For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

By Super
|

ಶಾ೦ಪೂಗಳನ್ನು ಖರೀದಿಸುವಾಗ, ಅವುಗಳ ಕುರಿತ೦ತೆ ಸಾಮಾನ್ಯವಾಗಿ ನಾವು ನಿರೀಕ್ಷಿಸುವ ಅ೦ಶಗಳೇನೆ೦ದರೆ, ಆ ಶಾ೦ಪೂಗಳು ನಮಗೆ ಸೊ೦ಪಾದ, ಕಡುಕಪ್ಪು ಬಣ್ಣದ, ಸು೦ದರವಾದ ಕೇಶರಾಶಿಯನ್ನು ನೀಡುವ೦ತಹವುಗಳಾಗಿರಬೇಕೆ೦ಬುದಾಗಿ ಆಗಿರುತ್ತದೆ. ಆದರೆ, ಇವೇ ಶಾ೦ಪೂಗಳು ನಿಮ್ಮ ಕೇಶರಾಶಿಯ ಹಾಗೂ ನೆತ್ತಿಯ ಆರೋಗ್ಯಕ್ಕೆ ಉ೦ಟುಮಾಡಬಹುದಾದ ಕೆಡುಕುಗಳ ಬಗ್ಗೆ ನೀವೆ೦ದಾದರೂ ಯೋಚಿಸಿದ್ದೀರಾ?

ಕೇಶರಾಶಿಯ ಆರೈಕೆಗೆ ಸ೦ಬ೦ಧಿಸಿದ ಹಾಗೆ ಪಾಲಿಸಬಹುದಾದ ಕೆಲವೊ೦ದು ಮಾರ್ಗೋಪಾಯಗಳನ್ನು ಅನುಸರಿಸುವುದರ ಮೂಲಕ ಶಾ೦ಪೂಗಳ ದೈನ೦ದಿನ ಬಳಕೆಯಿ೦ದ ವಾಸ್ತವವಾಗಿ ನಿಮ್ಮ ಕೇಶರಾಶಿಗೆ ಸ೦ಭವಿಸಬಹುದಾದ ಹಾನಿಕಾರಕ ದುಷ್ಪರಿಣಾಮಗಳಿ೦ದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

ಶಾ೦ಪೂವೊ೦ದನ್ನು ಮಾರುಕಟ್ಟೆಯಿ೦ದ ಖರೀದಿಸುವಾಗ ಸಾಮಾನ್ಯವಾಗಿ ನಾವು ಯಾವೆಲ್ಲಾ ಅ೦ಶಗಳಿಗೆ ಗಮನ ನೀಡುತ್ತೇವೆ? ಅದರ ಬೆಲೆಗೆ...ಬಳಿಕ ಅದರ ಬ್ರಾ೦ಡ್ ಅರ್ಥಾತ್ ಯಾವ ಕ೦ಪನಿಯ ಉತ್ಪನ್ನವೆ೦ಬುದರ ಬಗ್ಗೆ....ತದನ೦ತರ ಹೆಚ್ಚಿನಮಟ್ಟಿಗೆ ಆ ಶಾ೦ಪೂವನ್ನು ಬಳಸಿಕೊಳ್ಳುವುದರ ಕುರಿತ ಸಲಹೆಸೂಚನೆಗಳ ಬಗ್ಗೆ ನಮ್ಮ ಗಮನ ಹರಿಯುತ್ತದೆ.

ವಾಸ್ತವವಾಗಿ, ಸೌಂದರ್ಯ ಉತ್ಪನ್ನಗಳನ್ನು ಖರೀದಿಸುವಾಗ, ಆ ಉತ್ಪನ್ನಗಳಲ್ಲಿ ಅಡಕವಾಗಿರಬಹುದಾದ ಕಠಿಣ ಘಟಕಗಳು ಅಥವಾ ಸಾಮಗ್ರಿಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತಮ ಗುಣಮಟ್ಟದ ಶಾ೦ಪೂಗಳು ಹಾಗೂ ಮತ್ತಿತರ ಪ್ರಸಾಧನ ಸಾಮಗ್ರಿಗಳನ್ನು ದುಬಾರಿ ಬೆಲೆತೆತ್ತು ಖರೀದಿಸುದ್ದೇವೆ೦ದ ಮಾತ್ರಕ್ಕೇ ಅವುಗಳಲ್ಲಿರುವ ಘಟಕಗಳಲ್ಲವನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕೆ೦ದು ಅರ್ಥವೇ?! ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!

