ಕೂದಲಿನ ಎಲ್ಲಾ ಸಮಸ್ಯೆಗೂ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By: Hemanth
Subscribe to Boldsky

ಮಾರುಕಟ್ಟೆಗೆ ಹೋಗಿ ಏನಾದರೂ ಖರೀದಿ ಮಾಡುವುದಿದ್ದರೂ ಒಂದೇ ವಸ್ತುವಿನಿಂದ ಹಲವಾರು ರೀತಿಯ ಪ್ರಯೋಜವಾಗುತ್ತದೆಯಾ ಎಂದು ಯೋಚಿಸುತ್ತೇವೆ. ಒಂದೇ ವಸ್ತುವು ಹಲವು ಕೆಲಸಗಳನ್ನು ಮಾಡುತ್ತಾ ಇದ್ದರೆ ನಾವು ಅದನ್ನೇ ಮೊದಲು ಪರಿಗಣಿಸುತ್ತೇವೆ.

ದೇಹದ ಕೆಲವೊಂದು ಭಾಗಗಳ ಆರೈಕೆಯಲ್ಲಿ ಕೂಡ ಈ ನೀತಿ ಅಳವಡಿಕೆಯಾಗುತ್ತದೆ. ಅದರಲ್ಲೂ ಕೂದಲಿನ ಸಮಸ್ಯೆಗಂತೂ ಈ ನೀತಿ ಅತೀ ಉತ್ತಮವಾಗಿದೆ. ಯಾಕೆಂದರೆ ಕೂದಲು ಉದುರುವುದು, ತಲೆಹೊಟ್ಟು ಮತ್ತು ಕೂದಲು ತುಂಡಾಗುವುದು ಈ ಮೂರು ಸಮಸ್ಯೆಗಳನ್ನು ನಿವಾರಿಸುವಂತಹ ಒಂದೇ ಮದ್ದು ಇದ್ದರೆ ಅದು ಶ್ರೇಷ್ಠವೆನ್ನಬಹುದು.  ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು   

dandruff oil
 

ಹೆಚ್ಚಿನ ಮಹಿಳೆಯರಲ್ಲಿ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಅದೇ ರೀತಿ ತಲೆಹೊಟ್ಟು ಕೂಡ. ಹೆಚ್ಚಿನ ಮಹಿಳೆಯರು ಟಿವಿಯಲ್ಲಿ ಬಂದಂತಹ ಜಾಹೀರಾತನ್ನು ನೋಡಿ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಆದರೆ ಇದು ತಪ್ಪು. ಯಾಕೆಂದರೆ ಈ ಉತ್ಪನ್ನಗಳು ತಲೆಕೂದಲು ಉದುರಿಸುವುದನ್ನು ನಿಲ್ಲಿಸಿದರೂ ತಲೆಹೊಟ್ಟು ಮಾತ್ರ ಹಾಗೆ ಉಳಿದಿರುತ್ತದೆ.   ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ  

hair care
 

ಆದರೆ ನಿಮ್ಮ ಮನೆಯಲ್ಲೇ ತಯಾರಿಸುವಂತಹ ಮನೆಮದ್ದು ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಕೂದಲು ತುಂಡಾಗುವುದನ್ನು ನಿಲ್ಲಿಸುತ್ತದೆ. ಇಂತಹ ಒಂದು ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.  

Split end
 

ಬೇಕಾಗುವ ಸಾಮಗ್ರಿಗಳು

*ಹರಳೆಣ್ಣೆ

*ತೆಂಗಿನ ಎಣ್ಣೆ

*ಬಾದಾಮಿ ಎಣ್ಣೆ

*ನಿಂಬೆರಸ(ತಲೆಹೊಟ್ಟಿಗೆ) 

castro oil
 

*ಹರಳೆಣ್ಣಿ, ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿಕೊಂಡು ಒಂದು ಬಾಟಲಿಗೆ ತುಂಬಿಟ್ಟು ಬಾಯಿ ಮುಚ್ಚಿಡಿ. ಪ್ರತೀ ಸಲ ಬಳಸುವ ಮೊದಲು ಬಾಟಲಿಯನ್ನು ಸರಿಯಾಗಿ ಅಲುಗಾಡಿಸಿದರೆ ಎಣ್ಣೆ ಸರಿಯಾಗಿ ಮಿಶ್ರಣವಾಗುವುದು.  ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?  

coconut oil
 

*ನೇರವಾಗಿ ಎಣ್ಣೆಯನ್ನು ತಲೆಬುರುಡೆಗೆ ಹಾಕಿಕೊಳ್ಳಿ ಅಥವಾ ಅಂಗೈಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ತಲೆಗೆ ಹಚ್ಚಿಕೊಳ್ಳಬಹುದು. ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಲು ಮರೆಯಬೇಡಿ. ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮವಾಗಿ ಕೂದಲಿನ ಬೆಳವಣಿಗೆ ಹೆಚ್ಚಿಸಿ ಕೂದಲು ಉದುರದಂತೆ ಮಾಡುವುದು. 

lime juice
 

*ಈ ಎಣ್ಣೆಯನ್ನು ತಲೆಹೊಟ್ಟಿಗೆ ಬಳಸಲು ಒಂದು ನಿಂಬೆಯ ರಸವನ್ನು ತೆಗೆಯಿರಿ. ಇದನ್ನು ಎಣ್ಣೆಯ ಮಿಶ್ರಣಕ್ಕೆ ಹಾಕಿಕೊಳ್ಳಿ. ನಿಂಬೆರಸವು ತಲೆಬುರುಡೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಸೋಂಕು ಬರದಂತೆ ತಡೆಯುವುದು. ಕೂದಲು ತುಂಡಾಗುವುದನ್ನು ಕೂಡ ಈ ಎಣ್ಣೆ ತಡೆಯುವುದು. ಉತ್ತಮ ಫಲಿತಾಂಶಕ್ಕಾಗಿ ನೀವು ಒಂದು ವಾರ ಕಾಲ ಈ ಎಣ್ಣೆಯನ್ನು ಬಳಸಬೇಕು.

English summary

The One Oil You Need To Cure Dandruff, Split Ends & Hair Fall!

Most remedies are right around the corner for you, at your home, and you don't even have to spend excessive amounts of money to get all the cures to your hair problems. So, instead of rushing to the store to buy the next new product, just try out this remedy at home to sort out all your dilemmas relating to dandruff, split ends and hair fall!
Please Wait while comments are loading...
Subscribe Newsletter