For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

By Super
|

ಸೌಂದರ್ಯದ ವಿಷಯ ಬಂದರೆ ವಿವಿಧ ರೀತಿಯ ಕೇಶ ವಿನ್ಯಾಸ ಮುಖ್ಯವಾಗುತ್ತದೆ.ಹಾಗೆಯೇ ಕೂದಲ ಆರೈಕೆಯ ಜೊತೆಗೆ ದಟ್ಟವಾದ ಕಪ್ಪು ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ. ಅಂದವಾದ ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ನೆರೆತ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು ಕಾಣಬಹುದು.

ಸಾಕಷ್ಟು ಸಣ್ಣ ವಯಸ್ಸಿನ ಜನರು ಈಗ ಬೆಳ್ಳಿ ಕೂದಲಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಅನಿಯಮಿತ ಜೀವನ ಶೈಲಿ ಮತ್ತಿತರ ಕಾರಣಗಳಿಂದ ಅಕಾಲಿಕ ನೆರೆಕೂದಲು ಒಂದು ದೊಡ್ಡ ಸಮಸ್ಯೆಯಾಗಿದೆ. ತಾರುಣ್ಯದಲ್ಲೇ ಕೂದಲು ನೆರೆದಿರುವ ಸಮಸ್ಯೆ ಈಗ ಭಾರತದಲ್ಲೂ ಕೂಡ ಕಾಣಿಸಿಕೊಳ್ಳುತ್ತಿದೆ. ತಜ್ಞರು ಈ ತೊಂದರೆಗೆ ಕಾರಣಗಳನ್ನು ಹುಡುಕಿದ್ದಾರೆ.ಅದರ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಬಿಳಿ ಕೂದಲು ಹೇಗೆ ಪ್ರಾರಂಭವಾಗುತ್ತದೆ?

ಬಿಳಿ ಕೂದಲು ಹೇಗೆ ಪ್ರಾರಂಭವಾಗುತ್ತದೆ?

ಕಡುಕಪ್ಪು ಕೂದಲಿನ ನಡುವೆ ಸಣ್ಣ ಎಳೆಯ ಬಿಳಿ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ.ಈ ಕೂದಲು ನಿಧಾನವಾಗಿ ಪ್ರಸರಣವಾಗಲು ಕೆಲವು ಸಮಯ ತೆಗೆದುಕೊಳ್ಳುತ್ತದೆ.ಆದರೆ ಕೂದಲಿನ ಬಿರುಕಿನ ಕಾರಣದಿಂದಾಗಿ ಕೆಲವೊಮ್ಮೆ ರಾತ್ರಿ ಕಳೆದು ಬೆಳಗಾಗುವುದರಲ್ಲಿ ತಕ್ಷಣಕ್ಕೆ ಬಿಳಿಯಾದ ನಿದರ್ಶನಗಳು ಕೂಡ ಇವೆ.

ಪುರುಷರಲ್ಲಿ ಅಕಾಲಿಕ ನೆರೆಕೂದಲು

ಪುರುಷರಲ್ಲಿ ಅಕಾಲಿಕ ನೆರೆಕೂದಲು

ಪುರುಷರಲ್ಲಿ ಮೊದಲು ಗಡ್ಡ ನಂತರ ಮೀಸೆ ಬಿಳಿ ಆಗುವುದಕ್ಕೆ ಪ್ರಾರಂಭವಾಗುತ್ತದೆ ನಂತರ ತಲೆಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತದೆ.ಎದೆಯ ಮೇಲಿರುವ ಕೂದಲು ನೆರೆಯಲು ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಆದರೆ ಮಹಿಳೆಯರಿಗೆ ಮೊದಲು ನೆತ್ತಿಯ ಮೇಲೆ ಕೂದಲು ನೆರೆಯಲು ಪ್ರಾರಂಭಿಸಿ ನಂತರ ಸುತ್ತಲೂ ಹರಡಿಕೊಳ್ಳುತ್ತದೆ.

ಕೂದಲು ನೆರೆಯಲು ಕಾರಣವೇನು?

ಕೂದಲು ನೆರೆಯಲು ಕಾರಣವೇನು?

