For Quick Alerts
ALLOW NOTIFICATIONS  
For Daily Alerts

ಕೂದಲಿನ ಅಂದ-ಚೆಂದ ಹೆಚ್ಚಿಸುವ ಹಳ್ಳಿಗಾಡಿನ ಸೀಗೆಕಾಯಿ

By Super Admin
|

ಹಿಂದಿನವರ ಕೇಶರಾಶಿಯನ್ನು ನೋಡುವುದೇ ಕಣ್ಣಿಗೆ ಆನಂದ. ಇತ್ತೀಚಿನ ದಿನಗಳಲ್ಲಿ ನೂರರಲ್ಲಿ ಐದು ಮಹಿಳೆಯರಲ್ಲಿ ಮಾತ್ರ ಅಂತಹ ಕೇಶರಾಶಿಯನ್ನು ಕಾಣಲು ಸಾಧ್ಯ. ಕೂದಲಿಗೆ ಆಗಾಗ ಕತ್ತರಿ ಪ್ರಯೋಗ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ ಹಿಂದಿನವರು ತಮ್ಮ ಕೂದಲಿನ ಆರೈಕೆಗಾಗಿ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಸಹಜ. ಹಿಂದಿನವರು ಕೂದಲಿಗೆ ಸೀಗೆಕಾಯಿಯನ್ನು ಬಳಸುತ್ತಾ ಇದ್ದರು. ಇದು ಅವರ ಕೂದಲಿನ ಬೆಳವಣಿಗೆ ಹಾಗೂ ಅದು ರೇಷ್ಮೆಯಂತೆ ಹೊಳೆಯಲು ಕಾರಣವಾಗಿತ್ತು.

Powerful Ways To Use Shikakai To Boost Hair Growth

ಇಂದಿನ ದಿನಗಳಲ್ಲಿ ರಾಸಾಯನಿಕಗಳಿಂದ ಮಾಡಿದಂತಹ ಶಾಂಪೂ ಬಳಕೆಯಿಂದಾಗಿ ಸ್ವಲ್ಪ ಸಮಯ ಕೂದಲು ರೇಷ್ಮೆಯಂತೆ ಹೊಳೆದರೂ ಅದು ದೀರ್ಘ ಕಾಲದ ತನಕ ಪರಿಣಾಮ ಉಂಟು ಮಾಡುವುದಿಲ್ಲ. ಆದರೆ ಸೀಗೆಕಾಯಿಯನ್ನು ಬಳಸಿದರೆ ಕೂದಲು ತುಂಡಾಗುವುದು, ಉದುರುವುದು ನಿಲ್ಲುವುದು ಮತ್ತು ಕೂದಲಿನ ಬೆಳವಣಿಗೆಗೆ ಇದು ನೆರವಾಗುವುದು. ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

ಸೀಗೆಕಾಯಿ ಶಾಂಪೂ
ಸೀಗೆಕಾಯಿ ಶಾಂಪೂವಿನಲ್ಲಿರುವ ನೆಲ್ಲಿಕಾಯಿ ಕೂದಲಿಗೆ ಪ್ರೋಟೀನ್ ಅನ್ನು ಒದಗಿಸಿಕೊಡುತ್ತದೆ. ಕೂದಲು ಉದುರುವಿಕೆಯನ್ನು ಇದು ತಡೆಯುತ್ತದೆ.
ಬೇಕಾಗುವ ಸಾಮಗ್ರಿಗಳು
*2 ಚಮಚ ಸೀಗೆಕಾಯಿ ಹುಡಿ
*1 ಚಮಚ ನೆಲ್ಲಿಕಾಯಿ ಹುಡಿ

ಮಾಡುವ ವಿಧಾನ
•ಒಂದು ಪಿಂಗಾಣಿಯಲ್ಲಿ ಬಿಸಿ ನೀರು, ಹೇಳಿದಷ್ಟು ಪ್ರಮಾಣದ ಸೀಗೆಕಾಯಿ ಹುಡಿ, ನೆಲ್ಲಿಕಾಯಿ ಹುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಎಲ್ಲಾ ಸರಿಯಾಗಿ ಮಿಶ್ರಣವಾಗಿ ಮೃದುವಾದ ಪೇಸ್ಟ್ ಆಗುವ ತನಕ ಕಲಸಿ.
•ಈ ಪೇಸ್ಟ್ ಅನ್ನು ಹಾಗೆ ತಣ್ಣಗಾಗಲು ಬಿಡಿ. ಬಳಿಕ ಕೂದಲಿಗೆ ಹಚ್ಚಿಕೊಳ್ಳಿ.


