For Quick Alerts
ALLOW NOTIFICATIONS  
For Daily Alerts

  ಪುರುಷರ ಬೊಕ್ಕತಲೆಯಲ್ಲಿ ಕೂದಲು ಚಿಗುರಿಸುವ ಮನೆ ಔಷಧಿ

  |

  ಬೊಕ್ಕತಲೆ ಎಂದರೆ ತಲೆಯ ಒಂದು ಭಾಗದಲ್ಲಿ ಅಥವಾ ಇಡಿಯ ತಲೆಯಲ್ಲಿ ಕೂದಲು ಉದುರಿ ಆ ಸ್ಥಳದಲ್ಲಿ ಹೊಸ ಕೂದಲು ಹುಟ್ಟದೇ ಇರುವುದು. ವಿಶ್ವದ 70% ಪುರುಷರು ಪೂರ್ಣ ಅಥವಾ ಪಾರ್ಶ್ವ ಬೊಕ್ಕತನವನ್ನು ಹೊಂದಿದ್ದಾರೆ.

  ಇದಕ್ಕೆ ಕಾರಣವೇನು, ಅದರಲ್ಲೂ ಪುರುಷರನ್ನೇ ಕಾಡುವುದಕ್ಕೆ ಏನು ಕಾರಣವಿರಬಹುದು ಎಂಬ ವಿಷಯದ ಮೇಲೆ ಹಲವಾರು ಸಂಶೋಧನೆಗಳು ನಡೆಯುತ್ತಿದ್ದರೂ ಇದಕ್ಕೆ ಪುರುಷರಲ್ಲಿರುವ ಟೆಸ್ಟ್ರೋಸ್ಟೆರೋನ್ ಹಾರ್ಮೋನುಗಳೇ ಕಾರಣ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆಯೇ ವಿನಃ ಯಾರೂ ಮತ್ತೆ ತಲೆಯಲ್ಲಿ ಹೊಸ ಕೂದಲು ಚಿಗುರಿಸುತ್ತೇವೆ ಎಂದು ಎದೆ ತಟ್ಟಿ ಹೇಳುತ್ತಿಲ್ಲ (ಒಂದು ವೇಳೆ ಹೇಳುವವರಿದ್ದರೆ ದಿನಕ್ಕೆ ಸಾವಿರ ರೂಪಾಯಿಗಳ ಆದಾಯ ಖಂಡಿತ). ಬೊಕ್ಕ ತಲೆ: ಮನೆ ಮದ್ದಿರುವಾಗ ಚಿಂತೆ ಏತಕ್ಕೆ?

  ಕೂದಲು ಸಹಾ ಒಂದು ಕ್ರಮದಲ್ಲಿಯೇ ಉದುರುತ್ತಾ ಬರುತ್ತದೆಯೇ ಹೊರತು ಒಂದೇ ರಾತ್ರಿಯಲ್ಲಿ ಉದುರುವುದಿಲ್ಲ. ಈ ಕ್ರಮ ಅನುವಂಶಿಕವಾಗಿದ್ದು ನಮ್ಮ ವಂಶವಾಹಿನಿಯಲ್ಲಿಯೇ ದಾಖಲಿಸ್ಪಟ್ಟಿರುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಉದುರಿದ ಕೂದಲಿನ ಸ್ಥಳದಲ್ಲಿ ಅತಿ ಸೂಕ್ಷ್ಮವಾದ ಪಾರದರ್ಶಕ ಮತ್ತು ಅತಿ ಗಿಡ್ಡವಾದ ಕೂದಲು ಬೆಳೆದುಬಿಡುತ್ತದೆ. ಈ ಕೂದಲುಗಳಿರುವಲ್ಲಿ ಚರ್ಮವೇ ಹೆಚ್ಚು ಕಂಡು ಬಂದು ಇದೇ ಬೊಕ್ಕತಲೆಯಾಗುತ್ತದೆ.  ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದು 

  ಹಾಗಂತ ಚಿಂತಿಸುವ ಅಗತ್ಯವಿಲ್ಲ, ಈ ಸ್ಥಳದಲ್ಲಿ ಮತ್ತೆ ಹೊಸ ಕಪ್ಪು ಕೂದಲು ಬೆಳೆಯುವ ಸಾಧ್ಯತೆ ಇದೆ. ಕೆಲವು ಮನೆಮದ್ದುಗಳು ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತವೆ. ಬನ್ನಿ, ಇಂತಹ ಕೆಲವು ಪರಿಣಾಮಕಾರಿ ವಿಧಾನಗಳನ್ನು ನೋಡೋಣ...

