Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದು
ತಲೆಗೂದಲು ಸೌಂದರ್ಯದ ಒಂದು ಭಾಗವಾಗಿದ್ದು ಇದನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಇದರ ಹೊರತಾಗಿಯೂ ವಯಸ್ಸಾದಂತೆಯೇ ತಲೆಗೂದಲುಗಳು ಒಂದೊಂದಾಗಿ ವಿದಾಯ ಹೇಳುತ್ತಾ ಬೊಕ್ಕ ತಲೆ ಆವರಿಸುತ್ತದೆ. ಬಹುತೇಕ ಇದು ಅನುವಂಶೀಯವಾಗಿದ್ದು ಅನಿವಾರ್ಯ ಬೆಳವಣಿಗೆಯಾಗಿದ್ದರೂ ಸೂಕ್ತ ಆರೈಕೆಯಿಂದ ಈ ಪ್ರಕ್ರಿಯೆಯನ್ನು ತಡವಾಗಿಸಲು ಸಾಧ್ಯ. ಇಂದು ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಹಲವು ಮನೆಮದ್ದುಗಳನ್ನು ನೀಡಲಾಗಿದ್ದು ಇವುಗಳಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡಿಕೊಂಡು ಬೊಕ್ಕ ತಲೆಯಾಗುವ ಸಂಭವವನ್ನು ಸಾಕಷ್ಟು ತಡವಾಗಿಸಬಹುದು. ಚಿಕ್ಕವಯಸ್ಸಿಗೇ ಬೊಕ್ಕ ತಲೆಯಾದೀತು, ಎಚ್ಚರ!
ಅಷ್ಟೇ ಅಲ್ಲ, ಈಗ ಬೇರಾವುದೋ ಕಾರಣಕ್ಕೆ ಕೂದಲು ಉದುರುತ್ತಿದ್ದು ಬೊಕ್ಕ ತಲೆ ಆವರಿಸಿದಂತೆ ಕಾಣುತ್ತಿದ್ದರೆ ಕೂದಲು ಉದುರುವುದನ್ನು ನಿಲ್ಲಿಸಿ ಕೂದಲು ದಟ್ಟವಾಗುವಂತೆ ಮಾಡಬಹುದು ಹಾಗೂ ಕೂದಲಿನ ಕಾಂತಿಯನ್ನೂ ಹೆಚ್ಚಿಸಬಹುದು. ಕೂದಲು ಉದುರಲು ವಂಶವಾಹಿನಿಯ ಕಾರಣವನ್ನು ಹೊರತುಪಡಿಸಿದರೆ ಉಳಿದ ಕಾರಣಗಳಿಗೆ ಸೂಕ್ತ ಚಿಕಿತ್ಸೆ ಅಥವಾ ಉದುರದಂತೆ ತಡೆಯುವ ವಿಧಾನಗಳಿವೆ. ಈ ಕಾರಣ ಯಾವುದು ಎಂದು ಕಂಡುಕೊಂಡರೆ ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕೆಳಗಿನ ಸ್ಲೈಡ್ ಶೋನಲ್ಲಿ ನೀಡಲಾಗಿರುವ ಮಾಹಿತಿಗಳಲ್ಲಿ ನಿಮಗೆ ಹೆಚ್ಚು ಯಾವುದು ಅನ್ವಯ ಎಂದು ಕಂಡುಕೊಂಡು ಆ ಪ್ರಕಾರ ಅನುಸರಿಸಿದರೆ ಬೊಕ್ಕ ತಲೆಯಾಗುವ ಸಾಧ್ಯತೆಯಿಂದ ದೂರವಾಗಬಹುದು...

