For Quick Alerts
ALLOW NOTIFICATIONS  
For Daily Alerts

ಉಗುರು ಕಡಿಯುವ ಅಭ್ಯಾಸವನ್ನು ಬಿಡಲು ಇಲ್ಲಿವೆ ಸರಳ ಟಿಪ್ಸ್‌ಗಳು

|

ನಮ್ಮಲ್ಲಿ ಹೆಚ್ಚಿನವರಿಗೆ ಉಗುರು ಕಡಿಯುವ ಅಥವಾ ಕಚ್ಚುವ ಅಭ್ಯಾಸವಿರುತ್ತದೆ. ಯಾವುದಾದರೂ ಸಮಸ್ಯೆಯ ಬಗ್ಗೆ ಅತಿಯಾಗಿ ಯೋಚಿಸುವುದು, ನಿಮ್ಮ ಕೋಪ ಅಥವಾ ಭಾವನೆಗಳನ್ನು ತಡೆಹಿಡಿದಾಗ ಅಥವಾ ಯಾವುದೇ ಕಾರಣವಿಲ್ಲದೇ ಸುಮ್ಮನೆ ಉಗುರು ಕಡಿಯುವವರೂ ಇದ್ದಾರೆ.

ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಜೊತೆಗೆ ಉದ್ದ ಉಗುರು ಬೆಳೆಸುವುದಕ್ಕೂ ಅವಕಾಶ ಸಿಗುವುದಿಲ್ಲ. ಆದ್ದರಿಂದ ನೀವೇನಾದರೂ, ಉಗುರು ಕಡಿಯುವ ಅಭ್ಯಾಸವನ್ನು ಬಿಡಬೇಕೆಂದು ಯೋಚಿಸುತ್ತಿದ್ದರೆ, ಈ ಕೆಳಗಿನ ಪ್ರಯತ್ನಗಳನ್ನು ಮಾಡಬಹುದು.

ಉಗುರು ಕಡಿಯುವ ಅಭ್ಯಾಸವನ್ನು ಹೇಗೆ ಬಿಡಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಉಗುರು ಕಡಿಯುವಂತೆ ಪ್ರಚೋದಿಸುವ ವಿಷಯವನ್ನು ತಿಳಿಯಿರಿ:

ಉಗುರು ಕಡಿಯುವಂತೆ ಪ್ರಚೋದಿಸುವ ವಿಷಯವನ್ನು ತಿಳಿಯಿರಿ:

ಮೊದಲನೆಯದಾಗಿ, ನಿಮ್ಮ ಉಗುರುಗಳನ್ನು ಕಚ್ಚಲು ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸಿ. ಯಾವುದೇ ಕಾಯಿಲೆ, ಸಮಸ್ಯೆ ಅಥವಾ ಕೆಟ್ಟ ಅಭ್ಯಾಸವನ್ನು ಗುಣಪಡಿಸಲು, ಅದಕ್ಕೆ ಕಾರಣವೇನು ಎಂಬುದನ್ನು ಮೊದಲು ತಿಳಿದಿರಬೇಕು. ಉಗುರು ಕಚ್ಚುತ್ತಿರುವುದು ನಿಮ್ಮ ಗಮನಕ್ಕೆ ಬಂದಾಗ, ಒಂದು ನಿಮಿಷ ತೆಗೆದುಕೊಳ್ಳಿ ಮತ್ತು ಆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಯೋಚಿಸಿ. ಸ್ಪಷ್ಟತೆಗಾಗಿ, ಆ ಭಾವನೆಗಳನ್ನು ಬರೆಯಿರಿ. ಆದ್ದರಿಂದ, ಮುಂದಿನ ಬಾರಿ ಅದೇ ಸನ್ನಿವೇಶದಲ್ಲಿ ಉಗುರು ಕಡಿಯುತ್ತಿದ್ದರೆ, ಅದನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಉಗುರುಗಳನ್ನು ಚಿಕ್ಕದಾಗಿ ಟ್ರಿಮ್ ಮಾಡಿ:

