For Quick Alerts
ALLOW NOTIFICATIONS  
For Daily Alerts

ತಲೆ ಕೂದಲಿನ ಆರೈಕೆಗೆ 'ದಾಲ್ಚಿನ್ನಿ' ಹೇರ್ ಪ್ಯಾಕ್!

ಕೂದಲು ಉದುರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಆದರೆ ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವಂತಹ ದಾಲ್ಚಿನ್ನಿಯಿಂದ ಪರಿಹಾರ ಕಂಡುಕೊಳ್ಳಬಹುದು....

By Hemanth
|

ನಾರಿಗೆ ಉದ್ದನೆಯ ಕೂದಲು ಇದ್ದರೆ ಚಂದ. ರೇಷ್ಮೆಯಂತಹ ಹೊಳೆಯುವ ಕೂದಲು ಇದ್ದರೆ ಆಗ ಸೌಂದರ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೆ ಭಾರತದಲ್ಲಿ ಯಾವುದೇ ಹುಡುಗಿಯನ್ನು ನೋಡಿದರೂ ಉದ್ದನೆಯ ಕೂದಲು ಕಾಣಿಸುತ್ತಾ ಇತ್ತು.

ಆದರೆ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಕೂದಲು ಗಿಡ್ಡದಾಗುತ್ತಾ ಬಂದಿದೆ. ಅದಕ್ಕೆ ತಕ್ಕಂತೆ ಕೂದಲಿನ ಆರೈಕೆಗೆ ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಾ ಇದೆ. ಇದರಿಂದ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಿ ಹಾಗೂ ಆಧುನಿಕ ಜೀವನಶೈಲಿಯಿಂದ ಕೂದಲು ಉದುರಲು ಆರಂಭವಾಗಿದೆ.ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!

ಕೂದಲು ಉದುರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಆದರೆ ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಹಲವಾರು ಗುಣಗಳನ್ನು ಹೊಂದಿರುವಂತಹ ದಾಲ್ಚಿನ್ನಿಯು (ಚಕ್ಕೆ) ಕೂದಲು ಉದುರುವ ಸಮಸ್ಯೆಗೆ ತುಂಬಾ ಪರಿಣಾಮಕಾರಿಯೆಂದು ಹಲವಾರು ಸಂಶೋಧನೆಗಳು ಕೂಡ ಹೇಳಿವೆ.ಉತ್ತಮ ಆರೋಗ್ಯದ ಸೂತ್ರ ಚಕ್ಕೆಯಲ್ಲಿದೆ

ದಾಲ್ಚಿನ್ನಿಯು ಕೂದಲು ಉದುರುವ ಸಮಸ್ಯೆಗೆ ಯಾವ ರೀತಿಯಿಂದ ಕೆಲಸ ಮಾಡಲಿದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ....

ಆಲಿವ್ ಎಣ್ಣೆಯೊಂದಿಗೆ ದಾಲ್ಚಿನ್ನಿ

ಆಲಿವ್ ಎಣ್ಣೆಯೊಂದಿಗೆ ದಾಲ್ಚಿನ್ನಿ

ದಾಲ್ಚಿನ್ನಿ ಮತ್ತು ಆಲಿವ್ ಎಣ್ಣೆಯ ಮಿಶ್ರಣವು ಕೂದಲು ಉದುರುವ ಸಮಸ್ಯೆಯನ್ನು ತುಂಬಾ ವೇಗವಾಗಿ ನಿವಾರಣೆ ಮಾಡುವುದು. ಈ ಮಿಶ್ರಣವು ರಕ್ತ ಸಂಚಾರವನ್ನು ಸುಧಾರಿಸಿ ತಲೆಬುರುಡೆಗೆ ತೇವಾಂಶ ನೀಡಿ ಕೂದಲು ಉದುರದಂತೆ ನೋಡಿಕೊಳ್ಳುವುದು.

