Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕೂದಲು ನಾರಿನಂತೆ ಒರಟಾಗಿದೆಯೇ?
ಪ್ರತಿಯೊಬ್ಬರು ನುಣಪಾದ ಕೂದಲನ್ನು ಬಯಸುತ್ತಾರೆ. ನೇರ ಕೂದಲಾಗಿರಲಿ, ಗುಂಗುರು ಕೂದಲಾಗಿರಲಿ ಮೃದುವಾಗಿದ್ದರೆ ಮಾತ್ರ ಹೆಚ್ಚು ಆಕರ್ಷಕವಾಗಿ ಕಾಣುವುದು. ಕೂದಲು ನಾರಿನಂತೆ ಇದ್ದರೆ ಮುಖ ಕಳೆಗುಂದುವುದು. ಕೂದಲು ನುಣಪಾಗಿ ಇರಬೇಕೆಂದು ಜಾಹೀರಾತಿನಲ್ಲಿ ತೋರಿಸಿದ ಶ್ಯಾಂಪೂ ಟ್ರೈ ಮಾಡುತ್ತೇವೆ, ಹೇರ್ ಸ್ಟ್ರೈಟ್ನಿಂಗ್, ಹೇರ್ ಡ್ರೈಯರ್ ಬಳಸಿ ಕೂದಲಿನ ಅಂದ ಹೆಚ್ಚಿಸಲು ಪ್ರಯತ್ನಿಸುವುದು ಹೀಗೆಲ್ಲಾ ಮಾಡುತ್ತೇವೆ. ಆದರೆ ಇವೆಲ್ಲಾ ಕೂದಲಿನ ಅಂದವನ್ನು ಮತ್ತಷ್ಟು ಹದಗೆಡಿಸುತ್ತದೆ ಎಂಬುವುದು ನಿಮಗೆ ಗೊತ್ತೇ?
ಹಾಗಾದರೆ ನಾರಿನಂತೆ ಇರುವ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸಲು ಸಾಧ್ಯವಿಲ್ಲವೇ ಎಂಬ ನಿರಾಸೆ ಬೇಡ, ನೀವು ಸೀಗೆಕಾಯಿ ಬಳಸುವುದು, ಮೆಹಂದಿ ಹಾಕುವುದು ಈ ರೀತಿಯ ನೈಸರ್ಗಿಕವಾದ ವಿಧಾನವನ್ನು ಅನುಸರಿಸಿದ್ದೇ ಆದರೆ ಖಂಡಿತ ಕೂದಲನ್ನು ಮೃದುವಾಗಿಸಬಹುದು.
ಇಲ್ಲಿ ನಾವು ಡ್ರೈ ಕೂದಲನ್ನು ಹೋಗಲಾಡಿಸುವ ಪರಿಣಾಮಕಾರಿಯಾದ ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

ಶ್ಯಾಂಪೂ
ಅಂಡ್ವಾಳ, ಸೀಗೆಕಾಯಿ ಇವೆಲ್ಲಾ ನೈಸರ್ಗಿಕವಾದ, ಯಾವುದೇ ಅಡ್ಡ ಪರಿಣಾಮವಿಲ್ಲದ ಶ್ಯಾಂಪೂಗಳು. ಇದರಲ್ಲಿರುವ ಗುಣಮಟ್ಟ ಯಾವುದೇ ದುಬಾರಿಯಾದ ಶ್ಯಾಂಪೂಗಳಲ್ಲಿ ಕಾಣಲು ಸಾಧ್ಯವಿಲ್ಲ. ಡ್ರೈ ಕೂದಲನ್ನು ಹೋಗಲಾಡಿಸಲು ಇವುಗಳ ಬಳಕೆ ಒಳ್ಳೆಯದು.

ಕಂಡೀಷನರ್
ಕಂಡೀಷನರ್ ಬಳಸದಿದ್ದರೆ ಕೂದಲಿನ ಹೊಳಪು ಕಡಿಮೆಯಾಗುವುದು. ಆದರೆ ಕೆಮಿಕಲ್ ಇರುವ ಕಂಡೀಷನರ್ ಬಳಸುವ ಬದಲು, ಮೊಸರು, ಮೊಟ್ಟೆಯಂತಹ ನೈಸರ್ಗಿಕವಾದ ಕಂಡಿಷನರ್ ಬಳಸುವುದು ಒಳ್ಳೆಯದು.

ಕೂದಲಿನ ಬುಡದ ಆರೈಕೆ
ಹೆಚ್ಚಿನವರು ಕೂದಲಿನ ಆರೈಕೆ ಕಡೆ ಗಮನ ಕೊಡುತ್ತಾರೆ, ಆದರೆ ಅದರ ಬುಡದ ಆರೈಕೆಯತ್ತ ಹೆಚ್ಚು ಗಮನ ಕೊಡುವುದಿಲ್ಲ, ಪರಿಣಾಮ ಕೂದಲಿನ ಆರೋಗ್ಯ ಕಡಿಮೆಯಾಗುವುದು. ಆದ್ದರಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿ. ಈರುಳ್ಳಿ ರಸ, ಮೊಸರು, ಮೊಟ್ಟೆ ಇವುಗಳನ್ನು ತಲೆಗೆ ಹಚ್ಚಿದರೆ ಕೂದಲಿನ ಬಡಕ್ಕೆ ತುಂಬಾ ಒಳ್ಳೆಯದು.