  ಮೆಂತೆ ಮತ್ತು ಕೊಬ್ಬರಿ ಎಣ್ಣೆ

  ಮೆಂತೆ ಮತ್ತು ಕೊಬ್ಬರಿ ಎಣ್ಣೆ

  *ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಕೆಲವು ಮೆಂತೆ ಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕೆಲವು ನಿಮಿಷಗಳವರೆಗೆ ಹುರಿಯಿರಿ

  * ಈ ಎಣ್ಣೆ ತಣಿದ ಬಳಿಕ ಮೆಂತೆಕಾಳುಗಳನ್ನು ಸೋಸಿ ಎಣ್ಣೆಯನ್ನು ಕೊಂಚವೇ ಪ್ರಮಾಣದಲ್ಲಿ ತಲೆಗೆ ಹಚ್ಚಿಕೊಳ್ಳಿ

  ಮೆಂತೆ ಮತ್ತು ಕೊಬ್ಬರಿ ಎಣ್ಣೆ

  ಮೆಂತೆ ಮತ್ತು ಕೊಬ್ಬರಿ ಎಣ್ಣೆ

  * ನಯವಾದ ಒತ್ತಡದಲ್ಲಿ ಇಡಿಯ ತಲೆಗೆ, ಕೂದಲ ಬುಡಕ್ಕೆ ತಾಕುವಂತೆ ಮಸಾಜ್ ಮಾಡಿ. ರಾತ್ರಿ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿದರೆ ಉತ್ತಮ.

  * ವಾರಕ್ಕೆ ಈ ಎಣ್ಣೆಯನ್ನು ಮೂರರಿಂದ ನಾಲ್ಕು ಬಾರಿ ಹಚ್ಚಿದರೆ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಬೊಕ್ಕತನ ತಡವಾಗುತ್ತದೆ.

  ಮದರಂಗಿ ಎಲೆಗಳು

  ಮದರಂಗಿ ಎಲೆಗಳು

  ಸಾವಿರಾರು ವರ್ಷಗಳಿಂದ ಮದರಂಗಿ ಎಲೆಗಳನ್ನು ಭಾರತ, ಅರೇಬಿಯಾ ದೇಶಗಳಲ್ಲಿ ಕೂದಲ ಪೋಷಣೆ ಮತ್ತು ಕೂದಲಿಗೆ ಬಣ್ಣ ನೀಡಲು ಬಳಲ್ಪಡುತ್ತಾ ಬರಲಾಗಿದೆ. ಕೂದಲ ರಕ್ಷಣೆಗೆ ಮದರಂಗಿಯನ್ನು ಬಳಸಲು ಹೀಗೆ ಮಾಡಿ:

  * ಕೊಂಚ ಸಾಸಿವೆ ಎಣ್ಣೆಯಲ್ಲಿ ಎಣ್ಣೆ ಮುಳುಗುವಷ್ಟು ಮದರಂಗಿ ಎಳೆಗಳನ್ನು ಹಾಕಿ ಎಣ್ಣೆಯನ್ನು ಕುದಿಸಿ.

  * ಎಲೆಗಳು ಕೊಂಚ ಸುಡುತ್ತಾ ಬರುತ್ತಿದ್ದಂತೆಯೇ ಉರಿಯನ್ನು ಆರಿಸಿ ತಣಿಯಲು ಬಿಡಿ.

  * ಬಳಿಕ ಈ ಎಣ್ಣೆಯನ್ನು ಸೋಸಿ ನಿಮ್ಮ ನಿತ್ಯದ ತಲೆಗೆ ಹಾಕುವ ಎಣ್ಣೆಯೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಕೊಬ್ಬರಿ ಎಣ್ಣೆಯೇ ಇದಕ್ಕೆ ಉತ್ತಮ ಜೋಡಿ.

  * ಈ ಎಣ್ಣೆಯನ್ನು ರಾತ್ರಿ ತಲೆಗೆ ಹೆಚ್ಚಿ ಮಲಗಿ ಬೆಳಿಗ್ಗೆ ಸ್ನಾನ ಮಾಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಹೊಸಕೂದಲು ಬರಲು ನೆರವಾಗುತ್ತದೆ.

  ಮೊಸರು ಮತ್ತು ಕಡಲೆಹಿಟ್ಟಿನ ಲೇಪ

  ಮೊಸರು ಮತ್ತು ಕಡಲೆಹಿಟ್ಟಿನ ಲೇಪ

  * ಎರಡರಿಂದ ಮೂರು ದೊಡ್ಡಚಮಚ ಹುಳಿಮೊಸರು ಮತ್ತು ಎರಡು ದೊಡ್ಡಚಮಚ ಕಡೆಹಿಟ್ಟು ಬೆರೆಸಿ ಅತಿ ದಪ್ಪನೆಯೂ ಅಲ್ಲದ, ಅತಿ ತೆಳುವೂ ಅಲ್ಲದ ಲೇಪನ ತಯಾರಿಸಿ.