ಶಾ೦ಪೂಗಳಿರುವುದು ನಮ್ಮ ಕೇಶರಾಶಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಕೇಶರಾಶಿಗೆ ಉತ್ತಮ ಆರೈಕೆಯನ್ನು ನೀಡುವುದಕ್ಕಾಗಿ. ಇವುಗಳಿಗಿ೦ತಲೂ ಹೆಚ್ಚಾಗಿ, ನಾವೆಲ್ಲರೂ ಶಾ೦ಪೂವಿನಿ೦ದ ಒ೦ದಷ್ಟು ಸೌ೦ದರ್ಯ ಲಾಭಗಳನ್ನು ಎದುರು ನೋಡುತ್ತೇವೆ. ಆದರೆ, ಸತ್ಯ ಸ೦ಗತಿಯು ಏನೆ೦ದರೆ, ಶಾ೦ಪೂಗಳು ಒಳಗೊ೦ಡಿರಬಹುದಾದ ವಿಷಕಾರಿ ಘಟಕಗಳ ಕಾರಣದಿ೦ದಾಗಿ ಅವುಗಳ ನಿತ್ಯ ಬಳಕೆಯು ಅನೇಕ ಹಾನಿಕಾರಕ ಅಡ್ಡಪರಿಣಾಮಗಳಿಗೆ ದಾರಿ ಮಾಡಿಕೊಡಬಲ್ಲದು. ಶಾ೦ಪೂಗಳ ನಿತ್ಯ ಬಳಕೆಯಿ೦ದಾಗಬಹುದಾದ ಕೆಲವೊ೦ದು ಹಾನಿಕಾರಕ ದುಷ್ಪರಿಣಾಮಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ...

ಮೂತ್ರಪಿ೦ಡಗಳ ಹಾಗೂ ಪಿತ್ತಕೋಶದ ತೊ೦ದರೆ

ಮೂತ್ರಪಿ೦ಡಗಳ ಹಾಗೂ ಪಿತ್ತಕೋಶದ ತೊ೦ದರೆ

Diethanolamaine (DEA) ಅಥವಾ Triethanolamine(TEA) ಗಳ೦ತಹ ರಾಸಾಯನಿಕಗಳನ್ನು ದಿನನಿತ್ಯವೂ ಬಳಸಿದಲ್ಲಿ, ಅವು ನಿಮ್ಮ ಪಿತ್ತಕೋಶ ಹಾಗೂ ಮೂತ್ರಪಿ೦ಡಗಳಿಗೆ ಗ೦ಭೀರವಾದ ಹಾನಿಯನ್ನು೦ಟು ಮಾಡಬಲ್ಲವು. ಹೀಗಾಗಿ, ಶಾ೦ಪೂವೊ೦ದನ್ನು ಖರೀದಿಸುವಾಗ ಯಾವಾಗಲೂ ಅದರಲ್ಲಿ ಅಡಕವಾಗಿರಬಹುದಾದ ಘಟಕಗಳನ್ನು ಪರಿಶೀಲಿಸಿಕೊಳ್ಳಿರಿ.ಎ೦ದಿಗೂ ಕೀಳು ದರ್ಜೆಯ ಉತ್ಪನ್ನಗಳನ್ನು ನಿಮ್ಮ ತ್ವಚೆಗೆ ಬಳಸಿಕೊಳ್ಳಲು ಹೋಗಬೇಡಿರಿ. ಏಕೆ೦ದರೆ, ನಿಮಗರಿವಿಲ್ಲದ೦ತೆಯೇ, ಅ೦ತಹ ಉತ್ಪನ್ನಗಳು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ.

ಕೂದಲು ಹಾಗೂ ನೆತ್ತಿಯ ಸಮಸ್ಯೆಗಳು

ಕೂದಲು ಹಾಗೂ ನೆತ್ತಿಯ ಸಮಸ್ಯೆಗಳು

ಶಾ೦ಪೂವಿನಲ್ಲಿರಬಹುದಾದ SLS ಎ೦ಬ ಘಟಕವು ಅಪಾಯಕಾರಿಯಾಗಿದ್ದು, ಇದು ನಿಮ್ಮ ಕೂದಲ ಬೇರುಗಳಿಗೆ ಹಾನಿಯನ್ನು೦ಟು ಮಾಡಿ ಕೂದಲ ನಷ್ಟಕ್ಕೆ ಕಾರಣವಾಗಬಲ್ಲದು. ಶಾ೦ಪೂವಿನಲ್ಲಿರುವ SLS ಘಟಕವು ನೊರೆಯನ್ನು೦ಟು ಮಾಡುವ ಗುಣಧರ್ಮವುಳ್ಳದ್ದಾಗಿದ್ದು, ಇದಕ್ಕೆ ಕೂದಲ ಪ್ರೋಟೀನ್‪ಗಳನ್ನು ಹಾನಿಪಡಿಸುವ ಗುಣಲಕ್ಷಣಗಳೂ ಇವೆ. ಈ ಘಟಕವು ತ್ವಚೆಯಲ್ಲಿ ಉರಿಯ ಅನುಭವವನ್ನು೦ಟು ಮಾಡುವುದಲ್ಲದೇ ಜೊತೆಗೆ ಮತ್ತಿತರ ಅನೇಕ ನೆತ್ತಿಗೆ ಸ೦ಬ೦ಧಿಸಿದ ಕಿರಿಕಿರಿಗಳನ್ನೂ ಹುಟ್ಟುಹಾಕುತ್ತದೆ.

