For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸಿ 'ಶುಂಠಿ ಮಾಸ್ಕ್'

By Jaya Subramanya
|

ತಲೆಗೂದಲಿನ ಹೊಟ್ಟಿನ ಸಮಸ್ಯೆ ಎಲ್ಲಾ ಹೆಣ್ಣುಮಕ್ಕಳಿಗೆ ಚಿಂತೆಯ ವಿಷಯವಾಗಿದೆ. ಮಾರುಕಟ್ಟೆಯಲ್ಲಿರುವ ದುಬಾರಿ ತಲೆಹೊಟ್ಟು ಹೋಗಲಾಡಿಸುವ ಶ್ಯಾಂಪೂಗಳನ್ನು ಬಳಸಿ ಕೂಡ ಅವರಿಗೆ ಪ್ರಯೋಜನ ದೊರೆಯುವುದಿಲ್ಲ. ತಲೆಗೂದಲನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡಿದ್ದರೂ ತಲೆಹೊಟ್ಟು ಅವರನ್ನು ಕಾಡುತ್ತದೆ.

ಇಂದಿನ ಕಲುಷಿತ ವಾತಾವರಣ ಮತ್ತು ಅತಿಯಾದ ರಾಸಾಯನಿಕ ಬಳಕೆ ತಲೆಬುರುಡೆಯಲ್ಲಿ ಹೊಟ್ಟನ್ನು ಉಂಟುಮಾಡುತ್ತದೆ. ಅಂತೆಯೇ ತಲೆಗೂದಲಿನ ಸ್ವಾಸ್ಥ್ಯ ಕಡಿಮೆಯಾಗಿದ್ದಲ್ಲಿ ಕೂಡ ಹೊಟ್ಟು ಜನ್ಮತಾಳುತ್ತದೆ ಇದರೊಂದಿಗೆ ತುರಿಕೆ ಕೂಡ ಇರುತ್ತದೆ. ಕೂದಲಿಗೆ ಹಾನಿಯಾಗದಂತೆ ತಲೆಹೊಟ್ಟಿಗೆ ಚಿಕಿತ್ಸೆ

ನೈಸರ್ಗಿಕ ಗಿಡಮೂಲಿಕೆಗಳಿಂದ ತಲೆಹೊಟ್ಟನ್ನು ನಿವಾರಣೆ ಮಾಡುವ ಹೆಚ್ಚಿನ ವಿಧಾನಗಳನ್ನು ನಾವು ಈ ಹಿಂದೆ ಕೂಡ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಅಂತೆಯೇ ಇಂದು ಕೂಡ ಹೆಚ್ಚು ಪರಿಣಾಮಕಾರಿಯಾಗಿರುವ ಶುಂಠಿ ಮಾಸ್ಕ್‌ನೊಂದಿಗೆ ಬಂದಿದ್ದು ಇದು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಿದ್ದು ಕೂದಲಿನ ಪಿಎಚ್ ಬ್ಯಾಲೆನ್ಸ್‌ಗೆ ಹಾನಿಯನ್ನುಂಟು ಮಾಡದೆಯೇ ಹಾನಿಯಾಗಿರುವ ಕೂದಲಿನ ಆರೈಕೆಯನ್ನು ಮಾಡಲಿದೆ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಶುಂಠಿಯು ಅಮಿನೊ ಆಸಿಡ್‌ ಅನ್ನು ಒಳಗೊಂಡಿದ್ದು, ಇದರಲ್ಲಿರುವ ಫ್ಯಾಟಿ ಆಸಿಡ್ ತಲೆಬುರುಡೆಯನ್ನು ಆರೋಗ್ಯವಾಗಿರಿಸಲಿದೆ. ತಲೆಹೊಟ್ಟಿನಿಂದ ಉಂಟಾಗುವ ತುರಿಕೆಯನ್ನು ನಿವಾರಣೆ ಮಾಡಲು ಶುಂಠಿಯು ಮೈಕ್ರೊಬೈಯಲ್ ಅಂಶವನ್ನು ಹೊಂದಿದ್ದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ನಾಶಮಾಡುತ್ತದೆ. ಶುಂಠಿ ಮಾಸ್ಕ್ ಅನ್ನು ಕೂದಲಿಗೆ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

ಹಂತ 1

ಹಂತ 1

ಶುಂಠಿಯ ದೊಡ್ಡ ತುಂಡನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತುರಿಯಿರಿ. ನಂತರ ಇದನ್ನು ನುಣ್ಣನೆಯ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮಸ್ಲಿನ್ ಬಟ್ಟೆಗೆ ಸೇರಿಸಿಕೊಂಡು ಅದನ್ನು ಬಿಗಿಯಾಗಿ ಕಟ್ಟಿ ಮತ್ತು ರಸವನ್ನು ಹಿಂಡಿಕೊಳ್ಳಿ. ಹೇರ್ ಮಾಸ್ಕ್‌ಗಾಗಿ ಕನಿಷ್ಟ ಪಕ್ಷ 2 ಚಮಚದಷ್ಟು ರಸವನ್ನು ನೀವು ಪಡೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹಂತ 2

