For Quick Alerts
ALLOW NOTIFICATIONS  
For Daily Alerts

ಡ್ರೈ ಕೂದಲೇ? ಕಾರಣ ತಿಳಿಯಿರಿ, ಪರಿಹಾರ ಸಿಗುತ್ತೆ

|
What Makes Your Hair Dry
ಕೂದಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕೂದಲು ಉದುರುವುದು, ತಲೆಹೊಟ್ಟು, ಅಕಾಲಿಕ ನೆರೆ ಹೀಗೆ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುತ್ತಾ ಇರುತ್ತದೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ಕೂದಲು ಒರಟಾಗಿರುವುದು.

ಯಾವುದೇ ಸಮಸ್ಯೆಗೂ ಕಾರಣ ಕಂಡು ಹಿಡಿದರೆ ಮಾತ್ರ ಪರಿಹಾರ ಪಡೆಯಲು ಸಾಧ್ಯ. ಒಂದು ವೇಳೆ ನಿಮ್ಮ ಕೂದಲು ಒಣಗುತ್ತಿದ್ದರೆ ಈ ಕೆಳಗಿನ ಯಾವುದೋ ಒಂದು ಕಾರಣದಿಂದ ಆಗುತ್ತಿರುತ್ತದೆ. ಸಮಸ್ಯೆಗೆ ಕಾರಣ ತಿಳಿದರೆ ಪರಿಹಾರ ಸುಲಭ...

ಡ್ರೈ ಕೂದಲಿಗೆ ಕಾರಣಗಳು:

ಶ್ಯಾಂಪೂ: ಅಧಿಕ ರಾಸಾಯನಿಕವಿರುವ ಶ್ಯಾಂಪೂ ಬಳಿಸಿದರೆ ಕೂದಲು ಡ್ರೈಯಾಗುತ್ತದೆ. ಆದ್ದರಿಂದ ಮೃದುವಾದ ಶ್ಯಾಂಪೂ ಬಳಸುವುದು ಒಳ್ಳೆಯದು.

ಮಾಲಿನ್ಯ: ತುಂಬಾ ದೂಳಿನಲ್ಲಿ ಓಡಾಡುತ್ತಿದ್ದರೆ ಕೂದಲು ಹಾಳಾಗುತ್ತದೆ, ಆದ್ದರಿಂದ ದೂಳಿನಲ್ಲಿ ಅಥವಾ ಗಾಡಿಯಲ್ಲಿ ಓಡಾಡುವಾಗ ತಲೆಗೆ ಬಟ್ಟೆ ಕಟ್ಟುವುದು ಒಳ್ಳೆಯದು.

ಆಹಾರ: ಸರಿಯಾದ ಆಹಾರಕ್ರಮ ಪಾಲಿಸದಿದ್ದರೆ ಆಹಾರದಲ್ಲಿ ವಿಟಮಿನ್ ಕೊರತೆ ಇದ್ದರೆ ಕೂದಲು ಉದುರುತ್ತದೆ. ಅದರಲ್ಲೂ ವಿಟಮಿನ್ ಸಿ ಹಾಗೂ ಸತುವಿನಂಶವಿದ್ದರೆ ಕೂದಲು ಬೇಗನೆ ಉದುರುತ್ತದೆ.

ಶ್ಯಾಂಪೂ, ಕಂಡೀಷನರ್ ಬದಲಾಯಿಸುವುದು: ಆಗಾಗ ಶ್ಯಾಂಪೂ, ಕಂಡೀಷನರ್ ಬದಲಾಯಿಸುತ್ತಿದ್ದರೆ ಕೂದಲು ಒಣಗುವುದು ಹಾಗೂ ಉದುರಲಾರಂಭಿಸುತ್ತದೆ.

ಕಾಯಿಲೆ: ಥೈರಾಯ್ಡ್, ಕ್ಯಾನ್ಸರ್, ಪೋಷಕಾಂಶಗಳ ಕೊರತೆ, ಟೈಫಾಯ್ಡ್, ಸರ್ಜರಿ ಹೀಗೆ ಕಾಯಿಲೆಗಳಿದ್ದರೆ ಕೂದಲು ಒಣಗುವುದು ಹಾಗೂ ಉದುರಲಾರಂಭಿಸುತ್ತದೆ.

ಎಣ್ಣೆಯಂಶ ಇಲ್ಲದಿರುವುದು: ಕೂದಲಿಗೆ ಸರಿಯಾಗಿ ಎಣ್ಣೆ ಹಾಕಿ ಎಣ್ಣೆ ಮಸಜ್ ಮಾಡದೆ ಇದ್ದರೆ ಕೂದಲಿನ ಬುಡ ಒಣಗುವುದು. ಆದ್ದರಿಂದ ವಾರಕ್ಕೆ 2 ಬಾರಿ ಎಣ್ಣೆ ಮಸಾಜ್ ಮಾಡಬೇಕು.

English summary

What Makes Your Hair Dry | Tips For Hair Care | ಕೂದಲು ಡ್ರೈಯಾಗಲು ಕಾರಣವೇನು? | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Most of us are worried by dry hair problems. It is more important to know the reasons for having dry hair before you start looking for its remedies.
X
Desktop Bottom Promotion