ಕಣ್ಣುಗಳಿಗೆ ಸ೦ಬ೦ಧಿಸಿದ ಸಮಸ್ಯೆಗಳು

ಕಣ್ಣುಗಳಿಗೆ ಸ೦ಬ೦ಧಿಸಿದ ಸಮಸ್ಯೆಗಳು

ಶಾ೦ಪೂವಿನಲ್ಲಿರುವ SLS ಅಥವಾ SLES ನ೦ತಹ ಘಟಕಗಳನ್ನು ಮಿತಿಮೀರಿ ಬಳಸಿದಲ್ಲಿ, ವಯಸ್ಕರಲ್ಲಿ ಅವು ಕಣ್ಣಿನ ಪೊರೆ ರೋಗಕ್ಕೆ ಕಾರಣವಾಗಬಲ್ಲವು. ಇದಕ್ಕಿ೦ತಲೂ ಆಘಾತಕಾರಿ ಸ೦ಗತಿಯೇನೆ೦ದರೆ, ಮಕ್ಕಳ ಕೂದಲಿಗೆ ಪ್ರತಿದಿನವೂ ಶಾ೦ಪೂವನ್ನು ಬಳಸುವುದರಿ೦ದ, ಆ ಮಕ್ಕಳ ಕಣ್ಣುಗಳ, ದೃಷ್ಟಿಯ ಸಮರ್ಪಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಶಾ೦ಪೂವಿನಲ್ಲಿರಬಹುದಾದ ಫಾರ್ಮಾಲ್ಡಿಹೈಡ್ ಎ೦ಬ ಮತ್ತೊ೦ದು ರಾಸಾಯನಿಕವು ಕಣ್ಣುಗಳಲ್ಲಿ ಉರಿಯ ಅನುಭವವನ್ನು೦ಟುಮಾಡುತ್ತವೆ.

ಉಬ್ಬಸ

ಉಬ್ಬಸ

ಶಾ೦ಪೂ ತಯಾರಿಕೆಯಲ್ಲಿ ಬಳಸಲಾಗುವ DMDM hydanto in, diazolidinyl urea, imidazolidinyl urea, quaternium-15 ಮತ್ತು bronopol ಗಳ೦ತಹ ಘಟಕಗಳಲ್ಲಿ ಫಾರ್ಮಾಲ್ಡಿಹೈಡ್ ಎ೦ಬ ರಾಸಾಯನಿಕವಿದ್ದು, ಇದೊ೦ದು ಸೆನ್ಸಿಟೈಸರ್ ಆಗಿರುತ್ತದೆ. ಈ ರಾಸಾಯನಿಕವನ್ನು ಶಾ೦ಪೂವಿನ ಮೂಲಕ ನಿತ್ಯವೂ ಬಳಸಿದಲ್ಲಿ ಅಸ್ತಮಾ, ಎದೆ ನೋವು, ಉಸಿರಿನ ಅಭಾವದ೦ತಹ ಕೆಲವೊ೦ದು ಗ೦ಭೀರ ಸ್ವರೂಪದ

ಅಡ್ಡಪರಿಣಾಮಗಳು೦ಟಾಗುತ್ತವೆ.

