For Quick Alerts
ALLOW NOTIFICATIONS  
For Daily Alerts

ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು

|

ಸಾಮಾನ್ಯವಾಗಿ ಎಲ್ಲಾ ಸಸ್ಯಹಾರಿ ಪದಾರ್ಥಗಳು ಅದರಲ್ಲೂ ಸೊಪ್ಪು, ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಾಲಾಕ್, ಪುದೀನಾ ಹೀಗೆ ಎಲ್ಲಾ ಬಗೆಯ ಸೊಪ್ಪುಗಳನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಂಡು ಪ್ರತಿದಿನ ಸೇವಿಸುತ್ತ ಬಂದರೆ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ. ಹಾಗೂ ಈ ಸೊಪ್ಪುಗಳ ಆಹಾರವನ್ನು ರುಚಿಕಟ್ಟಾಗಿ ತಯಾರಿಸಬಹುದಾದ್ದರಿಂದ ದಿನವೂ ಸೇವಿಸಬಹುದು.

ಕೆಲವು ಸೊಪ್ಪುಗಳಿಂದ ತಯಾರಿಸಲ್ಪಡುವ ಎಣ್ಣೆಗಳೂ ಕೂಡ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಒಳ್ಳೆಯದು.

ಪುದೀನಾ ಎಣ್ಣೆ ಬಹುಪಯೋಗಿ ಎಣ್ಣೆಯಾಗಿದೆ. ಇದರಲ್ಲಿ ಖನಿಜಗಳು, ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಶಿಯಂ, ಕ್ಯಾಲ್ಸಿಯಂ, ಪಾಟ್ಯಾಶಿಯಂ ಮತ್ತು ತಾಮ್ರ ವಿಟಮಿನ್ ಎ ಮತ್ತು ಸಿ ಜೊತೆಗೆ ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಹೊಂದಿದೆ.

ಈ ತಾಜಾ ಎಣ್ಣೆ ಆರೋಗ್ಯಕರ ಜೀವನಕ್ಕೆ ಅತ್ಯಂತ ಅಗತ್ಯ.

ಪುದೀನಾ ಎಣ್ಣೆಯ ಪ್ರಯೋಜನಗಳು :

1. ಅಜೀರ್ಣ ನಿವಾರಕ

1. ಅಜೀರ್ಣ ನಿವಾರಕ

ಪುದೀನಾ ಎಣ್ಣೆ ಅಜೀರ್ಣ ಸಮಸ್ಯೆಗೆ ಉತ್ತಮ ಪರಿಹಾರವನ್ನು ಒದಗಿಸಿಸುತ್ತದೆ. ಪುದೀನಾ ಎಣ್ಣೆಯನ್ನು ಸುವಾಸನಾಕಾರಕವಾಗಿ ನಿಮ್ಮ ಊಟದಲ್ಲಿ ಅಥವಾ ಊಟದ ನಂತರ ಬೆಚ್ಚಗಿನ ನೀರಿಗೆ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಕುಡಿಯಿರಿ. ಹೊಟ್ಟೆಯಲ್ಲಿ ಗ್ಯಾಸ್ ಉಂಟಾದರೆ ಅದನ್ನು ಕಡಿಮೆಮಾಡಲೂ ಕೂಡ ಈ ನೈಸರ್ಗಿಕ ತೈಲ ಸಹಾಯಕಾರಿಯಾಗಿದೆ.

