For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲು: ನೀವು ತಿಳಿಯಲೇಬೇಕಾದ ಸತ್ಯ ಸಂಗತಿಗಳು...

By Hemanth
|

ಕೂದಲು ಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವೆನ್ನುವಂತಾಗಿದೆ. ಹಿಂದೆ ವಯಸ್ಸಾದವರ ಕೂದಲು ಮಾತ್ರ ಬಿಳಿಯಾಗುತ್ತಾ ಇತ್ತು. ಆದರೆ ಈಗ ಕೂದಲು ಬಿಳಿಯಾಗಲು ವಯಸ್ಸಾಗಬೇಕೆಂದಿಲ್ಲ. ಕಾಲೇಜಿಗೆ ಹೋಗುವ ಹುಡುಗರ ಕೂದಲು ಕೂಡ ಬಿಳಿಯಾಗುತ್ತದೆ. ಕಲುಷಿತ ವಾತಾವರಣ, ಸ್ನಾನ ಮಾಡಲು ಬಳಸುವ ನೀರು ಹಾಗೂ ಇತರ ಕೆಲವೊಂದು ವಿಷಯಗಳು ಇದಕ್ಕೆ ಕಾರಣವಾಗಿದೆ. ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದು!

ಕೂದಲು ಬಿಳಿಯಾಗುವಂತಹ ಸಂದರ್ಭದಲ್ಲಿ ಹೆಚ್ಚಿನವರು ಇದನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಅದನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಕೂದಲು ಬಿಳಿಯಾದರೆ ಅದು ದೊಡ್ಡ ಸಂಕಷ್ಟ. ಬಿಳಿ ಕೂದಲನ್ನು ಏನಾದರೂ ಮಾಡಿ ತೆಗೆದು ಹಾಕಬೇಕೆಂದುಕೊಳ್ಳವವರು ಒಂದು ನಿಮಿಷ ತಡೆದು ಈ ಲೇಖನವನ್ನು ಓದಿಕೊಂಡ ಬಳಿಕ ಮುಂದುವರಿಯಿರಿ.

Grey Hair

ಕೂದಲು ಕೀಳಬೇಡಿ
ಬಿಳಿ ಕೂದಲನ್ನು ಕಿತ್ತು ಹಾಕುವುದರಿಂದ ಮತ್ತಷ್ಟು ಕೂದಲು ಬಿಳಿಯಾಗುತ್ತದೆ ಎನ್ನುವುದು ತಪ್ಪು. ಆದರೆ ಬಿಳಿ ಕೂದಲಿನ ವಿನ್ಯಾಸವು ತುಂಬಾ ಗಡುಸಾಗಿರುತ್ತದೆ ಮತ್ತು ಅದರ ಬಣ್ಣ ನೈಸರ್ಗಿಕವಾಗಿ ಬಂದಿರುವಂತದ್ದಾಗಿದೆ. ನೀವು ಅದನ್ನು ಕಿತ್ತು ತೆಗೆದರೆ ಮತ್ತೆ ಅದು ಅದೇ ಜಾಗದಲ್ಲಿ ಬೆಳೆಯುತ್ತದೆ. ಇದರಿಂದ ಅದನ್ನು ಕೀಳದೆ ಇರುವುದೇ ಒಳ್ಳೆಯದು. ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

ಬುಡದಿಂದಲೇ ಕಿತ್ತು ಬಿಡಬೇಡಿ
ಬಿಳಿ ಕೂದಲನ್ನು ಅದರ ಬುಡದಿಂದಲೇ ಕಿತ್ತು ಹಾಕಲು ಯಾವತ್ತೂ ಹೋಗಬೇಡಿ. ಬಿಳಿ ಕೂದಲನ್ನು ಅದರ ಬುಡದಿಂದ ಕಿತ್ತು ಹಾಕಿದಾಗ ತಲೆ ಬುರುಡೆಯು ಕೆಂಪಗಾಗುತ್ತದೆ ಮತ್ತು ಆ ಜಾಗಕ್ಕೆ ರಕ್ತ ಸಂಚಾರವು ಆಗದೆ ಇರಬಹುದು. ಇದರಿಂದ ಮತ್ತೆ ಆ ಜಾಗದಲ್ಲಿ ಕೂದಲು ಬೆಳೆಯದೆ ಇರಬಹುದು.

ದಿನಾಲೂ ಕೂದಲು ತೊಳೆಯುವುದು
ದಿನಾಲೂ ಕೂದಲು ತೊಳೆಯುವುದರಿಂದ ಅದರ ನೈಸರ್ಗಿಕ ತೈಲವು ಕಳೆದುಹೋಗಿ ಕೂದಲು ಬಿರುಕುಬಿಡಬಹುದು. ಆದರೆ ಇದರ ಪರಿಣಾಮ ಬಿಳಿ ಕೂದಲಿಗೆ ಮೇಲೆ ಆಗುವುದಿಲ್ಲ. ವಾರದಲ್ಲಿ 2-3 ದಿನ ಕೂದಲನ್ನು ಆರೋಗ್ಯಕರವಾದ ಹೇರ್ ವಾಶ್ ನಿಂದ ತೊಳೆಯಿರಿ.

ಒಂದೇ ರೀತಿಯ ಶಾಂಪೂ ಬಳಸುವುದು
ಯಾವಾಗಲೂ ಒಂದೇ ರೀತಿಯ ಶಾಂಪೂವನ್ನು ದೀರ್ಘ ಕಾಲದವರೆಗೆ ಬಳಸಬೇಡಿ. ಕೂದಲಿನ ಬಣ್ಣ ಹಾಗೂ ವಿನ್ಯಾಸದಲ್ಲಿ ಬದಲಾವಣೆ ಆಗುವುದು ನಿಮ್ಮ ಕೂದಲು ಏನನ್ನೋ ಬಯಸುತ್ತಿದೆ ಎಂದು ಹೇಳುತ್ತದೆ. ಬಿಳಿ ಕೂದಲಿಗೆ ವಿಶೇಷವಾಗಿ ತಯಾರಿಸಿರುವಂತಹ ಶಾಂಪೂವನ್ನು ಬಳಸಿರಿ. ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

English summary

What You Should Never Do To Your Grey Hair?

The first time we get grey hair, immediate reaction is mostly, confusion. Should we pluck it or not? Will dying camouflage it? Should we go for a natural dye or a synthetic one? So many questions and no answers! There are certain things you should do and should not do. And here, we shall discuss things that are best avoided!
X
Desktop Bottom Promotion