ಹೀರೇಕಾಯಿ (Ribbed Gourd)
ಹಿಗ್ಗಿ ಹಿಗ್ಗಿ ಹೀರೇಕಾಯಿಯಾದ ಎಂಬ ಗಾದೆಯೇ ಇದೆ. ಇಲ್ಲಿ ಹಿಗ್ಗಲು ಕಾರಣ ಇದರ ಕೂದಲ ರಕ್ಷಣೆಯ ಶಕ್ತಿ. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಹೀರೇಕಾಯಿಯನ್ನು ಅಡ್ಡಲಾಗಿ ಕತ್ತರಿಸಿದ ಕೆಲವು ಹೋಳುಗಳನ್ನು ಚಿಕ್ಕ ಉರಿಯಲ್ಲಿ ಕುದಿಸಿ. ಎಷ್ಟು ಕುದಿಸಬೇಕು ಎಂದರೆ ಈ ಹೋಳುಗಳು ಸುಟ್ಟು ಕಪ್ಪಗಾಗುವಷ್ಟು. ಬಳಿಕ ಈ ಎಣ್ಣೆಯನ್ನು ತಣಿಯಲು ಬಿಟ್ಟು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ.

ಕ್ಯಾಮೋಮೈಲ್ (Chamomile)
ಮಾರುಕಟ್ಟೆಯಲ್ಲಿ ಸಿಗುವ ಕ್ಯಾಮೋಮೈಲ್ ಪುಡಿಯನ್ನು ಕೊಂಚ ನೀರಿನಲ್ಲಿ ಬೆರೆಸಿ ಈ ನೀರನ್ನು ಇಪ್ಪನ್ನು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ. ಬಳಿಕ ಬಟ್ಟೆಯಲ್ಲಿ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ಮತ್ತೊಮ್ಮೆ ಚಿಕ್ಕ ಉರಿಯಲ್ಲಿ ಕುದಿಸಿ ಗಾಢ ದ್ರಾವಣವಾಗಂತೆ ಮಾಡಿ. ಈ ದ್ರಾವಣವನ್ನು ನಿತ್ಯವೂ ತಲೆಗೆ ದಪ್ಪನಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ.

ಪೇರಳೆ ಮರದ ಎಲೆಗಳು
ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.

ಅಶ್ವಗಂಧ
ಬೊಕ್ಕ ತಲೆ ತಡೆಯಲು ಅಶ್ವಗಂಧ ಸೂಕ್ತವಾಗಿದೆ. ಅಶ್ವಗಂಧ ಪುಡಿಯನ್ನು ಕೊಂಚ ಬಿಸಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ನಿತ್ಯದ ಉಪಯೋಗದಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದುರಿದ್ದ ಕೂದಲಿನ ಸ್ಥಾನದಲ್ಲಿ ಹೊಸ ಕೂದಲು ಬೆಳೆಯಲೂ ನೆರವಾಗುತ್ತದೆ.

ಸೋರೆ ಕಾಯಿ ರಸ
ಸೋರೆಕಾಯಿಯ ತಿರುಳಿನ ಕೆಲವು ತುಂಡುಗಳನ್ನು ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಈ ವಿಧಾನದಿಂದಲೂ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದುರಿದ ಕೂದಲಿನ ಸ್ಥಾನದಲ್ಲಿ ಹೊಸ ಕೂದಲು ಹುಟ್ಟಲು ನೆರವಾಗುತ್ತದೆ.

ಅಕ್ರೋಟು
ಕೊಂಚ ನೀರನ್ನು ಕುದಿಸಿ ಅದರಲ್ಲಿ ಒಂದು ಅಕ್ರೋಟಿನ ತಿರುಳನ್ನು ಚಿಕ್ಕದಾಗಿ ತುಂಡರಿಸಿ ಸೇರಿಸಿ. ಸುಮಾರು ಇಪ್ಪತ್ತು ನಿಮಿಷ ಕುದಿಸಿದ ಬಳಿಕ ಈ ನೀರನ್ನು ಸೋಸಿ ತಣಿಸಿ. ಇನ್ನೂ ಉಗುರುಬೆಚ್ಚನಿದ್ದಾಗ ಈ ನೀರನ್ನು ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಈ ವಿಧಾನದಿಂದಲೂ ಬೊಕ್ಕ ತಲೆಯಾಗುವ ಸಂಭವ ತಡವಾಗುತ್ತದೆ.