ಉಗುರುಗಳನ್ನು ಚಿಕ್ಕದಾಗಿ ಟ್ರಿಮ್ ಮಾಡಿ:

ಇದು ಸ್ವಲ್ಪ ಸಮಯದವರೆಗೆ ನಿಮಗೆ ಅನಾನುಕೂಲವಾಗಬಹುದು, ಆದರೆ ನಿಮ್ಮ ಉಗುರುಗಳನ್ನು ಕತ್ತರಿಸುವುದು ಖಂಡಿತವಾಗಿಯೂ ಅವುಗಳನ್ನು ಕಡಿಯದಂತೆ ತಡೆಯುತ್ತದೆ. ಉಗುರೇ ಇಲ್ಲದಿದ್ದರೆ, ಅದನ್ನು ಕಡಿಯುವ ಮಾತೇ ಬರುವುದಿಲ್ಲ. ಇದನ್ನು ಹೊರತುಪಡಿಸಿ, ಉಗುರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುವುದು ಬದುಕಲು ಸುಲಭವಾದ ಮಾರ್ಗವಾಗಿದೆ. ಇದರಿಂದ ಎಷ್ಟೋ ಕೆಲಸಗಳು ಸುಲಭವಾಗುತ್ತದೆ. ಜೊತೆಗೆ ನೈರ್ಮಲ್ಯದ ದೃಷ್ಟಿಯಿಂದಲೂ ಒಳ್ಳೆಯದು, ಏಕೆಂದರೆ ಸಣ್ಣ ಉಗುರುಗಳು ಸೂಕ್ಷ್ಮಜೀವಿಗಳ ಹರಡುವಿಕೆ ಮತ್ತು ಉಗುರು ಸೋಂಕುಗಳನ್ನು ತಡೆಯುತ್ತದೆ.

ಕಹಿಯಾಗಿರುವ ನೇಲ್ ಪಾಲಿಶ್ ಹಚ್ಚಿ:

ಕಹಿಯಾಗಿರುವ ನೇಲ್ ಪಾಲಿಶ್ ಹಚ್ಚಿ:

ನಿಮ್ಮ ಉಗುರುಗಳನ್ನು ನೀವು ಪ್ರೀತಿಸುತ್ತಿದ್ದರೆ, ಅದನ್ನು ಸಂಪೂರ್ಣವಾಗಿ ಕತ್ತರಿಸಲು ಬಯಸದಿದ್ದರೆ, ಈ ವಿಧಾನ ಪ್ರಯತ್ನಿಸಿ. ಇದರಿಂದ ಅವುಗಳನ್ನು ಅಗಿಯುವ ಅಥವಾ ಕಚ್ಚುವ ಕಲ್ಪನೆಯನ್ನು ಸ್ವಯಂಚಾಲಿತವಾಗಿ ಬಿಡುತ್ತೀರಿ. ನೀವು ಮಾಡಬೇಕಾಗಿರುವುದು ಇಷ್ಟೇ, ಕೆಟ್ಟ ರುಚಿಯ ಉಗುರು ಬಣ್ಣವನ್ನು ಹಚ್ಚುವುದು. ಕೆಲವು ಜನರು ಇದರ ವಾಸನೆಯನ್ನು ಇಷ್ಟಪಡಬಹುದು. ಇತರರು ಪರಿಮಳಯುಕ್ತ ಉಗುರು ಬಣ್ಣವನ್ನು ದ್ವೇಷಿಸುತ್ತಾರೆ. ನಿಮಗೆ ಯಾವುದು ಇಷ್ಟವಿಲ್ಲವೋ ಅದನ್ನು ಕಂಡುಹಿಡಿಯಿರಿ, ಅದನ್ನು ಬಳಸುವ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ. ಇದು ನಿಮ್ಮ ಉಗುರುಗಳನ್ನು ಇನ್ನು ಮುಂದೆ ಹಾಳು ಮಾಡದಂತೆ ತಡೆಯುತ್ತದೆ. ಆದರೆ, ಉಗುರು ಬಣ್ಣ ಅಥವಾ ನೇಲ್ ಪಾಲಿಶ್‌ನಲ್ಲಿ ರಾಸಾಯನಿಕ ಇದೆ, ಅದು ಹೊಟ್ಟೆ ಸೇರುತ್ತದೆ ಎಂಬುದನ್ನು ಮರೆಯಬೇಡಿ.