ಕೂದಲು ಕವಲೊಡೆದಾಗ
ಕೂದಲು ಕವಲೊಡೆಯಲಾರಂಭಿಸಿದರೆ ಕೂದಲಿನ ರಕ್ಷಣೆ ಮಾಡಲು ಕೂದಲಿನ ಬುಡ ಕತ್ತರಿಸಿ, ನಂತರ ಆರೈಕೆ ಮಾಡಿ. ಕವಲೊಡೆದ ಕೂದಲಿನ ಕತ್ತರಿಸದೆ ಕೂದಲಿನ ಆರೋಗ್ಯ ಹೆಚ್ಚಿಸಬಹುದು ಎಂಬ ಪೊಳ್ಳು ಜಾಹೀರಾತಿಗೆ ಕಿವಿ ಕೊಡದಿರಿ.

ಮೊಟ್ಟೆಯ ಬಿಳಿ ಹಚ್ಚಿ
ಕೂದಲು ತುಂಬಾ ಒರಟಾಗಿದ್ದರೆ ವಾರಕ್ಕೆ ಎರಡು ಬಾರಿ ಮೊಟ್ಟೆಯ ಬಿಳಿ ಹಚ್ಚಿ ನಂತರ ತಲೆ ತೊಳೆಯಿರಿ. ಈ ರೀತಿ ಮಾಡುತ್ತಾ ಬನ್ನಿ ಕೂದಲು ಮೃದುತ್ವವನ್ನು ಪಡೆಯುತ್ತದೆ.

ಹೇರ್ ಪ್ಯಾಕ್
ಹೇರ್ ಪ್ಯಾಕ್ ಬಳಸುವಾಗ ಗುಣಮಟ್ಟದ, ನೈಸರ್ಗಿಕವಾದ ಹೇರ್ ಪ್ಯಾಕ್ ಬಳಸಿ. ಮೆಹಂದಿ ಪುಡಿ ಕೊಳ್ಳುವಾಗ 100% ನ್ಯಾಚುರಲ್ ಮೆಹಂದಿಯನ್ನು ಕೊಂಡು ಹಚ್ಚಿ.

ಕೂದಲಿಗೆ ಆಹಾರ
ಕೂದಲಿಗೆ ವಿಟಮಿನ್ ಇ ಇರುವ ಆಹಾರಗಳನ್ನು ತಿನ್ನಿ. ದಿನಾ 4-5 ಬಾದಾಮಿಯನ್ನು ನೆನೆ ಹಾಕಿ ತಿನ್ನಿ, ತುಂಬಾ ಒಳ್ಳೆಯದು.

ಬಿಸಿ ಟವಲ್ ನಿಂದ ಹೇರ್ ಕ್ಯಾಪ್
ತಲೆಗೆ ಎಣ್ಣೆ ಹಚ್ಚಿ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿ 10 ನಿಮಿಷ ಬಿಡಿ. ಈ ರೀತಿ ಮಾಡುವುದರಿಂದ ಕೂದಲು ಡ್ರೈಯಾಗುವುದನ್ನು ತಡೆಯಬಹುದು.

ಹಾಲಿನ ಪೋಷಣೆ
ವಾರಕ್ಕೊಮ್ಮೆ ಕೂದಲಿಗೆ ಸ್ವಲ್ಪ ತಾಜಾ ಹಾಲನ್ನು ಹಾಕಿ ಕೂದಲನ್ನು ಮಸಾಜ್ ಮಾಡಿ, ನಂತರ ತಲೆ ತೊಳೆಯಬೇಕು. ಈ ವಿಧಾನವೂ ಕೂಡ ಕೂದಲು ಡ್ರೈಯಾಗುವುದನ್ನು ತಡೆಯುವಲ್ಲಿ ಸಹಕಾರಿ.

ಎಣ್ಣೆ
ವಾರದಲ್ಲಿ ಎರಡು ಬಾರಿಯಾದರೂ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಡ್ರೈ ಕೂದಲನ್ನು ಹೋಗಲಾಡಿಸಿ, ಆರೋಗ್ಯಕರವಾದ ಕೂದಲನ್ನು ಪಡೆಯಲು ಸಾಧ್ಯ.

ಡ್ರೈಯರ್ ಬಳಸಬೇಡಿ
ಕೂದಲನ್ನು ಒಣಗಿಸಲು ಡ್ರೈಯರ್ ಬಳಸಬೇಡಿ, ಫ್ಯಾನ್ ಬಳಸಬೇಡಿ, ಕೂದಲನ್ನು ಗಾಳಿಯಲ್ಲಿಯೇ ಒಣಗಿಸಿ. ಹೇರ್ ಸ್ಟೈಟ್ನಿಂಗ್ ನಿಂದ ದೂರವಿರಿ.



Click it and Unblock the Notifications