಸವಾಳ ಪುಷ್ಪವು ಕೂದಲಿಗೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಇದು ಅವಧಿಪೂರ್ವವಾಗಿ ಕೂದಲು ನೆರೆಯುವುದನ್ನು ತಡೆಯುತ್ತದೆ. ಜೊತೆಗೆ ತಲೆ ಹೊಟ್ಟು ಮತ್ತು ಕೂದಲು ಉದುರುವುದನ್ನು ಸಹ ತಡೆಯುತ್ತದೆ.ಕೂದಲಿನ ಅಂದ-ಚಂದಕ್ಕೆ ಮನೆಯಂಗಳದ 'ದಾಸವಾಳ ಹೂವು'

ಬಳಸುವ ವಿಧಾನಗಳು

ಬಳಸುವ ವಿಧಾನಗಳು

*ದಾಸವಾಳದ ಹೂಗಳನ್ನು ಜಜ್ಜಿ ಎಳ್ಳು ಅಥವಾ ತೆಂಗಿನ ಎಣ್ಣೆಯ ಜೊತೆಗೆ ಬೆರೆಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ.

*ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ಮತ್ತು ಕೂದಲಿಗೆ ಲೇಪಿಸಿ ಒಂದು ಗಂಟೆಗಳ ಕಾಲ ಬಿಡಿ.

*ನಂತರ ಒಂದು ಮೈಲ್ಡ್ ಶಾಂಪೂವಿನ ಸಹಾಯದಿಂದ ತಣ್ಣೀರಿನಲ್ಲಿ ಇದನ್ನು ತೊಳೆಯಿರಿ.

ಮೊಟ್ಟೆ

ಮೊಟ್ಟೆ

ಮೊಟ್ಟೆಯು ಕೂದಲು ಉದುರುವಿಕೆಯನ್ನು ತಡೆಯಲು ಬೇಕಾದ ಅಂಶಗಳನ್ನು ಒಳಗೊಂಡಿರುತ್ತದೆ. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ಬಳಸುವ ವಿಧಾನಗಳು

ಬಳಸುವ ವಿಧಾನಗಳು

*ಮೊಟ್ಟೆಯ ಬಿಳಿಭಾಗವೊಂದನ್ನು ತೆಗೆದುಕೊಂಡು, ಅದಕ್ಕೆ ಒಂದು ಚಮಚ ಆಲೀವ್ ಎಣ್ಣೆಯನ್ನು ಬೆರೆಸಿಕೊಳ್ಳಿ.

*ಇವೆರಡನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಿ ಮತ್ತು ಇದನ್ನು ನೆತ್ತಿ ಮತ್ತು ಕೂದಲಿಗೆ ಲೇಪಿಸಿ.

*ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತಣ್ಣೀರಿನಿಂದ ಮೈಲ್ಡ್ ಶಾಂಪೂ ಹಾಕಿ ತೊಳೆಯಿರಿ. ಈ ಮೇಲಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

 
English summary

Hair fall treatment at home-remedies that work!

Hair fall problem? Looking for a treatment that works without the side-effects of chemicals or medications? You should try these home remedies
Subscribe Newsletter