For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By manu
|

ಈರುಳ್ಳಿ ಬರೆ ಅಡುಗೆಗೆ ಮಾತ್ರವಲ್ಲ, ಕೂದಲಿಗೂ ಉತ್ತಮ ಎಂದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಈರುಳ್ಳಿಯ ರಸ ಕೂದಲ ಉತ್ತಮ ಬೆಳವಣಿಗೆ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಒಣಕೂದಲ ಆರೈಕೆಗೆ ಈರುಳ್ಳಿಯನ್ನು ಅರೆದು ನಯವಾದ ಲೇಪನದಂತೆ ಲೇಪಿಸಿ ಅರ್ಧಗಂಟೆ ಕಾಲ ಹಾಗೇ ಬಿಟ್ಟು ಒಣಗಿಸಿ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳುವ ಮೂಲ ಉತ್ತಮ ಆರೈಕೆ ಪಡೆಯಬಹುದು. ಈರುಳ್ಳಿಯ ಕೊಂಚ ತೀಕ್ಷ್ಣವಾದ ವಾಸನೆ ಮತ್ತು ಕಣ್ಣಿನಲ್ಲಿ ನೀರು ಬರಿಸುವ ಎರಡು ತೊಂದರೆ ಬಿಟ್ಟರೆ ಕೂದಲಿಗೆ ಇದರ ಆರೈಕೆ ಅತ್ಯುತ್ತಮವಾಗಿದೆ ಹಾಗೂ ಕೂದಲು ಉದ್ದವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ಒಂದು ಸಂಶೋಧನೆಯ ಪ್ರಕಾರ ತಮ್ಮ ಕೂದಲಿಗೆ ಈರುಳ್ಳಿ ರಸವನ್ನು ಇತರ ನೈಸರ್ಗಿಕ ಸಾಮಾಗ್ರಿಗಳೊಂದಿಗೆ ಮಿಶ್ರಣ ಮಾಡಿ ಬಳಸಿದವರು ಬರೆಯ ಒಂದು ತಿಂಗಳಲ್ಲಿ ಉತ್ತಮ ಪರಿಣಾಮವನ್ನು ಕಂಡುಕೊಂಡಿದ್ದಾರೆ. ಕೂದಲು ಉದುರುವುದು, ಅದರಲ್ಲೂ ಅತಿಹೆಚ್ಚು ಪ್ರಮಾಣದಲ್ಲಿ ಉದುರುವ ಚಿಂತೆಯಲ್ಲಿದ್ದವರಿಗೆ ಈರುಳ್ಳಿ ರಸದ ಬಳಕೆಯಿಂದ ಉದುರುವುದು ಕಡಿಮೆಯಾಗಿ ಸಂತಸ ಮೂಡಿಸಿದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ಅಲ್ಲದೇ ಇತರೇ ಕಾರಣದಿಂದ ಕೂದಲು ಬಿಳಿಯಾಗಿದ್ದರೆ ಆ ಕೂದಲು ಉದುರಿದ ಬಳಿಕ ಅದೇ ಕೂದಲ ಬುಡದಲ್ಲಿ ಕಪ್ಪು ಕೂದಲನ್ನು ಬೆಳೆಸುವಲ್ಲಿಯೂ ನೆರವಾಗುತ್ತದೆ ಹಾಗೂ ಇನ್ನಷ್ಟು ಬಿಳಿಯ ಕೂದಲು ಬೆಳೆಯದಂತೆ ನೋಡಿಕೊಳ್ಳುತ್ತದೆ. ಇನ್ನೊಂದು ಸಂಶೋಧನೆಯ ಪ್ರಕಾರ ನಿಯಮಿತ ಬಳಕೆಯಿಂದ ಕೂದಲ ಬೆಳವಣಿಗೆ ಹೆಚ್ಚುವುದು ಮತ್ತು ಕೂದಲು ಸೊಂಪಾಗಿ, ನಯವಾಗಿದ್ದು ಸೌಂದರ್ಯವನ್ನೂ ವೃದ್ಧಿಸುವುದನ್ನು ಗಮನಿಸಲಾಗಿದೆ. ಈರುಳ್ಳಿ ರಸದ ಅದ್ಭುತವಾದ ಆರೋಗ್ಯಕಾರಿ ಪ್ರಯೋಜನಗಳು

