Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಒಣ ಕೂದಲಿನ ಕಿರಿಕಿರಿಗೆ ನೈಸರ್ಗಿಕ ಹೇರ್ ಮಾಸ್ಕ್
ಒಣ ಕೂದಲು ಅಂದರೆ ಡ್ರೈ ಹೇರ್ ಎಂದು ನಾವೇನು ಕರೆಯುತ್ತೇವೆ ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ. ಅಲ್ಲವೇ? ಕೂದಲಿನ ಕೆಳಭಾಗ ಅಥವಾ ತುದಿ, ಬೇರಿಗೆ ಹೋಲಿಸಿದರೆ ಒಣದಾಗಿರುತ್ತದೆ. ಏಕೆಂದರೆ, ಸಾಧಾರಣವಾಗಿ ನೈಸರ್ಗಿಕ ತೈಲಗಳು ನೆತ್ತಿಯಿಂದ ತುದಿಯವರೆಗೆ ತಲುಪುವುದಿಲ್ಲ. ಆದ್ದರಿಂದ ಮನೆಯಲ್ಲೇ ತಯಾರಿಸಬಹುದಾದ ಕೆಲವು ಮನೆಮದ್ದಿಂದ ಒಣ ಕೂದಲಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!
ಗುಂಗುರು ಕೂದಲಿರುವವರಿಗೆ ಇದು ಹೆಚ್ಚು ಅನ್ವಯಿಸುತ್ತದೆ. ಮನೆಯಲ್ಲೇ ದೊರೆಯುವ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ಬಳಸಿ ಕೂದಲಿಗೆ ಕಂಡೀಷನರ್ ಆಗಿ ಉಪಯೋಗಿಸಬಹುದು. ಇವು ಒಣ ಕೂದಲಿನ ಸಮಸ್ಯೆಗೆ ಕೆಲವು ನೈಸರ್ಗಿಕವಾಗಿ ದೊರೆಯುವ ಪರಿಹಾರಗಳು. ಅದ್ಭುತ ಅಲ್ಲವೇ? ನಾವು ಪ್ರಯತ್ನಿಸಿ ಮತ್ತು ಪರೀಕ್ಷಿಸಿ ಯಶಸ್ಸನ್ನು ಕಂಡುಕೊಂಡು ವಿಧಾನಗಳನ್ನೇ ಸೌಂದರ್ಯ ಸಾಧನವಾಗಿ ಸೂಚಿಸುತ್ತೇವೆ. ಆದ್ದರಿಂದ ಈ ರೀತಿಯ ತೆಂಗಿನ ಹಾಲಿನ ಮಸುಕು(ಮಾಸ್ಕ್)ಅನ್ನು ಒಣಕೂದಲಿನ ಸಮಸ್ಯೆಗೆ ಬಳಸಬಹುದು.

ಬೇಕಾಗುವ ಸಾಮಗ್ರಿಗಳು
*1/2 ಕಪ್: ತೆಂಗಿನ ಹಾಲು
*2 ಟೇಬಲ್ ಚಮಚ: ತೆಂಗಿನ ಎಣ್ಣೆ
*2: ವಿಟಮಿನ್ "ಈ" ಕ್ಯಾಪ್ಸೂಲ್ಸ್ ಕೂದಲು ನಾರಿನಂತೆ ಒರಟಾಗಿದೆಯೇ?
ತಯಾರಿಸುವ ವಿಧಾನ ಮತ್ತು ಹಚ್ಚಿಕೊಳ್ಳುವ ವಿಧಾನ
*ಒಂದು ಬೌಲ್‌ನಲ್ಲಿ ತೆಂಗಿನ ಹಾಲು ತೆಗೆದುಕೊಂಡು ಅದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿರಿ. ಒಂದು ಸೇಫ್ಟಿ ಪಿನ್ ತೆಗೆದುಕೊಂಡು ವಿಟಮಿನ್ "ಈ" ಕ್ಯಾಪ್ಸೂಲ್ಸ್‌ಗೆ ಚುಚ್ಚಿ ಅದರೊಳಗಿನ ಎಣ್ಣೆಯನ್ನು ಬೌಲ್ಗೆ ಹಾಕಿರಿ.
*ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲುದ್ದಕ್ಕೂ ಹಚ್ಚಿ. ಕೂದಲಿನ ತುದಿಯ ಭಾಗ ಹೆಚ್ಚು ಒಣಗಿರುವುದರಿಂದ ಆ ಭಾಗಕ್ಕೆ ಜಾಸ್ತಿ ಹಚ್ಚಿರಿ.
*ನಂತರ ಶವರ್ ಕ್ಯಾಪ್ ಅನ್ನು ಹಾಕಿಕೊಳ್ಳಿ. ಅರ್ಧ ಗಂಟೆಯ ಕಾಲ ಹಾಗೆಯೇ ಬಿಡಬೇಕು. ನಂತರ ಕೂದಲನ್ನು ತೊಳೆದು ಕಂಡೀಷನ್ ಎಂದಿನಂತೆ ಮಾಡಿರಿ. ಮನೆಯಲ್ಲೇ ತಯಾರಿಸಿದ ಈ ಮನೆಮದ್ದನ್ನು ಒಣ ಕೂದಲಿನ ಸಮಸ್ಯೆಗೆ ಪರಿಹಾರವಾಗಿ ವಾರಕ್ಕೆ ಒಂದು ಬಾರಿಯಂತೆ ಬಳಸಬಹುದು. ಒಣ ಕೂದಲಿಗೆ ಗುಡ್ ಬೈ ಹೇಳಬಹುದು.
*ತೆಂಗಿನ ಹಾಲು, ತೆಂಗಿನ ಎಣ್ಣೆಯಂತೆಯೇ ಕೂದಲಿನ ಪೋಷಣೆಗೆ ಸಹಾಯಕಾರಿ. ಇದು ನೈಸರ್ಗಿಕವಾಗಿ ತಲೆ ಕೂದಲಿನ ಬೇರಿಂದ ಹಿಡಿದು ತುದಿಯವರೆಗೆ ತೇವಾಂಶವನ್ನು ಕೊಡುತ್ತದೆ. ಡ್ರೈ ಕೂದಲೇ? ಕಾರಣ ತಿಳಿಯಿರಿ, ಪರಿಹಾರ ಸಿಗುತ್ತೆ
ಇನ್ನು ತೆಂಗಿನ ಎಣ್ಣೆಯಿಂದಾಗುವ ಲಾಭಗಳ ಬಗ್ಗೆ ಹೇಳುವಂತೆಯೇ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ದೇಹಕ್ಕೆ ಮತ್ತು ನೆತ್ತಿಗೆ ಅತ್ಯಂತ ಪರಿಣಾಮಕಾರಿಯಾದ ಮಾಯಿಶ್ಚರೈಸರ್ ಎಂದೇ ಹೇಳಬಹುದು.
ಹೀಗಾಗಿ ಒಣ ಕೂದಲಿಗೂ ಇದು ಉತ್ತಮ. ಅಲ್ಲವೇ? ವಿಟಮಿನ್ "ಈ" ಕೂದಲು ಹಾನಿಯಾಗಿ ಕವಲೊಡೆಯುವುದನ್ನು ತಡೆಯುತ್ತದೆ. ಆದ್ದರಿಂದ, ಇಂತಹ ಸೂಕ್ತವಾದ ಮನೆಯಲ್ಲೇ ತಯಾರಿಸಬಹುದಾದ ಪರಿಹಾರವನ್ನು ಪ್ರಯತ್ನಸಿ ಸುಂದರ ಕೇಶರಾಶಿಯ ಒಡತಿಯಾಗಿ.



Click it and Unblock the Notifications