ನಕಲಿ ಉಗುರುಗಳನ್ನು ಪ್ರಯತ್ನಿಸಿ :

ನಕಲಿ ಉಗುರುಗಳನ್ನು ಪ್ರಯತ್ನಿಸಿ :

ನೀವು ಉಗುರುಗಳನ್ನು ಅಗಿಯುವ ಅಭ್ಯಾಸವನ್ನು ಹೊಂದಿದ್ದರೆ, ಜೊತೆಗೆ ಉದ್ದವಾದ ಉಗುರುಗಳನ್ನು ಸಹ ಬಯಸಿದರೆ, ನಕಲಿ ಉಗುರುಗಳನ್ನು ಪ್ರಯತ್ನಿಸಬಹುದು. ಆಗ ನಿಮ್ಮ ನಕಲಿ ಉಗುರುಗಳನ್ನು ಅಗಿಯುವುದಿಲ್ಲ, ಏಕೆಂದರೆ ಅದು ಮೆದುಳು ಮತ್ತು ನಾಲಿಗೆಗೆ ವಿಚಿತ್ರವಾಗಿ ಅನಿಸುತ್ತದೆ. ಅಲ್ಲದೆ, ನಕಲಿ ಉಗುರುಗಳನ್ನು ಅಗಿಯುವುದು ಸುಲಭವಲ್ಲ ಏಕೆಂದರೆ ಅವು ನಿಮ್ಮ ಮೂಲ ಉಗುರುಗಳ ಸ್ಥಿರತೆಗಿಂತ ಗಟ್ಟಿಯಾಗಿರುತ್ತವೆ.

ನಿಮ್ಮ ಪ್ರಗತಿಗೆ ಪ್ರತಿಫಲ ನೀಡಿ:

ನಿಮ್ಮ ಪ್ರಗತಿಗೆ ಪ್ರತಿಫಲ ನೀಡಿ:

ಈ ಹ್ಯಾಕ್‌ಗಳನ್ನು ಪ್ರಯತ್ನಿಸಿದ ನಂತರ, ನಿಮ್ಮಲ್ಲಿ ಸ್ವಲ್ಪ ಪ್ರಗತಿಯನ್ನು ನೋಡಿದರೆ, ನೀವೇ ಪ್ರತಿಫಲ ನೀಡಲು ಮರೆಯಬೇಡಿ. ಇದು ಮುಂದುವರಿಯಲು ಮತ್ತು ನಿಮ್ಮ ಅಂತಿಮ ಗುರಿಗಳನ್ನು ಪೂರೈಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ನೀವು ಇಷ್ಟಪಡುವ ಆಹಾರವನ್ನು ತಿನ್ನುವ ಮೂಲಕ ಅಥವಾ ಹೊಸ ನೇಲ್ ಕೇರ್ ಕಿಟ್, ನೇಲ್ ಪಾಲಿಶ್‌ಗಳು, ನೇಲ್ ಸ್ಟಿಕ್ಕರ್‌ಗಳು ಮುಂತಾದ ಉಡುಗೊರೆಗಳನ್ನು ನೀಡುವ ಮೂಲಕ ಪ್ರತಿಫಲವನ್ನು ಪಡೆಯಬಹುದು .

English summary

How to Stop Biting your Nails in Kannada

Here we talking about How to stop biting your nails in Kannada, read on
X
Desktop Bottom Promotion