ಅತಿ ಕಿರಿಯ ಪುರುಷರು ಮತ್ತು ಮಹಿಳೆಯರೂ ಕೂಡ ಈ ಬಗ್ಗೆ ಸಲಹೆ ಪಡೆಯಲು ಇಚ್ಚಿಸುತ್ತಾರೆ.ಕೂದಲ ನೆರೆತಕ್ಕೆ ಮುಖ್ಯ ಕಾರಣ ಹಾರ್ಮೋನುಗಳ ಅಸಮತೋಲನ,ಹೈಪೋರ್ಥೈರಾಯ್ಡಿಸಮ್ ಮತ್ತು ಥೈರಾಯ್ಡ್,ಅಪೌಷ್ಟಿಕತೆ,ವಿನಾಶಕಾರಿ ರಕ್ತಹೀನತೆ.

ಇತರ ಕಾರಣಗಳು

ಇತರ ಕಾರಣಗಳು

ಅದಲ್ಲದೆ ವಿದ್ಯುತ್ ಹೇರ್ ಡ್ರೈಯರ್ ಬಳಸುವುದು,ಅನುವಂಶಿಕ ಸಮಸ್ಯೆ,ಕೀಮೋಥೆರಪಿ,ರೇಡಿಯೇಶನ್ ಇವುಗಳ ಬಳಕೆ ಕೂಡ ಕೂದಲು ನೆರೆಯುವುದಕ್ಕೆ ಕಾರಣವಾಗುತ್ತದೆ.ಕೆಲವೊಮ್ಮೆ ಅತಿ ಚಿಕ್ಕ ವಯಸ್ಸಿನ ಅಂದರೆ 8 ವರ್ಷದ ಮಗುವಿಗೂ ಕೂಡ ಬಿಳಿ ಕೂದಲು ಆಗಬಹುದು ಮತ್ತು ವಯಸ್ಸು ಹೆಚ್ಚಿದಂತೆ ಇದರ ಪ್ರಮಾಣ ಕೂಡ ಹೆಚ್ಚುತ್ತಾ ಹೋಗುತ್ತದೆ.

ಅಕಾಲಿಕ ನೆರಿಗೆ ಪ್ರಮುಖ 2 ಕಾರಣಗಳು

ಅಕಾಲಿಕ ನೆರಿಗೆ ಪ್ರಮುಖ 2 ಕಾರಣಗಳು

ಮಹಿಳೆಯರು 25 ವರ್ಷವಾಗುತ್ತಿದ್ದಂತೆ ಬಿಳಿ ಕೂದಲಿನ ಹೆದರಿಕೆ ಪ್ರಾರಂಭವಾಗುತ್ತದೆ,ಹಾಗೆಯೇ ಪುರುಷರಿಗೂ ಕೂಡ ಎಂದು ಹೇಳಲಾಗುತ್ತದೆ.ಇದಕ್ಕೆ 2 ರೀತಿಯ ಕಾರಣಗಳಿರುತ್ತವೆ ಎಂದು ಹೇಳಲಾಗುತ್ತದೆ.

ವಿಟಮಿನ್ ಕೊರತೆ

ವಿಟಮಿನ್ ಕೊರತೆ

ಅವುಗಳೆಂದರೆ ಆಹಾರ ಮತ್ತು ಮಾನಸಿಕ ಒತ್ತಡ.ವಿಟಮಿನ್ ಬಿ ಕೊರತೆ,ಕಬ್ಬಿಣದ ಅಂಶ,ಅಯೋಡಿನ್ ಕೊರತೆಗಳು ಒಂದು ರೀತಿಯ ಕಾರಣವಾದರೆ,ಮಾನಸಿಕ ಒತ್ತಡ ಕೂಡ ಕೂದಲಿಗೆ ಬೇಕಾದ ಅಗತ್ಯ ಪೌಷ್ಟಿಕಾಂಶ ಪೂರೈಸುವಿಕೆಯನ್ನು ಅಡ್ಡಿ ಪಡಿಸುತ್ತದೆ

ಇತರ ಪ್ರಮುಖ ಕಾರಣ

ಇತರ ಪ್ರಮುಖ ಕಾರಣ

ಇವುಗಳಲ್ಲದೆ ಅಕಾಲಿಕ ಕೂದಲ ನೆರೆತಕ್ಕೆ ರಕ್ತದ ಒತ್ತಡ,ರಕ್ತ ಹೀನತೆ,ಕಳಪೆ ಕಂಡಿಷನರ್,ಅನುವಂಶಿಕತೆ ಇವುಗಳೂ ಕೂಡ ಕಾರಣವಾಗುತ್ತವೆ.