ಆಲಿವ್ ಎಣ್ಣೆಯೊಂದಿಗೆ ದಾಲ್ಚಿನ್ನಿ

ಆಲಿವ್ ಎಣ್ಣೆಯೊಂದಿಗೆ ದಾಲ್ಚಿನ್ನಿ

ಒಂದು ಚಮಚ ಆಲಿವ್ ಎಣ್ಣೆಯನ್ನು ಎರಡು ಚಮಚ ದಾಲ್ಚಿನ್ನಿ ಹುಡಿಯೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಉತ್ತಮ ಫಲಿತಾಂಶ ಪಡೆಯಲು ಈ ಮಿಶ್ರಣವನ್ನು ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ಕೂದಲು ತೊಳೆಯಿರಿ. ಈ ರೀತಿಯಲ್ಲಿ ದಾಲ್ಚಿನ್ನಿ ಹುಡಿಯನ್ನು ತುಂಬಾ ಪರಿಣಾಮಕಾರಿಯಾಗಿ

ಬಳಸಬಹುದು.

ಸೀಗೆಕಾಯಿಯೊಂದಿಗೆ ದಾಲ್ಚಿನ್ನಿ

ಸೀಗೆಕಾಯಿಯೊಂದಿಗೆ ದಾಲ್ಚಿನ್ನಿ

ನಿಮಗೆ ಉದ್ದಗಿನ ಸುಂದರ ಕೂದಲು ಬೇಕೆಂದರೆ ದಾಲ್ಚಿನ್ನಿ ಮತ್ತು ಸೀಗೆಕಾಯಿ ಪೌಡರ್ ನೊಂದಿಗೆ ಮಿಶ್ರಣ ಮಾಡಿಕೊಂಡು ಮಾಸ್ಕ್ ಆಗಿ ಬಳಸಿಕೊಳ್ಳಿ. ಒಂದೆರಡು ಚಮಚ ಸೀಗೆಕಾಯಿ ಪೌಡರ್ ಮತ್ತು ಎರಡು ಚಮಚ ದಾಲ್ಚಿನ್ನಿ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲಿಗೆ ಶಾವರ್ ಕ್ಯಾಪ್ ಹಾಕಿಕೊಂಡು ಒಂದು ಗಂಟೆ ಅದನ್ನು ಒಣಗಲು ಬಿಡಿ. ಇದರ ಬಳಿಕ ಆದಷ್ಟು ಬೇಗನೆ ಕೂದಲು ತೊಳೆಯಿರಿ.

ದಾಲ್ಚಿನ್ನಿ, ಮೊಟ್ಟೆ ಮತ್ತು ಆಲಿವ್ ತೈಲ

ದಾಲ್ಚಿನ್ನಿ, ಮೊಟ್ಟೆ ಮತ್ತು ಆಲಿವ್ ತೈಲ

ದಪ್ಪಗಿನ ಹಾಗೂ ಬಲವಾದ ಕಪ್ಪಗಿನ ಕೂದಲು ಬೇಕಿದ್ದರೆ ಈ ಮಿಶ್ರಣವನ್ನು ನಿಮ್ಮ ಕೂದಲಿನ ಆರೈಕೆಯಲ್ಲಿ ಬಳಸಿಕೊಳ್ಳಬೇಕು. ತಿಂಗಳಲ್ಲಿ ಒಂದು ಸಲವಾದರೂ ಇದನ್ನು ಮಾಡಬೇಕು.

ದಾಲ್ಚಿನ್ನಿ, ಮೊಟ್ಟೆ ಮತ್ತು ಆಲಿವ್ ತೈಲ

ದಾಲ್ಚಿನ್ನಿ, ಮೊಟ್ಟೆ ಮತ್ತು ಆಲಿವ್ ತೈಲ

2 ಚಮಚ ದಾಲ್ಚಿನ್ನಿ ಹುಡಿ, ಒಂದು ಚಮಚ ಆಲಿವ್ ತೈಲ ಮತ್ತು ಒಂದು ಮೊಟ್ಟೆಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸುಮಾರು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಕೂದಲನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಬಳಸಿದರೂ ಉತ್ತಮ ಫಲಿತಾಂಶ ಪಡೆಯಬಹುದು.

English summary

How To Use Cinnamon For Hair Care?

Cinnamon is one versatile spice that is extensively used for hair care purposes by women all over the globe. Especially, nowadays when women start experiencing hair problems from an early age.
X
Desktop Bottom Promotion