For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ-ಈರುಳ್ಳಿಯೇ ಸಮರ್ಥ ಮನೆಮದ್ದು

By Arshad
|

ನಮ್ಮ ಶರೀರದ ಮೇಲಿನ ಕೂದಲು ಒಂದು ವಿಚಿತ್ರ ಆಗರ. ನಮ್ಮ ತಲೆಯಲ್ಲಿ ಗರಿಷ್ಠವಾಗಿರುವ ಕೂದಲ ಸಹಿತ ಇಡಿಯ ಶರೀರದ ಕೂದಲು ಸತತವಾಗಿ ಉದುರುತ್ತಾ, ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟುತ್ತಾ ಇರುತ್ತದೆ. ಹೊರಚರ್ಮದ ಪದರದ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಾ ಇರುತ್ತವೆ.

Onion

ಆದರೆ ಪುರುಷರಿಗೆ ಮಾತ್ರ ತಲೆಗೂದಲು ಉದುರಿ ಬಕ್ಕತಲೆಯಾಗುವುದು ಏಕೆ ಎಂಬುದು ಇಂದಿಗೂ ಬಿಡಿಸಲಾರದ ರಹಸ್ಯ. ಸಾಮಾನ್ಯವಾಗಿ ಎಲ್ಲರ ತಲೆಯಿಂದ ದಿನಕ್ಕೆ ಐವತ್ತರಿಂದ ನೂರು ಕೂದಲು ಹುಟ್ಟುತ್ತವೆ ಮತ್ತು ಅಷ್ಟೇ ಸಂಖ್ಯೆಯ ಕೂದಲು ಹುಟ್ಟಿದರೆ ಮಾತ್ರ ತಲೆಗೂದಲು ಇದ್ದಂತೆಯೇ ಇರುತ್ತದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ಒಂದು ವೇಳೆ ಈ ಸಂಖ್ಯೆ ಹೆಚ್ಚಿದರೆ ಅಥವಾ ಉದುರಿದಷ್ಟು ಪ್ರಮಾಣದಲ್ಲಿ ಹುಟ್ಟದೇ ಇದ್ದರೆ ಬಕ್ಕತಲೆ ಆವರಿಸುತ್ತಾ ಹೋಗುತ್ತದೆ. ಇದಕ್ಕೆ alopecia ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುರುಷರು ಮೂವತ್ತರ ಗಡಿ ದಾಟುತ್ತಿದ್ದಂತೆಯೇ ಈ ಸ್ಥಿತಿ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಈ ಸ್ಥಿತಿ ಅನುವಂಶಿಕವಾಗಿದ್ದರೂ ಇದು ಪ್ರಾರಂಭವಾಗುವ ಕಾಲವನ್ನು ನಮ್ಮ ಅನಾರೋಗ್ಯಕರ ಆಹಾರಕ್ರಮ, ಒತ್ತಡ, ಹಾರ್ಮೋನುಗಳ ಬದಲಾವಣೆ ಮೊದಲಾದವು ಬೇಗನೇ ಆಹ್ವಾನಿಸಬಹುದು.

ತಲೆಗೂದಲು ಉದುರಲು ಗಂಧಕದ ಕೊರತೆ ಪ್ರಮುಖ ಕಾರಣವಾಗಿದೆ. ನಮ್ಮ ಈರುಳ್ಳಿಗೆ ಘಾಟು ಬರಲು ಕಾರಣವಾಗಿರುವ ಗಂಧಕ ನಮ್ಮ ಕೂದಲು ಉದುರುವುದನ್ನು ತಡೆಯಲೂ ಬಳಕೆಯಾಗುತ್ತದೆ. ಅಲ್ಲದೇ ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ. ಗಂಧಕದ ಇರುವಿಕೆಯಿಂದ ಚರ್ಮದ ಬುಡದಲ್ಲಿ ಕೊಲ್ಯಾಜೆನ್ ಎಂಬ ಪೋಷಕಾಂಶ ಉತ್ಪತ್ತಿಯಾಗಿ ಕೂದಲು ದೃಢವಾಗಲು ಮತ್ತು ಬೆಳೆಯಲು ನೆರವಾಗುತ್ತದೆ. ಬನ್ನಿ, ಈರುಳ್ಳಿ ನಮ್ಮ ಕೂದಲಿಗೆ ಹೇಗೆ ಉಪಕಾರಿಯಾಗಬಹುದು ಎಂಬುದನ್ನು ನೋಡೋಣ: ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