•ತಲೆ ಬುರುಡೆಗೆ ಇದನ್ನು ಸರಿಯಾಗಿ ಹಚ್ಚಿಕೊಳ್ಳಿ.
•10-15 ನಿಮಿಷ ಹಾಗೆ ಬಿಡಿ. ಮಸಾಜ್ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ.
ಸೂಚನೆ: ಇದಕ್ಕೆ ಮೊದಲು ಕೂದಲಿಗೆ ಎಣ್ಣೆ ಹಾಕಿಕೊಳ್ಳಿ. ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ಸೀಗೆಕಾಯಿ ಸೋಪ್

ಸೀಗೆಕಾಯಿ ಮತ್ತು ಬಳಸಿದ ಚಹಾ ಹುಡಿ
ಕೂದಲಿನ ಬೆಳವಣಿಗೆ ಹಾಗೂ ಆರೈಕೆಗೆ ಸೀಗೆಕಾಯಿ ಮತ್ತು ಬಳಸಿದ ಚಹಾ ಹುಡಿಯ ಮಿಶ್ರಣವು ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು
*1 ಬಳಸಿದ ಗ್ರೀನ್ ಟೀ ಬ್ಯಾಗ್
*2 ಚಮಚ ಸೀಗೆಕಾಯಿ ಹುಡಿ

ವಿಧಾನ
*ಒಂದು ಕಪ್ ಗ್ರೀನ್ ಟೀಗೆ ಹೇಳಿದಷ್ಟು ಪ್ರಮಾಣದಲ್ಲಿ ಸೀಗೆಕಾಯಿ ಹುಡಿಯನ್ನು ಹಾಕಿ. ಅದವಾದ ಬೆಂಕಿಯಲ್ಲಿ ಇದನ್ನು ಐದು ನಿಮಿಷ ಕಾಲ ಕುದಿಸಿ. ಬೆಂಕಿ ನಂದಿಸಿದ ಬಳಿಕ ಇದನ್ನು ತಣ್ಣಗಾಗಲು ಬಿಡಿ.
*ಈ ಮಿಶ್ರಣವನ್ನು ತಲೆಬುರುಡೆಗೆ ಚೆನ್ನಾಗಿ ಹಚ್ಚಿಕೊಳ್ಳಿ. ಕೂದಲನ್ನು ಹಗುರವಾಗಿ ಕಟ್ಟಿಕೊಂಡು ಶಾವರ್ ಟೋಪಿ ಹಾಕಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
ಕೂದಲು ತೊಳೆಯಲು ಸೀಗೆಕಾಯಿ ಹುಡಿ


ಬೇಕಾಗುವ ಸಾಮಗ್ರಿಗಳು
*200 ಗ್ರಾಂ ಸೀಗೆಕಾಯಿ ಹುಡಿ
*200 ಗ್ರಾಂ ಮೆಂತೆ
*ಒಂದು ಹಿಡಿ ತುಳಸಿ
*ಒಂದು ಹಿಡಿ ಕರಿಬೇವು ಸೀಗೆಕಾಯಿ ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ

ವಿಧಾನ
*ಎಲ್ಲಾ ಗಿಡಮೂಲಿಕೆಗಳನ್ನು ಬಿಸಿಲಿನಲ್ಲಿ ಎರಡು ದಿನ ಸರಿಯಾಗಿ ಒಣಗಿಸಿ. ಸರಿಯಾಗಿ ಒಣಗಿದ ಬಳಿಕ ಇದನ್ನು ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿ ಒಂದು ಡಬ್ಬದಲ್ಲಿ ಹಾಕಿಕೊಂಡು ಇಡಿ.
*ಇದನ್ನು ಬಳಸಲು ಒಂದು ಪಿಂಗಾಣಿಗೆ ಸ್ವಲ್ಪ ನೀರು ಹಾಗೂ ಒಂದು ಚಮಚ ಹುಡಿ ಹಾಕಿಕೊಂಡು ಕಲಿಸಿ ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ.
*ಸ್ವಲ್ಪ ಎಣ್ಣೆ ಹಾಕಿಕೊಂಡರೆ ಅದಕ್ಕೆ ಮತ್ತಷ್ಟು ಪೋಷಕಾಂಶಗಳು ಸಿಗುವುದು.
*ಇದನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಡಿ. ಇದರ ಬಳಿಕ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

English summary

Powerful Ways To Use Shikakai To Boost Hair Growth

You don't need to be told exactly how useful shikakai can be in hair growth, our mother used it and our grandmom before that! And every single time, it gave enviable results for sure! Along the way, you might have been lured into using exotic shampoos that promise instant smooth hair, well, we all have. And, frankly it has delivered what it promised, even if it was temporary and with a long-term repercussion.
X
Desktop Bottom Promotion