For Quick Alerts
ALLOW NOTIFICATIONS  
For Daily Alerts

ನಿಮ್ಮ ಈ ಬ್ಯೂಟಿ ಪ್ರಾಡಕ್ಟ್‌ಗಳನ್ನು ಫ್ರಿಜ್‌ನಲ್ಲಿಟ್ಟರೆ, ಹೆಚ್ಚುಕಾಲ ಬಾಳಿಕೆ ಬರುವುದು

|

ಮಳೆಗಾಲ ಮುಗಿಯುತ್ತಿದ್ದಂತೆ ಬಿಸಿಲು ನಮ್ಮನ್ನು ಕಾಡಲು ಆರಂಭಿಸುತ್ತದೆ. ಬಿಸಲಿನ ಬೇಗೆಯಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ನಾನಾ ಉತ್ಪನ್ನಗಳ ಮೊರೆಹೋಗುವುದಂತೂ ಸತ್ಯ. ಇವುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಬಿಸಿಲಿನಿಂದಾದ ಪರಿಣಾಮಗಳನ್ನು ಶಮನಗೊಳಿಸುತ್ತವೆ. ಆದರೆ, ಅತಿಯಾದ ಉಷ್ಣಾಂಶ ಹಾಗೂ ತಾಪಮಾನ, ಬೆಳಕಿನಿಂದಾಗಿ ಇವುಗಳು ಹೆಚ್ಚುಕಾಲ ಬಳಕೆ ಬರಲಾರದು.

ಹಾಗಾದ್ರೆ, ಈ ಪ್ರಾಡಕ್ಟ್‌ಗಳನ್ನು ಸಂಗ್ರಹಿಸಿಡುವುದು ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುವುದು. ಅದಕ್ಕೆ ಸೌಂದರ್ಯ ತಜ್ಞರು ನೀಡುವ ಉತ್ತರವೆಂದರೆ ಶೈತ್ಯೀಕರಣ ಅಂದರೆ ಫ್ರಿಜ್‌ನಲ್ಲಿಡುವುದು. ಹಾಗಾದರೆ ಎಲ್ಲಾ ಉತ್ಪನ್ನಗಳನ್ನು ಫ್ರಿಜ್‌ನಲ್ಲಿಡಲು ಸಾಧ್ಯವೇ? ಯಾವೆಲ್ಲಾ ಉತ್ಪನ್ನಗಳನ್ನು ಇಡಬಹುದು? ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದ ಮೂಲಕ ಕೊಡಲಿದ್ದೇವೆ.

ಬೇಸಿಗೆಯಲ್ಲಿ ಯಾವೆಲ್ಲಾ ಸೌಂದರ್ಯ ಉತ್ಪನ್ನಗಳನ್ನು ಫ್ರಿಜ್‌ನಲ್ಲಿ ಇಡಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1 ಕಣ್ಣಿನ ಆರೈಕೆ ಉತ್ಪನ್ನಗಳು:

1 ಕಣ್ಣಿನ ಆರೈಕೆ ಉತ್ಪನ್ನಗಳು:

ಫ್ರಿಜ್‌ನಲ್ಲಿ ಐ ಸೀರಮ್ ಅಥವಾ ಕ್ರೀಮ್‌ಗಳನ್ನು ಏಕೆ ಸಂಗ್ರಹಿಸಡಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಈ ಉತ್ಪನ್ನಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಹಿತವಾದ ಮತ್ತು ತಂಪುಗೊಳಿಸುವ ಪರಿಣಾಮವನ್ನು ಪಡೆಯುತ್ತವೆ. ಈ ತಣ್ಣಗಾದ ಕಣ್ಣಿನ ಉತ್ಪನ್ನವನ್ನು ಹಚ್ಚಿಕೊಳ್ಳುವುದರಿಂದ ಊತವನ್ನು ಜೊತೆಗೆ ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರು ಉಳಿಸಿಕೊಳ್ಳುವಿಕೆಯ ಪರಿಣಾಮವಾಗಿ ಕಣ್ಣಿನ ಪ್ರದೇಶದಲ್ಲಿ ರಾತ್ರಿಯಲ್ಲಿ ಊತವು ಹೆಚ್ಚಾಗಿ ಸಂಭವಿಸುತ್ತದೆ. ಆದ್ದರಿಂದ ಫ್ರಿಜ್‌ನಲ್ಲಿಟ್ಟ ಸಿರಮ್ ಅಥವಾ ಕ್ರೀಮ್‌ಗಳನ್ನು ಹಚ್ಚುವುದರಿಂದ ಸ್ವಲ್ಪ ರಿಲೀಫ್ ಸಿಗುವುದು.