ಒಂದು ವೇಳೆ ಒಂದೇ ತಿಂಗಳಲ್ಲಿ ನಿಮ್ಮ ಕೂದಲು ಈಗಿರುವುದಕ್ಕಿಂತ ಗಾಢ ಹಾಗೂ ಉತ್ತಮ ಆರೋಗ್ಯದಿಂದ ಕಳಕಳಿಸಬೇಕಿದ್ದರೆ ಈರುಳ್ಳಿ ರಸವನ್ನು ಬಳಸುವುದು ಒಂದು ಉತ್ತಮ ಮಾರ್ಗವಾಗಿದೆ. ಆದರೆ ಇದನ್ನು ಬಳಸುವುದು ಹೇಗೆ ಎಂಬ ನಿಮ್ಮ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ...

 ಬರೆಯ ಈರುಳ್ಳಿಯ ರಸ

ಬರೆಯ ಈರುಳ್ಳಿಯ ರಸ

ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು.

ತಲೆಗೂದಲು ತೊಳೆದುಕೊಂಡ ಬಳಿಕ

ತಲೆಗೂದಲು ತೊಳೆದುಕೊಂಡ ಬಳಿಕ

ತಲೆಸ್ನಾನದ ಬಳಿಕವೂ ಈರುಳ್ಳಿಯ ರಸವನ್ನು ಬಳಸಬಹುದು. ಇದಕ್ಕಾಗಿ ಈರುಳ್ಳಿಯ ರಸವನ್ನು ನೆನೆದ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಸೀರಂ ದ್ರಾವಣ ಬಳಸಿ ತೊಳೆದುಕೊಂಡರೆ ಇನ್ನೂ ಉತ್ತಮ.

ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ

ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ

ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

 ರಮ್‌ನೊಂದಿಗೆ...

ರಮ್‌ನೊಂದಿಗೆ...

ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಈರುಳ್ಳಿಯ ರಸವನ್ನು ಸಂಗ್ರಹಿಸಿ ಚಿಕ್ಕ ಉರಿಯಲ್ಲಿ ಕೊಂಚ ಬಿಸಿ ಮಾಡಿ. ಇದಕ್ಕೆ ಸುಮಾರು ಅರವತ್ತು ಮಿ.ಲೀ ರಮ್ ಸೇರಿಸಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಕೊಂಚ ಕಾಲ ಬಿಟ್ಟು ತೊಳೆದುಕೊಳ್ಳೀಳ್ಳಿ. ಇದು ಕೂದಲ ವಾಸನೆ ಹಾಗೂ ಸೊಂಪನ್ನು ಹೆಚ್ಚಿಸುತ್ತದೆ ಹಾಗೂ ಕೂದಲು ಇನ್ನಷ್ಟು ಉದ್ದವಾಗಿ ಬೆಳೆಯಲು ನೆರವಾಗುತ್ತದೆ.

 ಜೇನಿನೊಂದಿಗೆ ಬೆರೆಸಿ ಬಳಸಿ

ಜೇನಿನೊಂದಿಗೆ ಬೆರೆಸಿ ಬಳಸಿ

ತಲೆಗೂದಲ ಆರೈಕೆಗೆ ಜೇನು ಸಹಾ ಉತ್ತಮವಾಗಿದೆ. ಒಂದು ಕಪ್ ಈರುಳ್ಳಿಯ ರಸಕ್ಕೆ ಕೊಂಚ ಜೇನನ್ನು ಸೇರಿಸಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿ ಕೊಂಚ ಹೊತ್ತು ಬಿಟ್ಟು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಜೇನು ಕೂದಲಿಗೆ ಆರೈಕೆ, ಕಾಂತಿ ಮತ್ತು ದೃಢತೆ ನೀಡುತ್ತದೆ. ಈರುಳ್ಳಿ ರಸದೊಂದಿಗೆ ಈ ಶಕ್ತಿಗಳು ಇನ್ನಷ್ಟು ಹೆಚ್ಚುತ್ತವೆ. ಪರಿಣಾಮವಾಗಿ ಉದ್ದ, ಕಾಂತಿಯುಕ್ತ ಮತ್ತು ದೃಢಕೂದಲು ಬೆಳೆಯುತ್ತದೆ.