ಇದಕ್ಕೆ ಪರಿಹಾರಗಳು:

ಇದಕ್ಕೆ ಪರಿಹಾರಗಳು:

ತಲೆ ಕೂದಲ ಅಕಾಲಿಕ ನೆರೆತವನ್ನು ಅಪೌಷ್ಟಿಕತೆಯ ತಿದ್ದುಪಡಿ ಮೂಲಕ,ಪೌಷ್ಟಿಕ ಆಹಾರ ತೆಗೆದುಕೊಳ್ಳುವ ಮೂಲಕ ಸ್ವಲ್ಪ ಮಟ್ಟಿಗೆ ತಡೆಯಬಹುದು. ಸರಿಯಾದ ರೀತಿಯ ಆಹಾರ,ನೆತ್ತಿ ಮತ್ತು ಕೂದಲನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು,ಒತ್ತಡ ರಹಿತ ಚಟುವಟಿಕೆಗಳು ಇವುಗಳು ಮುಖ್ಯವಾಗಿ ಮಾಡಲೇಬೇಕಾದ ಕಾರ್ಯಗಳು.

ಅಕಾಲಿಕ ಕೂದಲ ನೆರೆ ತಡೆಕಟ್ಟುವ ಮಾರ್ಗಗಳು

ಅಕಾಲಿಕ ಕೂದಲ ನೆರೆ ತಡೆಕಟ್ಟುವ ಮಾರ್ಗಗಳು

ಇವುಗಳ ಜೊತೆಗೆ ಕೆಲವು ತಾತ್ಕಾಲಿಕ,ಅರೆ ಶಾಶ್ವತ ಮತ್ತು ಶಾಶ್ವತವಾದ ಪರಿಹಾರಗಳು ಕೂಡ ಇವೆ.ತಾತ್ಕಾಲಿಕ ಪರಿಹಾರವೆಂದರೆ ಮೆಹಂದಿಯನ್ನು ತಲೆಗೆ ಹಚ್ಚುವುದು.ಅರೆ ಖಾಯಂ ಎಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಮೋನಿಯರಹಿತ ಬಣ್ಣಗಳನ್ನು ತಂದು ಹಚ್ಚುವುದು ಎಂದು ಅವರು ಹೇಳುತ್ತಾರೆ.ಪರಿಣಿತರು ಹೇಳುವ ಪ್ರಕಾರ ಕಾಫಿ ಬದಲು ಗ್ರೀನ್ ಟೀ ಕುಡಿಯುವುದು ಮತ್ತು ನೆತ್ತಿಗೆ ಭೃಂಗರಾಜ ಎಣ್ಣೆಯನ್ನು ಹಚ್ಚುವುದು,ಫೋಲಿಕ್ ಆಮ್ಲ ಹೆಚ್ಚಿರುವ ತರಕಾರಿಗಳನ್ನು ತಿನ್ನುವುದರಿಂದ ಕೂಡ ಅರೆಕಾಲಿಕ ಕೂದಲ ನೆರೆಯುವಿಕೆ ತಡೆಯಬಹುದು.ಧೂಮಪಾನ ತ್ಯಜಿಸುವುದು,ಶಿಸ್ತು ಬದ್ಧ ಜೀವನ ಶೈಲಿ ಮತ್ತು ಒತ್ತಡರಹಿತ ಜೀವನ ನಡೆಸುವುದು ಕೂಡ ಮುಖ್ಯ ಎನ್ನಲಾಗುತ್ತದೆ.

English summary

Why are more youngsters developing grey hair?

The age group of those embracing early or premature greying arising out of a number of reasons, is on the rise in India too.
X
Desktop Bottom Promotion