2 ಲಿಪ್ ಗ್ಲಾಸ್ ಮತ್ತು ಲಿಪ್ಸ್ಟಿಕ್:

2 ಲಿಪ್ ಗ್ಲಾಸ್ ಮತ್ತು ಲಿಪ್ಸ್ಟಿಕ್:

ಲಿಪ್ ಗ್ಲಾಸ್ ಮತ್ತು ಲಿಪ್ಸ್ಟಿಕ್ ನ್ನು ಬಳಸದೇ ಇದ್ದಾಗ ಫ್ರಿಜ್‌ನಲ್ಲಿ ಇಡುವುದು ಒಳ್ಳೆಯದು ಎಂಬುದು ಸೌಂದರ್ಯ ತಜ್ಞರ ಅಭಿಪ್ರಾಯವಾಗಿದೆ. ಹೆಚ್ಚಿನ ಕಾಸ್ಮೆಟಿಕ್ ಉತ್ಪನ್ನಗಳನ್ನು ಸ್ಥಿರವಾದ ಕೋಣೆಯ ಉಷ್ಣಾಂಶದಲ್ಲಿ ಅಥವಾ ಉಷ್ಣಾಂಶ ಕಡಿಮೆ ಇರುವ ಜಾಗದಲ್ಲಿ ಇಡಬೇಕು. ಕಾರಿನಂತಹ ಬೆಚ್ಚಗಿನ ವಾತಾವರಣದಲ್ಲಿ ದೀರ್ಘಕಾಲ ಇಟ್ಟರೆ, ಅದು ತನ್ನ ವಿನ್ಯಾಸವನ್ನು ಕಳೆದುಕೊಳ್ಳಬಹುದು.

3 ಮಸ್ಕರಾ:

3 ಮಸ್ಕರಾ:

ನಿಮ್ಮ ರೆಪ್ಪೆಗೂದಲ ಸೌಂದರ್ಯ ಹೆಚ್ಚಿಸಲು ಮಸ್ಕರಾ ಅತ್ಯಗತ್ಯ. ಇಂತಹ ಮಸ್ಕರಾ ಹೆಚ್ಚು ಕಾಲ ಬಳಕೆ ಬರಬೇಕಾದರೆ ಅದನ್ನು ಫ್ರಿಜ್‌ನಲ್ಲಿ ಇಡುವುದು ಸೂಕ್ತ. ಮಸ್ಕರಾವನ್ನು ತಂಪಾದ ವಾತಾವರಣದಲ್ಲಿ ಇಡುವುದರಿಂದ, ದೀರ್ಘಕಾಲ ಬಾಳಿಕೆ ಬರುತ್ತದೆ, ಜೊತೆಗೆ ಸುರಕ್ಷಿತವಾಗಿರಿಸುತ್ತದೆ.

4 ಫೇಸ್ ಮಾಸ್ಕ್ಕಗಳು:

4 ಫೇಸ್ ಮಾಸ್ಕ್ಕಗಳು:

ಶೀಟ್ ಮಾಸ್ಕ್ ಗಳು ಮಾತ್ರ ಫ್ರಿಜ್‌ನಲ್ಲಿ ಇಡಲು ಯೋಗ್ಯ ಎಂದು ನೀವು ಭಾವಿಸಬಹುದು, ಆದರೆ ಅಲೋ ಮತ್ತು ಹೈಲುರಾನಿಕ್ ಆಸಿಡ್ ಪದಾರ್ಥಗಳನ್ನು ಹೊಂದಿರುವ ಮುಖವಾಡಗಳು ಸಹ ಫ್ರಿಜ್‌ನಲ್ಲಿ ಇಡಬೇಕು ಎಂದು ತಜ್ಞರು ಸೂಚಿಸುತ್ತಾರೆ. ಇವುಗಳು ತ್ವಚೆಯ ಮೇಲೆ ತಂಪಾಗಿಸುವ ಮತ್ತು ಹಿತವಾದ ಪರಿಣಾಮವನ್ನು ಹೊಂದಿರುತ್ತವೆ, ಕಡಿಮೆ ತಾಪಮಾನದ ವಾತಾವರಣದಲ್ಲಿ ಶೇಖರಿಸಿದಾಗ ಈ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುವುದು.

5 ರೆಟಿನಾಲ್‌ಗಳು ಮತ್ತು ವಿಟಮಿನ್ ಸಿ ಉತ್ಪನ್ನಗಳು:

5 ರೆಟಿನಾಲ್‌ಗಳು ಮತ್ತು ವಿಟಮಿನ್ ಸಿ ಉತ್ಪನ್ನಗಳು:

ರೆಟಿನಾಲ್ ಮತ್ತು ವಿಟಮಿನ್ ಸಿ ಇರುವ ಉತ್ಪನ್ನಗಳು ಸಕ್ರಿಯ ಪದಾರ್ಥಗಳನ್ನು ಹೊಂದಿರುತ್ತವೆ. ಇದು ದೀರ್ಘಕಾಲ ಶಾಖಕ್ಕೆ ಒಳಗಾದರೆ ದುರ್ಬಲಗೊಳ್ಳಬಹುದು. ಆದ್ದರಿಂದ ಯಾವುದೇ ಹಾನಿಯನ್ನು ತಡೆಗಟ್ಟಲು ಈ ಉತ್ಪನ್ನಗಳನ್ನು ಫ್ರಿಜ್‌ನಲ್ಲಿ ಇಡುವುದು ಉತ್ತಮ.

6 ಫೇಸ್ ಆಯಿಲ್‌ಗಳು:

6 ಫೇಸ್ ಆಯಿಲ್‌ಗಳು:

ಮುಖದ ಮಸಾಜ್‌ ಅಥವಾ ಹೊಳಪಿಗೆ ಬಳಸುವ ನಿಮ್ಮ ಪೇಸ್ ಆಯಿಲ್‌ಗಳು ನೈಸರ್ಗಿಕವಾಗಿದ್ದರೆ, ಅವುಗಳನ್ನು ಸಹ ಫ್ರಿಜ್ಜನಲ್ಲಿ ಇಡಬೇಕು. ಏಕೆಂದರೆ ಶಾಖ ಅಥವಾ ಬೆಳಕಿಗೆ ಈ ಎಣ್ಣೆಗಳು ಬೇಗನೇ ವಿಭಜನೆಗೊಳ್ಳುತ್ತವೆ. ಆದ್ದರಿಂದ ಅದನ್ನು ಸಂರಕ್ಷಿಸಲು ನಿಮ್ಮ ಫೇಸ್ ಆಯಿಲ್‌ಗಳನ್ನು ಫ್ರಿಜ್‌ನಲ್ಲಿಡಿ.

7 ಅಲೋ ವೆರಾ ಜೆಲ್:

7 ಅಲೋ ವೆರಾ ಜೆಲ್:

ಅಲೋವೆರಾ ಬೇಸಿಗೆಯಲ್ಲಿ ಸೌಂದರ್ಯ ಕಾಪಾಡುವ ಸ್ನೇಹಿತ ಎಂದರೆ ತಪ್ಪಾಗಲ್ಲ. ಇದು ಬಿಸಿಲಿನ ಬೇಗೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಜೊತೆಗೆ ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುತ್ತದೆ. ಆದರೆ, ಫ್ರಿಜ್‌ನಲ್ಲಿಟ್ಟ ಅಂದರೆ ಕೋಲ್ಡ್ ಅಲೋವೆರಾ ಜೆಲ್ ನಿಮ್ಮ ಮುಖಕ್ಕೆ ಮತ್ತಷ್ಟ ಒಳಿತನ್ನ ಮಾಡಬಹುದು.