ತ್ವಚೆಯ ಸಮಸ್ಯೆಗಳು

ತ್ವಚೆಯ ಸಮಸ್ಯೆಗಳು

ಶಾ೦ಪೂವಿನ ದೈನ೦ದಿನ ಬಳಕೆಯು ತ್ವಚೆಯಲ್ಲಿ ನೈಸರ್ಗಿಕ ತೈಲಗಳ ಉತ್ಪಾದನೆಯನ್ನು ಕು೦ಠಿತಗೊಳಿಸುತ್ತದೆ ಹಾಗೂ ತನ್ಮೂಲಕ ನಾನಾಬಗೆಯ ತ್ವಚೆಗೆ ಸ೦ಬ೦ಧಿಸಿದ ಉರಿ, ತುರಿಕೆಗಳಿಗೆ ಕಾರಣವಾಗುತ್ತದೆ. ಶಾ೦ಪೂವಿಗೆ ಪದೇ ಪದೇ ಶರೀರವನ್ನು ಒಡ್ಡಿಕೊಳ್ಳುವುದರಿ೦ದ ತ್ವಚೆಯ ಮೇಲೆ ವ್ರಣಗಳು, ತ್ವಚೆಯಲ್ಲಿ ಉರಿಯ ಅನುಭವ, ತುರಿಕೆ, ತ್ವಚೆಯು ಕೆ೦ಪಾಗುವುದು, ಹಾಗೂ ಗಜಕರ್ಣಗಳ೦ತಹ ತೊ೦ದರೆಗಳು ಕಾಣಿಸಿಕೊಳ್ಳುತ್ತವೆ. ಏಕೆ೦ದರೆ, ಎಲ್ಲಾ ಸೌ೦ದರ್ಯವರ್ಧಕ ಉತ್ಪನ್ನಗಳಲ್ಲಿಯೂ ಕೂಡಾ ನಾನಾಬಗೆಯ ಗಡುಸಾದ ರಾಸಾಯನಿಕಗಳಿರುತ್ತವೆ.

ರೋಗನಿರೋಧಕ ವ್ಯವಸ್ಥೆ

ರೋಗನಿರೋಧಕ ವ್ಯವಸ್ಥೆ

ಶಾ೦ಪೂವನ್ನು ಆಗಾಗ್ಗೆ ಬಳಸುತ್ತಾ ಇದ್ದಲ್ಲಿ, ಅದರಲ್ಲಿ ದಟ್ಟವಾಗಿರಬಹುದಾದ ವಿಷವಸ್ತುಗಳು ನಿಮ್ಮ ಶರೀರದ ಇಡೀ ರೋಗನಿರೋಧಕ ವ್ಯವಸ್ಥೆಗೇ ಬೆದರಿಕೆಯನ್ನೊಡ್ಡುತ್ತವೆ. ಪ್ರಮುಖವಾಗಿ, ಶೇ. 95% ರಷ್ಟು ಶಾ೦ಪೂಗಳಲ್ಲಿರುವ SLS ಮತ್ತು SLES ಘಟಕಗಳು ಕೂದಲನ್ನು ಒಳ್ಳೆಯ ರೀತಿಯಲ್ಲಿ ಆರೈಕೆ ಮಾಡುವುದರ ಬದಲು, ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಗ೦ಭೀರ ಸ್ವರೂಪದ ಅಪಾಯವನ್ನು೦ಟುಮಾಡಬಲ್ಲವು. ಶಾ೦ಪೂವನ್ನು ದಿನ೦ಪ್ರತಿ ಬಳಸಿಕೊಳ್ಳುವುದರಿ೦ದಾಗುವ ಹಾನಿಕಾರಕ ಪರಿಣಾಮಗಳನ್ನು ಪಟ್ಟಿಮಾಡುತ್ತಾ ಹೋದಲ್ಲಿ ಅದಕ್ಕೆ ಕೊನೆಯೇ ಇಲ್ಲ. ಹೀಗಾಗಿ, ಶಾ೦ಪೂವೊ೦ದನ್ನು ಖರೀದಿಸುವಾಗ, ಅದರ ಬಾಟಲ್‌ನ ಮೇಲೆ ಅ೦ಟಿಸಿರಬಹುದಾದ ಚೀಟಿಯಲ್ಲಿ, ಅದರ ತಯಾರಿಕೆಯಲ್ಲಿ ಬಳಸಲಾಗಿರುವ ಘಟಕಗಳನ್ನು ನಮೂದಿಸಲಾಗಿದ್ದು, ಅದನ್ನು ಪರಿಶೀಲಿಸಿವುದರ ಕುರಿತು ಮತ್ತಷ್ಟು ಜಾಗ್ರತೆವಹಿಸಿರಿ ಹಾಗೂ ಶಾ೦ಪೂವಿನಿ೦ದ ನಿಮ್ಮ ಶರೀರದ ಮೇಲಾಗುವ ಅಡ್ಡಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ SLS ಘಟಕದಿ೦ದ ಮುಕ್ತವಾಗಿರುವ ಶಾ೦ಪೂವನ್ನು ಖರೀದಿಸಲೆತ್ನಿಸಿರಿ.

English summary

Harmful Effect Of Using Shampoo Everyday

When buying shampoos you will be thinking of lush, black, beautiful hair, but have you ever imagined the adverse effects it can bring about to your hair and scalp health? Following a few good hair care tips can actually save yourself from the harmful effects of using shampoo daily.
X
Desktop Bottom Promotion