For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

|

ಕೂದಲಿಗೆ ಈರುಳ್ಳಿ ಹಚ್ಚಿದರೆ ಒಳ್ಳೆಯದು ಎಂದು ಈ ಹಿಂದೆ ಬರೆದಂತಹ ಕೆಲವೊಂದು ಲೇಖನಗಳಲ್ಲಿ ಹೇಳಿದ್ದೆವು. ಇಲ್ಲಿ ನಾವು ಈರುಳ್ಳಿಯನ್ನು ಯಾವೆಲ್ಲಾ ವಸ್ತುಗಳ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಹೆಚ್ಚು ಪ್ರಯೋಜನಕಾರಿ ಎಂಬ ವಿಷಯದ ಕುರಿತು ಮಾಹಿತಿ ನೀಡುತ್ತಿದ್ದೇವೆ.

ಕೂದಲು ಉದುರುವುದು, ಕೂದಲು ಕವಲೊಡೆಯುವುದು, ಅಕಾಲಿಕ ನೆರಿಗೆ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲುವ ಶಕ್ತಿ ಈರುಳ್ಳಿ ರಸಕ್ಕೆ ಇದೆ. ಈ ಈರುಳ್ಳಿ ರಸವನ್ನು ಇಲ್ಲಿ ಹೇಳಿರುವ ವಸ್ತುಗಳ ಜೊತೆ ಮಿಕ್ಸ್ ಮಾಡಿದರಂತೂ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುವುದರ ಜೊತೆಗೆ ಸೊಂಪಾದ ಕೂದಲನ್ನು ಪಡೆಯಬಹುದು:

ಈರುಳ್ಳಿ ರಸವನ್ನು ತಲೆಗೆ ಹಚ್ಚುವ ವಿಧಾನ

ಈರುಳ್ಳಿ ರಸವನ್ನು ತಲೆಗೆ ಹಚ್ಚುವ ವಿಧಾನ

ಈರುಳ್ಳಿಯನ್ನು ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿ, ಟವಲ್ ಸುತ್ತಿ ಅರ್ಧ ಗಂಟೆ ಬಿಡಿ. ನಂತರ ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ.

ಈರುಳ್ಳಿ ರಸ ಮತ್ತು ತೆಂಗಿನೆಣ್ಣೆ

ಈರುಳ್ಳಿ ರಸ ಮತ್ತು ತೆಂಗಿನೆಣ್ಣೆ

ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿಗೆ ತುಂಬಾ ಒಳ್ಳೆಯದು. ಈರುಳ್ಳಿ ಮಿಕ್ಸ್ ತೆಂಗಿನೆಣ್ಣೆ ತಲೆಹೊಟ್ಟನ್ನು ಕಡಿಮೆ ಮಾಡಿ, ಕೂದಲು ಮಂದವಾಗಿ ಬೆಳೆಯುವಂತೆ ಮಾಡುತ್ತದೆ.

 ಬೀರ್ ಜೊತೆ

ಬೀರ್ ಜೊತೆ

ಬೀರ್ ಸ್ವಾಭಾವಿಕವಾಗಿಯೇ ಕೂದಲಿಗೆ ಆರೋಗ್ಯಕರವಾದ ಗುಣಗಳನ್ನು ಹೊಂದಿದೆ. ಈ ಬೀರ್ ಜೊತೆ ಈರುಳ್ಳಿ ರಸ ಕೂಡ ಸೇರಿಸಿದರೆ ಕೂದಲಿಗೆ ತುಂಬಾ ಒಳ್ಳೆಯದು.

ರಮ್

ರಮ್

ಈರುಳ್ಳಿಯನ್ನು ಪೇಸ್ಟ್ ಮಾಡಿ ಅದನ್ನು ಸ್ವಲ್ಪ ರಮ್ ಜೊತೆ ಮಿಕ್ಸ್ 2 ಗಂಟೆಗಳ ಕಾಲ ಇಟ್ಟು ನಂತರ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಈ ರೀತಿ ಮಾಡುವುದರಿಂದಲೂ ಕೂದಲಿನ ಆರೋಗ್ಯ ಹೆಚ್ಚಿಸಬಹುದು.

ಈರುಳ್ಳಿ ಮತ್ತು ನಿಂಬೆರಸ

ಈರುಳ್ಳಿ ಮತ್ತು ನಿಂಬೆರಸ

ತಲೆ ಹೊಟ್ಟು, ತಲೆ ತುರಿಕೆ ಈ ಸಮಸ್ಯೆ ಹೋಗಲಾಡಿಸಲು ಇವೆರಡರ ಮಿಶ್ರಣವನ್ನು ತಲೆಗೆ ಹಚ್ಚಿದರೆ ಸಾಕು.

ಈರುಳ್ಳಿ ಮತ್ತು ಮೊಸರು

ಈರುಳ್ಳಿ ಮತ್ತು ಮೊಸರು

ಮೊಸರು ನೈಸರ್ಗಿಕವಾದ ಕಂಡೀಷನರ್, ಮೊಸರು ಜೊತೆ ಈರುಳ್ಳಿ ರಸ ಮಿಕ್ಸ್ ಮಾಡಿ ಹಚ್ಚಿದರೆ ಕೂದಲು ಮೃದುವಾಗಿ, ಸೊಂಪಾಗಿ ಬೆಳೆಯುವುದು.

 ಈರುಳ್ಳಿ ಮತ್ತು ಮೊಟ್ಟೆ

ಈರುಳ್ಳಿ ಮತ್ತು ಮೊಟ್ಟೆ

ಮೊಟ್ಟೆಯ ಬಿಳಿ ಹಚ್ಚು ಕೂದಲಿನ ಆರೈಕೆ ಮಾಡುವ ಅಭ್ಯಾಸವಿರುವವರು, ಮೊಟ್ಟೆಯ ಬಿಳಿ ಜೊತೆ ಈರುಳ್ಳಿ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ಸೊಗಸಾದ ಕೂದಲನ್ನು ಪಡೆಯಬಹುದು.

English summary

Best Way To Use Onion Juice For Hair Growth

You can ground the onion into juice for hair growth and also to nourish the hair naturally. This home remedy also works wonders for getting shiny and strong hair. To fight hair fall and increase hair growth, apply onion juice.
X
Desktop Bottom Promotion