ಹಂತ 2

ಅರ್ಧ ಕಪ್‌ನಷ್ಟು ತೆಂಗಿನೆಣ್ಣೆಯನ್ನು 30 ಸೆಕೆಂಡ್‌ಗಳ ಕಾಲ ಬೆಚ್ಚಗೆ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಎಣ್ಣೆ ತಣಿಯಲು ಬಿಡಿ. ತೆಂಗಿನೆಣ್ಣೆಯಲ್ಲಿ ಲಾರಿಕ್ ಆಸಿಡ್ ಇದ್ದು ಕೂದಲಿನ ಬೆಳವಣಿಗೆಗೆ ಬೇಕಾದ ರಕ್ತ ಸಂಚಾರವನ್ನು ಒದಗಿಸುವಲ್ಲಿ ನೆರವಾಗಲಿದೆ. ಶುಂಠಿ ರಸವನ್ನು ತೆಂಗಿನೆಣ್ಣೆಗೆ ಮಿಶ್ರ ಮಾಡಿ ನಂತರ ಫೋರ್ಕ್ ಬಳಸಿಕೊಂಡು, ಎರಡನ್ನೂ ಮಿಶ್ರ ಮಾಡಿ.

ಹಂತ 3

ಹಂತ 3

ಈ ಮಿಶ್ರಣಕ್ಕೆ ರೋಸ್‌ಮೇರಿ ಆಯಿಲ್ ಸೇರಿಸಿ. ರೋಸ್‌ಮೇರಿ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ಇದು ತಲೆಬುರುಡೆಯ ಆಳಕ್ಕೆ ಇಳಿಯಲಿದೆ. ಇದು ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ನೆರೆಗೂದಲನ್ನು ತಡೆಯುತ್ತದೆ.

ಹಂತ 4

ಹಂತ 4

ಚಮಚದಷ್ಟು ಲಿಂಬೆ ರಸವನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಲಿಂಬೆ ರಸದಲ್ಲಿ ಸಿಟ್ರಿಕ್ ಆಸಿಡ್ ಇದ್ದು ತಲೆಬುರುಡೆಯನ್ನು ಇದು ಸ್ವಚ್ಛಗೊಳಿಸಲಿದೆ, ಕೂದಲಿಗೆ ಹೊಳಪನ್ನು ಉಂಟುಮಾಡಿ ಜಿಡ್ಡುಮುಕ್ತಗೊಳಿಸಲಿದೆ.

ಹಂತ 5

ಹಂತ 5

ಅಗಲ ಹಲ್ಲಿನ ಬಾಚಣಿಗೆಯನ್ನು ಬಳಸಿಕೊಂಡು, ನಿಮ್ಮ ಕೂದಲಿನಿಂದ ಸಿಕ್ಕನ್ನು ಬಿಡಿಸಿಕೊಳ್ಳಿ. ನಿಮ್ಮ ಕೂದಲು ಹೆಚ್ಚು ಒಣಗಿದೆ ಎಂದಾದಲ್ಲಿ, ನಿಮಗಿಷ್ಟದ ಎಣ್ಣೆಯನ್ನು ತೆಗೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ ನಂತರ ಬಾಚಣಿಗೆಯನ್ನು ಕೂದಲಿನಲ್ಲಿ ಓಡಾಡಿಸಿ. ಕೂದಲು ತುಂಡಾಗದೆಯೇ ಸಿಕ್ಕನ್ನು ಈ ರೀತಿಯಾಗಿ ಬಿಡಿಸಿಕೊಳ್ಳಬಹುದಾಗಿದೆ.

ಹಂತ 6

ಹಂತ 6

ಕೂದಲನ್ನು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಳ್ಳಿ. ಮಾಸ್ಕ್ ಹಚ್ಚಿಕೊಳ್ಳಿ, ಕೂದಲನ್ನು ಮುಂಭಾಗಕ್ಕೆ ತಂದುಕೊಂಡು ಬುಡದಿಂದ ತುದಿಯವರೆಗೆ ಮಾಸ್ಕ್ ಹಚ್ಚಿರಿ.