* ಈರುಳ್ಳಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ಕೂದಲ ಬುಡ ಕಳೆದುಕೊಂಡಿದ್ದ ಅಂಶಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುತ್ತದೆ.


* ಕೂದಲ ಬುಡವನ್ನು ಕೊಂಚ ಈರುಳ್ಳಿಯ ಹಸಿ ಭಾಗದಿಂದ ಮಸಾಜ್ ಮಾಡಿದಾಗ ಕೂದಲ ಬುಡದಲ್ಲಿ ರಕ್ತಸಂಚಾರ ಹೆಚ್ಚುವ ಮೂಲಕ ಇನ್ನಷ್ಟು ದೃಢಗೊಳ್ಳುತ್ತದೆ.
* ಈರುಳ್ಳಿಯಲ್ಲಿರುವ ಗಂಧಕ ಕೂದಲನ್ನು ದೃಢಗೊಳಿಸಿ ತೆಳುವಾಗುವುದು, ತುದಿ ಸೀಳುವುದು ಮೊದಲಾದವುಗಳನ್ನು ಕಡಿಮೆ ಮಾಡುತ್ತದೆ. ಈಗ ಕೆಲವು ಈರುಳ್ಳಿಯನ್ನು ಬಳಸುವ ಕೂದಲ ಲೇಪಗಳನ್ನು ನೋಡೋಣ

ಈರುಳ್ಳಿ ರಸದ ಸರಳ ವಿಧಾನ
*ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ಚಿಕ್ಕದಾಗಿ ಕಡೆದು ಹಿಂಡಿ ರಸ ಸಂಗ್ರಹಿಸಿ.
*ಈ ರಸವನ್ನು ಬೆರಳುಗಳ ತುದಿಗಳ ಮೂಲಕ ಕೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಈರುಳ್ಳಿ ಮತ್ತು ಜೇನಿನ ಲೇಪನ
ಕೂದಲ ಪೋಷಣೆಗೆ ಈರುಳ್ಳಿಯ ಜೊತೆಗೆ ಜೇನು ಸಹಾ ಉತ್ತಮವಾದ ತೇವಕಾರಕವಾಗಿದೆ. ಇವುಗಳ ಜೊತೆ ಕೂದಲ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೇ ಕೂದಲು ಉದುರುವುದನ್ನೂ ನಿಲ್ಲಿಸುತ್ತದೆ. ಇದಕ್ಕಾಗಿ ಸುಮಾರು ಕಾಲು ಕಪ್ ಆದರೂ ಈರುಳ್ಳಿಯ ರಸವನ್ನು ಸಂಗ್ರಹಿಸಬೇಕು.
*ಬಳಿಕ ಇದಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ಒಂದು ವೇಳೆ ಈ ಮಿಶ್ರಣ ಉಳಿದರೆ ಇದನ್ನು ಕುಡಿಯುವ ಮೂಲಕ ದೇಹದ ಒಳಗಿನಿಂದಲೂ ಹೆಚ್ಚಿನ ಪೋಷಣೆ ನೀಡಬಹುದು.

English summary

Onion: Effective home remedy to beat hair loss

Onion is a rich source of sulphur, which is extremely beneficial for healthy hair growth. It prevents hair breakage and accelerates regrowth of hair. This is so because sulphur increases the production of collagen which helps the hair to grow.
X
Desktop Bottom Promotion