ಮಾವಿನ ಗೊರಟು
ಮಾವಿನ ಗೊರಟನ್ನು ತೆರೆದು ಒಳಗಿನ ಬೀಜವನ್ನು ಹೊರತೆಗೆಯಿರಿ. ಈ ಬೀಜವನ್ನು ಕುಟ್ಟಿ ಪುಡಿಮಾಡಿ ಕೊಂಚ ನೆಲ್ಲಿಕಾಯಿ ಪುಡಿಯೊಂದಿಗೆ ನೀರಿನಲ್ಲಿ ಸೇರಿಸಿ ದಪ್ಪನಾದ ಲೇಪನವಾಗುವಂತೆ ಅರೆಯಿರಿ. ಕೂದಲನ್ನು ನೀರಿನಿಂದ ಒದ್ದೆ ಮಾಡಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿ ಇಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದಲೂ ಬೊಕ್ಕ ತಲೆಯಾಗುವ ಸಂಭವ ತಡವಾಗುತ್ತದೆ.

ಗೋರಂಟಿ ಎಲೆಗಳು / ಮದರಂಗಿ ಎಲೆಗಳು
ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ. ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ.

ನೆಲ್ಲಿಕಾಯಿ
ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.

ಮೆಂತೆ ಗಿಡ
ಮೆಂತೆ ಗಿಡ ಮತ್ತು ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಇವುಗಳಲ್ಲಿ ನಿಕೊಟಿನಿಕ್ ಆಮ್ಲಗಳೂ ಇವೆ. ಮೆಂತೆ ಸೊಪ್ಪುನಿಂದ ಪೇಸ್ಟ್ ತಯಾರಿಸಿ ಇದನ್ನು ಸ್ನಾನದ ಒಂದು ಗಂಟೆಗೆ ಮುನ್ನ ಹಚ್ಚಿ ಸ್ನಾನ ಮಾಡಿ.

ಈರುಳ್ಳಿ
ದೊಡ್ಡ ಈರುಳ್ಳಿಯನ್ನು ರುಬ್ಬಿ ಅದರಿಂದ ರಸವನ್ನು ತೆಗೆಯಿರಿ ಇದನ್ನು ಆಲೋವೆರಾದ ಜೊತೆಗೆ ಮಿಶ್ರಣ ಮಾಡಿ ಸ್ನಾನಕ್ಕೆ 10 - 15 ನಿಮಿಷಗಳ ಮುಂಚೆ ಹಚ್ಚಿ ಸ್ನಾನ ಮಾಡಿ.

ಅಲೋವಿರಾ ಜೆಲ್
ಅಲೋವಿರಾ ಅಥವಾ ಲೋಳೆಯ ಜೆಲ್ ಅನ್ನು ತಾಜಾ ಆಗಿ ಗಿಡದಿಂದ ಕತ್ತರಿಸಿ ತೆಗೆದುಕೊಳ್ಳಿ. ಇದನ್ನು ಬೊಕ್ಕತಲೆಯ ಭಾಗದಲ್ಲಿ ನೇರವಾಗಿ ಲೇಪಿಸಿ. ತದನಂತರ ಸ್ವಲ್ಪ ಹೊತ್ತು ಇದನ್ನು ಹಾಗೆಯೇ ಒಣಗಲು ಬಿಡಿ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎಲ್ಲಾ ಮುಗಿದ ಮೇಲೆ ಬೆಚ್ಚಗಿನ ನೀರಿನಿಂದ ತಲೆ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಹರಳೆಣ್ಣೆ
ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

ತೆಂಗಿನ ಹಾಲು ಮತ್ತು ಎಣ್ಣೆ
ತೆಂಗಿನ ಹಾಲನ್ನು ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ ಮತ್ತು ಅದನ್ನು ಬೊಕ್ಕ ತಲೆಗೆ ಲೇಪಿಸಿ ಮಸಾಜ್ ಮಾಡಿ. ಈ ಚಿಕಿತ್ಸೆಯನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ. ಬೊಕ್ಕ ತಲೆಯ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಮೆಂತೆ ಕಾಳು
ಮೆಂತೆ ಕಾಳುಗಳೂ ಕೂಡ ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಾಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಹಾಗಾಗಿ ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.



Click it and Unblock the Notifications