ಹಂತ 7

ಹಂತ 7

ಮಾಸ್ಕ್‌ನಿಂದ ಬಳಸಿಕೊಂಡು ತಲೆಬುರುಡೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಮಾಸ್ಕ್‌ನಲ್ಲಿರುವ ಉತ್ತಮ ಪೋಷಕಾಂಶಗಳು ಕೂದಲಿನ ಬುಡವನ್ನು ತಲುಪುತ್ತದೆ. ಇದನ್ನು ಹಚ್ಚುವಾಗ ಸಣ್ಣ ಮಟ್ಟಿಗಿನ ಉರಿತ ಕೂದಲಿನಲ್ಲಿ ಉಂಟಾಗುತ್ತದೆ. ಹೆಚ್ಚು ಕಿರಿಕಿರಿ ಉಂಟಾಗುತ್ತಿದೆ ಎಂದಾದಲ್ಲಿ ಇನ್ನಷ್ಟು ತೆಂಗಿನೆಣ್ಣೆಯನ್ನು ಸೇರಿಸಿ.

ಹಂತ 8

ಹಂತ 8

ರಾತ್ರಿ ಪೂರ್ತಿ ಹೇರ್ ಮಾಸ್ಕ್‌ನಲ್ಲಿರುವ ಉತ್ತಮ ಅಂಶಗಳನ್ನು ತಲೆಬುರುಡೆ ಹೀರಿಕೊಳ್ಳಲು ಬಿಡಿ. ಮರುದಿನ ಬೆಳಗ್ಗೆ ಶಾಂಪೂ ಬಳಸಿ, ಕಂಡೀಷನ್ ಹಚ್ಚಿ ಕೂದಲನ್ನು ತೊಳೆದುಕೊಳ್ಳಿ.

ಹಂತ 9

ಹಂತ 9

ಶಾಂಪೂ ಮಾಡಿದ ನಂತರ, ಕೂದಲಿನಿಂದ ಹೆಚ್ಚುವರಿ ನೀರನ್ನು ಹೊರತೆಗೆಯಿರಿ. ಹಳೆಯ ಟಿ ಶರ್ಟ್‌ನಿಂದ ಕೂದಲನ್ನು ಒರೆಸಿಕೊಳ್ಳಿ. ಟಿ ಶರ್ಟ್‌ನಲ್ಲಿರುವ ಮೈಕ್ರೊಫೈಬರ್ಸ್‌ಗಳು ಕೂದಲು ಒಣ ಆಗುವಲ್ಲಿಂದ ತಡೆಯುತ್ತದೆ. ಇದು ತುಂಡಾಗುವುದನ್ನು ತಡೆಯುತ್ತದೆ.

ಹಂತ 10

ಹಂತ 10

ಬ್ಲೊ ಡ್ರೈಯರ್‌ನಿಂದ ಕೂದಲನ್ನು ಒಣಗಿಸಿಕೊಳ್ಳುವಾಗ, ಸೆಟ್ಟಿಂಗ್ ಅನ್ನು ಕಡಿಮೆ ತಾಪಮಾನದಲ್ಲಿ ಇರಿಸಿ. ಆರು ಇಂಚು ದೂರಕ್ಕೆ ಡ್ರೈಯರ್‌ ಅನ್ನು ಕೂದಲಿನಿಂದ ಇರಿಸಿಕೊಳ್ಳಿ. ಬುಡದಿಂದ ತುದಿಯವರೆಗೆ ವೇಗವಾಗಿ ಚಲಾಯಿಸಿ. ಹೆಚ್ಚು ಸಮಯ ಕೂದಲಿನಲ್ಲಿ ಇರಿಸಿಕೊಳ್ಳದಿರಿ.

ಪ್ರತಿಕ್ರಿಯೆ

ಪ್ರತಿಕ್ರಿಯೆ

ಕೂದಲಿನ ಉತ್ತಮ ಬೆಳವಣಿಗೆಯನ್ನು ಶುಂಠಿ ಮಾಸ್ಕ್ ಮಾಡಲಿದ್ದು ತಲೆಹೊಟ್ಟಿಗೂ ಇದು ವಿದಾಯವನ್ನು ಹೇಳಿಲಿದೆ. ವಾರಕ್ಕೊಮ್ಮೆ ನಿಯಮಿತವಾಗಿ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.

English summary

Ginger Hair Mask Recipe To Remove Flaky Dandruff!

Do you have flaky dandruff that never budges? Is your scalp itchy, scaly and greasy? Then you need this ginger hair mask! It does more than break down the yeast buildup on your scalp. It will cleanse your scalp without disturbing its natural pH balance. Repair damaged hair shaft and promote regeneration of new hair follicles. Let's take a closer look at the properties of ginger mask to get rid of dandruff and how it works.
Story first published: Wednesday, December 14, 2016, 19:00 [IST]
X
Desktop Bottom Promotion