ಆಲಿವ್ ಎಣ್ಣೆಯೊಂದಿಗೆ ಬಳಸಿ

ಆಲಿವ್ ಎಣ್ಣೆಯೊಂದಿಗೆ ಬಳಸಿ

ಕೊಬ್ಬರಿ ಎಣ್ಣೆಯ ಬಳಿಕ ಕೂದಲಿಗೆ ಆಲಿವ್ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಮೊದಲು ಆಲಿವ್ ಎಣ್ಣೆಯಿಂದ ತಲೆಗೂದಲನ್ನು ಆವರಿಸಿ. ಹದಿನೈದು ನಿಮಿಷಗಳ ಬಳಿಕ ಈರುಳ್ಳಿಯ ರಸದಿಂದ ಎರಡನೆಯ ಪದರದಂತೆ ಹಚ್ಚಿ ಒಣಗಲು ಬಿಡಿ. ಇದಕ್ಕೆ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷ ಬೇಕಾಗಬಹುದು. ನಂತರ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಆಲಿವ್ ಎಣ್ಣೆ ಕೂದಲ ಬುಡವನ್ನು ದೃಢಗೊಳಿಸಿದರೆ ಈರುಳ್ಳಿ ರಸ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.

ಬಿಯರ್ ಬೆರೆಸಿ ಹಚ್ಚಿ

ಬಿಯರ್ ಬೆರೆಸಿ ಹಚ್ಚಿ

ಕೂದಲ ಬುಡ ಹೆಚ್ಚಲು ಬಿಯರ್ ಸಹಾ ಒಂದು ಉತ್ತಮ ಪ್ರಸಾಧನವಾಗಿದೆ. ಮೊದಲು ಕೂದಲನ್ನು ಕೊಂಚ ಬಿಯರ್ ಬಳಸಿ ತೊಳೆದುಕೊಳ್ಳಿ. ಸುಮಾರು ಎಂಟು ಗಂಟೆಯ ಬಳಿಕ ಕೂದಲನ್ನು ಈರುಳ್ಳಿಯ ರಸ ಬಳಸಿ ಮಸಾಜ್ ಮಾಡುತ್ತಾ ಇಡಿಯ ತಲೆ ಮತ್ತು ಕೂದಲ ತುದಿಯವರೆಗೆ ಹಚ್ಚಿ. ಇದನ್ನು ಅದಲು ಬದಲಾಗಿಯೂ ಮಾಡಬಹುದು, ಅಂದರೆ ಮೊದಲು ಈರುಳ್ಳಿ ರಸ, ಬಳಿಕ ಬಿಯರ್ ನ ಸ್ನಾನ. ಅದರೆ ಬಿಯರ್ ಅತಿ ತಣ್ಣಗಿರಬೇಕು. ಬೇಸಿಗೆಗೆ ಈ ವಿಧಾನ ಅತ್ಯುತ್ತಮವಾಗಿದ್ದು ರಜೆಯ ದಿನದಲ್ಲಿ ಅನುಸರಿಸುವುದು ಉತ್ತಮ ಕ್ರಮವಾಗಿದೆ.

English summary

Ways To Use Onion Juice In Hair

Onion juice is considered to be very effective and good for the hair. Onion juice can be ground into a thin paste and then applied on dry hair (which contains no oil) and left to dry for at least half an hour, before rinsing it well with lukewarm water and a homemade or mild shampoo. The reason why onion juice is used in the hair is because of its pungent properties that aid in increasing hair growth.
X
Desktop Bottom Promotion