2. ಉಸಿರಾಟ ವ್ಯವಸ್ಥೆ

2. ಉಸಿರಾಟ ವ್ಯವಸ್ಥೆ

ಪುದೀನಾ ಎಣ್ಣೆಯಲ್ಲಿರುವ ಮೆಂಥಾಲ್ ನ ಅಂಶ ಶ್ವಾಸನಾಳವನ್ನು ಶುಭ್ರಗೊಳಿಸಿ ಉಸಿರಾಟ ಕ್ರಿಯೆ ಸರಳವಾಗುವಂತೆ ಮಾಡುತ್ತದೆ. ಅಲ್ಲದೇ ಕಫ ಹಾಗೂ ನೆಗಡಿಯನ್ನು ಹೋಗಲಾಡಿಸುವ ಔಷಧಿಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ. ಹೆಚ್ಚು ಗಂಭೀರ ಸೈನುಟಿಸ್, ಆಸ್ತಮಾ ಮತ್ತು ಬ್ರಾಂಕೈಟಿಸ್ (ಗಂಟಲೂತ) ಸಮಯದಲ್ಲಿ ಪರಿಹಾರ ಒದಗಿಸುತ್ತದೆ. ಪುದೀನಾ ಎಣ್ಣೆಯನ್ನು ಎದೆಯ ಮೇಲೆ ಸವರಿದರೆ ಕಫ ಕಡಿಮೆಯಾಗುತ್ತದೆ.

3. ತಲೆನೋವು

3. ತಲೆನೋವು

ತಲೆನೋವಿಗೆ ತತ್ ಕ್ಷಣದಲ್ಲಿ ಪರಿಹಾರವನ್ನು ನೀಡುತ್ತದೆ ಪುದೀನಾ ಎಣ್ಣೆ. ಒಂದು ಕರವಸ್ತ್ರದಲ್ಲಿ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಹಾಕಿ ತೈಲದ ಸುವಾಸನೆಯನ್ನು ಮೂಗಿನಿಂದ ಒಳಗೆಳೆದುಕೊಂಡರೆ ತಲೆನೋವು ಭಾಗಶಃ ಕಡಿಮೆಯಾಗುತ್ತದೆ.

4. ಒತ್ತಡ ಮತ್ತು ನೋವಿಗೆ ಪರಿಹಾರ

4. ಒತ್ತಡ ಮತ್ತು ನೋವಿಗೆ ಪರಿಹಾರ

ಆಯಾಸದಿಂದ ದಣಿದ ದೇಹಕ್ಕೆ ಪುದೀನಾ ಎಣ್ಣೆಯನ್ನು ಲೇಪಿಸಿ ಸ್ನಾನ ಮಾಡಿದರೆ ಅತ್ಯಂತ ಆರಾಮದಾಯಕವಾಗಿರುತ್ತದೆ. ಈ ತೈಲ ತಾಜಾತನದ ಗುಣವನ್ನು ಹೊಂದಿರುವುದರಿಂದ ಒತ್ತಡವನ್ನು ಕಡಿಮೆಮಾಡುತ್ತದೆ.

5. ಕೂದಲಿನ ಆರೋಗ್ಯ

5. ಕೂದಲಿನ ಆರೋಗ್ಯ

ಪುದೀನಾ ಎಣ್ಣೆಯನ್ನು ಕೂದಲಿನ ಆರೈಕೆಗೂ ಬಳಸಲಾಗುತ್ತದೆ. ಆಂಟಿಸೆಪ್ಟಿಕ್ ಅಂಶವನ್ನು ಹೊಂದಿರುವ ಪುದೀನಾ ಎಣ್ಣೆಯನ್ನು ನೆತ್ತಿಯ ಮೇಲೆ ಮಸಾಜ್ ಮಾಡಿದರೆ ತಲೆಹೊಟ್ಟು ಮಾಯವಾಗುತ್ತದೆ.

6. ತ್ಚಚೆ

6. ತ್ಚಚೆ

ಮೈಗೆ ಪುದೀನಾ ತೈಲವನ್ನು ಲೇಪಿಸುವುದರಿಂದ ಯಾವುದೇ ತೀರಿಯ ಗುಳ್ಳೆಗಳು ಹಾಗೂ ಕಜ್ಜಿಗಳನ್ನು ಇದು ತೊಡೆದುಹಾಕುತ್ತದೆ. ಅಲ್ಲದೇ ಹಲ್ಲುಜ್ಜುವಾಗ ಟೂಥ್ ಪೇಸ್ಟ್ ಗೆ ಎರಡು ಹನಿ ಪುದೀನಾ ಎಣ್ಣೆ ಹಾಕಿದರೆ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ.