  * ಈ ಲೇಪನವನ್ನು ತಲೆಗೆ ಹಚ್ಚಿ ಒಂದು ಘಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ.

  * ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಅನುಸರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಬಕ್ಕತಲೆಯಲ್ಲಿ ಕೂದಲು ಹುಟ್ಟುವ ಸಾಧ್ಯತೆ ಹೆಚ್ಚುತ್ತದೆ.

  ಈರುಳ್ಳಿ

  ಈರುಳ್ಳಿ

  ಒಂದು ವೇಳೆ ತಲೆಯ ಒಂದು ಭಾಗದಲ್ಲಿ ಮಾತ್ರ ಕೂದಲು ಹೋಗಿದ್ದು ಉಳಿದ ಕಡೆ ಗಾಢವಾಗಿದ್ದರೆ (patchy baldness) ಇದಕ್ಕೆ ನೀರುಳ್ಳಿ ಉತ್ತಮ ಪರಿಹಾರ ಒದಗಿಸಬಲ್ಲುದು

  * ಬಿಳಿ ಅಥವಾ ಕೆಂಪಗಿರುವ ದೊಡ್ಡ ಗಾತ್ರದ ಈರುಳ್ಳಿಯ ಸಿಪ್ಪೆ ಸುಲಿದು ಅಡ್ಡಲಾಗಿ ಎರಡು ಭಾಗಗಳಾಗಿ ಕತ್ತರಿಸಿ. ಈ ಭಾಗದಿಂದ ಒಸರುತ್ತಿರುವ ರಸವನ್ನು ಕೂದಲು ಹೋಗಿರುವ ಭಾಗದ ಮೇಲೆ ದಿನಕ್ಕೆರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ನಯವಾಗಿ ಉಜ್ಜಿ.

  ಈರುಳ್ಳಿ

  ಈರುಳ್ಳಿ

  * ಈ ಭಾಗದ ಚರ್ಮ ಕೊಂಚ ಕೆಂಪಗಾಗುವವರೆಗೂ ಉಜ್ಜಿ. ನೀರುಳ್ಳಿಯ ರಸ ಖಾಲಿಯಾದಂತೆ ಅನ್ನಿಸಿದರೆ ಕೊಂಚ ಭಾಗ ಕತ್ತರಿಸಿ ಹೊಸ ಪಾರ್ಶ್ವದಿಂದ ಉಜ್ಜಿ.

  * ಬಳಿಕ ಈ ಭಾಗಕ್ಕೆ ಕೊಂಚವೇ ಜೇನುತುಪ್ಪ ಹಚ್ಚಿ ಕೊಂಚ ಕಾಲ ಬಿಟ್ಟು ತೊಳೆದುಕೊಳ್ಳಿ. ಪ್ರತಿದಿನ ಈ ವಿಧಾನ ಅನುಸರಿಸಿದರೆ ಕೆಲವೇ ದಿನಗಳಲ್ಲಿ ಹೊಸ ಕೂದಲು ಹುಟ್ಟುತ್ತದೆ.

  ನೆಲ್ಲಿಕಾಯಿ

  ನೆಲ್ಲಿಕಾಯಿ

  * ನೆಲ್ಲಿಕಾಯಿಯನ್ನು ಚೆನ್ನಾಗಿ ಒಣಗಿಸಿ ಈ ತುಂಡುಗಳನ್ನು ಮುಳುಗುವಷ್ಟು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ.

  * ಕುದಿಯಲು ಪ್ರಾರಂಭವಾದ ಬಳಿಕ ಒಂದೆರಡು ನಿಮಿಷ ಬಿಟ್ಟು ಉರಿ ಆರಿಸಿ ತಣಿಯಲು ಬಿಡಿ.

  * ಬಳಿಕ ಈ ಎಣ್ಣೆಯನ್ನು ಸೋಸಿ ಒಂದು ಭದ್ರವಾದ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಮುಚ್ಚಳ ಮುಚ್ಚಿ ಸಂಗ್ರಹಿಸಿ.

  * ಈ ಎಣ್ಣೆಯನ್ನು ನಿಮ್ಮ ತಲೆಗೆ ನಿತ್ಯವೂ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡಿ.

  * ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ.

   

  English summary

  Top Home Remedies for Hair Loss in Men

  Baldness is defined as the partial or complete loss of hair or lack of growth of hair. About 70% of the men suffer from male pattern baldness. Baldness is the most common reason for hair loss in men The main reason for baldness is heredity or male sex hormones. The hairline gradually recedes and the hair becomes finer and thinner. It can be effectively reduced through certain home remedies.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more