Latest Updates
-
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ತಲೆ ತುರಿಕೆಯನ್ನು ಸಮರ್ಥವಾಗಿ ನಿವಾರಿಸಬಲ್ಲ ತೈಲಗಳು
ತಲೆಹೊಟ್ಟಿನ ಪರಿಹಾರಕ್ಕೆ ಕೆಮಿಕಲ್ ಇರುವ ಶಾಂಪೂ ಬಳಸುವ ಬದಲು ಎಣ್ಣೆ ಮಸಾಜ್ ಮಾಡಿದರೆ ತಲೆಹೊಟ್ಟು ಕಡಿಮೆಯಾಗುವುದು. ಅದರಲ್ಲೂ ಈ ಕೆಳಗಿನ ಎಣ್ಣೆಗಳು ತಲೆಹೊಟ್ಟನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ:
ಎಲ್ಲರ ಗಮನ ನಿಮ್ಮತ್ತ ಇರುವಾಗಲೇ ನಿಮ್ಮ ತಲೆಯಲ್ಲಿ ತುರಿಕೆ ಪ್ರಾರಂಭವಾದರೆ ಆ ಸಂಕಟ ಹೇಳತೀರದು ಅಲ್ಲವೇ?, ಅದರಲ್ಲೂ ನವೆ ತಡೆಯಲಾಗದೇ ತುರಿಸಿಕೊಂಡಾಗ ಅತೀವ ಮುಜುಗರ ಅನುಭವಿಸಬೇಕಾಗುತ್ತದೆ. ತಲೆಯ ತುರಿಕೆಗೆ ಕೆಲವಾರು ಕಾರಣಗಳಿವೆ.

ಆದರೆ ಇನ್ನು ಮುಂದೆ ಚಿಂತೆಗೆ ಕಾರಣವಿಲ್ಲ. ಏಕೆಂದರೆ ಈ ತೊಂದರೆಯನ್ನು ನಿವಾರಿಸಲು ಕೆಲವು ನೈಸರ್ಗಿಕ ಎಣ್ಣೆಗಳು ಸಮರ್ಥವಾಗಿವೆ. ಬನ್ನಿ, ಈ ಎಣ್ಣೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ: ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಲ್ಯಾವೆಂಡರ್ ಎಣ್ಣೆ
ಇದೊಂದು ಅವಶ್ಯಕ ತೈಲವಾಗಿದ್ದು ಈ ಎಣ್ಣೆಯ ಸುಗಂಧದ ಕಾರಣದಿಂದಾಗಿ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಎಣ್ಣೆಯ ಗುಣಗಳು ತಲೆಯ ತುರಿಕೆಯನ್ನೂ ಕಡಿಮೆಗೊಳಿಸಲು ಸಮರ್ಥವಾಗಿವೆ. ಈ ಎಣ್ಣೆಯನ್ನು ತಲೆಗೆ ಕೊಂಚವೇ ಮಸಾಜ್ ಮೂಲಕ ಹಚ್ಚಿಕೊಂಡ ಬಳಿಕ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ.
ಇದು ತಲೆಗೂದಲನ್ನು ಬೆಳೆಯಲು ಉತ್ತೇಜಿಸುತ್ತದೆ. ಆದರೆ ಈ ಎಣ್ಣೆ ಕೊಂಚ ಕಟುವಾಗಿರುವುದರಿಂದ ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಕೊಂಚವೇ ಬಿಸಿಮಾಡಿ ತಲೆಗೆ ಹಚ್ಚಿಕೊಳ್ಳಬೇಕು. ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು
ಕೊಬ್ಬರಿ ಎಣ್ಣೆ
ತಲೆಗೂದಲಿಗೆ ಕೊಬ್ಬರಿ ಎಣ್ಣೆ ಉತ್ತಮವಾಗಿದ್ದು ಇದರ ಬಳಕೆಯಿಂದ ತಲೆಯ ತುರಿಕೆಯೂ ಕಡಿಮೆಯಾಗುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣ ತಲೆಯ ತುರಿಕೆ ತಡೆಯಲೂ ನೆರವಾಗುತ್ತದೆ.
ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ ಕೊಂಚವೇ ಮಸಾಜ್ ಮೂಲಕ ತಲೆಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಪುದೀನಾ ಎಣ್ಣೆ
ಪುದಿನಾ ಎಣ್ಣೆಯಲ್ಲಿ ಸೂಕ್ಷ್ಮಜೀವಿ ನಿವಾರಕ ಗುಣವಿದೆ. ಅಲ್ಲದೇ ಇದರ ಇತರ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯಂತ ಹೆಚ್ಚಿನ ಬಳಕೆಯ ಅವಶ್ಯಕ ತೈಲವೆಂದು ಪರಿಗಣಿಸಲಾಗುತ್ತದೆ. ಇದರ ಸುವಾಸನೆಯ ಕಾರಣ ಹಲವು ರೀತಿಯ ಸುಗಂಧದ್ರವ್ಯಗಳಲ್ಲಿಯೂ ಬಳಕೆಯಾಗುತ್ತದೆ. ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು
ಅಲ್ಲದೇ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿಯೂ ಬಳಕೆಯಾಗುತ್ತದೆ. ಇದರ ಔಷಧೀಯ ಗುಣಗಳಿಂದಾಗಿ ಆಯುರ್ವೇದದಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ.
ತಲೆಯ ತುರಿಕೆಗೂ ಪುದೀನಾ ಎಣ್ಣೆ ಉತ್ತಮವಾಗಿದೆ. ಇದಕ್ಕಾಗಿ ನಿತ್ಯವೂ ಕೊಂಚವೇ ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಸಾಕು.
ಕಿತ್ತಳೆಯ ಎಣ್ಣೆ (Orange Oil)



Click it and Unblock the Notifications