7. ಮೂತ್ರದ ಸೋಂಕು ನಿವಾರಣೆ

7. ಮೂತ್ರದ ಸೋಂಕು ನಿವಾರಣೆ

ಸೋಂಕು ನಿವಾರಕ ಔಷಧಿ ಗುಣವನ್ನು ಸಹ ಪುದೀನಾ ಎಣ್ಣೆ ಹೊಂದಿದೆ. ಆದಾಗ್ಯೂ ಈ ವಿಷಯದಲ್ಲಿ ವೈಜ್ಞಾನಿಕವಾಗಿ ಅಧ್ಯಯನಗಳು ಇನ್ನೂ ನಡೆಯುತ್ತಿವೆ.

8. ರಕ್ತ ಪರಿಚಲನೆ

8. ರಕ್ತ ಪರಿಚಲನೆ

ದೇಹದಲ್ಲಿ ರಕ್ತ ಪರಿಚಲನೆ ಸುಸೂತ್ರವಾಗಿ ನಡೆಯುವಲ್ಲಿಯೂ ಪುದೀನಾ ಎಣ್ಣೆ ಸಹಾಯಕಾರಿ.

9. ಹಲ್ಲಿನ ಆರೋಗ್ಯ

9. ಹಲ್ಲಿನ ಆರೋಗ್ಯ

ಪುದೀನಾ ಎಣ್ಣೆ ಅದರ ಆಂಟಿಸೆಪ್ಟಿಕ್ ಗುಣಸಿಂದಾಗಿ ಹಲ್ಲಿನ ಆರೈಕೆ ಮಾಡುತ್ತದೆ. ದಿನವೂ ಹಲ್ಲುಜ್ಜುವಾಗ ಪುದೀನಾ ಎಣ್ಣೆಯನ್ನೂ ಜೆತೆಯಲ್ಲಿಯೇ ಬಳಸುವುದರಿಂದ ಹಲ್ಲುಗಳು ಹಾಗೂ ವಸಡುಗಳಲ್ಲಿ ಸೂಕ್ಷ್ಮಾಣೂ ಜೀವಿಗಳನ್ನು ನಾಶಮಾಡಿ ಹಲ್ಲು ಹಾಳಾಗುವುದು ಹಾಗೂ ಬಾಯಿಯ ದುರ್ನಾತವನ್ನು ತಡೆಗಟ್ಟುತ್ತದೆ.

10. ಕರುಳಿನ ಸಮಸ್ಯೆಗೆ ಪರಿಹಾರ

10. ಕರುಳಿನ ಸಮಸ್ಯೆಗೆ ಪರಿಹಾರ

ಕೆರಳಿಸುವ ಕರುಳಿನ ಸಮಸ್ಯೆಗಳ ನಿವಾರಕವಾಗಿದೆ ಪುದೀನಾ ಎಣ್ಣೆ. ಪ್ರಾಥಮಿಕ ವೈಜ್ಞಾನಿಕ ಸಂಶೋಧನೆಗಳಿಂದ ಇದು ದೃಢಪಟ್ಟಿದ್ದರೂ ಇದರ ಸರಿಯಾದ ಉಪಯೋಗ ಇನ್ನೂ ತಿಳಿದಿಲ್ಲ.

ಹೀಗೆ ನೂರೆಂಟು ಗುಣಗಳನ್ನು ಒಟ್ಟಾಗಿ ತನ್ನಲ್ಲೆ ಅಡಗಿಸಿಕೊಂಡಿರುವ ಪುದೀನಾ ಸಸ್ಯ ಮ್ಯಾಜಿಕಲ್ ಅಲ್ಲದೇ ಮತ್ತಿನ್ನೇನು?

English summary

Top 10 Magical Uses Of Peppermint Oil | ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು !!

This fresh, minty oil has a number of incredible health benefits and uses. This article will reveal how you can use this oil to cure, treat and fix a number of illnesses, ailments and conditions.
Story first published: Tuesday, April 30, 2013, 17:10 [IST]
X
Desktop Bottom Promotion