8 ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ಪನ್ನಗಳು:

8 ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ಪನ್ನಗಳು:

ಹಲ್ಲುಗಳನ್ನು ಬಿಳಿಮಾಡುವ ಕೆಲವು ಜೆಲ್‌ಗಳನ್ನು ಫ್ರಿಜ್‌ನಲ್ಲಿ ಇಡಬೇಕೆಂದು ತಜ್ಞರು ಸೂಚಿಸುತ್ತಾರೆ. ಬೇಸಿಗೆಯ ಉದ್ದಕ್ಕೂ ನಿಮ್ಮ ಮುತ್ತಿನಂತಹ ಹಲ್ಲುಗಳನ್ನು ಹೊಳೆಯುವಂತೆ ಮಾಡಲು, ಈ ಜೆಲ್‌ಗಳನ್ನು ಫ್ರಿಜ್‌ನಲ್ಲಿಟ್ಟು ಬಳಸಿ.

9 ಫೇಸ್ ಸ್ಪ್ರೇ:

9 ಫೇಸ್ ಸ್ಪ್ರೇ:

ಮುಖಕ್ಕೆ ಬಳಸುವ ಸ್ಪ್ರೇಗಳನ್ನ ಫ್ರಿಜ್‌ನಲ್ಲಿ ಸಂಗ್ರಹಿಸುವುದರಿಂದ ನಿಮ್ಮಲ್ಲಿರುವ ಯಾವುದೇ ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಕೂಡ ಒಳ್ಳೆಯದನ್ನು ಅನುಭವಿಸುತ್ತದೆ. ಜೊತೆಗೆ ಯಾವುದೇ ಅನಗತ್ಯ ರೆಡ್‌ನೆಸ್ ಮತ್ತು ಶುಷ್ಕತೆಯನ್ನು ದೂರವಿಡುತ್ತದೆ.

10. ಪರ್ಫ್ಯೂಮ್ ಅಥವಾ ಸುಗಂಧ ದ್ರವ್ಯಗಳು:

10. ಪರ್ಫ್ಯೂಮ್ ಅಥವಾ ಸುಗಂಧ ದ್ರವ್ಯಗಳು:

ಹೌದು, ನೀವು ನಿಮ್ಮ ನೆಚ್ಚಿನ ಪರ್ಫ್ಯೂಮ್‌ಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸಬಹುದು. ಬೆಳಕು ಮತ್ತು ಶಾಖಕ್ಕೆ ತಾಗಿದಾಗ ನಿಮ್ಮ ಸುಗಂಧ ದ್ರವ್ಯಗಳೊಳಗಿನ ರಾಸಾಯನಿಕಗಳು ಒಡೆಯಲು ಆರಂಭವಾಗುತ್ತದೆ. ಆದ್ದರಿಂದ ಇವುಗಳನ್ನು ಫ್ರಿಜ್‌ನಲ್ಲಿಡುವುದು ಒಳ್ಳೆಯದು, ಆದರೆ ಅದಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅವುಗಳ ಪರಿಮಳ ಮಂದವಾಗಬಹುದು.

11 ನೇಲ್ ಪಾಲಿಶ್;

11 ನೇಲ್ ಪಾಲಿಶ್;

ಬೆಚ್ಚಗಿನ ಮತ್ತು ಬಿಸಿ ವಾತಾವರಣವು ನಿಮ್ಮ ನೆಚ್ಚಿನ ನೇಲ್ ಪಾಲಿಶ್‌ಗಳನ್ನು ಗಟ್ಟಿಯಾಗಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ನೇಲ್ ಪಾಲಿಶ್ ಚೆನ್ನಾಗಿರಲು ಫ್ರಿಜ್‌ನಲ್ಲಿಡವುದು ಉತ್ತಮ.

English summary

List of Beauty Products to store in Refrigerator

Here we talking about List of Beauty products to store in refrigerator, read on
Story first published: Thursday, September 30, 2021, 15:28 [IST]
X
Desktop Bottom Promotion