For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಹಾನಿಯಾಗದಂತೆ ತಲೆಹೊಟ್ಟಿಗೆ ಚಿಕಿತ್ಸೆ

|

ತಲೆ ಹೊಟ್ಟಿನಿದಾಗಿ ತಲೆ ತುರಿಸುತ್ತಿದ್ದರೆ ತುಂಬಾ ಹಿಂಸೆ ಅನಿಸುವುದು ಅಲ್ಲದೆ ಎಲ್ಲರ ಎದುರು ತಲೆ ತುರಿದುಕೊಳ್ಳಲು ಅವಮಾನ ಕೂಡ ಆಗುತ್ತದೆ. ಇದರ ನಿವಾರಣೆಗೆ ಅನೇಕ ಶ್ಯಾಂಪೂಗಳಿದ್ದರೂ ಅದರಲ್ಲಿ ಕೆಮಿಕಲ್ ಇರುವುದರಿಂದ ಕೂದಲು ಹಾಳಾಗುತ್ತದೆ. ಆದರೆ ಕೂದಲಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ತಲೆಹೊಟ್ಟನ್ನು ನಿವಾರಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

Home Remedies For Dandruff

1. ಕೂದಲನ್ನು ತೊಳೆದ ಬಳಿಕ ಒಂದು ಚಮಚ ಸೈಡರ್ ವಿನಿಗರ್ ಅನ್ನು ಅರ್ಧ ಬಕೆಟ್ ನೀರಿನಲ್ಲಿ ಹಾಕಿ ಅದರಲ್ಲಿ ತಲೆತೊಳೆಯಬೇಕು.

2. ನೂಕೋಲು ಅನ್ನು ನೀರಿನಲ್ಲಿ ಬೇಯಿಸಿ, ಆ ನೀರು ತಣ್ಣಗಾದ ಮೇಲೆ, ಅದನ್ನು ತಲೆ ಬುಡಕ್ಕೆ ಹಚ್ಚಿಕೊಂಡು 2-3 ಗಂಟೆ ಬಳಿಕ ತಲೆ ತೊಳೆದರೆ ಹೊಟ್ಟು ನಿವಾರಣೆಯಾಗುವುದು. ಇಲ್ಲದಿದ್ದರೆ ರಾತ್ರಿ ಮಲುಗುವ ಮುಂಚೆ ಹಚ್ಚಬಹುದು.

3. ಪಡವಲಕಾಯಿ ರಸವನ್ನು ತಲೆಬುಡಕ್ಕೆ ಹಚ್ಚಿ ಒಂದು ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ಈ ರೀತಿ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುವುದು.

4. ಹೆಸರು ಕಾಳಿನ ಪುಡಿಯನ್ನು ಮೊಸರಿನ ಜೊತೆ ಮಿಶ್ರ ಮಾಡಿ ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಿ ತಲೆ ತೊಳೆಯಬೇಕು.

5. ಮೆಂತೆಯನ್ನು ನೀರಿನಲ್ಲಿ 8 ಗಂಟೆಗಳ ಕಾಲ ನೆನೆಹಾಕಿ, ನಂತರ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದುವಾದ ಶ್ಯಾಂಪೂ ಬಳಸಿ ತಲೆ ತೊಳೆಯಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುವುದು.

English summary

Home Remedies For Dandruff | Tips For Hair Care | ತಲೆಹೊಟ್ಟು ನಿವಾರಣೆಗೆ ಮನೆ ಮದ್ದು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Nothing is more embarrassing than having an itchy head. Apart from lice, dandruff cause itchy on your head. But if you apply chemical shampoo it may affect hair. So here is a tips to get rid of dandruff in by natural medicine.
Story first published: Thursday, May 17, 2012, 16:29 [IST]
X
Desktop Bottom Promotion