For Quick Alerts
ALLOW NOTIFICATIONS  
For Daily Alerts

ಸೀಗೆಕಾಯಿ ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ

|

ಸೀಗೆಕಾಯಿಯನ್ನು ತಲೆ ತೊಳೆಯಲು ಬಳಸುವುದರಿಂದ ತಲೆ ಹೊಟ್ಟಿನ ಸಮಸ್ಯೆ ಇರುವುದಿಲ್ಲ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಸೀಗೆಕಾಯಿಯನ್ನು ಒಣಗಿಸಿ ಅದರ ಪುಡಿಯನ್ನು ತಲೆ ಶುಚಿಗೆ ಬಳಸಲಾಗುವುದು ಎಂದು ಎಲ್ಲರಿಗೂ ಗೊತ್ತು. ಆದರೆ ಸೀಗೆಕಾಯಿ ಪುಡಿಯನ್ನು ಈ ಕೆಳಗಿನಂತೆ ಬಳಸಿದರೆ ಹೆಚ್ಚು ಪರಿಣಾಮಕಾರಿ ಅನ್ನುವುದು ಬೋಲ್ಡ್ ಸ್ಕೈಯ ಆಪ್ತ ಸಲಹೆ:

Treat Hair Loss With Reetha

* ಒಂದು ಲೀಟರ್ ತೆಂಗಿನ ಎಣ್ಣೆಯನ್ನು ಕುದಿಸಿ ಉರಿಯಿಂದ ಇಳಿಸಿ 1 ಕಪ್ ಸೀಗೆಕಾಯಿ ಪುಡಿ, ಅರ್ಧ ಕಪ್ ನೆಲ್ಲಿಕಾಯಿ ಪುಡಿ ಹಾಕಿ ಚೆನ್ನಾಗಿ ಕಲೆಸಿ 24 ಗಂಟೆಗಳ ಕಾಲ ಇಡಿ. ನಂತರ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಕುದಿಸಿ. ನಂತರ ಈ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿ 15 ನಿಮಿಷದ ಬಳಿಕ ತಲೆ ತೊಳೆಯಿರಿ.

* ಸೀಗೆಕಾಯಿ ಪುಡಿಯನ್ನು ಮೊಟ್ಟೆಯ ಬಿಳಿ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆದು ನಂತರ ಕೂದಲನ್ನು ಒಣಗಿಸಿದರೆ ಕೂದಲು ತುಂಬಾ ಮೃದುವಾಗಿರುವುದು ನಿಮ್ಮ ಗಮನಕ್ಕೆ ಬರುವುದು.

* ದಾಸವಾಳ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ 3 ಚಮಚ ಸೀಗೆ ಕಾಯಿ ಪುಡಿ, 3 ಚಮಚ ಮದರಂಗಿ ಪುಡಿ (ಮದರಂಗಿ ಎಲೆಯನ್ನು ಒಣಗಿಸಿ ಮಾಡಿದ ಪುಡಿ) ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದು ಶ್ಯಾಂಪೂ ಹಾಕಿ ತಲೆ ತೊಳೆದರೆ ಕೂದಲಿಗೆ ತುಂಬಾ ಒಳ್ಳೆಯದು.

* ಮೆಂತೆಯನ್ನು ನೆನೆ ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿ, ಅದಕ್ಕೆ ಸೀಗೆಕಾಯಿ ಮತ್ತು ಆಮ್ಲ ಪುಡಿ ಹಾಕಿ ಮಿಕ್ಸ್ ಮಾಡಿ, ಬೇಕಿದ್ದರೆ ಒಂದು ಮೊಟ್ಟೆಯ ಬಿಳಿ ಹಾಕಿ ತಲೆಗೆ ಹಚ್ಚಬಹುದು.

* ಸೀಗೆಕಾಯಿ, ಅಂಟ್ವಾಳ, ಅಗಸದೆ ಬೀಜ, ದಾಸಾವಾಳ ಎಲೆ ಇವುಗಳನ್ನು ಅರ್ಧ ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಶ್ಯಾಂಪೂ ರೀತಿ ಕೂಡ ಬಳಸಬಹುದು.

English summary

Treat Hair Loss With Reetha | Tips For Hair Care | ಸೀಗೆಕಾಯಿಯನ್ನು ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Dried reetha is a gentle cleanser, it does not make the hair brittle, while leaving the scalp dirt-free. Here are few ways to use dried reetha for revitalising hair and preventing hair loss.
X
Desktop Bottom Promotion